3 ಲಕ್ಷ ಕಾರು ನಿರ್ಮಾಣ ಸಾಮರ್ಥ್ಯದ ಫೋರ್ಡ್‌ ಕಾರು ಉತ್ಪಾದನಾ ಘಟಕ ಟಾಟಾ ಕಂಪನಿ ತೆಕ್ಕೆಗೆ…!

ನವದೆಹಲಿ: ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಮತ್ತು ಫೋರ್ಡ್ ಇಂಡಿಯಾ ಸೋಮವಾರ ಗುಜರಾತ್ ಸರಕಾರದೊಂದಿಗೆ ಫೋರ್ಡ್ ಇಂಡಿಯಾದ ಸನಂದ್ ವಾಹನ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಫೋರ್ಡ್ ಇಂಡಿಯಾದ ಸನಂದ್ ವಾಹನ ತಯಾರಿಕಾ ಘಟಕದ ಸಂಭಾವ್ಯ ಸ್ವಾಧೀನದಲ್ಲಿ ಅದರ ಭೂ ಆಸ್ತಿಗಳು, ಕಟ್ಟಡಗಳು, ವಾಹನ ತಯಾರಿಕಾ ಘಟಕ, ಯಂತ್ರೋಪಕರಣಗಳು … Continued

ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಬೆಂಗಳೂರಿನಲ್ಲಿ ಸೋಮವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರೈತ ನಾಯಕ ಟಿಕಾಯತ್ ಮುಖಕ್ಕೆ ಮಸಿ ಎರಚಿದ್ದಾರೆ.‌ ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಆದರೆ ನಾನು ಈ … Continued

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮನೋಜ ಹೆಗಡೆ, ದೀಪಕ ಶೇಟ್‌ ಆಯ್ಕೆ

ಕಾರವಾರ/ಶಿರಸಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಶಿರಸಿ ತಾಲೂಕಿನ ಮನೋಜ ಆರ್‌. ಹೆಗಡೆ ದೇಶಕ್ಕೆ 213ನೇ ರ್ಯಾಂಕ್‌ ಪಡೆದಿದ್ದರೆ ಹೊನ್ನಾವರ ತಾಲ್ಲೂಕಿನ ಮಂಕಿ ಗ್ರಾಮದ ದೀಪಕ್ ಆರ್.ಶೇಟ್ 311ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಮನೋಜ ಆರ್‌.ಹೆಗಡೆ ಮೂಲತಃ ಸಿದ್ದಾಪುರದ ಮನೋಜ್ ಆರ್. ಹೆಗಡೆ (29) ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 213ನೇ ರ್ಯಾಂಕ್ … Continued

ರಾಷ್ಟ್ರಕವಿ ಕುವೆಂಪು-ನಾಡಗೀತೆಗೆ ಅಪಮಾನ ಖಂಡಿಸಿ ಕುವೆಂಪು ಪ್ರತಿಷ್ಠಾನಕ್ಕೆ ಸಾಹಿತಿ ಹಂಪನಾ ರಾಜೀನಾಮೆ

ಬೆಂಗಳೂರು: ರಾಜ್ಯದ ನಾಡಗೀತೆಗೆ ಅಪಮಾನವನ್ನುಂಟು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಸಾಹಿತಿ, ನಾಡೋಜ ಹಂಪ ನಾಗರಾಜಯ್ಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹಿರಿಯ ಸಾಹಿತಿ ಹಂಪನಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ತಮ್ಮ ರಾಜೀನಾಮೆ ಘೋಷಿಸಿದ್ದು, ‘ಕುವೆಂಪುರವರನ್ನೂ, ಅವರು ಜನಿಸಿದ ಗೌರವಾನ್ವಿತ … Continued

ಕೊರೊನಾದಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ನೆರವು ನೀಡುವ ಮಹತ್ವದ ಚಿಲ್ಡ್ರನ್ಸ್ ಕೇರ್‌ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಕೋವಿಡ್-19ನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ನೆರವು ನೀಡುವ ಪಿಎಂ ಕೇರ್ಸ್ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು, ಮಂಗಳವಾರ ಚಾಲನೆ ನೀಡಿದರು. ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 10 ಲಕ್ಷ ರೂಪಾಯಿಗಳ ಆರ್ಥಿಕ ನೆರವು, ಮಾಸಿಕ ವಿದ್ಯಾರ್ಥಿವೇತನ ಸೇರಿದಂತೆ ಹಲವು ಸೌಲಭ್ಯಗಳನ್ನು ಪಿಎಂ-ಕೇರ್ಸ್ ಅಡಿ ನೀಡಲಾಗುತ್ತಿದೆ. ದೇಶಾದ್ಯಂತ ಫಲಾನುಭವಿ ಮಕ್ಕಳು ಜಿಲ್ಲೆ ಮತ್ತು ತಾಲೂಕು … Continued

ರಾಜ್ಯಸಭೆ ಚುನಾವಣೆ: ನಾಳೆ ಬಿಜೆಪಿಯಿಂದ ಜಗ್ಗೇಶ, ನಿರ್ಮಲಾ ಸೀತಾರಾಮನ್‌ ನಾಮಪತ್ರ

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಚಿತ್ರನಟ ಜಗ್ಗೇಶ್ ನಾಳೆ, ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ನಾಳೆ ಕಡೆಯ ದಿನವಾಗಿದ್ದು, ಬಿಜೆಪಿ ಅಭ್ಯರ್ಥಿಗಳಾಗಿ ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಹೊಂದಿರುವ ಬಲಾಬಲದ ಆಧಾರದ ಮೇಲೆ ಇಬ್ಬರು … Continued

ಯುಪಿಎಸ್‍ಸಿ ಅಂತಿಮ ಫಲಿತಾಂಶ ಪ್ರಕಟ: ಉತ್ತರ ಪ್ರದೇಶದ ಶ್ರುತಿ ಶರ್ಮಾ ಟಾಪರ್, ಕರ್ನಾಟಕದ 27 ಅಭ್ಯರ್ಥಿಗಳು ಆಯ್ಕೆ

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗ(UPSC) ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದು, ಉತ್ತರ ಪ್ರದೇಶದ ಶ್ರುತಿ ಶರ್ಮಾ ಅವರು ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಇಂದು ಪ್ರಕಟವಾದ ಅಂತಿಮ ಫಲಿತಾಂಶದಲ್ಲಿ ಈ ವರ್ಷ ಮೊದಲ ನಾಲ್ಕು ಸ್ಥಾನಗಳನ್ನು ವಿದ್ಯಾರ್ಥಿನಿಯರೇ ಪಡೆದುಕೊಂಡಿರುವುದು ವಿಶೇಷ. ಒಟ್ಟು 685 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರುತಿ ಶರ್ಮಾ ಮೊದಲ … Continued

ಬೆಂಗಳೂರಿನಲ್ಲಿ ರೈತ ಮುಖಂಡ ಟಿಕಾಯತ್‌ ಮೇಲೆ ಹಲ್ಲೆ ನಡೆಸಿ, ಮುಖಕ್ಕೆ ಮಸಿ: ವ್ಯಕ್ತಿಗೆ ಥಳಿತ

ಬೆಂಗಳೂರು: ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯುದ್ಧ್​ವೀರ್​ ಸಿಂಗ್ ಅವರ ಮೇಲೆ ಕಪ್ಪು ಮಸಿ ಎರಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೋಮವಾರ ಕೋಡಿಹಳ್ಳಿ‌ ಚಂದ್ರಶೇಖರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಗಾಂಧಿ ಭವನದಲ್ಲಿ ಸಭೆ ಕರೆಯಲಾಗಿತ್ತು. ರಾಷ್ಟ್ರೀಯ ಕಿಸಾನ್ ಮೊರ್ಚಾ ಅಧ್ಯಕ್ಷ ರಾಕೇಶ್ ಸಿಂಗ್ ಟಿಕಾಯತ್, ಯುದ್ದವೀರ ಸಿಂಗ್ , ಪ್ರೊಫೆಸರ್ ರವಿ ವರ್ಮಕುಮಾರ್, … Continued

ಹೈಕೋರ್ಟ್‌ ಆದೇಶವಿದ್ದರೂ ಇಂದು ಮತ್ತೆ ಮಂಗಳೂರಿನಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದ 12 ವಿದ್ಯಾರ್ಥಿನಿಯರು…!

ಮಂಗಳೂರು:ಹಿಜಾಬ್ ಧರಿಸಿ ಶಾಲಾ- ಕಾಲೇಜಿಗೆ ಹೋಗುವಂತಿಲ್ಲ ಎಂದು ಹೈಕೋರ್ಟ್ ಈಗಾಗಲೇ ತೀರ್ಪು ನೀಡಿದೆ. ಆದಾಗ್ಯೂ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜಿನಲ್ಲಿ 12 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಮೇ 26ಕ್ಕೆ ಹಿಜಾಬ್ ವಿರೋಧಿಸಿ ಕಾಲೇಜು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಹಿಜಾಬ್​ಗೆ ಅವಕಾಶವಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಸ್ಪಷ್ಟಪಡಿಸಿತ್ತು. ಆದರೂ … Continued

ಕೋಲ್ಕತ್ತಾದಲ್ಲಿ ಮತ್ತೊಬ್ಬ ಮಾಡೆಲ್ ಶವ ಪತ್ತೆ; ಕಳೆದ 13 ದಿನಗಳಲ್ಲಿ ಇದು ನಾಲ್ಕನೇ ಪ್ರಕರಣ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ತಮ್ಮ ಮನೆಯಲ್ಲಿಯೇ ಮಾಡೆಲ್-ಮೇಕಪ್ ಕಲಾವಿದೆಯ ಶವ ಪತ್ತೆಯಾಗಿದೆ. ಶವವನ್ನು ಮಾಡೆಲ್ ಆಗಲು ಪ್ರಯತ್ನಿಸುತ್ತಿದ್ದ ಮೇಕಪ್ ಕಲಾವಿದೆ ಸರಸ್ವತಿ ದಾಸ ಎಂದು ಗುರುತಿಸಲಾಗಿದೆ. ಭಾನುವಾರ ಕೋಲ್ಕತ್ತಾದ ಕಸ್ಬಾ ಪ್ರದೇಶದಲ್ಲಿನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸರಸ್ವತಿ ದಾಸ ಅವರ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇದು ಆತ್ಮಹತ್ಯೆ ಎಂದು ಪೊಲೀಸರು … Continued