ಕೇಸರಿ ಧ್ವಜ ಹೇಳಿಕೆ: ಬಿಜೆಪಿ ನಾಯಕ ಈಶ್ವರಪ್ಪ ವಿರುದ್ಧ ದೆಹಲಿಯಲ್ಲಿ ದೂರು ದಾಖಲು

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕೇಸರಿ ಧ್ವಜ ಮುಂದೊಂದು ದಿನ ಭಾರತದ ರಾಷ್ಟ್ರಧ್ವಜವಾಗಲಿದೆ ಎಂಬ ಕರ್ನಾಟಕ ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಅವರ ಹೇಳಿಕೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಸಂಜಯ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಸರಿ ಧ್ವಜವನ್ನು ಸಾವಿರಾರು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿದ್ದು, ಮುಂದೊಂದು ದಿನ ಅದು ರಾಷ್ಟ್ರಧ್ವಜವಾಗಬಹುದು … Continued

ಅಯೋಧ್ಯೆ, ಮಥುರಾ ದೇವಾಲಯಗಳ ಸುತ್ತಮುತ್ತ ಮದ್ಯ ಮಾರಾಟ ನಿಷೇಧಿಸಿದ ಉತ್ತರ ಪ್ರದೇಶದ ಸರ್ಕಾರ

ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಯೋಧ್ಯೆ ಮತ್ತು ಮಥುರಾದಲ್ಲಿನ ದೇವಾಲಯಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿದ್ದಾರೆ. ಅಯೋಧ್ಯೆಯ ರಾಮಮಂದಿರ ಮತ್ತು ಮಥುರಾದ ಕೃಷ್ಣ ಜನ್ಮಭೂಮಿಯ ಸಮೀಪವಿರುವ ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. ಅಯೋಧ್ಯೆಯಲ್ಲಿ ಮದ್ಯದಂಗಡಿ ಮಾಲೀಕರ ಪರವಾನಗಿಯನ್ನೂ ಸರ್ಕಾರ ರದ್ದುಗೊಳಿಸಿದೆ. ಈ … Continued

ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕುರಿತು ಜೂನ್ 2ರಂದು ಶಿಕ್ಷಣ ಸಚಿವರಿಂದ ವರದಿ ಸಲ್ಲಿಕೆ: ಸಿಎಂ ಬೊಮ್ಮಾಯಿ

ಉಡುಪಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು ಸಲ್ಲಿಸುವ ವರದಿ ಆಧರಿಸಿ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಹೇಳಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನಮಾನಸದಲ್ಲಿ ಮೂಡಿರುವ ವಿವಾದಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ಕೇಳಿದ್ದೇನೆ ಎಂದು ಹೇಳಿದರು. ಈಗಾಗಲೇ ಶಾಲೆಗಳು ಪುನರಾರಂಭವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಣ … Continued

ಪಶ್ಚಿಮ ಬಂಗಾಳದ ಪ್ರೇಮಿ ಭೇಟಿಯಾಗಲು ಗಂಟೆಗಟ್ಟಲೆ ನದಿಯಲ್ಲಿ ಈಜಿ, ಹುಲಿಗಳಿರುವ ಕಾಡಿನಲ್ಲಿ ಒಬ್ಬಳೇ ಬಂದ ಬಾಂಗ್ಲಾದೇಶದ ಯುವತಿ…! ಮದುವೆಯಾಯ್ತು..ಬಂಧನವೂ ಆಯ್ತು..!

ಕೋಲ್ಕತ್ತಾ: ಪ್ರೇಯಸಿಯೊಬ್ಬಳು ಆನ್‌ಲೈನ್‌ನಲ್ಲಿ ಪರಿಚಯವಾದ ನಂತರ ಪ್ರಿಯಕರನಾದ ವ್ಯಕ್ತಿಯನ್ನು ಭೇಟಿಯಾಗಲು ಜೀವದ ಹಂಗು ತೊರೆದು ನದಿಯನ್ನು ಒಂದು ಗಂಟೆ ಈಜಿ ಹಲಿಯಿರುವ ಅಭಯಾರಣ್ಯದಲ್ಲಿ ಒಬ್ಬಳೇ ನಡೆದು ಬಾಂಗ್ಲಾದೇಶದಿಂದ ಭಾರತದ ಪಶ್ಚಿಮ ಬಂಗಾಳಕ್ಕೆ ಬಂದಿದ್ದಾಳೆ. ಆದರೆ ಅವಳಿಗೆ ಪ್ರೇಮಿ ಸಿಕ್ಕಿ ಅವರಿಬ್ಬರು ದೇವಸ್ಥಾನದಲ್ಲಿ ಮದುವೆಯಾದರೂ ಈಗ ಅವಳನ್ನು ಬಂಧಿಸಲಾಗಿದೆ…! 22 ವರ್ಷದ ಬಾಂಗ್ಲಾದೇಶದ ಯುವತಿಯೊಬ್ಬಳು ಭಾರತದ ಪಶ್ಚಿಮ … Continued

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಗೆ ಇಡಿಯಿಂದ ಸಮನ್ಸ್

ನವದೆಹಲಿ: ಕಾಂಗ್ರೆಸ್ ಪಕ್ಷದ ಒಡೆತನದ ಮತ್ತು ನಡೆಸುತ್ತಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ನಿರ್ವಹಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಸಮನ್ಸ್ ನೀಡಿದೆ. 2013ರಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯದಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಖಾಸಗಿ ಕ್ರಿಮಿನಲ್ … Continued

ಹುಬ್ಬಳ್ಳಿ : ಜೂನ್‌ 3ರಂದು ವಿಶ್ವ ಹಿಂದೂ ಪರಿಷದ್‌ನ ಪ್ರೇರಣಾ ಸೇವಾ ಸಂಸ್ಥೆಯ ನೂತನ ಕಟ್ಟಡ ಧರ್ಮಸಿರಿ ಉದ್ಘಾಟನೆ

ಹುಬ್ಬಳ್ಳಿ: ವಿಶ್ವ ಹಿಂದೂ ಪರಿಷದ್‌ನ ಉತ್ತರ ಕರ್ನಾಟಕ ಟ್ರಸ್ಟ್‌ ಪ್ರೇರಣಾ ಸೇವಾ ಸಂಸ್ಥೆಯ ನೂತನ ಕಟ್ಟಡ ಧರ್ಮಸಿರಿಯ ಉದ್ಘಾಟನಾ ಸಮಾರಂಭ ಜೂನ್‌ 3ರಂದು ಬೆಳಿಗ್ಗೆ 10:45ಕ್ಕೆ ನಗರದಲ್ಲಿ ನಡೆಯಲಿದೆ. ಧರ್ಮಸಿರಿ ನೂತನ ಕಟ್ಟಡವು  ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕಿನ ಪುರುಷೋತ್ತಮ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿದೆ. ನಗರದ ಮೂರು ಸಾವಿರ ಮಠದ ಶ್ರೀ ಗುರುಸಿದ್ಧ … Continued

ಜನ್ಮತಃ ಕಣ್ಣುಕಾಣದ ದೆಹಲಿಯ ಶಾಲಾ ಶಿಕ್ಷಕಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 48ನೇ ರ‍್ಯಾಂಕ್….!

ನವದೆಹಲಿ: ದೆಹಲಿಯ ಸರ್ಕಾರಿ ಶಾಲೆಯಲ್ಲಿ ಇತಿಹಾಸವನ್ನು ಕಲಿಸುವ ಆಯುಷಿ, 2021 ರ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 48ನೇ ರ‍್ಯಾಂಕ್ ಗಳಿಸಿದ್ದಾರೆ, ಅದರ ಫಲಿತಾಂಶಗಳನ್ನು ಸೋಮವಾರ ಕೇಂದ್ರ ಸಾರ್ವಜನಿಕ ಸೇವಾ ಆಯೋಗವು ಪ್ರಕಟಿಸಿದೆ. ಜನ್ಮತಃ ಕುರುಡಿಯಾದ 29 ವರ್ಷದ ಶಿಕ್ಷಕಿ ತನ್ನ ಅಂಗವೈಕಲ್ಯದ ಸವಾಲುಗಳು ಮೆಟ್ಟಿನಿಂತು ಈ ಸಾಧನೆ ಮಾಡಿದ್ದಾರೆ. ರಾಣಿ ಖೇರಾ ನಿವಾಸಿಯಾಗಿರುವ ಆಯುಷಿ ಶಿಕ್ಷಿಯಾಗಿ … Continued

ಜೀವಂತ ಹಾವುಗಳ ಮಾಲೆಗಳನ್ನೇ ಬದಲಾಯಿಸಿಕೊಂಡ ವಧು-ವರರು….! ವೀಡಿಯೊ ವೈರಲ್‌, ಬೆಚ್ಚಿಬಿದ್ದ ಇಂಟರ್ನೆಟ್ | ವೀಕ್ಷಿಸಿ

ಈ ಹಿಂದೆ ಹಲವಾರು ಹಾವಿನ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿವೆ. adr ಗಾತ್ರ ಅಥವಾ ಪ್ರಕಾರವನ್ನು ಲೆಕ್ಕಿಸದೆ ಹಾವುಗಳೊಂದಿಗಿನ ಯಾವುದೇ ಸಂವಹನವು ಅಪಾಯಕಾರಿ. ಆಕಸ್ಮಿಕವಾಗಿ ಹಾವುಗಳ ಸಂಪರ್ಕಕ್ಕೆ ಬಂದಾಗ ಹೆಚ್ಚಿನ ವ್ಯಕ್ತಿಗಳು ಭಯಭೀತರಾಗುತ್ತಾರೆ. ಆದಾಗ್ಯೂ, ಇಂಟರ್ನೆಟ್‌ನಲ್ಲಿ ಮತ್ತೆ ಕಾಣಿಸಿಕೊಂಡಿರುವ ವಿಚಿತ್ರ ಸಂಪ್ರದಾಯದ ಈ ಹಳೆಯ ವೀಡಿಯೊ ಎಲ್ಲಾ ವಿಲಕ್ಷಣ ಮಿತಿಗಳನ್ನು ದಾಟಿದೆ. ವಧು-ವರರು … Continued

ರಾಜ್ಯಸಭಾ ಚುನಾವಣೆಗೆ ಟಿಕೆಟ್​ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್‌ಗೆ ಬ್ರಿಜೇಶ್ ಕಾಳಪ್ಪ ರಾಜೀನಾಮೆ

ಬೆಂಗಳೂರು: ಕಾಂಗ್ರೆಸ್‌ನಲ್ಲಿ ರಾಜ್ಯಸಭಾ ಚುನಾವಣೆಗೆ ಟಿಕೆಟ್​ ಘೋಷಣೆಯಾದ ಬೆನ್ನಲ್ಲೇ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬ್ರಿಜೇಶ್ ಕಾಳಪ್ಪ ಅವರು ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದರು. ಪರಿಷತ್ ಮತ್ತು ರಾಜ್ಯಸಭಾ ಸ್ಥಾನಕ್ಕೆ ಅವರನ್ನು ಪರಿಗಣಿಸದ ಹಿನ್ನೆಲೆಯಲ್ಲಿ 2014ರಿಂದ ಪಕ್ಷಕ್ಕೆ ತಮ್ಮ ಕೊಡುಗೆ ಬಗ್ಗೆ ಸುಧೀರ್ಘ ಪತ್ರ ಬರೆದು ಕಾಂಗ್ರೆಸ್ ರಾಷ್ಟ್ರೀಯ … Continued

ವಾಣಿಜ್ಯ ಬಳಕೆಯ 19 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು (OMC) ಇಂದಿನಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ ಪಿಜಿ (LPG) ಸಿಲಿಂಡರ್‌ನ ಬೆಲೆಯನ್ನು ಸುಮಾರು ₹135 ರೂ.ಗಳಷ್ಟು ಕಡಿತಗೊಳಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ 2355.50 ರೂ.ಗಳಿದ್ದ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ ಈಗ ₹2219.00 ರೂ.ಗಳಿಗೆ ಇಳಿದಿದೆ. ಮುಂಬೈನಲ್ಲಿ, ವಾಣಿಜ್ಯ ಎಲ್‌ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ … Continued