ಪರಿಸರ ದಿನ: ಕಾಡಾನೆಗಳಿಗೆ ಅರಣ್ಯ ಅಧಿಕಾರಿಗಳಿಂದ ಹಲಸಿನ ಹಣ್ಣುಗಳ ಔತಣ ಕೂಟ…!

ಮಡಿಕೇರಿ: ಕೊಡಗಿನ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳಿಗೆ ಹಲಸಿನ ಹಣ್ಣಿನ ಔತಣ ಕೂಟ ಏರ್ಪಡಿಸಲಾಗಿತ್ತು. ಪರಿಸರ ದಿನಾಚರಣೆ ಅಂಗವಾಗಿ ಕುಶಾಲನಗರ ವಿಭಾಗದ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ. ಈ ಕುರಿತು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌.ಕಾಮ್‌ ವರದಿ ಮಾಡಿದೆ. ವರದಿ ಪ್ರಕಾರ, ಹಲಸಿನ ಹಣ್ಣಿನ ಋತುವಿನಲ್ಲಿ ಕಾಡಾನೆಗಳು ಹೆಚ್ಚಾಗಿ ಹಲಸಿನ ಹಣ್ಣಿನ ಪರಿಮಳದಿಂದ ಆಮಿಷಕ್ಕೊಳಗಾಗಿ ಎಸ್ಟೇಟ್‌ಗಳಿಗೆ … Continued

ಪ್ರತಿ 3ನೇ ಶನಿವಾರ ವಿದ್ಯುತ್​ ಅದಾಲತ್​ ನಡೆಸಿ: ಅಧಿಕಾರಿಗಳಿಗೆ ಸಚಿವ ಸುನಿಲಕುಮಾರ್ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಪ್ರತಿ 3ನೇ ಶನಿವಾರ ವಿದ್ಯುತ್​ ಅದಾಲತ್​ ನಡೆಸಬೇಕು ಎಂದು ಇಂಧನ ಸಚಿವ ಸುನೀಲ್​ ಕುಮಾರ್​ಅವರು ಭಾನುವಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರತಿ ತಿಂಗಳ 3ನೇ ಶನಿವಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್​ ಸೇರಿದಂತೆ ಎಲ್ಲ ಅಧಿಕಾರಿಗಳು ತಾಲೂಕಿನ ಕೊನೆಯ ಹಳ್ಳಿವರೆಗೆ ಹೋಗಿ ಭೇಟಿ ನೀಡಬೇಕು. ವಿದ್ಯುತ್​ ಅದಾಲತ್​ ಮಾಡಿ ಸಮಸ್ಯೆಗಳಿಗೆ ಪರಿಹಾರ ನೀಡಬೇಕು … Continued

ರಾಜ್ಯಸಭೆ ಚುನಾವಣೆ: ಬಿಜೆಪಿಯ ಮೂರೂ ಅಭ್ಯರ್ಥಿಗಳು ಆಯ್ಕೆ- ಅರುಣ್ ಸಿಂಗ್ ವಿಶ್ವಾಸ

ಬೆಂಗಳೂರು: ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸಿರುವ ಎಲ್ಲ 3 ಅಭ್ಯರ್ಥಿಗಳುಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿಯ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದ “ಜಗನ್ನಾಥ ಭವನ”ದಲ್ಲಿ ಭಾನುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಮತ್ತು ರಾಜ್ಯದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಉತ್ತಮ ಕೆಸಲಗಳನ್ನು ಗಮನದಲ್ಲಿಟ್ಟು … Continued

ಬಾಂಗ್ಲಾದೇಶದ ಕಂಟೈನರ್ ಡಿಪೋದಲ್ಲಿ ಭಾರೀ ಅಗ್ನಿ ದರಂತ: ಸಾವಿನ ಸಂಖ್ಯೆ 43ಕ್ಕೆ ಏರಿಕೆ, 450 ಕ್ಕೂ ಹೆಚ್ಚು ಜನರಿಗೆ ಗಾಯ

ಢಾಕಾ: ಬಾಂಗ್ಲಾದೇಶದ ದೇಶದ ಪ್ರಮುಖ ಸಮುದ್ರ ಬಂದರು ಬಾಂಗ್ಲಾದೇಶದ ಚಟ್ಟಗ್ರಾಮದ  ಸೀತಾಕುಂಡದಲ್ಲಿರುವ ಖಾಸಗಿ ಇನ್‌ಲ್ಯಾಂಡ್ ಕಂಟೈನರ್ ಡಿಪೋ (ಐಸಿಡಿ)ದಲ್ಲಿ ಸ್ಫೋಟದ ಘಟನೆಯಲ್ಲಿ ಸಾವಿನ ಸಂಖ್ಯೆ ಈಗ 43ಕ್ಕೆ ಏರಿದೆ. ಅಲ್ಲದೆ 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶನಿವಾರ ರಾತ್ರಿ ಸೀತಾಕುಂದ ಉಪಜಿಲ್‌ನ ಕಡಮ್ರಸುಲ್ ಪ್ರದೇಶದ ಬಿಎಂ ಕಂಟೈನರ್ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಔಟ್‌ಪೋಸ್ಟ್ ಸಬ್ … Continued

ನನ್ನ ಮಾತುಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುತ್ತೇನೆ: ಪಕ್ಷದಿಂದ ಅಮಾನತುಗೊಂಡ ನಂತರ ಪ್ರವಾದಿ ಮಹಮ್ಮದ್‌ ಮೇಲಿನ ಟೀಕೆಗ ಬಗ್ಗೆ ಬಿಜೆಪಿಯ ನೂಪುರ್ ಶರ್ಮಾ ಹೇಳಿಕೆ

ನವದೆಹಲಿ: ಇತ್ತೀಚಿನ ಟಿವಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮಹಮ್ಮದ್ ಅವರ ಹೇಳಿಕೆಗಳ ಕುರಿತು ನೂಪುರ್ ಶರ್ಮಾ ಅವರನ್ನು ಬಿಜೆಪಿ ಅಮಾನತುಗೊಳಿಸಿದ ನಂತರ ಅವರು ಟ್ವಿಟರ್‌ನಲ್ಲಿ ಕ್ಷಮೆಯಾಚಿಸಿದ್ದಾರೆ. ನನ್ನ ಮಾತುಗಳಿಂದ ಯಾರಿಗಾದರೂ ತೊಂದರೆ ಅಥವಾ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿದರೆ, ನಾನು ಈ ಮೂಲಕ ನನ್ನ ಹೇಳಿಕೆಯನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುತ್ತೇನೆ. ಯಾರ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ … Continued

ಪ್ರವಾದಿ ಮಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ: ಪಕ್ಷದ ವಕ್ತಾರೆ ನೂಪುರ್ ಶರ್ಮಾ ಅಮಾನತು ಮಾಡಿದ ಬಿಜೆಪಿ

ನವದೆಹಲಿ: ಇತ್ತೀಚಿನ ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮುಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಅವರನ್ನು ಬಿಜೆಪಿ ಹೈಕಮಾಂಡ್ ಭಾನುವಾರ ಅಮಾನತುಗೊಳಿಸಿದೆ. ದೆಹಲಿ ಬಿಜೆಪಿಯ ಮಾಧ್ಯಮ ಉಸ್ತುವಾರಿ ನವೀನ್ ಕುಮಾರ್ ಜಿಂದಾಲ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಪಕ್ಷವು ಕಿತ್ತುಹಾಕಿದೆ. ಪಕ್ಷದ ಕೇಂದ್ರ ಶಿಸ್ತು ಸಮಿತಿಯು ಅಮಾನತು ಪತ್ರದಲ್ಲಿ ನೂಪುರ್‌ ಶರ್ಮಾ … Continued

ಆರ್‌ಎಸ್‌ಎಸ್ ವಿರುದ್ಧ ಬೇಕಾಬಿಟ್ಟಿ ಮಾತನಾಡಿಯೇ ಕಾಂಗ್ರೆಸ್ ಈಗ ಜನರಿಂದ ದೂರ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಆರ್ ಎಸ್‌ಎಸ್ ವಿರುದ್ಧ ಮಾತನಾಡುವುದೇ ಕಾಂಗ್ರೆಸ್ ಕೆಲಸವಾಗಿದೆ. ಈಗ ರಾಜ್ಯದಲ್ಲಿ ಸಿದ್ದರಾಮಯ್ಯ ಅದನ್ನೇ ಮಾಡುತ್ತಿದ್ದಾರೆಹೀಗೆ ಟೀಕೆ ಮಾಡಿಯೇ ದೇಶದಲ್ಲಿ ಕಾಂಗ್ರೆಸ್ ಜನರಿಂದ ದೂರವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 75 ವರ್ಷದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶಭಕ್ತಿ ಮತ್ತು ಜನರ ಸೇವೆ … Continued

ತನ್ನ ಬಾಹ್ಯಾಕಾಶ ನಿಲ್ದಾಣದ ಜೋಡಣೆ ಪೂರ್ಣಗೊಳಿಸಲು ಮೂರು ಗಗನಯಾತ್ರಿಗಳ ಉಡಾವಣೆ ಮಾಡಿದ ಚೀನಾ

ತನ್ನ ಶಾಶ್ವತ ಕಕ್ಷೆಯಲ್ಲಿರುವ ಬಾಹ್ಯಾಕಾಶ ನಿಲ್ದಾಣದಲ್ಲಿ ಅಸೆಂಬ್ಲಿ ಕೆಲಸವನ್ನು ಪೂರ್ಣಗೊಳಿಸಲು ಚೀನಾ ಭಾನುವಾರ ಹೊಸ ಮೂರು ವ್ಯಕ್ತಿಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಶೆಂಝೌ 14 ಸಿಬ್ಬಂದಿ ಟಿಯಾಂಗಾಂಗ್ ನಿಲ್ದಾಣದಲ್ಲಿ ಆರು ತಿಂಗಳುಗಳನ್ನು ಕಳೆಯುತ್ತಾರೆ, ಈ ಸಮಯದಲ್ಲಿ ಅವರು ಏಪ್ರಿಲ್ 2021 ರಲ್ಲಿ ಪ್ರಾರಂಭಿಸಲಾದ ಮುಖ್ಯ ಟಿಯಾನ್ಹೆ ವಾಸಸ್ಥಳವನ್ನು ಸೇರಲು ಎರಡು ಪ್ರಯೋಗಾಲಯ ಮಾಡ್ಯೂಲ್‌ಗಳನ್ನು ಸೇರಿಸುವುದನ್ನು ಮೇಲ್ವಿಚಾರಣೆ ಮಾಡುತ್ತಾರೆ. … Continued

ಬಾಂಗ್ಲಾದಲ್ಲಿ ಹೊತ್ತಿ ಉರಿದ ಕಂಟೈನರ್ ಡಿಪೋ, 16 ಮಂದಿ ಸಾವು, 450 ಮಂದಿಗೆ ಗಂಭೀರ ಗಾಯ

ಢಾಕಾ: ಆಗ್ನೇಯ ಬಾಂಗ್ಲಾದೇಶದ ಕಂಟೈನರ್ ಡಿಪೋದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 16 ಮಂದಿ ಸಾವಿಗೀಡಾಗಿದ್ದು, 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳಲ್ಲಿ 20 ಮಂದಿ ಸ್ಥಿತಿ ಗಂಭೀರವಾಗಿದ್ದು, ಶೇ.60-90ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ದೇಶದ … Continued

ಕಾನ್ಪುರ ಹಿಂಸಾಚಾರ: 29 ಮಂದಿ ಬಂಧನ; ಪಿಎಫ್‌ಐಗೆ ಸಂಬಂಧಿಸಿದ ದಾಖಲೆಗಳು ಪತ್ತೆ ಎಂದ ಉನ್ನತ ಪೊಲೀಸ್ ಅಧಿಕಾರಿ

ನವದೆಹಲಿ: ಶುಕ್ರವಾರ, ಜೂನ್ 3 ರಂದು ನಗರದ ಪರೇಡ್ ಚೌಕ್ ಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಒಟ್ಟು 29 ಜನರನ್ನು ಕಾನ್ಪುರ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಮುಸ್ಲಿಂ ನಾಯಕ ಹಯಾತ್ ಜಾಫರ್ ಹಶ್ಮಿ ಹಿಂಸಾಚಾರದ ಹಿಂದಿನ ಪ್ರಮುಖ ಸಂಚುಕೋರ ಎಂದು ಪೊಲೀಸರು ಗುರುತಿಸಿದ್ದಾರೆ. ಮೌಲಾನಾ ಮುಹಮ್ಮದ್ ಜೌಹರ್ ಅಲಿ ಅಭಿಮಾನಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ಹಯಾತ್ … Continued