ಹಿಜಾಬ್ ವಿವಾದ: ಪತ್ರಿಕಾಗೋಷ್ಠಿ ನಡೆಸಿದ ವಿದ್ಯಾರ್ಥಿಗಳಿಗೆ ಮಂಗಳೂರು ವಿವಿ ಕಾಲೇಜಿನಿಂದ ನೋಟಿಸ್

posted in: ರಾಜ್ಯ | 0

ಮಂಗಳೂರು: ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ವಿವಿ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿನಿಯರಿಗೆ ವಿವಿಯಿಂದ ನೊಟೀಸ್​ ಜಾರಿಯಾಗಿದೆ. ಕಾಲೇಜಿನ ಶಿಸ್ತು ಉಲ್ಲಂಘಿಸಿ, ಘನತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ವಿವಿ ಕಾಲೇಜು ಪ್ರಾಂಶುಪಾಲೆ ಡಾ.ಅನುಸೂಯ ರೈ ನೋಟೀಸ್ ಜಾರಿ ಮಾಡಿದ್ದಾರೆ. ಬಾಹ್ಯಶಕ್ತಿಗಳ ಜೊತೆಗೂಡಿ ಪತ್ರಿಕಾಗೋಷ್ಠಿ ನಡೆಸಿದ್ದೀರಿ, ಕಾಲೇಜಿನ ವಿರುದ್ಧವಾಗಿ, ಪ್ರಾಂಶುಪಾಲರ ವಿರುದ್ಧ ಹೇಳಿಕೆ ನೀಡಿ ಕಾಲೇಜಿನ ಘನತೆಗೆ … Continued

ಟ್ವಿಟರ್ ಡೇಟಾ ತಡೆಹಿಡಿಯುತ್ತಿದೆ ಎಂದು ಆರೋಪಿಸಿದ ಮಸ್ಕ್‌, ಸ್ವಾಧೀನದ ಬಿಡ್ ಹಿಂಪಡೆಯುವುದಾಗಿ ಬೆದರಿಕೆ

ನ್ಯೂಯಾರ್ಕ್: ವಿಶ್ವದ ಅತಿ ಶ್ರೀಮಂತ ಎಲೋನ್‌ ಮಸ್ಕ್‌ ಸಾಮಾಜಿಕ ಜಾಲತಾಣ ಟ್ವಟ್ಟರ್‌ ಅನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನದ ಇತ್ತೀಚಿನ ಟ್ವಿಸ್ಟ್‌ನಲ್ಲಿ, ನಕಲಿ ಖಾತೆಗಳ ಡೇಟಾವನ್ನು ಒದಗಿಸಲು ವಿಫಲವಾಗಿದೆ ಎಂದು ಆರೋಪಿಸಿ, ಟ್ವಿಟರ್ ಖರೀದಿಸುವ ತನ್ನ ಬಿಡ್ ಅನ್ನು ಹಿಂತೆಗೆದುಕೊಳ್ಳುವುದಾಗಿ ಸೋಮವಾರ ಬೆದರಿಕೆ ಹಾಕಿದ್ದಾರೆ. ಸೆಕ್ಯುರಿಟೀಸ್ ನಿಯಂತ್ರಕರಿಗೆ ಸಲ್ಲಿಸಿದ ದಾಖಲೆಯ ಪ್ರಕಾರ, ಟ್ವಿಟ್ಟರ್‌ (Twitter) ತನ್ನ “ವಿಲೀನ ಒಪ್ಪಂದದ … Continued

ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ ಕುರಿತು ಪೊಲೀಸರು-ಐಬಿ ಜಂಟಿ ತನಿಖೆ: ಗೃಹ ಸಚಿವ ಅರಗ ಜ್ಞಾನೇಂದ್ರ

posted in: ರಾಜ್ಯ | 0

ಶಿವಮೊಗ್ಗ: ಚಿಕ್ಕಮಗಳೂರು ಮತ್ತು ಕರಾವಳಿ ಭಾಗದ ಅರಣ್ಯ ಪ್ರದೇಶಗಳಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ ಕುರಿತು ರಾಜ್ಯ ಪೊಲೀಸರು ಮತ್ತು ಗುಪ್ತಚರ ದಳ (ಐಬಿ) ಜಂಟಿಯಾಗಿ ತನಿಖೆ ನಡೆಸುತ್ತಿದೆ ಎಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರ ಹೇಳಿದ್ದಾರೆ. ಈ ಪ್ರದೇಶಗಳಲ್ಲಿ ನಿಷೇಧಿತ ಉಪಗ್ರಹ ಸಂಕೇತಗಳ ಅಕ್ರಮ ಕಾರ್ಯಾಚರಣೆ ಅಧಿಕಾರಿಗಳ ಗಮನಕ್ಕೆ ಬಂದಿದೆ ಎಂದು … Continued

ಕೇರಳದಲ್ಲಿ ನೊರೊವೈರಸ್‌ನ ಎರಡು ಪ್ರಕರಣಗಳು ದೃಢ: ಸೋಂಕಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

ತಿರುವನಂತಪುರಂ: ಅತಿಸಾರವನ್ನು ಉಂಟುಮಾಡುವ ರೋಟವೈರಸ್‌ನಂತೆಯೇ ನೊರೊವೈರಸ್ ಸೋಂಕು ಇಲ್ಲಿ ವಾಸಿಸುವ ಇಬ್ಬರು ಮಕ್ಕಳಲ್ಲಿ ದೃಢಪಟ್ಟಿದೆ ಎಂದು ಕೇರಳ ಸರ್ಕಾರ ಭಾನುವಾರ ತಿಳಿಸಿದೆ. ಆರೋಗ್ಯ ಇಲಾಖೆಯು ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿದ್ದು, ಕಲುಷಿತ ನೀರು ಮತ್ತು ಆಹಾರದ ಮೂಲಕ ವೈರಸ್ ಹರಡುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಈ … Continued

ಅಗ್ನಿ-4 ಮಧ್ಯಂತರ ಶ್ರೇಣಿಯ ಕ್ಷಿಪಣಿ ಯಶಸ್ವಿಯಾಗಿ ಪರೀಕ್ಷಿಸಿದ ಭಾರತ

ನವದೆಹಲಿ: ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಅಗ್ನಿ-4 ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯ “ತರಬೇತಿ ಉಡಾವಣೆ”ಯನ್ನು ಭಾರತ ಸೋಮವಾರ ಯಶಸ್ವಿಯಾಗಿ ನಡೆಸಿತು, ಇದು ದೇಶದ ಮಿಲಿಟರಿ ಸಾಮರ್ಥ್ಯಗಳಿಗೆ ಗಮನಾರ್ಹ ಉತ್ತೇಜನವನ್ನು ನೀಡಲಿದೆ ಎಂದು ಹೇಳಲಾಗಿದೆ. ಸಂಕ್ಷಿಪ್ತ ಹೇಳಿಕೆಯಲ್ಲಿ, ರಕ್ಷಣಾ ಸಚಿವಾಲಯವು ಸೋಮವಾರ ರಾತ್ರಿ 7:30 ರ ಸುಮಾರಿಗೆ ಪರೀಕ್ಷೆಯನ್ನು ನಡೆಸಲಾಯಿತು ಎಂದು ಹೇಳಿದೆ. ಅಗ್ನಿ-4 … Continued

ಹಾವಿನ ರೂಪದಲ್ಲಿ ಪತಿ ಬಂದಿದ್ದಾನೆಂದು ತಿಳಿದು 4 ದಿನ ಚಾಪೆ ಮೇಲೆ ನಾಗರ ಹಾವಿನ ಜೊತೆ ಕಳೆದ ವೃದ್ಧೆ..!

posted in: ರಾಜ್ಯ | 0

ಬಾಗಲಕೋಟೆ : ಮೃತ ಗಂಡ ಹಾವಿನ ರೂಪದಲ್ಲಿ ಬಂದಿದ್ದಾನೆಂದು ಮನೆಯಲ್ಲಿ 4 ದಿನಗಳಿಂದ ಹಾವಿನ ಜೊತೆ ಅಜ್ಜಿ ಇದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿಯಲ್ಲಿ ಈ ವಿಚಿತ್ರ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಸಾರವ್ವ ಮೌನೇಶ್ ಕಂಬಾರ ಎನ್ನುವ ಮಹಿಳೆಯ ವಿಚಿತ್ರ ನಂಬಿಕೆಗೆ ಜನರೇ ಬೆರಗಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಮನೆಗೆ ನಾಗರಹಾವು ಬಂದಿದೆ. … Continued

2006ರ ವಾರಾಣಸಿ ಸರಣಿ ಸ್ಫೋಟ: ಭಯೋತ್ಪಾದಕ ವಲಿಯುಲ್ಲಾ ಖಾನ್‌ಗೆ ಮರಣದಂಡನೆ ವಿಧಿಸಿದ ಘಾಜಿಯಾಬಾದ್ ನ್ಯಾಯಾಲಯ

ಗಾಜಿಯಾಬಾದ್‌: 2006ರ ವಾರಾಣಸಿ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಹಾಗೂ ಭಯೋತ್ಪಾದಕ ವಲಿಯುಲ್ಲಾ ಖಾನ್‌ಗೆ ಗಾಜಿಯಾಬಾದ್ ನ್ಯಾಯಾಲಯವು ಸೋಮವಾರ ಮರಣದಂಡನೆ ವಿಧಿಸಿದೆ. ಸ್ಫೋಟದ 16 ವರ್ಷಗಳ ನಂತರ ತೀರ್ಪು ಬಂದಿದೆ, ಮಾರ್ಚ್ 7, 2006 ರಂದು ಉತ್ತರ ಪ್ರದೇಶದ ವಾರಾಣಸಿಯ ಸಂಕಟ ಮೋಚನ್ ದೇವಸ್ಥಾನ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಸ್ಫೋಟಗಳು ಸಂಭವಿಸಿದ್ದವು. ಇದರಲ್ಲಿ … Continued

ನಾಳೆ ಮುಖ್ಯಮಂತ್ರಿ ಚಂದ್ರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

posted in: ರಾಜ್ಯ | 0

ಬೆಂಗಳೂರು: ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಗೂ ಸಿನೆಮಾ ನಟ ಮುಖ್ಯಮಂತ್ರಿ ಚಂದ್ರು ಮಂಗಳವಾರ ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಕರ್ನಾಟಕದಲ್ಲೂ ತನ್ನ ಸಂಘಟನೆ ಬಲಪಡಿಸಿಕೊಳ್ಳುತ್ತಿರುವ ಆಮ್‌ ಆದ್ಮಿ ಪಕ್ಷವನ್ನು ಮುಖ್ಯಮಂತ್ರಿ ಚಂದ್ರು ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕಾಂಗ್ರೆಸ್‌ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ … Continued

ಬ್ಯಾಂಕ್ ನೋಟುಗಳಲ್ಲಿ ಮಹಾತ್ಮ ಗಾಂಧಿಯವರ ಚಿತ್ರ ಬದಲಿಸುವ ಬಗ್ಗೆ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ ಆರ್‌ಬಿಐ

ಅಸ್ತಿತ್ವದಲ್ಲಿರುವ ಯಾವುದೇ ಕರೆನ್ಸಿ ಮತ್ತು ಬ್ಯಾಂಕ್ ನೋಟುಗಳನ್ನು ಬದಲಾವಣೆ ಮಾಡುವ ಬಗ್ಗೆ ಕೇಂದ್ರೀಯ ಬ್ಯಾಂಕ್‌ನೊಂದಿಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಸ್ಪಷ್ಟಪಡಿಸಿದೆ. ಆರ್‌ಬಿಐ ಮತ್ತು ಕೇಂದ್ರ ಸರ್ಕಾರವು ನೋಟುಗಳ ಮೇಲೆ ಮಹಾತ್ಮಾ ಗಾಂಧಿಯವರ ಮುಖದ ಬದಲಾಗಿ ಎಪಿಜೆ ಅಬ್ದುಲ್ ಕಲಾಂ ಮತ್ತು ರವೀಂದ್ರನಾಥ ಟ್ಯಾಗೋರ್ ಅವರಂತಹ ಇತರರ ವ್ಯಕ್ತಿಗಳ ಮುಖದ ನೋಟುಗಳನ್ನು … Continued

ಉದ್ದೇಶಪೂರ್ವಕವಾಗಿ ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆಸಿದ ಚಾಲಕ; ಕೊಲೆ ಯತ್ನ ಕೇಸ್‌ ದಾಖಲು-ದೃಶ್ಯ ಮೊಬೈಲ್‌ನಲ್ಲಿ ಸೆರೆ

ನವದೆಹಲಿ: ಬೈಕ್‌ಗೆ ಮಹೀಂದ್ರಾ ಸ್ಕಾರ್ಪಿಯೊ ಕಾರು ಡಿಕ್ಕಿ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆ ನಿನ್ನೆ ನಡೆದಿದ್ದು, ಬೈಕ್‌ ಸವಾರ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಇದೇಘಟನೆ ಸಂಬಂಧ ಇಂದು. ಸೋಮವಾರ ಪ್ರಕರಣ ದಾಖಲಾಗಿದೆ. ರಾಷ್ಟ್ರ ರಾಜಧಾನಿಯ ಅರ್ಜನ್ ಗಢ್ ಮೆಟ್ರೋ ನಿಲ್ದಾಣದಲ್ಲಿ ಬಳಿ, ಭಾನುವಾರ ನಡೆದ ಘಟನೆಯ ಈ ವಿಡಿಯೋವನ್ನು, ಗಾಯಗೊಂಡ … Continued