ಬೇಕಾದ ಹಾಗೆ ಮಾತಾಡುವ ಹಿಜಾಬ್ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಿ ಬರಲಿ, ಆಗ ನಮ್ಮ ದೇಶದ ಮಹತ್ವ ಗೊತ್ತಾಗ್ತದೆ: ತಿರುಗೇಟು ನೀಡಿದ ಯು.ಟಿ.ಖಾದರ್

ಮಂಗಳೂರು:  ತಮಗೆ ಬೇಕಾದ ಹಾಗೆ  ಮಾತನಾಡುವ ಹಿಜಾಬ್‌ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಿ ಬರಲಿ, ಆಗ ಅವರಿಗೆ ನಮ್ಮ ದೇಶದಲ್ಲಿ ಸಿಗುವ ಸ್ವಾತಂತ್ರ್ಯ ಹಾಗೂ ದೇಶದ ಮಹತ್ವ ಗೊತ್ತಾಗುತ್ತದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹಿಜಾಬ್ ವಿದ್ಯಾರ್ಥಿನಿಯರಿಗೆ ತಿರುಗೇಟು ನೀಡಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಜಾಬ್‌ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಲಿ, ಪಾಕಿಸ್ತಾನ, … Continued

ಬೋಳ ಗ್ರಾಪಂ ರಸ್ತೆಗೆ ಹಾಕಿದ್ದ ನಾಥೂರಾಮ್ ಗೋಡ್ಸೆ ಹೆಸರಿನ ನಾಮಫಲಕ ತೆರವು

ಉಡುಪಿ: ಜಿಲ್ಲೆಯಲ್ಲಿ ರಸ್ತೆಯೊಂದಕ್ಕೆ ನಾಥೂರಾಮ್ ಗೋಡ್ಸೆ ಎಂದು ನಾಮಫಲಕ ಹಾಕಿದ ಘಟನೆ ವರದಿಯಾಗಿದ್ದು, ಇದಕ್ಕೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ರಸ್ತೆ ಹಾಕಲಾಗಿದ್ದ ನಾಮಫಲಕವನ್ನು ಪೊಲೀಸರು ತೆಗೆದುಹಾಕಿದ್ದಾರೆ. ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ ವ್ಯಾಪ್ತಿಯ ರಸ್ತೆಯೊಂದಕ್ಕೆ ಪಡುಗಿರಿ ನಾಥೂರಾಮ್ ಗೋಡ್ಸೆ ರಸ್ತೆ ಎಂದು ನಾಮಫಲಕ ಹಾಕಲಾಗಿತ್ತು. ಇದರ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ … Continued

ರಕ್ತದಲ್ಲಿನ ‘ಹಿಡನ್ ಡಿಎನ್‌ಎ’ ಪತ್ತೆಹಚ್ಚುವುದು ಕೆಲವು ಕ್ಯಾನ್ಸರ್ ರೋಗಿಗಳಿಗೆ ಕೀಮೋಥೆರಪಿ ತಪ್ಪಿಸಲು ಸಹಾಯ ಮಾಡುತ್ತದೆ: ಅಧ್ಯಯನ

ಕೀಮೋಥೆರಪಿಯು ಕ್ಯಾನ್ಸರ್ ಕೋಶಗಳನ್ನು ನಾಶಮಾಡಲು ನಂಬಲಾದ ಸಾಧನವಾಗಿದೆ, ಆದರೆ ನಮ್ಮ ಸಾಮಾನ್ಯ ಜೀವಕೋಶಗಳು ಈ ಚಿಕಿತ್ಸೆಯಲ್ಲಿ ನಾಶವಾಗುತ್ತವೆ, ಇದು ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಯಶಸ್ವಿ ಚಿಕಿತ್ಸೆಗಾಗಿ ಕೀಮೋಥೆರಪಿ ಯಾವಾಗಲೂ ಅಗತ್ಯವಿರುವುದಿಲ್ಲ, ಆದರೆ ಯಾರಿಗಾದರೂ ಅಗತ್ಯವಿದೆಯೇ ಎಂದು ಹೇಳುವುದು ಕಲೆ ಮತ್ತು ವಿಜ್ಞಾನ ಎರಡೂ ಆಗಿರಬಹುದು. ಈಗ, ಒಂದು ಹೊಸ ಅಧ್ಯಯನವು ವೈದ್ಯರಿಗೆ ತಂತ್ರವನ್ನು ಒದಗಿಸುತ್ತದೆ ಅದು ಈಗಾಗಲೇ … Continued

ಹುಬ್ಬಳ್ಳಿ: ಜೊಮ್ಯಾಟೊ ಆರ್ಡರ್​ನಲ್ಲಿ ಚಿಕನ್ ಸುಕ್ಕಾ ಜೊತೆ ಪಾರ್ಸಲ್‌ನಲ್ಲಿ ಬಂತು ಮಿಕ್ಸರ್ ಬ್ಲೇಡ್…!

ಹುಬ್ಬಳ್ಳಿ: ಜೊಮ್ಯಾಟೊ ಮೂಲಕ ಆನ್‌ಲೈನ್​ನಲ್ಲಿ ಚಿಕನ್ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಆಹಾರದಲ್ಲಿ ಮಿಕ್ಸರ್ ಗ್ರೈಂಡರ್​ನ ಬ್ಲೇಡ್​ನ ತುಂಡು ಸಿಕ್ಕಿದೆ ಎಂದು ವರದಿಯಾಗಿದೆ. ನಗರದ ಮಲ್ಲಿಕಾರ್ಜುನ ಎಂಬವರು ಜೊಮ್ಯಾಟೊ ಆಪ್ ಮೂಲಕ ವಿದ್ಯಾನಗರದ ಹೋಟೆಲ್​ನಿಂದ ಚಿಕನ್ ಸುಕ್ಕಾ ಆರ್ಡರ್ ಮಾಡಿದ್ದರು. ಅದರಂತೆ ಚಿಕನ್‌ ಸುಕ್ಕಾ ಪಾರ್ಸಲ್‌ ಬಂದಿದೆ. ಊಟ ಮಾಡುವಾಗ ಚಿಕನ್ ಸುಕ್ಕಾದಲ್ಲಿ ಮಿಕ್ಸರ್ ಬ್ಲೇಡ್ ಕಾಣಿಸಿಕೊಂಡಿದೆ. … Continued

ಗಂಡ-ಹೆಂಡತಿಯನ್ನು ಕೊಂದು ದೇಹವನ್ನು ತುಂಡು-ತುಂಡು ಮಾಡಿ ಐದು ತಾಸು ತಿಂದ ಕರಡಿ..!

ಪನ್ನಾ: ಆಘಾತಕರ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಕರಡಿಯೊಂದು ದಾಳಿ ನಡೆಸಿ ದಂಪತಿಯನ್ನು ಕೊಂದು ಹಾಕಿದ್ದಲ್ಲದೆ ಐದು ಗಂಟೆಗಳಿಗೂ ಹೆಚ್ಚು ಕಾಲ ಶವಗಳನ್ನು ತಿಂದು ಹಾಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಹದ ಭಾಗಗಳನ್ನು ತಿನ್ನುತ್ತಿದ್ದಾಗ ಅದನ್ನು ಓಡಿಸುವ ಪ್ರಯತ್ನಗಳು ವ್ಯರ್ಥವಾಯಿತು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾದ ನಂತರವೇ ಕರಡಿಯನ್ನು … Continued

ಬೃಹತ್‌ ಅಣೆಕಟ್ಟು ಬತ್ತಿದ ನಂತರ ಹೊರಹೊಮ್ಮಿದ 3,400-ವರ್ಷಗಳಷ್ಟು ಹಳೆಯ ಗುಪ್ತ ನಗರದ ಅವಶೇಷಗಳು…!

ನಮ್ಮ ಗ್ರಹದಲ್ಲಿನ ಹವಾಮಾನ ಬದಲಾವಣೆಯ ಬಿಗಿಯಾದ ಹಿಡಿತವು ಸಹಸ್ರಮಾನಗಳಿಂದ ಹುದುಗಿಹೋಗಿದ್ದ ರಹಸ್ಯಗಳನ್ನು ಬಹಿರಂಗಪಡಿಸುತ್ತಿದೆ. ಇತ್ತೀಚಿನ ತಿಂಗಳುಗಳಲ್ಲಿ, ಇರಾಕ್ ವಿಶೇಷವಾಗಿ ತೀವ್ರ ಬರಗಾಲದಿಂದ ಜರ್ಜರಿತವಾಗಿದೆ, ಬೆಳೆಗಳು ಒಣಗದಂತೆ ನೀರನ್ನು ಹೊರತೆಗೆಯುತ್ತಿರುವುದರಿಂದ ಮೊಸುಲ್ ಜಲಾಶಯದಲ್ಲಿ ನೀರು ಗಣನೀಯವಾಗಿ ಕಡಿಮೆಯಾಗುತ್ತಿದೆ. ಈ ಬಿಕ್ಕಟ್ಟಿನ ಮಧ್ಯೆ, ದಶಕಗಳಿಂದ ಮುಳುಗಿದ್ದ ಪ್ರಾಚೀನ ನಗರದ ಅವಶೇಷಗಳು ಮತ್ತೊಮ್ಮೆ ಒಣ ಭೂಮಿ ಕಾಣಸಿಕೊಂಡಿದೆ. ವಸಾಹತುಗಳನ್ನು ಪುರಾತತ್ತ್ವ … Continued

ಮಲ್ಪೆ ಬೀಚ್​ನಲ್ಲಿ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ವಿಜಯಪುರದ ನಾಲ್ವರ ರಕ್ಷಣೆ

ಉಡುಪಿ: ಮಲ್ಪೆ ಬೀಚ್​ನಲ್ಲಿ ಸಮುದ್ರದಲ್ಲಿ ಕೊಚ್ಚಿಹೋಗುತ್ತಿದ್ದ ನಾಲ್ವರನ್ನು ಜೀವ ರಕ್ಷಕ ದಳದ ಸಿಬ್ಬಂದಿ ರಕ್ಷಿಸಿ ದುರಂತವನ್ನು ತಪ್ಪಿಸಿದ್ದಾರೆ. ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವಿಜಯಪುರದ ಮೂಲದ ಮೋಬಿನ್, ಸೋಫಿಯಾ, ಅಹ್ಮದ್ ಮತ್ತು ಮೊಹಮ್ಮದ್ ಎಂಬ ನಾಲ್ವರು ಪ್ರವಾಸಿಗರನ್ನು ರಕ್ಷಿಸಲಾಗಿದೆ. ವಿಜಯಪುರದ ಮೂಲದವರಾದ ಇವರು ಮಲ್ಪೆ ಬೀಚ್​​ಗೆ ಪ್ರವಾಸಕ್ಕೆಂದು ಬಂದಿದ್ದು, ಈ ವೇಳೆ ಕಡಲ ಅಬ್ಬರ ಜೋರಾಗಿದ್ದು, ಇಳಿಯದಂತೆ ಪ್ರವಾಸಿಗರಿಗೆ … Continued

ಪ್ರಾರ್ಥನಾ ಕೇಂದ್ರದ ಮೇಲೆ ಬಲವಂತದ ಮತಾಂತರ ಯತ್ನದ ಆರೋಪ: ಪೊಲೀಸರಿಂದ ನಿರಾಕರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕ್ರೈಸ್ತ ಪ್ರಾರ್ಥನಾ ಮಂದಿರದಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಧಾರ್ಮಿಕ ಮತಾಂತರದ ಪ್ರಯತ್ನಗಳು ನಡೆದಿಲ್ಲ ಮತ್ತು ಜನರು ಸ್ವಯಂಪ್ರೇರಣೆಯಿಂದ ಸೇರಿದ್ದಾರೆ ಎಂದು ದಕ್ಷಿಣ ಕನ್ನಡ … Continued

ಐವರು ಬಾಲಕಿಯರು ಸೇರಿ ಒಂದೇ ಕುಟುಂಬದ ಏಳು ಮಂದಿ ನೀರಿನಲ್ಲಿ ಮುಳುಗಿ ಸಾವು

ಕಡಲೂರು: ತಮಿಳುನಾಡಿನ ಕಡಲೂರು ಜಿಲ್ಲೆಯ ಕೆದಿಲಂ ಚೆಕ್ ಡ್ಯಾಂ ಬಳಿ ಭಾನುವಾರ ಮಧ್ಯಾಹ್ನ ಕೆಸರಿನಲ್ಲಿ ಸಿಲುಕಿ ಐವರು ಬಾಲಕಿಯರು ಸೇರಿದಂತೆ ಒಂದೇ ಕುಟುಂಬದ ಏಳು ಜನ ಸಾವಿಗೀಡಾಗಿದ್ದಾರೆ. ಅಲ್ಲಿ ಕೆಲ ವರ್ಷಗಳ ಹಿಂದೆ ಮರಳು ತೆಗೆದ ನಂತರ ಗುಂಡಿ ನಿರ್ಮಾಣವಾಗಿದ್ದು, ಅದನ್ನು ಹಾಗಿಯೇ ಬಿಡಲಾಗಿದೆ ಎಂದು ಅವರ ಸಂಬಂಧಿಕರು ದೂರಿದ್ದಾರೆ. ಎ ಕೂಚಿಪಾಳ್ಯಂ ಗ್ರಾಮದ ಎಂ … Continued

ಬಂಧನದಲ್ಲಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್‌ ಮನೆ ಮೇಲೆ ಇಡಿ ದಾಳಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನದಲ್ಲಿರುವ ದೆಹಲಿಯ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅವರ ಮನೆ ಮೇಲೆ ಸೋಮವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಕೋಲ್ಕತ್ತಾ ಮೂಲದ ಕಂಪನಿಗೆ ಸಂಬಂಧಿಸಿದಂತೆ ಅಕ್ರಮ ಹಣದ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಮೇ 30ರಂದು ಬಂಧಿಸಿತ್ತು. … Continued