ಪ್ರವಾದಿ ಮುಹಮ್ಮದ್ ವಿವಾದಿತ ಹೇಳಿಕೆಗಳ ನಂತರ ಪಕ್ಷದ ವಕ್ತಾರರಿಗೆ-ನಾಯಕರಿಗೆ ಲಕ್ಷ್ಮಣ ರೇಖೆ ಎಳೆದ ಬಿಜೆಪಿ

ನವದೆಹಲಿ: ಪ್ರವಾದಿ ಮುಹಮ್ಮದ್ ಕುರಿತು ಪಕ್ಷದ ನಾಯಕಿ ನೂಪುರ್ ಶರ್ಮಾ ಅವರ ಹೇಳಿಕೆಗೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಹಿನ್ನಡೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ತನ್ನ ವಕ್ತಾರರು ಮತ್ತು ಟಿವಿ ಚರ್ಚೆಗಳಲ್ಲಿ ಭಾಗವಹಿಸುವ ನಾಯಕರಿಗೆ ಬಿಜೆಪಿ ಹೊಸ ಮಿತಿಗಳನ್ನು ನಿಗದಿಪಡಿಸಿದೆ. ಅಧಿಕೃತ ವಕ್ತಾರರು ಮತ್ತು ಪ್ಯಾನೆಲಿಸ್ಟ್‌ಗಳು ಮಾತ್ರ ಟಿವಿ ಚರ್ಚೆಗಳಲ್ಲಿ … Continued

ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಜಾಮೀನು ಆದೇಶ ಕಾಯ್ದಿರಿಸಿದ ಹೈಕೋರ್ಟ್‌

posted in: ರಾಜ್ಯ | 0

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಇರ್ಫಾನ್‌ ಪಾಷ ಮತ್ತು ಮೊಹಮದ್ ಮುಜೀಬುಲ್ಲಾ ಜಾಮೀನು ಮನವಿಯ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕಾಯ್ದಿರಿಸಿದೆ. ಇರ್ಫಾನ್‌ ಪಾಷ ಮತ್ತು ಮೊಹಮದ್ ಮುಜೀಬುಲ್ಲಾ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಶಿವಶಂಕರ ಅಮರಣ್ಣವರ ನೇತೃತ್ವದ … Continued

ಪ್ರವಾದಿ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ದೆಹಲಿ, ಮುಂಬೈ, ಯುಪಿ, ಗುಜರಾತ್‌ನಲ್ಲಿ ಆತ್ಮಹತ್ಯಾ ದಾಳಿಯ ಬೆದರಿಕೆ ಹಾಕಿದ ಅಲ್-ಖೈದಾ

ನವದೆಹಲಿ: ಜೂನ್ 6 ರಂದು ಕಳುಹಿಸಿದ ಬೆದರಿಕೆ ಪತ್ರದಲ್ಲಿ, ಭಯೋತ್ಪಾದಕ ಗುಂಪು ಅಲ್-ಖೈದಾ ಪ್ರವಾದಿಯ ಗೌರವಕ್ಕಾಗಿ ಹೋರಾಡಲು ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಆತ್ಮಾಹುತಿ ದಾಳಿಗಳನ್ನು ನಡೆಸುವುದಾಗಿ ಬೆದರಿಕೆ ಹಾಕಿದೆ. ಕೆಲವು ಬಿಜೆಪಿ ನಾಯಕರು ಪ್ರವಾದಿ ಮುಹಮ್ಮದ್ ಕುರಿತು ಹೇಳಿಕೆ ನೀಡಿದ ನಂತರ ಭುಗಿಲೆದ್ದ ವಿವಾದದ ಹಿನ್ನೆಲೆಯಲ್ಲಿ ಇದು ಬೆಳಕಿಗೆ ಬಂದಿದೆ. ನಮ್ಮ … Continued

ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ನೇಮಕಕ್ಕೆ ನಿಯಮ ತಿದ್ದುಪಡಿ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಹುದ್ದೆಗೆ ಸಂಬಂಧಿಸಿದ ಮೂರು ಸಶಸ್ತ್ರ ಪಡೆಗಳ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲು ರಕ್ಷಣಾ ಸಚಿವಾಲಯ ಮಂಗಳವಾರ ಅಧಿಸೂಚನೆಯನ್ನು ಹೊರಡಿಸಿದೆ. ಹೊಸ ಮಾರ್ಗಸೂಚಿಯ ಪ್ರಕಾರ, 62 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಸೇವೆಯಲ್ಲಿರುವ ಅಥವಾ ನಿವೃತ್ತ ತ್ರಿ-ಸ್ಟಾರ್ ಅಧಿಕಾರಿಯನ್ನು ಹುದ್ದೆಗೆ ಪರಿಗಣಿಸಲಾಗುತ್ತದೆ. ವೈಸ್ ಅಡ್ಮಿರಲ್ ಮತ್ತು ಏರ್ ಮಾರ್ಷಲ್ ಶ್ರೇಣಿಯ … Continued

ಹಾವೇರಿ: ದಕ್ಷಿಣ ಭಾರತದ ಅತ್ಯಂತ ದೊಡ್ಡ ಸ್ಫಟಿಕ ಲಿಂಗ ಕಳ್ಳತನ

posted in: ರಾಜ್ಯ | 0

ಹಾವೇರಿ: ದಕ್ಷಿಣ ಭಾತದಲ್ಲಿಯೇ ದೊಡ್ಡ ಸ್ಫಟಿಕ ಲಿಂಗ ಎಂಬ ಖ್ಯಾತಿ ಪಡೆದಿದ್ದ ರಾಣೆಬೆನ್ನೂರ ತಾಲೂಕಿನ ಲಿಂಗದಹಳ್ಳಿಯ ಐತಿಹಾಸಿಕ ಪುರಾತನ ಸ್ಪಟಿಕಲಿಂಗ ಸೋಮವಾರ ರಾತ್ರಿ ಕಳ್ಳತನವಾಗಿದೆ. ಲಿಂಗದಹಳ್ಳಿಯ ಹಿರೇಮಠದಲ್ಲಿ ಸ್ಫಟಿಕಲಿಂಗ ಇತ್ತು. ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ಲಿಂಗದ ಪೂಜೆ ಮಾಡುತ್ತಿದ್ದರು. ಇದು 8ನೇ ಶತಮಾನದ ಬೆಲೆಕಟ್ಟಲಾಗದ ಸ್ಫಟಿಕಲಿಂಗವಾಗಿತ್ತು ಎಂದು ಹೇಳಲಾಗಿದೆ. ಮಠದ ವೀರಭದ್ರ ಶಿವಾಚಾರ್ಯ … Continued

ಹೈದರಾಬಾದ್ ಅಪ್ರಾಪ್ತಳ ಗ್ಯಾಂಗ್ ರೇಪ್ ಪ್ರಕರಣ: ಎಐಎಂಐಎಂ ಶಾಸಕರ ಅಪ್ರಾಪ್ತ ಪುತ್ರನ ಬಂಧನ

ಹೈದರಾಬಾದ್‌: ಮೇ 28 ರಂದು ಹೈದರಾಬಾದ್‌ನಲ್ಲಿ 17 ವರ್ಷದ ಬಾಲಕಿಯ ಮೇಲೆ ನಡೆದ ಭೀಕರ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಶಾಸಕರ ಪುತ್ರನನ್ನು ಬಂಧಿಸಲಾಗಿದೆ. ಆರೋಪಿ, ಅಪ್ರಾಪ್ತನಾಗಿದ್ದು, ಸೋಮವಾರ ಬಂಧಿಸಿ ವೀಕ್ಷಣೆ ಮನೆಗೆ (observation home) ಕಳುಹಿಸಲಾಗಿದೆ. ಈ ಪ್ರಕರಣದ ಐವರು ಬಾಲಾಪರಾಧಿಗಳಲ್ಲಿ ಈತ ಒಬ್ಬರಾನಾಗಿದ್ದಾನೆ. ಪ್ರಕರಣದಲ್ಲಿ ಐವರನ್ನೂ ಬಂಧಿಸಲಾಗಿದ್ದು, ಎಲ್ಲರೂ ಪ್ರಸ್ತುತ ವೀಕ್ಷಣಾ ಮನೆಯಲ್ಲಿದ್ದಾರೆ. … Continued

ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ನೋಟುಗಳು ತುಂಬಿದ್ದ ಬ್ಯಾಗ್ ಕಳುಹಿಸಲಾಗಿತ್ತು ಎಂದು ಬಾಂಬ್‌ ಸಿಡಿಸಿದ ಸ್ವಪ್ನಾ ಸುರೇಶ್

ಸಂವೇದನಾಶೀಲ ಬಹಿರಂಗದಲ್ಲಿ, 2020ರ ತಿರುವನಂತಪುರಂ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ಇಂದು, ಮಂಗಳವಾರ (ಜೂನ್ 7) ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹಗರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಪ್ನಾ ಸುರೇಶ, 2016ರಲ್ಲಿ ದುಬೈನಲ್ಲಿದ್ದಾಗ ಮುಖ್ಯಮಂತ್ರಿ ವಿಜಯನ್ ಅವರಿಗೆ ನೋಟುಗಳು ಇರುವ ಬ್ಯಾಗೇಜ್ ಕಳುಹಿಸಲಾಗಿತ್ತು ಎಂದು ಆರೋಪಿಸಿದ್ದಾರೆ. … Continued

ಅಂಕೋಲಾ: ಮೀನು ಹಿಡಿಯುವಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೀನುಗಾರ ಸಾವು

posted in: ರಾಜ್ಯ | 0

ಅಂಕೋಲಾ: ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತ ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿ ಮಾಂಗಟೇಶ್ವರ ಗುಡ್ಡದ ಬಳಿ ನಡೆದ ಬಗ್ಗೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು ಗಾಬೀತ ಕೇಣಿ ನಿವಾಸಿ ಅಂಕುಶ ರಾಮದಾಸ ಅಂಕೋಲೆಕರ ಎಂದು ಗುರುತಿಸಲಾಗಿದೆ. ಈತ ಸೋಮವಾರ ಸಂಜೆ ಮಾಂಗಟೇಶ್ವರ ಗುಡ್ಡದ ಸಮೀಪ ಕೈ … Continued

ಬಿಜೆಪಿಯಿಂದ ಚಡ್ಡಿ ಅಭಿಯಾನ; ಚಡ್ಡಿ ಹಿಡಿದು ಸಿದ್ದರಾಮಯ್ಯ ಮನೆಯತ್ತ ಬಂದ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ

posted in: ರಾಜ್ಯ | 0

ಬೆಂಗಳೂರು: ಆರ್‌ಎಸ್‌ಎಸ್‌ ಚಡ್ಡಿ ಸುಟ್ಟುಹಾಕುವ ಅಭಿಯಾನಕ್ಕೆ ಕಾಂಗ್ರೆಸ್ ಕರೆ ಕೊಟ್ಟಿರುವ ಬೆನ್ನಲ್ಲೇ ವಿಧಾನ ಪರಿಷತ್‌ ಸದಸ್ಯ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಚಡ್ಡಿ ಚಳವಳಿ ನಡೆದಿದದ್ದು, ಚಡ್ಡಿ ಹಿಡಿದು ಸಿದ್ದರಾಮಯ್ಯ ಮನೆ ಕಡೆಗೆ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದಾರೆ. ಈ ವೇಳೆ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಚಡ್ಡಿ ಸುಡಬೇಕೆಂದಿದ್ದರೆ ಕಾಂಗ್ರೆಸ್​ನವರ ಚಡ್ಡಿ ಸುಟ್ಟುಕೊಳ್ಳಲಿ. ಇಡೀ ದೇಶದಲ್ಲಿ ಜನರು … Continued

ಚುನಾವಣಾ ‘ಲಂಚ’ ಪ್ರಕರಣದಲ್ಲಿ ಕೇರಳ ಬಿಜೆಪಿ ಮುಖ್ಯಸ್ಥರ ವಿರುದ್ಧ ಜಾಮೀನು ರಹಿತ ಆರೋಪ

ಕಾಸರಗೋಡು(ಕೇರಳ): ಚುನಾವಣಾ ಲಂಚದ ಆರೋಪದಡಿ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ವಿರುದ್ಧ ಪ್ರಕರಣ ದಾಖಲಿಸಲು ಕಾಸರಗೋಡು ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅನುಮತಿ ನೀಡಿದ ಒಂದು ವರ್ಷದ ನಂತರ, ಕೇರಳ ಪೊಲೀಸರು ಜಾಮೀನು ರಹಿತ ಆರೋಪದಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ಪ್ರಾಸಂಗಿಕವಾಗಿ, ಕಳೆದ ವರ್ಷ ಏಪ್ರಿಲ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಂಜೇಶ್ವರಂ ಕ್ಷೇತ್ರದಲ್ಲಿ ಎಲ್‌ಡಿಎಫ್ … Continued