ತನ್ನ ಗಾಯಕ್ಕೆ ಚಿಕಿತ್ಸೆ ಪಡೆಯಲು ತಾನೇ ಕ್ಲಿನಿಕ್‌ಗೆ ಮರಿ ಸಮೇತ ಬಂದ ಗಾಯಗೊಂಡ ಮಂಗ: ಕೋತಿಯ ಬುದ್ಧಿಶಕ್ತಿಗೆ ಬೆರಗಾದ ಇಂಟರ್ನೆಟ್‌ | ವೀಕ್ಷಿಸಿ

ಪಾಟ್ನಾ: ಅಚ್ಚರಿಯ ನಿದರ್ಶನವೊಂದರಲ್ಲಿ, ಕೋತಿಯೊಂದು ತನ್ನ ಗಾಯಗಳಿಗೆ ಚಿಕಿತ್ಸೆ ಪಡೆಯಲು ಬಿಹಾರದ ಸಸಾರಾಮ್‌ನಲ್ಲಿರುವ ಕ್ಲಿನಿಕ್‌ಗೆ ಭೇಟಿ ನೀಡಿರುವುದು ಕಂಡುಬಂದಿದೆ. ವೈರಲ್ ಆಗಿರುವ ಘಟನೆಯ ವೀಡಿಯೊದಲ್ಲಿ ಕೋತಿ ತನ್ನ ಮರಿಯೊಂದಿಗೆ ಕ್ಲಿನಿಕ್‌ಗೆ ಬಂದಿದೆ. ವೈದ್ಯರಿಗಾಗಿ ತಾಳ್ಮೆಯಿಂದ ಕಾಯುತ್ತಿರುವ ಕೋತಿಯನ್ನು ನೋಡಲು ಜನಸಾಗರವೇ ನೆರೆದಿತ್ತು. ಜನರು ಅಪನಂಬಿಕೆಯಿಂದ ತಮ್ಮ ಕಣ್ಣುಗಳನ್ನು ತಾವೇ ಉಜ್ಜಿಕೊಂಡು ಮತ್ತೆ ಮತ್ತೆ ಈ ದೃಶ್ಯವನ್ನು … Continued

ಮಗನ ಶವ ಪಡೆಯಲು ಆಸ್ಪತ್ರೆ ಸಿಬ್ಬಂದಿಗೆ ₹ 50,000 “ಲಂಚ” ನೀಡಲು ಹಣಕ್ಕಾಗಿ ಭಿಕ್ಷೆ ಬೇಡಿದ ದಂಪತಿ…!

ಸಮಸ್ಟಿಪುರ(ಬಿಹಾರ): ತಮ್ಮ ಮಗನ ಶವವನ್ನು ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಹಣಕ್ಕಾಗಿ ವೃದ್ಧ ದಂಪತಿ ಬಿಹಾರದ ಸಮಸ್ಟಿಪುರದಲ್ಲಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಆಸ್ಪತ್ರೆಯ ಉದ್ಯೋಗಿಯೊಬ್ಬರು ತಮ್ಮ ಮಗನ ಶವವನ್ನು ಬಿಡುಗಡೆ ಮಾಡಲು ದಂಪತಿಗೆ ₹ 50,000 ಹಣ ಕೇಳಿದ್ದಾರೆ ಎನ್ನಲಾಗಿದೆ. ದಂಪತಿ ಬಳಿ ಹಣ ಇಲ್ಲದ ಕಾರಣ ‘ಹಣಕ್ಕಾಗಿ ಭಿಕ್ಷೆ ಬೇಡುತ್ತಾ’ ಅವರು ಊರೂರು ಅಲೆಯುತ್ತಿದ್ದಾರೆ … Continued

ಮಾಸ್ಕ್ ಧರಿಸದ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಬಹುದು

ನವದೆಹಲಿ: ವಿಮಾನ ನಿಲ್ದಾಣಗಳು ಮತ್ತು ವಿಮಾನಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಲು ನಿರಾಕರಿಸುವ ಪ್ರಯಾಣಿಕರನ್ನು ನಿರ್ಗಮನದ ಮೊದಲು ಡಿ-ಬೋರ್ಡಿಂಗ್ ಮಾಡಲಾಗುತ್ತದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಬುಧವಾರ ತಿಳಿಸಿದೆ. ವಿಮಾನ ನಿಲ್ದಾಣಗಳು ಮತ್ತು ವಿಮಾನಗಳಲ್ಲಿ ಮಾಸ್ಕ್ ಧರಿಸದ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ನಿಯಂತ್ರಣ ಸಂಸ್ಥೆಗೆ ಸೂಚಿಸಿದ ನಂತರ ಈ ಆದೇಶ … Continued

ಹೋಂ ವರ್ಕ್‌ ಮಾಡದ್ದಕ್ಕೆ ಐದು ವರ್ಷ ಮಗಳನ್ನು ಸುಡುವ ಬಿಸಿಲಿನಲ್ಲಿ ಮನೆ ಛಾವಣಿ ಮೇಲೆ ಕೈ-ಕಾಲು ಕಟ್ಟಿ ಹಾಕಿ ಶಿಕ್ಷಿಸಿದ ದೆಹಲಿ ಮಹಿಳೆ, ಪ್ರಕರಣ ದಾಖಲು

ನವದೆಹಲಿ: ಆಕೆಯ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿದೆ. ಸುಡುವ ಬಿಸಿಲಿನ ಕೆಳಗೆ ಮನೆಯ ಛಾವಣಿಯ ಮೇಲೆ ಮಲಗಿದ ಸ್ಥಿಯಲ್ಲಿದ್ದ ಐದು ವರ್ಷದ ಮಗು ತನ್ನನ್ನು ಬಿಡಿಸಿಕೊಳ್ಳಲು ಹೆಣಗಾಡುತ್ತದೆ. ತದನಂತರ ಬಿಸಿಲಿಗೆ ಮೇಲ್ಛಾವಣಿಯ ತಾಪವು ಅವಳ ಚರ್ಮವನ್ನು ಸುಡುತ್ತಿದ್ದುದರಿಂದ ಮಗು ನೋವಿನಿಂದ ಕಿರುಚಲು ಪ್ರಾರಂಭಿಸುತ್ತಾಳೆ. ದೆಹಲಿಯ ಮಗುವಿನ ಈ ವೀಡಿಯೊ ಬುಧವಾರ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಆಕೆಯ … Continued

ಗಾಯದಿಂದ ದಕ್ಷಿಣ ಆಫ್ರಿಕ ವಿರುದ್ಧದ T20 ಸರಣಿಯಿಂದ ಕೆ.ಎಲ್‌. ರಾಹುಲ್ ಔಟ್, ರಿಷಬ್ ಪಂತ್ ಈಗ ಭಾರತ ತಂಡದ ನಾಯಕ

ನವದೆಹಲಿ: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಭಾರತವನ್ನು ಮುನ್ನಡೆಸಬೇಕಿದ್ದ ಕೆಎಲ್ ರಾಹುಲ್ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಬುಧವಾರ ಟ್ವೀಟ್ ಮೂಲಕ ತಿಳಿಸಿದೆ. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಗಾಯದ ಸಮಸ್ಯೆಯಿಂದ ಸರಣಿಯಿಂದ ಹೊರಗುಳಿದಿದ್ದಾರೆ. ವಿಕೆಟ್ ಕೀಪರ್ ರಿಷಬ್ ಪಂತ್ ಈಗ ಭಾರತದ ತಂಡವನ್ನು … Continued

ಬೆಚ್ಚಿ ಬೀಳಿಸಿದ ಘಟನೆ: ಒಂದೇ ರೀತಿಯಲ್ಲಿ ಕತ್ತರಿಸಿದ ಇಬ್ಬರು ಮಹಿಳೆಯರ ಅರ್ಧ ಶವಗಳು ಬೇರೆ ಬೇರೆ ಕಡೆ ಪತ್ತೆ..!

posted in: ರಾಜ್ಯ | 0

ಬೆಚ್ಚಿ ಬೀಳಿಸುವ ಘಟನೆ: ಇಬ್ಬರು ಮಹಿಳೆಯರ ಅರ್ಧ ದೇಹಗಳು ಪತ್ತೆ ಮಂಡ್ಯ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳೆಯರನ್ನು ಬೀಭತ್ಸವಾಗಿ ಕೊಲೆ ಮಾಡಿ ಅರ್ಧ ದೇಹ ತುಂಡರಿಸಲ್ಪಟ್ಟ ರೀತಿಯಲ್ಲಿ ಶವಗಳು ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಪಾಂಡವಪುರ ತಾಲೂಕಿನಲ್ಲಿ ಒಬ್ಬ ಮಹಿಳೆಯ ಅರ್ಧ ಶವ, ಶ್ರೀರಂಗಪಟ್ಟಣ ತಾಲೂಕಿನಲ್ಲಿ ಮತ್ತೊಬ್ಬ ಮಹಿಳೆಯ ಅರ್ಧ ಶವ ಪತ್ತೆಯಾಗಿದೆ. ಪಾಂಡವಪುರ ತಾಲೂಕಿನ … Continued

ರೈತರಿಗೆ ಒಳ್ಳೆಯ ಸುದ್ದಿ… ಬಿತ್ತನೆ ಅವಧಿ ಆರಂಭವಾಗುತ್ತಿದ್ದಂತೆ ಭತ್ತ, ಇತರ 13 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

ನವದೆಹಲಿ: 2022-23ನೇ ವರ್ಷಕ್ಕೆ ರೈತರು ಹೆಚ್ಚಿನ ಪ್ರದೇಶದಲ್ಲಿ ಬೆಳೆ ಬೆಳೆಯಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರವು ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಕ್ವಿಂಟಲ್‌ಗೆ 2,040 ರೂ.ಗೆ ಹೆಚ್ಚಿಸಿದೆ. ಪ್ರತಿ ಕ್ವಿಂಟಲ್‌ಗೆ 100 ರೂ.ಗಳನ್ನು ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ … Continued

ರಾಯಚೂರು: ಕಲುಷಿತ ನೀರು ಕುಡಿದು ಸಾವಿಗೀಡಾದವರ ಸಂಖ್ಯೆ 4ಕ್ಕೆ ಏರಿಕೆ

posted in: ರಾಜ್ಯ | 0

ರಾಯಚೂರು: ರಾಯಚೂರು ನಗರಸಭೆ ಸರಬರಾಜು ಮಾಡುತ್ತಿರುವ ಕಲುಷಿತ ನೀರು ಕುಡಿದು ಬುಧವಾರ ಮತ್ತೊಬ್ಬರು ಸಾವಿಗೀಡಾಗಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದಂತಾಗಿದೆ. ಅಂದ್ರೂನ್ ಕಿಲ್ಲಾದ 50 ವರ್ಷ ವಯಸ್ಸಿನ ಅಬ್ದುಲ್ ಕರೀಂ ಬುಧವಾರ ಮೃತಪಟ್ಟಿದ್ದಾರೆ. ವಾಂತಿ – ಭೇದಿಯಿಂದಾಗಿ ಕಳೆದ ಮೂರು ದಿನಗಳಿಂದ ಅಬ್ದುಲ್ ಕರೀಂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಿಡ್ನಿ ವೈಫಲ್ಯದಿಂದ ಅಬ್ದುಲ್ ಕರೀಂ … Continued

ಕರ್ನಾಟಕದಲ್ಲಿ ಕೊರೊನಾ ಸೋಂಕು ಏರಿಕೆ: 376 ಹೊಸ ಸೋಂಕು ದಾಖಲು

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿಕೊರೊನಾ ದೈನಂದಿನ ಪ್ರಕರಣ ಏರಿಕೆ ಆಗುತ್ತಿದೆ. ಇಂದು, ಬುಧವಾರ ರಾಜ್ಯದಲ್ಲಿ 376 ಕೊರೊನಾ ಸೋಂಕು ದಾಖಲಾಗಿದ್ದು, ಯಾವುದೇ ಸಾವು ವರದಿಯಾಗಿಲ್ಲ. ಿದೇ ಸಮಯದಲ್ಲಿ ರಾಜ್ಯದಲ್ಲಿ 231 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ದರ ಶೇ.1.64 ದಾಖಲಾಗಿದ್ದು, ರಾಜ್ಯದಲ್ಲಿ ಈ ವಾರ ಸೋಂಕಿನಿಂದ ಮೃತಪಟ್ಟವರ ದರ ಶೇ.0.04 ಇದೆ. ರಾಜ್ಯದಲ್ಲಿ ಬುಧವಾರ … Continued

ಸಹಕಾರಿ ಬ್ಯಾಂಕ್‌ಗಳ ವೈಯಕ್ತಿಕ ಗೃಹ ಸಾಲಗಳ ಮೊತ್ತ ಎರಡು ಪಟ್ಟು ಹೆಚ್ಚಿಸಿದ ಆರ್‌ಬಿಐ

ನವದೆಹಲಿ: ಸಹಕಾರಿ ಬ್ಯಾಂಕ್‌ಗಳ ವೈಯಕ್ತಿಕ ಗೃಹ ಸಾಲಗಳ ಮೇಲಿನ ಮಿತಿಗಳನ್ನು ಆರ್‌ಬಿಐ ಹೆಚ್ಚಿಸಿದೆ. ಹೆಚ್ಚಿದ ಮಿತಿಗಳು ಪ್ರಾಥಮಿಕ (ನಗರ) ಸಹಕಾರಿ ಬ್ಯಾಂಕ್‌ಗಳು (ಯುಸಿಬಿಗಳು), ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳು (ಆರ್‌ಸಿಬಿಗಳು) ಎರಡಕ್ಕೂ ಅನ್ವಯಿಸುತ್ತವೆ. ಆರ್‌ಬಿಐ ಸಹಕಾರಿ ಬ್ಯಾಂಕುಗಳನ್ನು ಬೆಳವಣಿಗೆಯಲ್ಲಿ ಸಮಾನ ಪಾಲುದಾರರೆಂದು ಪರಿಗಣಿಸಿದೆ, ಹೀಗಾಗಿ ಅವರ ಸಾಲದ ಮಿತಿಯನ್ನು 100% ರಷ್ಟು ಹೆಚ್ಚಿಸಿದೆ, ಅಂದರೆ ಈ … Continued