ತನ್ನ ಶ್ರಾದ್ಧದ ದಿನವೇ ಪ್ರತ್ಯಕ್ಷನಾದ ಸತ್ತು ಹೋಗಿದ್ದ ಮಗ…!

ಅಗರ್ತಲಾ (ತ್ರಿಪುರ): ಸತ್ತು ಹೋಗಿದ್ದ ಮಗ, ತನ್ನ ತಿಥಿ ದಿನವೇ ಮನೆಗೆ ಬಂದ ವಿಲಕ್ಷಣ ಘಟನೆಯೊಂದು ತ್ರಿಪುರದ ಅಗರ್ತಲಾದಲ್ಲಿ ನಡೆದಿದೆ. ಮೋಹನಪುರ್‌ ಕಾಳಿಬಜಾರ್‌ನ ನಿವಾಸಿ ಆಗಿದ್ದ 22 ವರ್ಷದ ಆಕಾಶ ಸರ್ಕಾರ್‌ ಕಳೆದ ತಿಂಗಳು ನಾಪತ್ತೆಯಾಗಿದ್ದ. ಈ ಸಂಬಂಧ ಕುಟುಂಬಸ್ಥರು ಪೊಲೀಸರಿಗೂ ದೂರು ನೀಡಿದ್ದರು. ಜೂನ್ 3ರಂದು ಅಗರ್ತಲಾ ಪೊಲೀಸ್‌ ಠಾಣೆ ವ್ಯಾಪ್ತಿಯ ಮೇಲರ್ಮತ್‌ ಬಳಿಯ … Continued

ಚಲಿಸುತ್ತಿದ್ದ ಬಸ್ಸಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ, ನಾಲ್ವರ ಬಂಧನ

ನವದೆಹಲಿ: ಬಿಹಾರದ ಬೆಟ್ಟಿಯಾ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ವರದಿಯ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಬಾಲಕಿಯು ಪಶ್ಚಿಮ ಚಂಪಾರಣ್‌ನ ಬೆಟ್ಟಿಯಾಗೆ ಹೋಗಲು ಬಸ್‌ಗಾಗಿ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಳು. ಬಸ್ ಚಾಲಕನು ಬೆಟ್ಟಿಯಾಗೆ ಹೋಗುವುದಾಗಿ ಹೇಳಿ … Continued

ಎಲ್ಲ ಪ್ರಕಾರದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್

ನವದೆಹಲಿ: ಭಾರತದ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಪ್ರಸ್ತುತ ಮಹಿಳಾ ಏಕದಿನ ಪಂದ್ಯಗಳಲ್ಲಿ ಮಿಥಾಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಭಾರತದ ಅನುಭವಿ ಕ್ರಿಕೆಟಿಗರಾದ ಮಿಥಾಲಿ, 232 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ, 50.68 ಸರಾಸರಿಯಲ್ಲಿ 7,805 ರನ್ ಗಳಿಸಿದ್ದಾರೆ. ಮಿಥಾಲಿ ಟ್ವೀಟ್ ಮಾಡಿದ್ದು, … Continued

ಪಂಜರದ ಸಮೀಪ ಹೋದವನ ಟೀ ಶರ್ಟ್ ಎಳೆದು, ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡ ಒರಾಂಗುಟಾನ್…! ಬೊಬ್ಬೆ ಹೊಡೆದ ವ್ಯಕ್ತಿ…| ದೃಶ್ಯ ಸಿಸಿಟಿಯಲ್ಲಿ ಸೆರೆ

ಪಂಜರದಲ್ಲಿರುವ ಪ್ರಾಣಿಗಳಿಗೆ ತುಂಬಾ ಹತ್ತಿರವಾಗುವುದು ಹೇಗೆ ಅಪಾಯಕಾರಿ ಎಂಬುದನ್ನು ತೋರಿಸುವ ವೀಡಿಯೊ ವೈರಲ್‌ ಆಗಿದೆ. ಕೋತಿ ಜಾತಿಗೆ ಸೇರಿದ ಒರಾಂಗುಟಾನ್ ವ್ಯಕ್ತಿಯೊಬ್ಬರ ಟೀ ಶರ್ಟ್ ಎಳೆದುಕೊಂಡು, ಕಾಲನ್ನು ಹಿಡಿದುಕೊಂಡಿರುವುದನ್ನು ವೀಡಿಯೊ ತೋರಿಸುತ್ತದೆ. ಇಂಡೋನೇಷ್ಯಾದ ಮೃಗಾಲಯದಲ್ಲಿರುವ ಒರಾಂಗುಟನ್‌ನ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡುವವರ ಟೀ ಶರ್ಟ್ ಅನ್ನು ಪ್ರೈಮೇಟ್ ಹಿಡಿಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. … Continued

ಜ್ಞಾನವಾಪಿ ಸಮೀಕ್ಷೆಗೆ ಆದೇಶ ನೀಡಿದ ನ್ಯಾಯಾಧೀಶರಿಗೆ ಜೀವ ಬೆದರಿಕೆ

ವಾರಾಣಸಿ: ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀಕ್ಷೆಗಾಗಿ ಆಯೋಗವನ್ನು ರಚಿಸಲು ಆದೇಶಿಸಿದ್ದ ವಾರಣಾಸಿಯ ನ್ಯಾಯಾಧೀಶರಿಗೆ ಜೀವ ಬೆದರಿಕೆ ಪತ್ರಗಳು ಬಂದಿದೆ. ವಿವಾದಿತ ಕಟ್ಟಡದೊಳಗೆ ಶಿವಲಿಂಗ ಪತ್ತೆಯಾದ ಸ್ಥಳವನ್ನು ಸೀಲಿಂಗ್ ಮಾಡಲು ಆದೇಶಿಸಿದ ವಾರಾಣಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ನೋಂದಾಯಿತ ಅಂಚೆ ಮೂಲಕ ಬೆದರಿಕೆಗಳು ಬಂದಿವೆ. ಇಸ್ಲಾಮಿಕ್ ಆಘಾಜ್ ಮೂವ್‌ಮೆಂಟ್ ಈ ಪತ್ರವನ್ನು … Continued

ಪ್ರಮೋದ ಮುತಾಲಿಕ್‌, ಯಶಪಾಲ್‌ ತಲೆ ಕಡಿದರೆ 20 ಲಕ್ಷ ರೂ.: ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಬೆದರಿಕೆ..!

ಉಡುಪಿ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹಾಗೂ ಯಶಪಾಲ್‌ ಸುವರ್ಣ ಅವರ ತಲೆ ಕಡಿದರೆ 20 ಲಕ್ಷ ರೂ.ಗಳನ್ನು ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಓಪನ್‌ ಬೆದರಿಕೆ ಹಾಕಿರುವ ಪೋಸ್ಟ್‌ ವೈರಲ್‌ ಆಗಿದೆ. ಈ ಕುರಿತು ಉಡುಪಿಯಲ್ಲಿ ದೂರು ದಾಖಲಾಗಿದೆ. ʻಈ ಎರಡು ತಲೆ ಕಡಿದರೆ 20 ಲಕ್ಷ..! ಒಂದು ತಲೆಗೆ 10 ಲಕ್ಷ ರೂ., … Continued

ಅಪ್ರಾಪ್ತಳಿಗೆ ಅನ್ಯ ಜಾತಿ ಯುವಕನ ಜೊತೆ ಪ್ರೇಮ: ಮಾತು ಕೇಳದ್ದಕ್ಕೆ ಕತ್ತು ಹಿಸುಕಿ ಕೊಂದ ತಂದೆ

ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ 17 ವರ್ಷದ ಬಾಲಕಿಯನ್ನು ಆಕೆಯ ತಂದೆ ಕತ್ತು ಹಿಸುಕಿ ಕೊಂದ ಘಟನೆ ವರದಿಯಾಗಿದೆ. ಪಿರಿಯಾಪಟ್ಟಣದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿ, ಪಕ್ಕದ ಮೆಲ್ಲಹಳ್ಳಿ ಗ್ರಾಮದ ಪರಿಶಿಷ್ಟ ಸಮುದಾಯದ ಮಂಜು ಎಂಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಹುಡುಗಿಯ ಕುಟುಂಬವು ಮೈತ್ರಿಯನ್ನು ಬಲವಾಗಿ ವಿರೋಧಿಸಿತ್ತು ಮತ್ತು ಹುಡುಗನೊಂದಿಗೆ ಯಾವುದೇ ಸಂಬಂಧವನ್ನು ಹೊಂದದಂತೆ … Continued

ಪ್ರವಾದಿ ಮುಹಮ್ಮದ್ ಕುರಿತ ಹೇಳಿಕೆ: ನೂಪುರ್ ಶರ್ಮಾ ಬೆಂಬಲಕ್ಕೆ ನಿಂತ ಡಚ್ ಸಂಸದ

ನವದೆಹಲಿ: ಪ್ರವಾದಿ ಮುಹಮ್ಮದ್ ಅವರ ಹೇಳಿಕೆಗಳಿಗೆ ಇಸ್ಲಾಮಿಕ್ ರಾಷ್ಟ್ರಗಳಿಂದ ಭಾರೀ ಆಕ್ಷೇಪದ ನಡುವೆ, ಬಿಜೆಪಿಯ ಮಾಜಿ ವಕ್ತಾರಾದ ನೂಪುರ್ ಶರ್ಮಾ ಅವರಿಗೆ ಈಗ ನೆದರ್ಲ್ಯಾಂಡ್ಸ್‌ನ ಬಲಪಂಥೀಯ ನಾಯಕ ಗೀರ್ಟ್ ವೈಲ್ಡರ್ಸ್‌ನಲ್ಲಿ ಬೆಂಬಲ ನೀಡಿದ್ದಾರೆ. ಡಚ್ ನಾಯಕ ನೂಪುರ್ ಶರ್ಮಾ ಅವರು ಸತ್ಯವನ್ನು ಹೇಳುತ್ತಿದ್ದಾರೆ ಎಂದು ಹೇಳಿದರು ಮತ್ತು ಹಾಗೂ ಇಸ್ಲಾಮಿಕ್ ದೇಶಗಳ ಕೋಪವನ್ನು “ಹಾಸ್ಯಾಸ್ಪದ” ಎಂದು … Continued

ಶೀಘ್ರವೇ ನೂತನ ಲೋಕಾಯುಕ್ತರ ನೇಮಕ: ಸಿಎಂ ಬೊಮ್ಮಾಯಿ

ಮೈಸೂರು: ನೂತನ ಲೋಕಾಯುಕ್ತರನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನ ಪರಿಷತ್ ಚುನಾವಣೆಯ ಪ್ರಚಾರಕ್ಕಾಗಿ ಇಂದು ಮೈಸೂರಿಗೆ ಆಗಮಿಸಿದ ಅವರು, ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಾಯುಕ್ತರ ನೇಮಕಾತಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರವೇ ನೂತನ ಲೋಕಾಯುಕ್ತರನ್ನು ನೇಮಕ ಮಾಡಲಾಗುವುದು. ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ … Continued

ಪಠ್ಯ ಪುಸ್ತಕಗಳು ಶೀಘ್ರವೇ ಲಭ್ಯ, ಆದಷ್ಟು ಬೇಗ ಪಠ್ಯ ಪುಸ್ತಕ ಪರಿಷ್ಕರಣೆ: ಶಿಕ್ಷಣ ಸಚಿವ ನಾಗೇಶ

ಧಾರವಾಡ: ಪಠ್ಯ ಪುಸ್ತಕಗಳಲ್ಲಾಗಿರುವ ಲೋಪ ದೋಷಗಳನ್ನು ಆದಷ್ಟು ಶೀಘ್ರ ಸರಿಪಡಿಸಲಾಗುವುದು. ಅದರಲ್ಲಾದ ತಪ್ಪುಗಳನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು. ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಠ್ಯ, ಪುಸ್ತಕ ಪರಿಷ್ಕರಣೆ ಮಾಡುವಾಗ ದೊಡ್ಡ ತಪ್ಪು ಮಾಡಬಾರದು. ಈ ರೀತಿಯ ತಪ್ಪು ಆಗಿರುವುದ್ದನ್ನು ಗಮನಿಸಿ ಅದರ ಮರು ಪರಿಷ್ಕರಣೆಗೆ ನಾವು ಮುಂದಾಗಿದ್ದೇವೆ ಎಂದು ತಿಳಿಸಿದರು. … Continued