ರಾಜಸ್ಥಾನ ಸಚಿವರ ಪುತ್ರನ ಮೇಲೆ ಅತ್ಯಾಚಾರ ಆರೋಪ ಮಾಡಿದ ಮಹಿಳೆ ಮುಖಕ್ಕೆ ಮಸಿ ಎರಚಿದ ದುಷ್ಕರ್ಮಿಗಳು

ನವದೆಹಲಿ: ರಾಜಸ್ಥಾನ ಸಚಿವರ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ 23ರ ಹರೆಯದ ಮಹಿಳೆ ಮುಖಕಕ್ಕೆ ಶನಿವಾರ ದೆಹಲಿಯ ರಸ್ತೆಯೊಂದರಲ್ಲಿ ಮಸಿ ಬಳಿಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶಿಸಲಾಗಿದೆ ಅಧಿಕಾರಿಗಳು ಹೇಳಿದ್ದಾರೆ. ಆಗ್ನೇಯ ದೆಹಲಿಯಲ್ಲಿ ಮಹಿಳೆ ತನ್ನ ತಾಯಿಯೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ದಾಳಿ ನಡೆದಿದೆ. … Continued

ಕೋವಿಡ್ ತೊಡಕುಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಸೋನಿಯಾ ಗಾಂಧಿ

ನವದೆಹಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೋವಿಡ್ ತೊಡಕುಗಳೊಂದಿಗೆ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ನಿಗಾ ಇರಿಸಲಾಗಿದೆ ಎಂದು ವರದಿಯಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ, ಸೋನಿಯಾ ಗಾಂಧಿ … Continued

ಬೆಳಗಾವಿ: ಬಿಜೆಪಿಯ ನೂಪುರ್ ಶರ್ಮಾ ಪ್ರತಿಕೃತಿ ಗಲ್ಲಿಗೇರಿಸಿದ್ದ ಮೂವರ ಬಂಧನ

ಬೆಳಗಾವಿ: ಪ್ರವಾದ ಮೊಹಮ್ಮದ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಅವರ ಪ್ರತಿಕೃತಿಯನ್ನು ಗಲ್ಲಿಗೇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಕರಣದ ಮೂವರು ಆರೋಪಿಗಳಾದ ಮೊಹಮ್ಮದ್ ಶೋಯಬ್, ಅಮನ್ ಮೊಕಾಶಿ, ಅರ್ಬಾಜ್ ಮೊಕಾಶಿ ಅವರನ್ನು ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರವಾದಿ ಮೊಹಮ್ಮದ್ … Continued

ವ್ಯಕ್ತಿ ಮೇಲೆ ಹಲ್ಲೆ ಆರೋಪ: ಠಾಣೆಗೆ ಹಾಜರಾದ ನಟ ಜೈ ಜಗದೀಶ ​

ಮಂಡ್ಯ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ದೂರು ದಾಖಲಾಗಿದ್ದ ಕಾರಣ ಕನ್ನಡದ ಹಿರಿಯ ನಟ ಜೈ ಜಗದೀಶ್‌ ಅವರು ಇಂದು, ಭಾನುವಾರ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸ್ ಠಾಣೆಗೆ ಹಾಜರಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥವಾಗಿದ್ದು, ಘಟನೆ ಸಂಬಂಧ ಜೈ ಜಗದೀಶ್ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಈ … Continued

ಭಯಾನಕ ಘಟನೆ…ವೃದ್ಧೆಯನ್ನು ತುಳಿದು ಸಾಯಿಸಿದ ಆನೆ: ಸಂಜೆ ಅಂತ್ಯಕ್ರಿಯೆ ವೇಳೆ ಮತ್ತೆ ಬಂದು ಚಿತೆಯಿಂದ ಶವ ಹೊರಗೆಳೆದು ವಿರೂಪಗೊಳಿಸಿದ ಆನೆ…!

ಭುವನೇಶ್ವರ : ಭಯಾನಕ ಘಟನೆಯೊಂದರಲ್ಲಿ, ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಹಳ್ಳಿಯೊಂದರಲ್ಲಿ 70 ವರ್ಷದ ಮಹಿಳೆಯೊಬ್ಬರು ಆನೆ ದಾಳಯಿಂದ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಲ್ಲದೆ, ಅಂತ್ಯಕ್ರಿಯೆ ಸಮಯದಲ್ಲಿಯೂ ಮತ್ತೆ ಆಗಮಿಸಿದ ಅದೇ ಕಾಡಾನೆ ದಾಳಿಗೆ ಆಕೆಯ ಶವ ತುತ್ತಾಗಿ ವಿರೂಪಗೊಂಡಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ವೃದ್ಧೆ ಆನೆ ದಾಳಿಯಿಂದ ಸಾವಿಗೀಡಾದ ನಂತರ ವೃದ್ಧೆಯ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯುತ್ತಿರುವಾಗ … Continued

ಪರಿಷತ್‌ನ ಪದವಿಧರ-ಶಿಕ್ಷಕರ ಕ್ಷೇತ್ರದ ಚುನಾವಣೆ: ರಾಜ್ಯದ ಹಲವು ಜಿಲ್ಲೆಗಳ ಶಾಲಾ-ಕಾಲೇಜು, ಬ್ಯಾಂಕ್​, ಸರ್ಕಾರಿ ಕಚೇರಿಗಳಿಗೆ ನಾಳೆ ವಿಶೇಷ ಸಾಂದರ್ಭಿಕ ರಜೆ

ಬೆಂಗಳೂರು: ಜೂನ್ 13 ಸೋಮವಾದಂದು ರಾಜ್ಯ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯುತ್ತಿದ್ದು. ಶಿಕ್ಷಕರು ಮತ್ತು ಪಧವೀಧರರು ಮತದಾನವನ್ನು ಮಾಡುವ ಸಲುವಾಗಿ ಅರ್ಹ ಮತದಾರರಿಗೆ ಸೀಮಿತವಾಗುವಂತೆ ಚುನಾವಣೆ ನಡೆಯುವ ರಾಜ್ಯದ ಜಿಲ್ಲೆಗಳಲ್ಲಿ ವಿಶೇಷ ಸಾಂದರ್ಭಿಕ ರಜೆ ಘೋಷಣೆ ಮಾಡಲಾಗಿದೆ. ವಿಧಾನ ಪರಿಷತ್ ಮತ ಕ್ಷೇತ್ರಗಳಲ್ಲಿನ ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಮತ್ತು … Continued

ಕಬಿನಿ ಶಕ್ತಿಮಾನ್ ಖ್ಯಾತಿಯ ಉದ್ದ ದಂತದ ಆನೆ ‘ಭೋಗೇಶ್ವರ’ ಸಾವು

ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿಯಲ್ಲಿ ಉದ್ದವಾದ ದಂತ ಹೊಂದಿದ್ದ ಆನೆ ಶನಿವಾರ (ಜೂನ್ 11) ಮೃತಪಟ್ಟಿದೆ. ಉದ್ದನೆಯ ದಂತಗಳಿಂದ ಪ್ರಖ್ಯಾತವಾಗಿದ್ದ ಭೋಗೇಶ್ವರ ಗಂಡಾನೆ ನಾಗರಹೊಳೆ, ಬಂಡೀಪುರ ವ್ಯಾಪ್ತಿಯಲ್ಲಿ ಸಫಾರಿ ವೇಳೆ ಪ್ರವಾಸಿಗರಿಗೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. ವನ್ಯಜೀವಿ ಪ್ರಿಯರ ನೆಚ್ಚಿನ ಅನೆಯಾಗಿತ್ತು. ಕಬಿನಿ ಶಕ್ತಿಮಾನ್ ಎಂದೇ ಖ್ಯಾತಿ ಗಳಿಸಿದ್ದ, ತನ್ನ 4 ಅಡಿ ಉದ್ದದ ದಂತ … Continued

ರಾಜ್ಯದಲ್ಲಿ 7 `ಡಿಜಿಟಲ್ ವಿಶ್ವವಿದ್ಯಾಲಯ’ಗಳ ಸ್ಥಾಪನೆ : ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು : ರಾಜ್ಯಾದ್ಯಂತ ಏಳು ಡಿಜಿಟಲ್ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಾಯವ್ಯ ಶಿಕ್ಷಕರು ಮತ್ತು ವಾಯವ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ನುರಿತ ಮಾನವ ಸಂಪನ್ಮೂಲದ ದೊಡ್ಡ ಸಮೂಹವಿದೆ. ಇದನ್ನು ಬಳಸಿಕೊಂಡು, ಸರ್ಕಾರವು ಡಿಜಿಟಲ್ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಿದೆ. ಅಸ್ತಿತ್ವದಲ್ಲಿರುವ ಭೌತಿಕ … Continued

ಮಾಜಿ ಚಂಬಲ್ ಡಕಾಯಿತನ ಪತ್ನಿ ಗ್ರಾಪಂಗೆ ಅವಿರೋಧ ಆಯ್ಕೆ…!

ಭೋಪಾಲ್: ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಅವರ ಪತ್ನಿ ಮಧ್ಯಪ್ರದೇಶದ ಗುನಾ ಜಿಲ್ಲೆಯ ಸುಂಗಯಾಯಿ ಗ್ರಾಮದ ಸರಪಂಚ್ ಆಗಿ ಆಯ್ಕೆಯಾಗಿದ್ದಾರೆ. ಮಧ್ಯಪ್ರದೇಶದ ಪಂಚಾಯತ್ ಚುನಾವಣೆಗಳು ಜೂನ್ 25 ರಿಂದ ಮೂರು ಹಂತಗಳಲ್ಲಿ ನಡೆಯಲಿದ್ದರೂ, ಸಿಂಗ್ ಅವರ ಪತ್ನಿ ಲಲಿತಾ ರಜಪೂತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಂಬಲ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಭಾರತದ ಡಕಾಯಿತ … Continued

ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಜಮ್ಮು-ಕಾಶ್ಮೀರ ಪೊಲೀಸರು

ಶ್ರೀನಗರ: ಭಾನುವಾರ (ಜೂನ್ 12) ಪುಲ್ವಾಮಾ ಜಿಲ್ಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾಗೆ ಸಂಬಂಧಿಸಿದ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಶನಿವಾರ ರಾತ್ರಿ ಆರಂಭವಾದ ಕಾರ್ಯಾಚರಣೆಯು ಪುಲ್ವಾಮಾ ಜಿಲ್ಲೆಯ ದ್ರಾಬ್ಗಾಮ್ ಪ್ರದೇಶದಲ್ಲಿ ಸುಮಾರು 12 ಗಂಟೆಗಳ ನಂತರ ಕೊನೆಗೊಂಡಿತು. ಎನ್‌ಕೌಂಟರ್‌ನಲ್ಲಿ ಹತರಾದ ಮೂವರು ಉಗ್ರರನ್ನು ಜುನೈದ್ ಶೀರ್ಗೋಜ್ರಿ, ಫಾಜಿಲ್ ನಜೀರ್ ಭಟ್ ಮತ್ತು … Continued