ಭಾರತೀಯರ ಜೀವಿತಾವಧಿ 2 ವರ್ಷ ಹೆಚ್ಚಳ, ಆದರೆ ಜಾಗತಿಕ ಜೀವಿತಾವಧಿ ಸರಾಸರಿಗಿಂತ ಭಾರತದ್ದು ಕಡಿಮೆ

ನವದೆಹಲಿ: 2015-19ರ ಅವಧಿಯಲ್ಲಿ ಭಾರತದ ಜೀವಿತಾವಧಿಯು 69.7 ವರ್ಷಕ್ಕೆ ತಲುಪಿದೆ, ಇದು ಅಂದಾಜು ಜಾಗತಿಕ ಸರಾಸರಿ ಜೀವಿತಾವಧಿ 72.6 ವರ್ಷಗಳಿಗಿಂತ ಕಡಿಮೆಯಾಗಿದೆ. ಜೀವಿತಾವಧಿಗೆ ಎರಡು ವರ್ಷಗಳನ್ನು ಸೇರಿಸಲು ಭಾರತ ಸುಮಾರು ಹತ್ತು ವರ್ಷಗಳನ್ನು ತೆಗೆದುಕೊಂಡಿದೆ. ಈ ಅವಧಿಯಲ್ಲಿ ಒಂದನೇ ವರ್ಷ ಮತ್ತು ಐದನೇ ವಯಸ್ಸಿನಲ್ಲಿ ಜೀವಿತಾವಧಿಯನ್ನು ಅವಲೋಕಿಸಿದರೆ, ಹೆಚ್ಚಿನ ಶಿಶುಗಳು ಮತ್ತು ಐದಕ್ಕಿಂತ ಕಡಿಮೆ ವಯಸ್ಸಿನನವರ … Continued

ಭಾರತದಲ್ಲಿ 6,594 ಹೊಸ ಕೋವಿಡ್ ಪ್ರಕರಣಗಳು ದಾಖಲು, ಇದು ಹಿಂದಿನ ದಿನಕ್ಕಿಂತ 18% ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು ಮಂಗಳವಾರ 6,594 ಹೊಸ ಪ್ರಕರಣಗಳನ್ನು ವರದಿ ಮಾಡಿದೆ – ಹಿಂದಿನ ದಿನಕ್ಕೆ ಹೋಲಿಸಿದರೆ ಇದು 18% ಕಡಿಮೆ. ನಿನ್ನೆ, ಭಾರತವು 8,084 ಹೊಸ ಪ್ರಕರಣಗಳನ್ನು ವರದಿ ಮಾಡಿತ್ತು; ದೇಶವು 8,000 ಕ್ಕೂ ಹೆಚ್ಚು ಪ್ರಕರಣಗಳನ್ನು ಸತತ ಮೂರು ದಿನ ವರದಿ ಮಾಡಿತ್ತು. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, … Continued

ಮಳಲಿ ಮಸೀದಿ ಪ್ರಕರಣ: ಯಾವುದೇ ಆದೇಶ ಮಾಡದಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿಯ ರಚನೆ ಪತ್ತೆಯಾಗಿದೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅಸಲಿ ದಾವೆಯ (ಒರಿಜಿನಲ್‌ ಸೂಟ್‌) ಸಿಂಧುತ್ವದ ಕುರಿತು ಯಾವುದೇ ಆದೇಶ ಹೊರಡಿಸದಂತೆ ಮಂಗಳೂರಿನ ವಿಚಾರಣಾಧೀನ ನ್ಯಾಯಾಲಯಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ. ಮಂಗಳೂರಿನ ತೆಂಕಳೈಪಡಿ ಗ್ರಾಮದ ಧನಂಜಯ ಹಾಗೂ ಬಡುಗಳೈಪಡಿ ಗ್ರಾಮದ ಮನೋಜಕುಮಾರ್ ಸಲ್ಲಿಸಿರುವ ಮನವಿಯ … Continued

ಗಾಳಿಮಳೆ ಸಮಯದಲ್ಲಿ ಮರದ ಕೆಳಗೆ ನಿಲ್ಲಬಾರದು ಯಾಕೆ.?: ಈ ಮರಕ್ಕೆ ಮಿಂಚು ಹೊಡೆದದ್ದು ನೋಡಿದರೆ ತಿಳಿಯುತ್ತದೆ.. ವೀಕ್ಷಿಸಿ

ಮಿಂಚುಗಳ ಅಪಾಯಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ ಮತ್ತು ಗುಡುಗು ಸಹಿತ ಮಳೆಯ ಸಮಯದಲ್ಲಿ ಮರಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಬೇಕು ಎಂದು ಹೇಳುತ್ತಾರೆ. ಮರದ ಕೆಳಗೆ ನಿಲ್ಲಬಾರದು ಯಾಕೆ ಎಂಬುದು ಸಂಪೂರ್ಣ ಅರ್ಥವಾಗಬೇಕಾದರೆ ಈ ವೈರಲ್ ವೀಡಿಯೊವನ್ನು ನೋಡಬೇಕು. ಟ್ವಿಟರ್‌ನಲ್ಲಿ ವಂಡರ್ ಆಫ್ ಸೈನ್ಸ್‌ನಿಂದ ಹಂಚಿಕೊಂಡ ವೀಡಿಯೊ ಕ್ಲಿಪ್‌ ಕಾಂಡದ ಮಧ್ಯದಲ್ಲಿರುವ ಮರಕ್ಕೆ ಮಿಂಚು ಹೊಡೆಯುವುದನ್ನು ತೋರಿಸುತ್ತದೆ. … Continued