ಜೈಲಿನಲ್ಲಿ ಶಶಿಕಲಾಗೆ ಅಕ್ರಮವಾಗಿ ಸೌಲಭ್ಯ: ಐಪಿಎಸ್ ಅಧಿಕಾರಿ ಡಿ.ರೂಪ ವಿರುದ್ಧ ಮಾಜಿ ಪೊಲೀಸ್‌ ಅಧಿಕಾರಿ ಹೂಡಿದ್ದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ನಿವೃತ್ತ ಡಿಜಿಪಿ ಎಚ್​​​​​​​​​​​.ಎನ್ ಸತ್ಯನಾರಾಯಣ ರಾವ್ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ, ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್​​​​​​​​​​​​​ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ರಾಜ್ಯ ಹೈಕೋರ್ಟ್ ರದ್ದುಗೊಳಿಸಿದೆ. ಓರ್ವ ಸರ್ಕಾರಿ ಅಧಿಕಾರಿಯು ಮತ್ತೊಬ್ಬ ಸರ್ಕಾರಿ ಅಧಿಕಾರಿಯ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸುವುದು ಮಾನನಷ್ಟ ಮೊಕದ್ದಮೆ ಪ್ರಕರಣದ ವ್ಯಾಪ್ತಿಗೆ … Continued

ನಾಳೆಯಿಂದ ರಾಜ್ಯಾದ್ಯಂತ ಸಿಇಟಿ ಪರೀಕ್ಷೆ: ಅಕ್ರಮ ತಡೆಗೆ ವೀಡಿಯೋ ಚಿತ್ರೀಕರಣ, ಮಾಸ್ಕ್‌ ಧರಿಸುವುದು ಕಡ್ಡಾಯ…

 ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಜೂನ್‌ 16 ಮತ್ತು 17ರಂದು ನಡೆಯುವ ಸಿಇಟಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಕಡಿವಾಣ ಹಾಕಲು ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ ಹೇಳಿದ್ದಾರೆ. ನಾಳೆಯಿಂದ (ಜೂನ್‌ 16ರಿಂದ) ನಡೆಯುವ ಸಿಇಟಿ ಪರೀಕ್ಷೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ … Continued

ರಾಷ್ಟ್ರಪತಿ ಚುನಾವಣೆ : ವಿರೋಧ ಪಕ್ಷಗಳ ಸಭೆಯಲ್ಲಿ ಅಭ್ಯರ್ಥಿಯಾಗಲು ಶರದ್ ಪವಾರ್ ನಕಾರ, “ಮೋದಿ ವಿರೋಧಿ” ನಿರ್ಣಯದ ಮಮತಾ ಪ್ರಸ್ತಾಪಕ್ಕೆ ಕೆಲವರ ಅಸಮಾಧಾನ

ನವದೆಹಲಿ: ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿದ ಪ್ರಸ್ತಾಪವನ್ನು ಮಹಾರಾಷ್ಟ್ರ ನಾಯಕ ಶರದ್ ಪವಾರ್ ಇಂದು, ಬುಧವಾರ ಸಹ ನಿರಾಕರಿಸಿದ್ದು, “ಇನ್ನೂ ನನಗೆ ಸಕ್ರಿಯ ರಾಜಕೀಯದ ಇನ್ನಿಂಗ್ಸ್ ಬಾಕಿ ಇದೆ” ಎಂದು ಹೇಳಿದ್ದಾರೆ. ಐದು ಪ್ರಮುಖ ಪಕ್ಷಗಳ ಗೈರುಹಾಜರಿಯಿಂದ ಮೋಡ ಕವಿದಿದ್ದ ಸಭೆಯು ಮಮತಾ ಬ್ಯಾನರ್ಜಿ ಅವರು ಸೂಚನೆಯಿಲ್ಲದೆ ಸಭೆಯಲ್ಲಿ … Continued

ಬಿಜೆಪಿಯ ಖಾಸಗಿ ಮಿಲಿಟಿಯಾ : ದೆಹಲಿ ತನ್ನ ಪ್ರಧಾನ ಕಚೇರಿಗೆ ನುಗ್ಗಿದ ಪೊಲೀಸರ ಬಗ್ಗೆ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ಪೊಲೀಸರು ಮತ್ತು ಭದ್ರತಾ ಪಡೆಗಳು ಕಾಂಗ್ರೆಸ್‌ ಪಕ್ಷದ ಪ್ರಧಾನ ಕಚೇರಿಗೆ ನುಗ್ಗಿ ಪಕ್ಷದ ಕೆಲವು ಕಾರ್ಯಕರ್ತರನ್ನು ಎತ್ತಿಕೊಂಡು ಹೋದ ನಂತರ ಕಾಂಗ್ರೆಸ್ ಬುಧವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ ಸಂಸದ ಹಾಗೂ ಮಾಜಿ ಗೃಹ ಸಚಿವ ಚಿದಂಬರಂ ಅವರ ಪುತ್ರ ಕಾರ್ತಿ ಪಿ ಚಿದಂಬರಂ ಅವರು ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಪೊಲೀಸರು … Continued

11ನೇ ಮಹಡಿಯಿಂದ ಜಿಗಿದು ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವೈದ್ಯ ಆತ್ಮಹತ್ಯೆ

ಬೆಂಗಳೂರು: ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ವಸತಿ ಸಮುಚ್ಚಯದ 11ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವೈದ್ಯರನ್ನು ಡಾ. ಪೃಥ್ವಿರಾಜ  ರೆಡ್ಡಿ (31) ಎಂದು ಗುರುತಿಸಲಾಗಿದೆ. ಅವರು ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು ಹಾಗೂ ಇವರ ಪತ್ನಿಯೂ ವೈದ್ಯೆಯೇ ಆಗಿದ್ದಾರೆ … Continued

ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಮಹಾತ್ಮ ಗಾಂಧಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಹೆಸರು ಪ್ರಸ್ತಾಪಿಸಿದ ಎಡಪಕ್ಷಗಳು: ವರದಿ

ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಮಹಾತ್ಮಾ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನು ಎಡಪಕ್ಷಗಳು ಸೂಚಿಸಿವೆ. ಆದರೆ ಗೋಪಾಲ ಗಾಂಧಿ ಈ ಬಗ್ಗೆ ಯೋಚಿಸಲು ಕಾಲಾವಕಾಶ ಕೋರಿದ್ದಾರೆ. ಮಂಗಳವಾರ ಶರದ್ ಪವಾರ್ ಅವರನ್ನು ಭೇಟಿಯಾದ ಎಡಪಕ್ಷಗಳು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲ ಗಾಂಧಿ ಅವರ ಹೆಸರನ್ನು ಸೂಚಿಸಿವೆ ಎಂದು ಮೂಲಗಳು ತಿಳಿಸಿವೆ. … Continued

ರಾಷ್ಟ್ರಕವಿ ಕುವೆಂಪುಗೆ ಅವಮಾನ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ: ಶಿಕ್ಷಣ ಸಚಿವ ನಾಗೇಶ

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ. ಹೀಗಾಗಿ ಅವರು ಮೊದಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಯಲಿ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದ್ದಾರೆ. ಜನರನ್ನು ದಾರಿ ತಪ್ಪಿಸಲು ಏನೇನೊ ಹೇಳುತ್ತಿದ್ದಾರೆ. ಶಿಕ್ಷಣದ ಕೇಸರೀಕರಣ ಎಂದರೆ ಏನೆಂದು ಅವರು ಮೊದಲು ಹೇಳಲಿ. ಅದರ ಬಗ್ಗೆ ಮಾತನಾಡಲು ನಾವು … Continued

ಗುಬ್ಬಿ: ಹಾಡಹಗಲೇ ದಲಿತ ಸಂಘರ್ಷ ಸಮಿತಿ ಮುಖಂಡ ನರಸಿಂಹಮೂರ್ತಿ ಬರ್ಬರ ಕೊಲೆ

ತುಮಕೂರು: ಹಾಡಹಗಲೇ ಮಚ್ಚು, ಲಾಂಗ್‌ನಿಂದ ಹಲ್ಲೆ ನಡೆಸಿ ದಲಿತ ಸಂಘರ್ಷ ಸಮಿತಿ ಮುಖಂಡ ನರಸಿಂಹಮೂರ್ತಿ (50) ಎಂಬುವರನ್ನು ಬರ್ಬರ ಕೊಲೆ ಮಾಡಿದ ಘಟನೆ ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ನಡೆದ ಬಗ್ಗೆ ವರದಿಯಾಗಿದೆ. ಗುಬ್ಬಿ ಪಟ್ಟಣದ ಬಿ.ಎಸ್‌.ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ ಹೆದ್ದಾರಿ ಪಕ್ಕದಲ್ಲಿ ಕೊಲೆ ನಡೆದಿದೆ. ಹೆದ್ದಾರಿ ಪಕ್ಕದಲ್ಲೇ ಟೀ … Continued

ಪಶ್ಚಿಮ ಶಿಕ್ಷಕರ ಕ್ಷೇತ್ರ: ಸತತ 8ನೇ ಬಾರಿಗೆ ಜಯಗಳಿಸಿದ ಬಸವರಾಜ ಹೊರಟ್ಟಿ

ಬೆಳಗಾವಿ : ಸೋಲಿಲ್ಲದ ಸರದಾರ ಖ್ಯಾತಿಯ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸತತ ಎಂಟನೇ ಬಾರಿಗೆ ಜಯಭೇರಿ ಬಾರಿಸಿದ್ದಾರೆ. ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ ಮತ ಎಣಿಕೆ ಮಂಗಳವಾರ (ಜೂನ್‌ 15) ನಡೆದಿದ್ದು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿ ಎಂಟನೇ ಬಾರಿಗೆ ಗೆದ್ದು ವಿಜಯಮಾಲೆ ಧರಿಸಿದ್ದಾರೆ. ಬಸವರಾಜ ಹೊರಟ್ಟಿಯವರು ಬಸವರಾಜ ಹೊರಟ್ಟಿ … Continued

ಭಾರತದಲ್ಲಿ ಶೀಘ್ರದಲ್ಲೇ 4G ಗಿಂತ 10 ಪಟ್ಟು ವೇಗದ 5G ಸೇವೆ ಆರಂಭ : ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ 5ಜಿ ತರಂಗಾಂತರ ಹರಾಜಿಗೆ ಅನುಮೋದನೆ

ನವದೆಹಲಿ: ಭಾರತವು ಶೀಘ್ರದಲ್ಲೇ 5G ಸೇವೆಗಳನ್ನು ಪಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಬುಧವಾರ DoTನ 5G ತರಂಗಾಂತರದ ಹರಾಜನ್ನು ಅನುಮೋದಿಸಿದೆ. ಖಾಸಗಿ 5G ನೆಟ್‌ವರ್ಕ್‌ಗಳನ್ನು ನಿರ್ವಹಿಸಲು ದಾರಿ ಮಾಡಿಕೊಡುವ ಮೂಲಕ ಉದ್ಯಮಗಳಿಗೆ ನೇರವಾಗಿ ಏರ್‌ವೇವ್‌ಗಳನ್ನು ಹಂಚುವ ಪ್ರಸ್ತಾವನೆಗೆ ಭಾರತ ಸರ್ಕಾರ ಬುಧವಾರ ಅಂತಿಮ ಅನುಮೋದನೆ ನೀಡಿದೆ. ಟೆಲಿಕಾಂ … Continued