ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೊರೊನಾ ಸೋಂಕು

ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಕೋವಿಡ್ -19 ಸೋಂಕಿಗೆ ಒಳಗಾಗಿರುವುದಾಗಿ ಅವರೇ ಭಾನುವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ರಾಜೇಂದ್ರ ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಕ್ಕಾಗಿ ನಾಗರಿಕರಲ್ಲಿ ಕ್ಷಮೆಯಾಚಿಸಿರುವ ಇರಾನಿ, ವೈರಸ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ್ದರಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇರಾನಿ ಅವರು ಈ ಹಿಂದೆ … Continued

ಪ್ರೊ. ಮಹೇಶ್ವರಯ್ಯ ಸಂಸ್ಮರಣೆ, ಪ್ರತೀಕ ಗ್ರಂಥ ಬಿಡುಗಡೆ

posted in: ರಾಜ್ಯ | 0

ಧಾರವಾಡ: ಭಾರತದ ನಿಜವಾದ ಆತ್ಮ ಹಳ್ಳಿಗಳಲ್ಲಿದೆ. ಸರಳ ಸಂಪನ್ನತೆಯ ನೇರವಾದ ಮೇರು ವ್ಯಕ್ತಿತ್ವ ಹೊಂದಿದ ಮಹೇಶ್ವರಯ್ಯ ಅವರು ಹಳ್ಳಿಯ ಆತ್ಮ ತೇಜವನ್ನು ತಮ್ಮ ಉಸಿರಿನಲ್ಲಿ ಅಡಗಿಸಿಕೊಂಡವರಾಗಿದ್ದರು. ಅವರ ಈ ಸರಳ ಸಂಪನ್ನತೆಗೆ ಮೆಚ್ಚಿದ ಸಿದ್ದೇಶ್ವರ ಶ್ರೀಗಳು ವಿಶೇಷವಾಗಿ ವಾಕ್ ಶಕ್ತಿಯನ್ನು ಪ್ರಶಂಸಿಸುತ್ತಿದ್ದರು ಎಂದು ಡಾ.ಬಸವರಾಜ ಸೇಡಂ ಹೇಳಿದರು. ಶ್ರೀ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ನಡೆದ … Continued

ಜಲಾವೃತವಾಗಿದ್ದ ಮ್ಯಾನ್‌ಹೋಲ್‌ಗೆ ಬಿದ್ದ ಸ್ಕೂಟರ್‌ನಲ್ಲಿದ್ದ ಪೊಲೀಸ್ ಅಧಿಕಾರಿ-ಪತ್ನಿ, ಗಾಯ | ವೀಕ್ಷಿಸಿ

ಅಲಿಗಢ: ಉತ್ತರ ಪ್ರದೇಶದಲ್ಲಿ ಮಾನ್ಸೂನ್ ಆರಂಭವಾಗಿದ್ದು, ಅಲಿಗಢ ನಗರದಲ್ಲಿ ಸ್ಕೂಟರ್‌ನಲ್ಲಿದ್ದ ದಂಪತಿ ಮಳೆ ನೀರಿನಿಂದ ತುಂಬಿದ್ದ ರಸ್ತೆ ಪಕ್ಷದ ತೆರೆದ ಮ್ಯಾನ್‌ ಹೋಲ್‌ಗೆ ಬೀಳುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಸಮೀಪದಲ್ಲಿದ್ದ ಜನರು ಅವರನ್ನು ರಕ್ಷಿಸಿದ್ದಾರೆ. ದಂಪತಿ ಜಲಾವೃತವಾದ ರಸ್ತೆಯ ಮೇಲೆ ಬೈಕ್ ಚಲಾಯಿಸುತ್ತಾ ತೆರೆದ ಮ್ಯಾನ್‌ಹೋಲ್‌ಗೆ ಬೀಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಸ್ಕೂಟರ್‌ನಲ್ಲಿ ಉತ್ತರ ಪ್ರದೇಶದ … Continued

ಕುಪ್ವಾರ ಎನ್ ಕೌಂಟರ್: ಇಬ್ಬರು ಉಗ್ರರನ್ನು ಹೊಡೆದುರಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಒಬ್ಬಾತ ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ನೊಂದಿಗೆ ಸಂಬಂಧ ಹೊಂದಿರುವ ಪಾಕಿಸ್ತಾನಿ ಎಂದು ಹೇಳಲಾಗಿದೆ. ಎರಡನೆಯವನ ಗುರುತು ಪತ್ತೆಹಚ್ಚಲಾಗುತ್ತಿದೆ ಎಂ ಪೊಲೀಸರು ಹೇಳಿದ್ದಾರೆ.ಅಲ್ಲದೆ, ಕುಲ್ಗಾಮ್ ಜಿಲ್ಲೆಯಲ್ಲಿ ಮತ್ತೊಂದು ಎನ್‌ಕೌಂಟರ್‌ ನಡೆಯುತ್ತಿದೆ ಎಂದು ಪೊಲೀಸರು … Continued

ಅಗ್ನಿಪಥ ಯೋಜನೆ ಬಗ್ಗೆ ಸುಳ್ಳು ಸುದ್ದಿ ಹರಡಿದ 35 ವಾಟ್ಸಾಪ್ ಗುಂಪುಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ: ಹೊಸ ಸೇನಾ ನೇಮಕಾತಿ ಯೋಜನೆ-ಅಗ್ನಿಪಥ್ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವ ಆರೋಪದ ಮೇರೆಗೆ ಕೇಂದ್ರ ಸರ್ಕಾರವು ಭಾನುವಾರ 35 ವಾಟ್ಸಾಪ್ ಗುಂಪುಗಳನ್ನು ನಿಷೇಧಿಸಿದೆ. ತಪ್ಪು ಮಾಹಿತಿ ಹರಡುವ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡುವಲ್ಲಿ ತೊಡಗಿರುವ ಜನರನ್ನು ಸರ್ಕಾರ ಪತ್ತೆಹಚ್ಚುತ್ತಿದೆ ಎಂದು ಅದು ಹೇಳಿದೆ. ಅಗ್ನಿಪಥ ನೇಮಕಾತಿ ಯೋಜನೆ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿ ಯುವಕರನ್ನು … Continued

ಪ್ರಧಾನಿ ಮೋದಿ ನಾಳೆಯಿಂದ ಎರಡು ದಿನಗಳ ರಾಜ್ಯ ಪ್ರವಾಸ: ಕಾರ್ಯಕ್ರಮಗಳ ವಿವರ ಇಲ್ಲಿದೆ

posted in: ರಾಜ್ಯ | 0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜೂನ್ 20 ಮತ್ತು 21ರಂದು ಎರಡು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಮಧ್ಯಾಹ್ನ (ಜೂನ್ 20) 12:30ಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಿದುಳು ಸಂಶೋಧನಾ ಕೇಂದ್ರ ಲೋಕಾರ್ಪಣೆಗೊಳಿಸಲಿದ್ದಾರೆ. ನಂತರ ಬಾಗ್ಚಿ- ಪಾರ್ಥಸಾರಥಿ … Continued

ಬೆಳಗಾವಿ ಗುಂಪು ಗಲಾಟೆ ಪ್ರಕರಣ.. 26 ಆರೋಪಿಗಳು ಪೊಲೀಸ್​ ವಶಕ್ಕೆ

posted in: ರಾಜ್ಯ | 0

ಬೆಳಗಾವಿ: ಬೆಳಗಾವಿ ತಾಲೂಕಿನ ಗೌಂಡವಾಡದಲ್ಲಿ ದೇವಸ್ಥಾನ ಜಾಗದ ವಿಚಾರಕ್ಕೆ ನಡೆದ ಕೊಲೆ, ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಾಹಿತಿ ನೀಡಿದ್ದಾರೆ. ಕೊಲೆ ಪ್ರಕರಣದಲ್ಲಿ 7 ಜನರನ್ನು ಮತ್ತು ದೊಂಬಿ, ಗಲಾಟೆ ನಡೆಸಿದ್ದ 19 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಗ್ರಾಮದಲ್ಲಿ … Continued

ರಿಯಲ್‌ ಸಿಂಗಂ…: ದೊಡ್ಡ ಮಚ್ಚು ಕೈಯಲ್ಲಿ ಹಿಡಿದುಕೊಂಡಿದ್ದ ದಾಳಿಕೋರನನ್ನು ಹೆಡೆಮುರಿ ಕಟ್ಟಿದ ಈ ನಿರಾಯುಧ ಪೋಲೀಸ್ ಅಧಿಕಾರಿ | ವೀಕ್ಷಿಸಿ

ನವದೆಹಲಿ: ದೊಡ್ಡ ಮಚ್ಚು ಹಿಡಿದುಕೊಂಡಿದ್ದ ದಾಳಿಕೋರನೊಬ್ಬನ್ನು ಆಯುಧವಿಲ್ಲದ ಪೊಲೀಸ್ ಅಧಿಕಾರಿಯೊಬ್ಬರು ಧೈರ್ಯದಿಂದ ಎದುರಿಸಿ ಬಗ್ಗುಬಡಿಯುತ್ತಿರುವ ವೀಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಕೇರಳದ ಕಾಯಂಕುಲಂ ಬಳಿಯ ಪಾರಾ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಪೊಲೀಸ್ ವಾಹನವು ಮಚ್ಚು ಬೀದಿ ಬದಿಯಲ್ಲಿ ನಿಂತಿರುವ ವ್ಯಕ್ತಿಯ ಪಕ್ಕದಲ್ಲಿ ನಿಲ್ಲುತ್ತಿರುವಾಗ ವೇಳೆ ವೀಡಿಯೊ ಸೆರೆಹಿಡಿದಿದೆ. ಪೊಲೀಸ್‌ ಅಧಿಕಾರಿ … Continued

ದ್ವಿತೀಯ ಪಿಯು ಫಲಿತಾಂಶ: ಕುಮಟಾ ಬಾಳಿಗಾ ಕಲಾ-ವಿಜ್ಞಾನ ಪಿಯು ಕಾಲೇಜ್‌-ವಿಜ್ಞಾನದಲ್ಲಿ ಶುಭಾ ಭಟ್ಟ, ಕಲಾ ವಿಭಾಗದಲ್ಲಿ ಶಾಂಭವಿ ಶೆಟ್ಟಿ ಪ್ರಥಮ

ಕುಮಟಾ: ಡಾ.ಎ.ವಿ.ಬಾಳಿಗಾ ಪದವಿ ಪೂರ್ವ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು ೨೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೩೩ ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶುಭಾ ಪರಮೇಶ್ವರ ಭಟ್ಟ ೬೦೦ಕ್ಕೆ ೫೯೦ (೯೮.೩೩%)ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪೂಜಾ ವಿನಾಯಕ ಭಟ್ಟ ೬೦೦ಕ್ಕೆ ೫೮೧(೯೬.೮೩%) … Continued

ಮೈಸೂರು: ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಅಳವಡಿಸಿದ್ದ ಹಿಂದಿ ಫ್ಲೆಕ್ಸ್‌ಗೆ ಮಸಿ ಬಳಿದ ಕರವೇ ಕಾರ್ಯಕರ್ತರು

posted in: ರಾಜ್ಯ | 0

ಮೈಸೂರು : ಮೈಸೂರಿಗೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿ ಆಗಮನಕ್ಕೆ ಹಿಂದಿ ಹೆಸರಿನಲ್ಲಿ ಅಳವಡಿಸಲಾಗಿರುವ ಫ್ಲೆಕ್ಸ್‌ ಗಳಿಗೆ ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು, ಭಾನುವಾರ ಸಂಜೆ 5 ಗಂಟೆಯಲ್ಲಿ ಮಸಿ ಬಳಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೈಸೂರು ಭೇಟಿ ಹಿನ್ನೆಲೆಯಲ್ಲಿ ಮೈಸೂರು ರಸ್ತೆಯಲ್ಲಿ ಸಚಿವ ಮುನಿರತ್ನ ನಾಯ್ಡು ಮತ್ತು ಬೆಂಬಲಿಗರು … Continued