ಅಗ್ನಿಪಥ’ ಪ್ರತಿಭಟನೆ: ಸಿಕಂದರಾಬಾದ್ ಹಿಂಸಾಚಾರದ ‘ಮಾಸ್ಟರ್ ಮೈಂಡ್’ ಬಂಧನ

ಸಿಕಂದರಾಬಾದ್: ‘ಅಗ್ನಿಪಥ’ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಶುಕ್ರವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನಾಕಾರರು ಹಲವಾರು ರೈಲುಗಳಿಗೆ ಬೆಂಕಿ ಹಚ್ಚಿದ ಹಿಂಸಾಚಾರದ ಹಿಂದಿನ ಮಾಸ್ಟರ್‌ಮೈಂಡ್ ಆವುಲಾ ಸುಬ್ಬಾ ರಾವ್ ಎಂದು ಹೇಳಲಾಗಿದೆ, ಹಿಂಸಾಚಾರದ ವೇಳೆ ಗುಂಪು ಚದುರಿಸಲು ಪೊಲೀಸರು ಗುಂಡು ಹಾರಿಸಿದಾಗ ಒಬ್ಬರು … Continued

ರಾಜ್ಯದ ಅತಿಥಿ ಶಿಕ್ಷಕರಿಗೆ ಸಿಹಿ ಸುದ್ದಿ: ಗೌರವಧನ ಹೆಚ್ಚಿಸಿ ಆದೇಶ

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪೌಢಶಾಲೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುವ ಅತಿಥಿ ಶಿಕ್ಷಕರ ಗೌರವ ಸಂಬಳ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಕುರಿತು ಆದೇಶ ಮಾಡಿದೆ. ಅತಿಥಿ ಶಿಕ್ಷಕರಿಗೆ ಗೌರವಧನವನ್ನು 7,500 ರೂಪಾಯಿಯಿಂದ 10 ಸಾವಿರ ರೂಪಾಯಿಗೆ ಏರಿಕೆ ಮಾಡಿ ಆದೇಶ ಹೊರಡಿಸಿರುವ ಸರ್ಕಾರ ಮತ್ತೊಂದೆಡೆ 5,000 ಅತಿಥಿ … Continued

ಬೆಳಗಾವಿ: ದೇವಸ್ಥಾನ ಜಾಗದ ವಿಚಾರದಲ್ಲಿ ಎರಡು ಗುಂಪಿನ ಮಧ್ಯೆ ಗಲಾಟೆ, ಓರ್ವ ಹತ್ಯೆ

ಬೆಳಗಾವಿ: ದೇವಸ್ಥಾನದ ಜಾಗದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆಯಲ್ಲಿ ಓರ್ವನ ಹತ್ಯೆಯಾಗಿದೆ. ಇಡೀ ಗ್ರಾಮಕ್ಕೆ ಬೆಂಕಿ ಇಡಲಾಗಿದೆ. ಪರಿಣಾಮ ಎರಡು ಕಾರು, ಒಂದು ವಾಟರ್ ಟ್ಯಾಂಕ್ ಲಾರಿ ಮತ್ತು ಒಂದು ಟ್ರಾಕ್ಟರ್‌ ಬೆಂಕಿಗೆ ಆಹುತಿಯಾಗಿದೆ. ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಅನೇಕ ವರ್ಷಗಳಿಂದ ದೇವಸ್ಥಾನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಇದ್ದ ಜಗಳ ಶನಿವಾರ ರಾತ್ರಿ … Continued

ನನ್ನ ಮನದಾಳದ ಮಾತು ಆಡುವ ಮುನ್ನ ಎರಡು ಬಾರಿ ಯೋಚಿಸುತ್ತೇನೆ”: ವಿವಾದದ ನಂತರ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ ನಟಿ ಸಾಯಿ ಪಲ್ಲವಿ

ನವದೆಹಲಿ: 90 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ವಲಸೆಯ ಕುರಿತು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ವಿವಾದಕ್ಕೆ ಕಾರಣವಾದ ನಂತರ ನಟಿ ಸಾಯಿ ಪಲ್ಲವಿ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಗ್ರೇಟ್ ಆಂಧ್ರದ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ನಟಿ ಧರ್ಮದ ಹೆಸರಿನಲ್ಲಿ ಹಿಂಸಾಚಾರವನ್ನು ಖಂಡಿಸಿದರು ಮತ್ತು ಕಾಶ್ಮೀರಿ ಪಂಡಿತರ ವಲಸೆ ತಪ್ಪಾದರೆ ಗೋವಿನ … Continued

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸೈಕಲ್‌ನಿಂದ ಬಿದ್ದಾಗ… | ವೀಕ್ಷಿಸಿ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಶನಿವಾರ ಬೆಳಗ್ಗೆ ಡೆಲವೇರ್ ರಾಜ್ಯದ ಬೀಚ್ ಹೋಮ್ ಬಳಿ ಬೈಸಿಕಲ್ ನಲ್ಲಿ ಹೋಗುತ್ತಿದ್ದಾಗ ಎಡವಿ ಬಿದ್ದು, ಗಾಯಗೊಂಡರು. ಶ್ವೇತಭವನದ ಪೂಲ್ ವರದಿಯ ವೀಡಿಯೊವು 79 ವರ್ಷ ವಯಸ್ಸಿನ ಅಮೆರಿಕ ಅಧ್ಯಕ್ಷರು ಸೈಕಲ್‌ನಿಂದ ಬಿದ್ದು ನಂತರ ತಕ್ಷಣವೇ ಎದ್ದಿರುವುದನ್ನು ತೋರಿಸಿದೆ. ನಂತರ ಅವರು ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ. … Continued

ಅಗ್ನಿಪಥ ನೇಮಕಾತಿ ಯೋಜನೆ ವಿರೋಧಿ ಪ್ರತಿಭಟನೆ ಶಮನಕ್ಕೆ ಹಲವಾರು ರಿಯಾಯ್ತಿ- ಪ್ರೋತ್ಸಾಹಕ ಕ್ರಮ ಘೋಷಿಸಿದ ಕೇಂದ್ರ ಸರ್ಕಾರ

ನವದೆಹಲಿ: ದೇಶಾದ್ಯಂತ ಭಾರೀ ಹಿಂಸಾಚಾರಕ್ಕೆ ಕಾರಣವಾಗಿರುವ ನೂತನ ಅಗ್ನಿವೀರ ಸೇನಾ ನೇಮಕಾತಿ ಯೋಜನೆಯಿಂದ ಅಸಮಾಧಾನಗೊಂಡ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಕೇಂದ್ರ ಸರ್ಕಾರ ಹಲವಾರು ಹೊಸ ರಿಯಾಯಿತಿಗಳನ್ನು ಪ್ರಕಟಿಸಿದೆ. ಅಗ್ನಿಪಥ ಯೋಜನೆಯಡಿ ಸಶಸ್ತ್ರ ಪಡೆಗಳಲ್ಲಿ ನಾಲ್ಕು ವರ್ಷಗಳ ಸೇವೆ ಸಲ್ಲಿಸಿದ ನಂತರ ‘ಅಗ್ನಿವೀರ’ರನ್ನು ಬೆಂಬಲಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಘೋಷಿಸಿದೆ. ಅಗ್ನಿಪಥ ನೇಮಕಾತಿಗಾಗಿ ಘೋಷಿಸಲಾದ ಕೆಲವು ಕ್ರಮಗಳು … Continued

ಕಾಶ್ಮೀರದ ಪಾಂಪೋರ್‌ನಲ್ಲಿ ಪೊಲೀಸ್ ಅಧಿಕಾರಿಗೆ ಗುಂಡಿಕ್ಕಿ ಹತ್ಯೆ

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ ಪ್ರದೇಶದಲ್ಲಿ ಶನಿವಾರ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಚಿವ ವಿಭಾಗ) ಫಾರೂಕ್ ಅಹ್ಮದ್ ಮಿರ್ ಅವರ ಮೃತದೇಹ ಶನಿವಾರ ಬೆಳಗ್ಗೆ ಹೊಲದಲ್ಲಿ ಪತ್ತೆಯಾಗಿದೆ. ಪಾಂಪೋರ್‌ನ ಸಂಬೂರಾ ಎಂಬಲ್ಲಿನ ಅವರ ಮನೆಯಿಂದ ಭಯೋತ್ಪಾದಕರು ಸಬ್ ಇನ್ಸ್‌ಪೆಕ್ಟರ್ ಅವರನ್ನು ಅಪಹರಿಸಿ … Continued

ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ: ರಾಜ್ಯದ ಟಾಪರ್ಸ್‌ಗಳ ಲಿಸ್ಟ್‌ ಇಲ್ಲಿದೆ…

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ‌ಪ್ರಕಟವಾಗಿದ್ದು, ಈ ಬಾರಿ ರಾಜ್ಯದಲ್ಲಿ 61.88% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇಖಡವಾರು ಫಲಿತಾಂಶದಲ್ಲಿ 0.8 ಹೆಚ್ಚಾಗಿದೆ.ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಣಕನ್ನಡ ಜಿಲ್ಲೆ (ಶೇ.88.02) ಮೊದಲ ಸ್ಥಾನ … Continued