ಪಠ್ಯ ಪರಿಷ್ಕರಣೆ: ದೇವೇಗೌಡರ ಪತ್ರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ-ಸಿಎಂ ಬೊಮ್ಮಾಯಿ

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಕುರಿತಾಗಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಬರೆದಿರುವ ಪತ್ರ ಹಾಗೂ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ಹಿಂಪಡೆಯುವಂತೆ ಆಗ್ರಹಿಸಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಿಂದ ಬರೆದ ಪತ್ರದ ಕುರಿತು ಪ್ರತಿಕ್ರಿಯಿಸಿದ ಅವರು, ವಿವರಗಳ … Continued

ರಾಷ್ಟ್ರಪತಿ ಚುನಾವಣೆಗೆ ಜಂಟಿ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಆಯ್ಕೆ

ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಆಯ್ಕೆ ಮಾಡಲಾಗಿದೆ. ಸಿನ್ಹಾ ಅವರು ಜೂನ್ 27ರಂದು ಬೆಳಿಗ್ಗೆ 11:30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಮಂಗಳವಾರ, ಟಿಎಂಸಿ ನಾಯಕ ಸಿನ್ಹಾ ಅವರು ದೊಡ್ಡ ರಾಷ್ಟ್ರೀಯ ಹಿತಾಸಕ್ತಿಗಾಗಿ ಕೆಲಸ ಮಾಡುವ ಸಮಯ ಬಂದಿದೆ ಎಂದು ಹೇಳಿದರು. ಉನ್ನತ ಹುದ್ದೆಗೆ … Continued

ಯೋಗ ಇಸ್ಲಾಂ ವಿರುದ್ಧ’: ಮಾಲ್ಡೀವ್ಸ್‌ನಲ್ಲಿ ಭಾರತ ಸರ್ಕಾರದ ಯೋಗ ಕಾರ್ಯಕ್ರಮಕ್ಕೆ ನುಗ್ಗಿ ಅಡ್ಡಿಪಡಿಸಿದ ಮೂಲಭೂತವಾದಿ ಮುಸ್ಲಿಂ ಗುಂಪು | ವೀಕ್ಷಿಸಿ

ಮಂಗಳವಾರ ಬೆಳಗ್ಗೆ ಮಾಲ್ಡೀವ್ಸ್‌ನ ರಾಜಧಾನಿ ಮಾಲೆಯಲ್ಲಿರುವ ರಾಷ್ಟ್ರೀಯ ಫುಟ್‌ಬಾಲ್ ಕ್ರೀಡಾಂಗಣಕ್ಕೆ ನುಗ್ಗಿದ ಕೋಪೋದ್ರೇಕಗೊಂಡ ಗುಂಪೊಂದು ಭಾರತೀಯ ಹೈಕಮಿಷನ್ ಆಯೋಜಿಸಿದ್ದ ಯೋಗ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿತು. ಕಾರ್ಯಕ್ರಮಕ್ಕೂ ಮುನ್ನ ಪ್ರತಿಭಟನಾಕಾರರು ಯೋಗವು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ ಎಂಬ ಭಿತ್ತಿಫಲಕಗಳನ್ನು ಪ್ರದರ್ಶಿಸುತ್ತ ಆಗಮಿಸಿದ್ದರು. ಮಾಲ್ಡೀವಿಯನ್ ಸುದ್ದಿ ಸಂಸ್ಥೆ, ದಿ ಎಡಿಶನ್‌ನ ವರದಿ ಪ್ರಕಾರ, ಇಸ್ಲಾಮಿಸ್ಟ್‌ಗಳ ಒಂದು ವಿಭಾಗವು ಯೋಗವನ್ನು ಮಾಡುವುದು … Continued

ಕ್ಲೌಡ್‌ಫ್ಲೇರ್ ಸ್ಥಗಿತದಿಂದ ಜಗತ್ತಿನಾದ್ಯಂತ ಅನೇಕ ವೆಬ್‌ಸೈಟ್‌ಗಳ ಪ್ರವೇಶಕ್ಕೆ ಕೆಲಕಾಲ ತೊಂದರೆ

ನವದೆಹಲಿ: ಜನಪ್ರಿಯ CDN ಆಯ್ಕೆ ಕ್ಲೌಡ್‌ಫ್ಲೇರ್‌ನಲ್ಲಿ ಕೆಲಕಾಲದ ಸ್ಥಗಿತವು- ಇಂದು ಪ್ರಪಂಚದಾದ್ಯಂತ ಹಲವು ಕಂಪನಿಗಳ ಅನೇಕ ವೆಬ್‌ಸೈಟ್‌ಗಳಿಗೆ ತೊಂದರೆಯಾಗಿದೆ. ಅನೇಕ ವೆಬ್‌ಸೈಟ್‌ಗಳಿಗೆ ಲಕ್ಷಾಂತರ ಜನರಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಇವುಗಳು ಡಿಸ್ಕಾರ್ಡ್, ಕ್ಯಾನ್ವಾ, ಸ್ಟ್ರೀಮ್ಯಾರ್ಡ್‌ನಂತಹ ವೆಬ್‌ಸೈಟ್‌ಗಳನ್ನು ಒಳಗೊಂಡಿವೆ ಮತ್ತು ಲಂಡನ್-ಆಧಾರಿತ ಸ್ಟಾರ್ಟ್ಅಪ್ ನಥಿಂಗ್‌ನ ಅಧಿಕೃತ ವೆಬ್‌ಸೈಟ್ ಅನ್ನು ಸಹ ಒಳಗೊಂಡಿವೆ. ಕ್ಲೌಡ್‌ಫ್ಲೇರ್ ಸ್ಥಗಿತವನ್ನು ಟ್ವೀಟ್ ಮೂಲಕ ಒಪ್ಪಿಕೊಂಡಿತು … Continued

ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಏಕನಾಥ್ ಶಿಂಧೆ ವಜಾ ಮಾಡಿದ ಶಿವಸೇನೆ: ಬಾಳಾಸಾಹೇಬರ ಚಿಂತನೆಗಳಿಗೆ ಎಂದಿಗೂ ಮೋಸ ಮಾಡಿಲ್ಲ ಎಂದ ಶಿಂಧೆ

ಮುಂಬೈ: ಏಕನಾಥ ಶಿಂಧೆ ಮತ್ತು ಅವರ ಪಕ್ಷದ ಕೆಲವು ಶಾಸಕರು ಸೂರತ್‌ನಲ್ಲಿ ಮೊಕ್ಕಾಂ ಹೂಡಿರುವ ಹಿನ್ನೆಲೆಯಲ್ಲಿ ಏಕನಾಥ್ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ವಜಾ ಮಾಡಲು ಶಿವಸೇನೆ ಮಂಗಳವಾರ ನಿರ್ಧರಿಸಿದ್ದು, ಸೆವ್ರಿ ಶಾಸಕ ಅಜಯ್ ಚೌಧರಿ ಅವರು ಶಿವಸೇನೆಯ ನೂತನ ಶಾಸಕಾಂಗ ಪಕ್ಷದ ನಾಯಕರಾಗಲಿದ್ದಾರೆ. ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರದ ಕಾರ್ಯನಿರ್ವಹಣೆ ಹಾಗೂ … Continued

ಕನ್ನಡದ ಖ್ಯಾತ ನಟ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು: ಗೋವಾದಿಂದ ಬೆಂಗಳೂರಿನ ಆಸ್ಪತ್ರೆಗೆ ಏರ್ ಲಿಫ್ಟ್

ಕನ್ನಡದ ಖ್ಯಾತ ದಿಗಂತ್ ಅವರ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಅವರನ್ನು ಏರ್‌ಲಿಫ್ಟ್‌ ಮೂಲಕ ಬೆಂಗಳೂರಿಗೆ ಕರತರಲಾಗುವುದು ಎಂದು ಮೂಲಗಳು ತಿಳಿಸಿವೆ. ಗೋವಾದಲ್ಲಿ ಸೊಮರ್‌ಸಾಲ್ಟ್ (Somersault) ಮಾಡುವ ವೇಳೆ ಕುತ್ತಿಗೆಗೆ ನಟ ದಿಗಂತ್ ಪೆಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದಿಗಂತ್ ಗೋವಾ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಗೋವಾದ ಸಮುದ್ರ ತಟದಲ್ಲಿ … Continued

ಹೆರಿಗೆಯ ಸಮಯದಲ್ಲಿ ನವಜಾತ ಕತ್ತರಿಸಿ ಹೋದ ಶಿಶುವಿನ ತಲೆಯನ್ನು ಮಹಿಳೆಯ ಗರ್ಭದೊಳಗೆ ಹಾಗೆಯೇ ಬಿಟ್ಟ ವೈದ್ಯಕೀಯ ಸಿಬ್ಬಂದಿ…!

ಕರಾಚಿ: ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗ್ರಾಮೀಣ ಆರೋಗ್ಯ ಕೇಂದ್ರದ ಅನನುಭವಿ ವೈದ್ಯಕೀಯ ಸಿಬ್ಬಂದಿ ಹೆರಿಗೆಯ ಸಮಯದಲ್ಲಿ ತಾಯಿಯ ಗರ್ಭದೊಳಗೆ ಜನಿಸಲಿರುವ ಮಗುವಿನ ಶಿರಚ್ಛೇದನ ಮಾಡಿ ಮಹಿಳೆಯ ಹೊಟ್ಟೆಯೊಳಗೆ ಬಿಟ್ಟ ನಂತರ ಮಹಿಳೆ ಜೀವಕ್ಕೆ ಅಪಾಯ ಎದುರಾದ ಘಟನೆ ವರದಿಯಾಗಿದೆ. ಈ ದುರಂತ ಘಟನೆಯನ್ನು ತನಿಖೆ ಮಾಡಲು ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ವೈದ್ಯಕೀಯ … Continued

ಇಂದಿನಿಂದ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಮುಂಗಾರು ಚುರುಕು: ಮುನ್ಸೂಚನೆ

ಬೆಂಗಳೂರು: ಕರ್ನಾಟಕದ ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕುಗೊಳ್ಳಲಿದ್ದು, ಹವಾಮಾನ ಇಲಾಖೆಯಿಂದ ಹಳದಿ ಅಲರ್ಟ್​ (Yellow Alert) ಘೋಷಿಸಲಾಗಿದೆ. ಇಂದಿನಿಂದ ಜೂನ್ 24ರ ವರೆಗೆ ರಾಜ್ಯಾದ್ಯಂತ ನಿರಂತರ ಮಳೆಯಾಗಲಿದೆ ಎಂದು ಹೇಳಲಾಗಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಬೆಂಗಳೂರು, ಚಾಮರಾಜನಗರ, ಬಾಗಲಕೋಟೆ,ಬೀದರ್, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ತುಮಕೂರು, … Continued

ಬೆಳಗಾವಿ: ಗುಂಡು ಹೊಡೆದು ಬೆಳ್ಳಂಬೆಳಿಗ್ಗೆ ಕೊಲೆ ಆರೋಪಿ ಬಂಧಿಸಿದ ಪೊಲೀಸರು

ಬೆಳಗಾವಿ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯ ಕಾಲಿಗೆ, ಮಂಗಳವಾರ ನಸುಕಿನಲ್ಲಿ ಪೊಲೀಸರು ಗುಂಡು ಹೊಡೆದು ಬಂಧಿಸಲಾಗಿದೆ. ರಾಜು ದೊಡ್ಡಬೊಮ್ಮನವರ ಎಂಬ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಯ ಆರೋಪ ಹೊತ್ತಿರುವ ವಿಶಾಲ ಸಿಂಗ್ ಚವ್ಹಾಣ ಎಂಬ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಅನೇಕ ದಿಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬೆಳಗಾವಿ ವೀರಭದ್ರ … Continued

ತಂದೆಯೊಂದಿಗೆ ಸಂಬಂಧ ಕಡಿದುಕೊಳ್ಳಲು ಮುಂದಾದ ವಿಶ್ವದ ನಂ.1 ಶ್ರೀಮಂತ ಎಲೋನ್ ಮಸ್ಕ್ ತೃತೀಯ ಲಿಂಗಿ ಮಗಳು

ವಾಷಿಂಗ್ಟನ್: ಎಲೋನ್ ಮಸ್ಕ್ ಅವರ ತೃತೀಯ ಲಿಂಗಿ ಮಗಳು ತನ್ನ ಹೊಸ ಲಿಂಗದ ಗುರುತಿಗೆ ಅನುಗುಣವಾಗಿ ತನ್ನ ಹೆಸರನ್ನು ಬದಲಾಯಿಸಲು ಅರ್ಜಿ ಸಲ್ಲಿಸಿದ್ದಾರೆ ಮತ್ತು “ನಾನು ಇನ್ನು ಮುಂದೆ ನನ್ನ ಜೈವಿಕ ತಂದೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಲು ಬಯಸುವುದಿಲ್ಲ ಎಂದು ಹೇಳಿರುವ ಮಗಳು ತನ್ನ ಹೊಸ ಲಿಂಗ ಗುರುತನ್ನು ಪ್ರತಿಬಿಂಬಿಸುವ ಹೆಸರು ಬದಲಾವಣೆ ಮತ್ತು … Continued