ಬೆಂಗಳೂರಿನಲ್ಲಿ ಕಂಡುಬಂದ ಹೊಸ ಒಮಿಕ್ರಾನ್ ಉಪ-ವಂಶಾವಳಿಗಳು: ಸಚಿವ ಡಾ.ಸುಧಾಕರ

ಬೆಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಬೆಂಗಳೂರಿನಲ್ಲಿ ವರದಿಯಾದ ಕೋವಿಡ್-19 ಪ್ರಕರಣಗಳಲ್ಲಿ ಓಮಿಕ್ರಾನ್‌ನ ಹೊಸ ಉಪ-ವಂಶಾವಳಿಗಳಾದ ಬಿಎ.3, ಬಿಎ.4 ಮತ್ತು ಬಿಎ.5-ಗಳ ಹರಡುವಿಕೆಯನ್ನು ಬುಧವಾರ ದೃಢಪಡಿಸಿದ್ದಾರೆ. ಜೂನ್ 2 ಮತ್ತು 9ರ ನಡುವೆ ಧನಾತ್ಮಕ ಪರೀಕ್ಷೆ ನಡೆಸಿದ 44 ಮಾದರಿಗಳ ಜೀನೋಮಿಕ್ ಅನುಕ್ರಮದಲ್ಲಿ BA.3, BA.4 ಮತ್ತು BA.5 ಇರುವಿಕೆಯನ್ನು … Continued

ಹಾಸನ, ಕೊಡಗು ಜಿಲ್ಲೆಯ ಹಲವೆಡೆ ಭೂ ಕಂಪನ

ಹಾಸನ/ಮಡಿಕೇರಿ: ಹಾಸನ ಹಾಗೂ ಕೊಡಗು ಜಿಲ್ಲೆಗಳ ಹಲವೆಡೆ ಇಂದು, ಗುರುವಾರ ಬೆಳಗಿನಜಾವ 4:30ರ ಸುಮಾರಿಗೆ ಭೂಮಿ‌ ಕಂಪಿಸಿಸದ ಅನುಭವವಾಗಿದೆ ಎಂದು ಹಲವರು ಹೇಳಿದ್ದಾರೆ. ನಂತರ ಹಾಸನ ಜಿಲ್ಲೆಯ ಹಲವೆಡೆ 3.4 ತೀವ್ರತೆಯ ಕಂಪನವಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಅಧಿಕೃತವಾಗಿ ತಿಳಿಸಿದೆ. ಇಂದು ಬೆಳಿಗ್ಗೆ ಹಾಸನದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು ಜನ … Continued

ಶಿವಸೇನಾದ ಇನ್ನೂ ನಾಲ್ವರು ಶಾಸಕರು ಏಕನಾಥ ಶಿಂಧೆ ಬಣಕ್ಕೆ ಸೇರ್ಪಡೆ

ಮುಂಬೈ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಏಕನಾಥ ಶಿಂಧೆ ಅವರ ಬಣಕ್ಕೆ ಶಿವಸೇನಾದ ಇನ್ನೂ ನಾಲ್ವರು ಶಾಸಕರು ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ. ಅಸ್ಸಾಂನ ಗುವಾಹತಿಯಲ್ಲಿರುವ ‘ರಾಡಿಸನ್ ಬ್ಲೂ’ ಪಂಚತಾರಾ ಹೋಟೆಲ್‌ನಲ್ಲಿ ಏಕನಾಥ ಶಿಂಧೆ ಅವರು ಶಾಸಕರನ್ನು ಬರಮಾಡಿಕೊಂಡಿದ್ದು, ಶಿವಸೇನಾದ ಮತ್ತಿಬ್ಬರು ಶಾಸಕರು ಬುಧವಾರ ತಡರಾತ್ರಿ ಗುಜರಾತಿನ ಸೂರತ್‌ಗೆ ತೆರಳಿ ಶಿಂಧೆ ಬಣಕ್ಕೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ. … Continued

ಅಯೋಧ್ಯಾ ಘಾಟ್‌ನಲ್ಲಿ ಸ್ನಾನ ಮಾಡುವಾಗ ಪತ್ನಿಯನ್ನು ಚುಂಬಿಸಿದ್ದಕ್ಕೆ ವ್ಯಕ್ತಿಗೆ ಥಳಿತ | ವೀಕ್ಷಿಸಿ

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಪತ್ನಿಗೆ ಮುತ್ತು ಕೊಟ್ಟಿದ್ದಕ್ಕೆ ವ್ಯಕ್ತಿಯೋರ್ವನನ್ನು ಥಳಿಸಿದ ಘಟನೆ ನಡೆದಿದೆ. ಘಟನೆಯ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಹೆಂಡತಿಗೆ ಮುತ್ತಿಕ್ಕಿದ ಪುರುಷನನ್ನು ಎಳೆದೊಯ್ದ ಹಲವಾರು ಪುರುಷರು ನಂತರ ಥಳಿಸಿದ್ದಾರೆ. ಅಯೋಧ್ಯೆಯಲ್ಲಿ ಇಂತಹ ಅಸಭ್ಯತೆಯನ್ನು ಸಹಿಸುವುದಿಲ್ಲ ಎಂದು ಒಬ್ಬ ವ್ಯಕ್ತಿ ಹೇಳುತ್ತಿರುವುದು ಕೇಳಿಬರುತ್ತಿದೆ. … Continued

ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ, ಇತರರ ವಿರುದ್ಧ ಕರಡು ಆರೋಪಗಳನ್ನು ಸಲ್ಲಿಸಿದ ಎನ್‌ಸಿಬಿ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ, ಅವರ ಸಹೋದರ ಶೋವಿಕ್ ಮತ್ತು ಇತರರ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಬುಧವಾರ ಕರಡು ಆರೋಪಗಳನ್ನು ಸಲ್ಲಿಸಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಸರ್ಪಾಂಡೆ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ … Continued

ಇಂದು ದೆಹಲಿಗೆ ಸಿಎಂ ಬೊಮ್ಮಾಯಿ, ವರಿಷ್ಠರ ಜತೆ ಚರ್ಚೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು, ಗುರುವಾರ ನವದೆಹಲಿಗೆ ತೆರಳಲಿದ್ದು ವರಿಷ್ಠರ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಮುಖ್ಯಮಂತ್ರಿಗಳ ದಿಢೀರ್ ದೆಹಲಿ ಭೇಟಿ ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ. ಸಂಪುಟ ವಿಸ್ತರಣೆ ಕುರಿತು ಹಲವು ದಿನಗಳಿಂದ ಚರ್ಚೆಗಳು ನಡೆಯುತ್ತಿವೆ. ಚುನಾವಣೆ ಕೂಡಾ ಹತ್ತಿರವಾಗುತ್ತಿರುವುದರಿಂದ ಆಕಾಂಕ್ಷಿಗಳ ಒತ್ತಡವೂ ಹೆಚ್ಚಾಗುತ್ತಿದೆ. ಹೀಗಾಗಿ ಬೊಮ್ಮಾಯಿಯವರ ದೆಹಲಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಗುರುವಾರ ಮಧ್ಯಾಹ್ನ … Continued

1,000 ಕಿಮೀ ರೇಂಜ್‌ ಹೈಡ್ರೋಜನ್ ಚಾಲಿತ ವೋಲ್ವೋ ಟ್ರಕ್ ಅನಾವರಣ, 15 ನಿಮಿಷದ ಕಡಿಮೆ ಅವಧಿಯಲ್ಲಿ ಇಂಧನ ತುಂಬಿಸಬಹುದು

ವೋಲ್ವೋ ತನ್ನ ಹೈಡ್ರೋಜನ್-ಚಾಲಿತ ಇಂಧನ ಕೋಶದ ಎಲೆಕ್ಟ್ರಿಕ್ ಟ್ರಕ್‌ಗಳನ್ನು ಅನಾವರಣಗೊಳಿಸಿದೆ. ಕಂಪನಿಯು ಇದು 1,000 ಕಿಲೋಮೀಟರ್ ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿದೆ ಮತ್ತು 15 ನಿಮಿಷಗಳಲ್ಲಿ ಇಂಧನ ತುಂಬಿಸಬಹುದು ಎಂದು ಹೇಳಿಕೊಂಡಿದೆ. ಸ್ವೀಡಿಷ್ ಕಂಪನಿಯ ಟ್ರಕ್‌ಗಳ ವಿಭಾಗವು “ಈಗ ಕೆಲವು ವರ್ಷಗಳಿಂದ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ” ಎಂದು ಕಂಪನಿಯ ಅಧ್ಯಕ್ಷ ರೋಜರ್ ಆಲ್ಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೊದಲ … Continued