ಈ ಗಿಡುಗದ ಹಾರಾಟದ ನೈಪುಣ್ಯ ನೋಡಿದರೆ ಬೆರಗಾಗ್ತೀರಾ…ವೀಕ್ಷಿಸಿ

ಗಿಡುಗವೊಂದರ ಮೋಡಿಮಾಡುವ ವಿಡಿಯೋ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ. ಅದರಲ್ಲಿ ವಿಶೇಷವೇನೆಂದರೆ ಹಣೆಗೆ ಹಣೆ ಜೋಡಿಸಿ ನಿಂತಿದ್ದ ಇಬ್ಬರು ಮಹಿಳೆಯರು ತಮ್ಮ ಮಧ್ಯದಲ್ಲಿ ಸೃಷ್ಟಿಸಿದ ಅಲ್ಪ ಅಂತರದ ನಡುವೆ ಹಕ್ಕಿ ಹಾರಿಹೋಗಿದೆ. ಕ್ಲಿಪ್‌ನಲ್ಲಿ ಒಬ್ಬ ವ್ಯಕ್ತಿಯು ಫಾಲ್ಕನ್ ಅನ್ನು ಇಬ್ಬರು ಮಹಿಳೆಯರ ಕಡೆ ಕಡೆಗೆ ನಿರ್ದೇಶಿಸಿದನು ಮತ್ತು ಅದರಂತೆ ಹಾರಿದ ಗಿಡುಗ ಪರಸ್ಪರ ಹಣೆಗೆ ಹಣೆ … Continued

ಇಂಟೆಲಿಜೆನ್ಸ್ ಬ್ಯೂರೋದ ನೂತನ ಮುಖ್ಯಸ್ಥರಾಗಿ ತಪನ್ ಕುಮಾರ್ ದೇಕಾ ನೇಮಕ

ನವದೆಹಲಿ: 26/11 ಮುಂಬೈ ದಾಳಿಯ ಸಂದರ್ಭದಲ್ಲಿ ಪ್ರತಿದಾಳಿಗಳ ಉಸ್ತುವಾರಿ ವಹಿಸಿದ್ದ ತಪನ್ ಕುಮಾರ್ ದೇಕಾ ಅವರನ್ನು ಶುಕ್ರವಾರ ಗುಪ್ತಚರ ಬ್ಯೂರೋ (ಐಬಿ) ನಿರ್ದೇಶಕರಾಗಿ ನೇಮಿಸಲಾಯಿತು. ಇದೇವೇಳೆ  ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (R&AW) ಮುಖ್ಯಸ್ಥರಾಗಿರುವ ಸಮಂತ್ ಗೋಯೆಲ್  ಅವರ ಅಧಿಕಾರವನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ. ಸಿಬ್ಬಂದಿ ಸಚಿವಾಲಯ ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, IB … Continued

16 ಶಿವಸೇನೆ ಬಂಡಾಯ ಶಾಸಕರಿಗೆ ಮಹಾರಾಷ್ಟ್ರ ಉಪ ಸ್ಪೀಕರ್ ನೋಟಿಸ್ ಕಳುಹಿಸಬಹುದು: ಮೂಲಗಳು

ಮುಂಬೈ: ಮಹಾರಾಷ್ಟ್ರದ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರು 16 ಬಂಡಾಯ ಶಿವಸೇನೆ ಶಾಸಕರಿಗೆ ನಾಳೆ ಅನರ್ಹತೆ ನೋಟಿಸ್ ಕಳುಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಅನರ್ಹತೆಯ ವಿಚಾರಣೆ ನಡೆಯಲಿದ್ದು, ಬಂಡುಕೋರರು ಮುಂಬೈನಲ್ಲಿ ಹಾಜರಿರಬೇಕು ಎಂದು ಮೂಲಗಳು ತಿಳಿಸಿವೆ. ಉಪಸಭಾಪತಿಯವರು ನೋಟಿಸ್ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದರೆ, ಸೇನಾ ನಾಯಕ ಏಕನಾಥ್ ಶಿಂಧೆ ನೇತೃತ್ವದ … Continued

ಮಿಜೋರಾಂನಲ್ಲಿ ವಶಪಡಿಸಿಕೊಂಡ 2,362 ಕೋಟಿ ರೂ. ಮೌಲ್ಯದ ಡ್ರಗ್ಸ್ ಸುಟ್ಟ ಪೊಲೀಸರು

ಐಜ್ವಾಲ್  : ಜೂನ್ 26 ರಂದು ಬರುವ ಡ್ರಗ್ಸ್ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನವನ್ನು ಗುರುತಿಸಲು, ಜೂನ್ 24 ರಂದು ಐಜ್ವಾಲ್‌ನ ದಕ್ಷಿಣ ಹೊರವಲಯದಲ್ಲಿರುವ ಟ್ರಿನಿಟಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ 2,362 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಸುಡಲಾಯಿತು. ನಾಶಪಡಿಸಿದ ಡ್ರಗ್ಸ್‌ಗಳಲ್ಲಿ 18.243 ಕೆಜಿ ಹೆರಾಯಿನ್, 753.045 ಕೆಜಿ … Continued

ಅಗ್ನಿಪಥ ಯೋಜನೆಯಡಿ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಿದ ಭಾರತೀಯ ವಾಯುಸೇನೆ

ನವದೆಹಲಿ: ಹಲವಾರು ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದ ಒಂದು ವಾರದ ನಂತರ ಅಗ್ನಿಪಥ ಯೋಜನೆಯಡಿ ಭಾರತೀಯ ವಾಯುಪಡೆಯಲ್ಲಿ ನೇಮಕಾತಿ ಪ್ರಕ್ರಿಯೆಯು ನೋಂದಣಿ ವಿಂಡೋ ತೆರೆಯುವುದರೊಂದಿಗೆ ಶುಕ್ರವಾರ ಪ್ರಾರಂಭವಾಯಿತು. #Agniveervayu ಗೆ ಅರ್ಜಿ ಸಲ್ಲಿಸಲು ನೋಂದಣಿ ವಿಂಡೋ ಇಂದು ಬೆಳಿಗ್ಗೆ 10 ರಿಂದ ಕಾರ್ಯನಿರ್ವಹಿಸುತ್ತದೆ” ಎಂದು IAF ಟ್ವಿಟರ್‌ನಲ್ಲಿ ತಿಳಿಸಿದೆ. ಜೂನ್ 14 ರಂದು ಅಗ್ನಿಪಥ ಯೋಜನೆಯನ್ನು … Continued

ಶಿರಸಿ: ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರಗೆ ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, 2022ನೇ ಸಾಲಿನ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಅವರನ್ನು ಆಯ್ಕೆ ಮಾಡಲಾಗಿದೆ. ಜುಲೈ 1ರಂದು ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆಯ್ಕೆ ಸಮಿತಿಯು … Continued

ಒಡಿಸ್ಸಾ ಹಿರಿಯ ನಟ ರೈಮೋಹನ್ ಪರಿದಾ ಮನೆಯಲ್ಲಿ ಶವವಾಗಿ ಪತ್ತೆ

ಭುವನೇಶ್ವರ: ಒಡಿಯಾದ ಹಿರಿಯ ನಟ ರೈಮೋಹನ್ ಪರಿದಾ (58) ಶುಕ್ರವಾರ, ಜೂನ್ 24 ರಂದು ಭುವನೇಶ್ವರದ ಪ್ರಾಚಿ ವಿಹಾರ್ ಪ್ರದೇಶದಲ್ಲಿನ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ಸಾಕ್ಷ್ಯವು ಆತ್ಮಹತ್ಯೆಯಿಂದ ಸಾವು ಸಂಭವಿಸಿದೆ ಎಂದು ಸೂಚಿಸುತ್ತದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ರಾಯಮೋಹನ್ ಪರಿದಾ ಬೆಳಗ್ಗೆ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ … Continued

ಕರ್ನಾಟಕದಲ್ಲಿ ಶುಕ್ರವಾರ 816 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದ್ದು, ಸಾವಿನ ಪ್ರಕರಣ ಶೂನ್ಯವಾಗಿದೆ. ಕಳೆದ 24 ಗಂಟೆಯಲ್ಲಿ 816 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇವೇಳೆ 703 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಇದುವರೆಗೆ 39,19,155 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 22,527 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. … Continued

ಹಣಕಾಸು ಸಂಸ್ಥೆ ಉದ್ಯೋಗಿಗೆ 35 ಲಕ್ಷ ರೂ. ಪಂಗನಾಮ ಹಾಕಿದ ಸೋಶಿಯಲ್ ಮೀಡಿಯಾ ಗೆಳತಿ…!

ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಪರಿಚಿತವಾಗಿದ್ದ ಮಹಿಳೆಯೊಬ್ಬರೊಂದಿಗೆ 45 ವರ್ಷದ ಹಣಕಾಸು ಸಂಸ್ಥೆಯೊಂದರ ಉದ್ಯೋಗಿಯೊಬ್ಬರು ವಂಚನೆಗೊಳಗಾಗಿದ್ದಾರೆ. ನ್ಯಾನ್ಸಿ ವಿಲಿಯಂ ಎಂಬ ಆರೋಪಿ ಗೆಳೆತನವಾದ ನಂತರ ಅನೇಕ ಬಾರಿ ವೀಡಿಯೊ ಕಾಲ್ ಮಾಡಿ, ಭಾರತಕ್ಕೆ ಬಂದು ಜ್ಯೂವೆಲ್ಲರಿ ವ್ಯವಹಾರ ಆರಂಭಿಸುವುದಾಗಿ ಭರವಸೆ ನೀಡಿದ್ದಾಳೆ. ಆಕೆಯನ್ನು ನಂಬಿದ ಹಣಕಾಸು ಕಂಪನಿ ಸಿಬ್ಬಂದಿ 35 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಆಕೆ … Continued

ರಾಹುಲ್ ಗಾಂಧಿ ವಯನಾಡ್ ಕಚೇರಿ ಧ್ವಂಸಗೊಳಿಸಿದ ಎಸ್‌ಎಫ್‌ಐ ಕಾರ್ಯಕರ್ತರು

ಕೋಝಿಕೋಡ್ (ಕೇರಳ): ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಕಾರ್ಯಕರ್ತರು ವಯನಾಡಿನ ಕಲ್ಪೆಟ್ಟಾದಲ್ಲಿರುವ ರಾಹುಲ್ ಗಾಂಧಿ ಸಂಸದರ ಕಚೇರಿ ಕಡೆಗೆ ಶುಕ್ರವಾರ ಮಧ್ಯಾಹ್ನ ನಡೆಸಿದ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿತು. ಕಚೇರಿಗೆ ನುಗ್ಗಿದ ಕಾರ್ಯಕರ್ತರು ಕಟ್ಟಡದ ಬಾಗಿಲು, ಕಿಟಕಿಗಳನ್ನು ಒಡೆದು ಹಾಕಿದ್ದಾರೆ. ಗುಡ್ಡಗಾಡು ಪ್ರದೇಶವಾದ ವಯನಾಡಿನಲ್ಲಿ ಈಗ ತೀವ್ರವಾಗಿ ಕಾಡುತ್ತಿರುವ ಪರಿಸರ ಸೂಕ್ಷ್ಮ ವಲಯ (ಇಎಸ್‌ಝಡ್) ವಿಚಾರದಲ್ಲಿ ಸಂಸದರು … Continued