ಕಾಶ್ಮೀರದಲ್ಲಿ ಜಿ20 ರಾಷ್ಟ್ರಗಳ ಸಭೆ ನಡೆಸುವ ಭಾರತದ ಯೋಜನೆಯನ್ನು ತಿರಸ್ಕರಿಸಿದ ಪಾಕಿಸ್ತಾನ

ಇಸ್ಲಾಮಾಬಾದ್: ಕಾಶ್ಮೀರದಲ್ಲಿ ಜಿ 20 ರಾಷ್ಟ್ರಗಳ ಸಭೆಯನ್ನು ನಡೆಸುವ ಭಾರತದ ಪ್ರಯತ್ನವನ್ನು ತಿರಸ್ಕರಿಸುವುದಾಗಿ ಪಾಕಿಸ್ತಾನ ಶನಿವಾರ ಹೇಳಿದೆ. ಗುಂಪಿನ ಸದಸ್ಯರು ಕಾನೂನು ಮತ್ತು ನ್ಯಾಯದ ಅವಶ್ಯಕತೆಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳುತ್ತಾರೆ ಮತ್ತು ಪ್ರಸ್ತಾಪವನ್ನು ಸಂಪೂರ್ಣವಾಗಿ ವಿರೋಧಿಸುತ್ತಾರೆ ಎಂದು ಭಾವಿಸುವುದಾಗಿ ಪಾಕಿಸ್ತಾನ ಹೇಳಿದೆ. ಜಮ್ಮು ಮತ್ತು ಕಾಶ್ಮೀರವು ಜಿ-20 ರ 2023 ಸಭೆಗಳನ್ನು ಆಯೋಜಿಸಲಿದೆ. ಇದು ವಿಶ್ವದ ಪ್ರಮುಖ … Continued

ಶುಕ್ರವಾರ ತಡರಾತ್ರಿ ಗುಜರಾತ್‌ನಲ್ಲಿ ಅಮಿತ್ ಶಾ, ಫಡ್ನವಿಸ್ ಅವರನ್ನು ಭೇಟಿಯಾದ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ: ವರದಿ

ನವದೆಹಲಿ: ಮಹಾರಾಷ್ಟ್ರದ ಸಚಿವ ಏಕನಾಥ್ ಶಿಂಧೆ ಬಂಡಾಯವನ್ನು ಇದು ಶಿವಸೇನೆಯ ಆಂತರಿಕ ವಿಷಯ ಎಂದು ಬಣ್ಣಿಸಿ ಬಿಜೆಪಿ ದೂರ ಸರಿಯುತ್ತಿದೆ ಎಂದು ಹೇಳುತ್ತಿರುವ ಮಧ್ಯೆಯೇ ಏಕನಾಥ ಶಿಂಧೆ, ಕೇಂದ್ರ ಸಚಿವ ಅಮಿತ್ ಶಾ ಮತ್ತು ರಾಜ್ಯ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ವಡೋದರಾದಲ್ಲಿ ಶುಕ್ರವಾರ ತಡ ರಾತ್ರಿ ಭೇಟಿಯಾಗಿ ಗೌಪ್ಯ ಸಭೆ ನಡೆಸಿದ್ದಾರೆ ಎಂದು … Continued

ಶಿವಸೇನಾ ಬಂಡಾಯ ಶಾಸಕರಿಂದ ಹೊಸಗುಂಪು ರಚನೆ, ಬಾಳಾಸಾಹೇಬ್ ಹೆಸರು ದುರ್ಬಳಕೆ ವಿರುದ್ಧ ಚುನಾವಣಾ ಆಯೋಗದ ಕದ ತಟ್ಟಿದ ಉದ್ಧವ್

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಸಚಿವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಾಳಯವು ‘ಶಿವಸೇನಾ ಬಾಳಾಸಾಹೇಬ್’ ಎಂಬ ಹೆಸರಿನ ಗುಂಪನ್ನು ರಚಿಸುವ ಚಿಂತನೆ ನಡೆಸಿದೆ. ಬಂಡಾಯ ಶಾಸಕ ದೀಪಕ್ ವಸಂತ್ ಕೇಸರ್ಕರ್ ಪ್ರಕಾರ, ಬಂಡಾಯ ಪಾಳಯದಿಂದ ಯಾರೂ ಶಿವಸೇನೆಯನ್ನು ತೊರೆಯುವುದಿಲ್ಲ ಮತ್ತು ಬೇರೆ ಯಾವುದೇ ಪಕ್ಷದೊಂದಿಗೆ ವಿಲೀನದ ವರದಿಗಳನ್ನು ಅವರು ನಿರಾಕರಿಸಿದರು. ಏತನ್ಮಧ್ಯೆ, ಮುಂಬೈನಲ್ಲಿ, … Continued

ಮಂತ್ರಿ ಡೆವಲಪರ್ಸ್‌ ನಿರ್ದೇಶಕ ಸುಶೀಲ್‌ ಮಂತ್ರಿ ಬಂಧಿಸಿದ ಇಡಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆಕ್ಟ್ (PMLA), 2002 ರ ಅಡಿಯಲ್ಲಿ ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸುಶೀಲ್‌ ಪಾಂಡುರಂಗ ಮಂತ್ರಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ರಾತ್ರಿ ಬಂಧಿಸಿದೆ. ಗ್ರಾಹಕರಿಗೆ ವಂಚನೆ, ಹಣಕಾಸು ಸಂಸ್ಥೆಗಳಿಗೆ ಮೋಸ ಹಾಗೂ ಹಣದ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸುಶೀಲ್‌ ಮಂತ್ರಿ ಅವರಿಗೆ … Continued

ಬಂಧಿತ ಐಎಎಸ್ ಅಧಿಕಾರಿಯ ಮಗ ಗುಂಡು ತಗುಲಿ ಸಾವು, ಆತ್ಮಹತ್ಯೆ ಎಂದ ಪೊಲೀಸರು, ಇದು ದುಷ್ಕೃತ್ಯ ಎಂದ ಕುಟುಂಬ

ಚಂಡೀಗಡ: ಪ್ರಸ್ತುತ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಸಂಜಯ್ ಪೊಪ್ಲಿ ಅವರ 27 ವರ್ಷದ ಮಗ ಶನಿವಾರ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಕುಟುಂಬವು ಇದನ್ನು ದುಷ್ಕೃತ್ಯವನ್ನು ಆರೋಪಿಸಿದೆ. ಪಂಜಾಬ್ ವಿಜಿಲೆನ್ಸ್ ಬ್ಯೂರೋ ಈ ವಾರದ ಆರಂಭದಲ್ಲಿ ನವಾನ್‌ಶಹರ್‌ನಲ್ಲಿ ಒಳಚರಂಡಿ ಪೈಪ್‌ಲೈನ್ ಹಾಕಲು ಟೆಂಡರ್‌ಗಳನ್ನು ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ … Continued

ಐತಿಹಾಸಿಕ ಬಂದೂಕು ನಿಯಂತ್ರಣ ಕಾನೂನಿಗೆ ಸಹಿ ಹಾಕಿದ ಅಮೆರಿಕ ಅಧ್ಯಕ್‌ ಜೋ ಬೈಡನ್‌

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಶನಿವಾರ ದಶಕಗಳಲ್ಲಿ ಅತ್ಯಂತ ವ್ಯಾಪಕವಾದ ಬಂದೂಕು ಹಿಂಸಾಚಾರ ಮಸೂದೆಗೆ ಸಹಿ ಹಾಕಿದರು, ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ 19 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರ ಹತ್ಯಾಕಾಂಡ ಸೇರಿದಂತೆ ಇತ್ತೀಚಿನ ಸರಣಿಯ ಸಾಮೂಹಿಕ ಗುಂಡಿನ ದಾಳಿ ನಂತರ ಈ ಮಸೂದೆ ಬಂದಿದೆ. ಜೀವಗಳನ್ನು ಉಳಿಸಲಾಗುವುದು” ಎಂದು ಅವರು ಶ್ವೇತಭವನದಲ್ಲಿ ಹೇಳಿದರು. … Continued

ಮಹಾರಾಷ್ಟ್ರದಲ್ಲಿ ಬಿಕ್ಕಟ್ಟು : ನಿರ್ಧಾರ ತೆಗೆದುಕೊಳ್ಳಲು ಉದ್ಧವ್‌ ಠಾಕ್ರೆಗೆ ಸಂಪೂರ್ಣ ಅಧಿಕಾರ ನೀಡಿದ ಶಿವಸೇನೆ ರಾಷ್ಟ್ರೀಯ ಕಾರ್ಯಕಾರಿಣಿ, 6 ನಿರ್ಣಯ ಅಂಗೀಕಾರ

ಮುಂಬೈ: ಹಿರಿಯ ನಾಯಕ  ಹಾಗೂ ಸಚಿವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯದ ನಂತರ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಮಧ್ಯೆ ನಡೆದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರು ನಿರ್ಣಯಗಳನ್ನು ಅಂಗೀಕರಿಸಿದೆ. ಒಂದು ನಿರ್ಣಯವು ಬಂಡಾಯ ಶಿಬಿರವನ್ನು ಬಾಳಾಸಾಹೇಬ್ ಅವರ ಹೆಸರನ್ನು ‘ದುರುಪಯೋಗ’ಪಡಿಸಿಕೊಳ್ಳುವುದನ್ನು ನಿಲ್ಲಿಸಲು ಸೂಚಿಸಿದೆ ಮತ್ತು ಇನ್ನೊಂದು ಶಿಂಧೆಯವರ ಬಂಡಾಯದ … Continued

2002ರ ಗಲಭೆ ಪ್ರಕಣದ ಸುಪ್ರೀಂಕೋರ್ಟಿನ ತೀರ್ಪಿನ ನಂತರ ಹೋರಾಟಗಾರ್ತಿ ತೀಸ್ತಾ ಸೆತಲ್ವಾಡ್ ಬಂಧನ

ಮುಂಬೈ: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತಂಡ ಶನಿವಾರ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಅವರನ್ನು ಬಂಧಿಸಿದೆ. ಆಕೆಯನ್ನು ಅಹಮದಾಬಾದ್‌ಗೆ ಕರೆದೊಯ್ಯಲಾಗುತ್ತಿದೆ. ಎಫ್‌ಐಆರ್ ಪ್ರಕಾರ, ಗುಜರಾತ್ ಗಲಭೆಯ ಬಗ್ಗೆ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಕಾರ್ಯಕರ್ತೆ ತೀಸ್ತಾ ಮತ್ತು ಇಬ್ಬರು ಮಾಜಿ ಐಪಿಎಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಗುಜರಾತ್ ಪೊಲೀಸರು … Continued

ಧಾರವಾಡ: ಜೆಎಸ್‌ಎಸ್‌ನಲ್ಲಿ ಇಗ್ನೋ ಕೋರ್ಸುಗಳಿಗೆ ಪ್ರವೇಶ ದಿನಾಂಕ ವಿಸ್ತರಣೆ

ಧಾರವಾಡ: ಇಂಧಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) ದೂರ ಶಿಕ್ಷಣದ ಕೋರ್ಸ್‌ಗಳಿಗೆ ಜುಲೈ ೨೦೨೨ ನೇ ಸಾಲಿಗೆ ಪ್ರವೇಶ ಪ್ರಾರಂಭವಾಗಿದ್ದು, ಪ್ರವೇಶಕ್ಕಾಗಿ ಧಾರವಾಡ ಜೆ.ಎಸ್.ಎಸ್. ಕಾಲೇಜಿನಲ್ಲಿರುವ ಇಗ್ನೋದ ಧಾರವಾಡ ಅಧ್ಯಯನ ಕೇಂದ್ರದಿಂದ ಮಾಹಿತಿ ಪಡೆಯಬಹುದು. ಇಗ್ನೋ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ, ಎಂಬಿಎ, ಎಂಸಿಎ, ಎಂ.ಕಾಂ, ಎಮ್.ಎ.(ಇಂಗ್ಲೀಷ್) ಎಮ್.ಎ.(ಇತಿಹಾಸ), ಎಮ್.ಎ.(ಅರ್ಥಶಾಸ್ತ್ರ) ಮುಂತಾದ ಸ್ನಾತಕೋತ್ತರ ಕೋರ್ಸಗಳು ಬಿಎ, ಬಿ.ಕಾಂ, … Continued

ಕುಮಟಾ: ಪ್ರವಾಸಕ್ಕೆ ಬಂದು ಈಜಲು ತೆರಳಿದ ನಾಲ್ವರು ಸಮುದ್ರ ಪಾಲು; ಇಬ್ಬರ ಶವ ಪತ್ತೆ

ಕುಮಟಾ; ಪ್ರವಾಸಕ್ಕೆ ಬಂದು ಸಮುದ್ರಕ್ಕಿಳಿದ ಇಬ್ಬರು ವಿದ್ಯಾರ್ಥಿಗಳು ಜಲ ಸಮಾಧಿಯಾಗಿ, ಮತ್ತಿಬ್ಬರು ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಗಾಲ್ ನಲ್ಲಿ ನಡೆದಿದೆ. ವಿದ್ಯಾರ್ಥಿಗಳ ತಂಡ ಶನಿವಾರ ರೆಸಾರ್ಟಿಗೆ ಬಂದಿದ್ದರು. ಬೆಂಗಳೂರಿನ ಸುರೇಶ ಸಿ.ಎ ಫೌಂಡೇಶನ್‌ ಸಂಸ್ಥೆಯಿಂದ ೮೭ ಜನರು ಉತ್ತರಕನ್ನಡ ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದ ವೇಳೆ ಜಿಲ್ಲೆಯ ಕುಮಟಾದ ಬಾಡದ ಅರಬ್ಬಿ … Continued