ಭಾರತೀಯ ಪಿಎಸ್‌ಯುಗಳ ರೂವಾರಿ, ದಂತಕಥೆ ವಿ. ಕೃಷ್ಣಮೂರ್ತಿ ನಿಧನ

ಚೆನ್ನೈ: ಬಿಎಚ್‌ಇಎಲ್, ಮಾರುತಿ ಉದ್ಯೋಗ್, ಎಸ್‌ಎಐಎಲ್ (SAIL) ಮತ್ತು ಗೇಲ್ (ಇಂಡಿಯಾ) ನಂತಹ ಹಲವಾರು ಭಾರತೀಯ ಕಾರ್ಪೊರೇಟ್ ಸಂಸ್ಥೆಗಳ ಟರ್ನ್‌ರೌಂಡ್ ಮ್ಯಾನ್ ಎಂದು ಪರಿಗಣಿಸಲ್ಪಟ್ಟಿರುವ ವೆಂಕಟರಮಣ ಕೃಷ್ಣಮೂರ್ತಿ (97 ವರ್ಷ) ಭಾನುವಾರ ನಿಧನರಾದರು. ಕೃಷ್ಣಮೂರ್ತಿ ಅವರು ಚೆನ್ನೈನಲ್ಲಿರುವ ಅವರ ಮನೆಯಲ್ಲಿ ನಿಧನರಾದರು ಎಂದು ಅವರ ಮಾಜಿ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ. ಅವರ ಅಂತಿಮ ಸಂಸ್ಕಾರ ಸೋಮವಾರ ನಡೆಯಲಿದೆ. … Continued

ತೀಸ್ತಾ ಸೆತಲ್ವಾಡ್, ಮಾಜಿ ಮಾಜಿ ಐಪಿಎಸ್ ಅಧಿಕಾರಿ ಶ್ರೀಕುಮಾರ್ ಅವರನ್ನು ಜುಲೈ 1ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್‌

ಅಹಮದಾಬಾದ್‌: ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆತಲ್ವಾಡ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಆರ್ ಬಿ ಶ್ರೀಕುಮಾರ್ ಅವರನ್ನು ಜುಲೈ 1ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಗುಜರಾತ್ ಪೊಲೀಸರು ಕೃತ್ರಿಮ ಸಾಕ್ಷ್ಯ, ನಕಲಿ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಅವರನ್ನು ಬಂಧಿಸಿದ್ದರು. ಸೆತಲ್ವಾಡ್ ಮತ್ತು ಶ್ರೀಕುಮಾರ್ ಅವರನ್ನು ಜುಲೈ 2 ರಂದು ಅಹಮದಾಬಾದ್ ನ್ಯಾಯಾಲಯಕ್ಕೆ … Continued

ಈಗ ಸುಪ್ರೀಂಕೋರ್ಟ್‌ ಮುಂದೆ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕದನ : ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಏಕನಾಥ್ ಶಿಂಧೆ ಬಣ

ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಶಿವಸೇನೆ ಬಂಡಾಯ ಶಾಸಕರು ಶನಿವಾರ ತಮ್ಮ ವಿರುದ್ಧ ಶಿವಸೇನೆ ತೆಗೆದುಕೊಂಡ ನಿರ್ಧಾರಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಏಕನಾಥ್‌ ಶಿಂಧೆ ಬಣ ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳಿಂದಾಗಿ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಶಿವಸೇನಾ ಶಾಸಕಾಂಗ ಪಕ್ಷದ ನಾಯಕರಾಗಿ ಅಜಯ್ ಚೌಧರಿ ನೇಮಕವನ್ನು ಪ್ರಶ್ನಿಸಿ ಒಂದು … Continued

ಕಥೆ ಹೆಣೆದ’ ಆರೋಪದ ಮೇಲೆ ನಿವೃತ್ತ ಐಪಿಎಸ್ ಅಧಿಕಾರಿ ಶ್ರೀಕುಮಾರ್ ಬಂಧನ, ನನ್ನ ಪ್ರಕರಣದಲ್ಲೂ ಹೀಗೆಯೇ ಮಾಡಿದ್ದಾರೆ: ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್

ನವದೆಹಲಿ: ಮಾಜಿ ಐಪಿಎಸ್‌ ಅಧಿಕಾರಿ ಆರ್‌.ಬಿ. ಶ್ರೀಕುಮಾರ್‌ ಅವರನ್ನು ಶನಿವಾರ ಗುಜರಾತ್‌ ಪೊಲೀಸರು ಬಂಧಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಇಸ್ರೊದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರು, ನಿವೃತ್ತ ಪೊಲೀಸ್‌ ಅಧಿಕಾರಿಯು ‘ಕಥೆಗಳನ್ನು ಸೃಷ್ಟಿಸಿ ಸಂಚಲನ ಮೂಡಿಸಲು ಯತ್ನಿಸಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ. 1994 ರ ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಅವರು ನನ್ನ ವಿಷಯದಲ್ಲಿಯೂ ಹೀಗೆ … Continued

ಮಂಗಳೂರು: ಮುಳುಗಿದ ಸರಕು ಸಾಗಣೆ ಹಡಗಿನಿಂದ ತೈಲ ಸೋರಿಕೆ ಸಾಧ್ಯತೆ, ಮುನ್ನೆಚ್ಚರಿಕೆಯಾಗಿ ಕೋಸ್ಟ್ ಗಾರ್ಡ್‌ನಿಂದ ನಿಗಾ

ಮಂಗಳೂರು: ನವ ಮಂಗಳೂರಿನ ಎಂವಿ ಪ್ರಿನ್ಸೆಸ್ ಮಿರಾಲ್ ಎಂಬ ಮುಳುಗಿದ ವ್ಯಾಪಾರಿ ಹಡಗಿನಿಂದ ತೈಲ ಸೋರಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ಪರಿವೀಕ್ಷಣೆ ಮುಂದುವರೆಸಿದೆ. ಎರಡು ದಿನಗಳ ಹಿಂದೆ ಹಡಗು ಮುಳುಗಿತ್ತು. ಜೂನ್ 21 ರಿಂದ ಮಾಲಿನ್ಯದ ಮುನ್ನೆಚ್ಚರಿಕೆ ಕ್ರಮವಾಗಿ ಹಡಗಿನ ಸುತ್ತಲಿನ ಪ್ರದೇಶದಲ್ಲಿ ಮತ್ತು ಕಡಲತೀರದ ಕೋಸ್ಟ್ ಗಾರ್ಡ್ ವಿಮಾನಗಳು ಮತ್ತು ಹಡಗುಗಳಿಂದ … Continued

16 ಬಂಡಾಯ ಶಾಸಕರ ವಿರುದ್ಧ ಶಿವಸೇನಾ ಕ್ರಮ ಆರಂಭಿಸಿದ ಮಧ್ಯೆಯೇ ಏಕನಾಥ ಶಿಂಧೆ ಪಾಳಯ ಸೇರಿದ ಮತ್ತೊಬ್ಬ ಸಚಿವ…!

ಮುಂಬೈ: ಶಿವಸೇನೆ ನಾಯಕತ್ವಕ್ಕೆ ಮತ್ತೊಂದು ಹಿನ್ನಡೆಯಾಗಿ ಮತ್ತೊಬ್ಬ ಸಚಿವರು ಭಾನುವಾರ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಾಳಯಕ್ಕೆ ಸೇರಿದ್ದಾರೆ. ಕಳೆದ ನಾಲ್ಕು ದಿನಗಳಿಂದಐಷಾರಾಮಿ ಹೋಟೆಲ್‌ನಲ್ಲಿ ಬಂಡಾಯ ಶಾಸಕರು ಬೀಡುಬಿಟ್ಟಿರುವ ಗುವಾಹಟಿಗೆ ಬಂದಿಳಿದ ಉದಯ್ ಸಮಂತ್ ಅವರು, ಉದ್ಧವ್ ಠಾಕ್ರೆ ಗುಂಪನ್ನು ತೊರೆದ ಒಂಬತ್ತನೇ ಸಚಿವರಾಗಿದ್ದಾರೆ. ಈ ಮೊದಲು ಎಂಟು ಸಚಿವರು ಉದ್ಧವ್‌ ಠಾಕ್ರೆ ಗುಂಪನ್ನು ತೊರೆದಿದ್ದಾರೆ. … Continued

ಧಾರವಾಡ: ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ನಲ್ಲಿ “ಮ್ಯಾಂಗೋ ಮೇಳ

ಧಾರವಾಡ: ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‌ನಲ್ಲಿ “ಮ್ಯಾಂಗೋ ಮೇಳ” ಆಯೋಜಿಸಲಾಗಿತ್ತು. ಮಕ್ಕಳು ಮಾವಿನ ಹಣ್ಣಿನಿಂದ ತಯಾರಿಸಿದ ಹಲವಾರು ತಿಂಡಿ ತಿನಿಸುಗಳನ್ನು ತಯಾರಿಸಿ ತಂದಿದ್ದರು. ೭ನೇ ತರಗತಿಯ ೨೦೦ಕ್ಕೂ ಹೆಚ್ಚು ಮಕ್ಕಳು ಈ ಮೇಳದಲ್ಲಿ ಭಾಗವಹಿಸಿ ಮಾವಿನ ಹಣ್ಣಿನ ಪಾನೀಯ, ಬರ್ಫಿ, ಕೇಕ್, ಉಪ್ಪಿನಕಾಯಿ, ಚಟ್ನಿ, ಚಿತ್ರನ್ನ, ಹಲ್ವ, ಗೊಜ್ಜು, ಜಾಮ್ ಹೀಗೆ ಹತ್ತು ಹಲವಾರು … Continued

ಅಪ್ರಾಪ್ತ ಪತ್ನಿ ಮೇಲೆ, ಪತಿ-ಸ್ನೇಹಿತರಿಂದ ಗ್ಯಾಂಗ್‌ ರೇಪ್

ಚಿತ್ರದುರ್ಗ: ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಕುರಿತು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿದೆ. ವರ್ಷದ ಹಿಂದೆ ಬಾಲಕಿಯನ್ನು ಬೆದರಿಸಿ ಬಲವಂತವಾಗಿ ಮದುವೆಯಾಗಿದ್ದ ಯುವಕ ಹಾಗೂ ಮೂವರು ಸ್ನೇಹಿತರು ಜೂನ್ 7ರಂದು ನಗರದ ಹೊರವಲಯಕ್ಕೆ ಬಾಲಕಿಯನ್ನು ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ನಂತರ ಈ ಕೃತ್ಯದ ಬಗ್ಗೆ ದೂರು … Continued

ಮಹಾರಾಷ್ಟ್ರ ಬಿಕ್ಕಟ್ಟು: ಬೆದರಿಕೆ ನಡುವೆ 15 ಬಂಡಾಯ ಸೇನಾ ಶಾಸಕರಿಗೆ Y+ ಭದ್ರತೆ ನೀಡಿದ ಕೇಂದ್ರ

ಮುಂಬೈ: ಶಿವಸೇನೆ ಕಾರ್ಯಕರ್ತರು ಶಿಂಧೆ ಪಾಳಯದಲ್ಲಿರುವ ಸೇನಾ ಶಾಸಕರ ಕಚೇರಿಗಳು ಮತ್ತು ಆಸ್ತಿಗಳನ್ನು ಧ್ವಂಸಗೊಳಿಸಿರುವ ವರದಿಗಳ ನಡುವೆ ಕೇಂದ್ರವು ಭಾನುವಾರ 15 ಬಂಡಾಯ ಶಿವಸೇನೆ ಶಾಸಕರಿಗೆ ‘ವೈ ಪ್ಲಸ್’ ಭದ್ರತೆ ನೀಡಿದೆ. ಆದರೆ, ಬಂಡಾಯ ನಾಯಕ ಏಕನಾಥ್ ಶಿಂಧೆ ಅವರನ್ನು ಭದ್ರತಾ ಕವಚ ಪಟ್ಟಿಯಲ್ಲಿ ಸೇರಿಸಿಲ್ಲ. ‘ವೈ’ ವರ್ಗದ ಭದ್ರತೆಯು ಎಂಟು ಸಿಬ್ಬಂದಿಯನ್ನು ಒಳಗೊಂಡಿರುತ್ತದೆ, ಇದರಲ್ಲಿ … Continued