ಕಾಮನ್‌ವೆಲ್ತ್ ಗೇಮ್ಸ್‌- 2022: ಪುರುಷರ ವೇಟ್‌ಲಿಫ್ಟಿಂಗ್‌ 67 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಜೆರೆಮಿ ಲಾಲ್ರಿನ್ನುಂಗಾ

2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಪುರುಷರ 67 ಕೆಜಿ ವಿಭಾಗದಲ್ಲಿ ಜೆರೆಮಿ ಲಾಲ್ರಿನ್ನುಂಗಾ ಅವರು ಭಾರತಕ್ಕೆ ಎರಡನೇ ಚಿನ್ನದ ಪದಕ ತಂದುಕೊಟ್ಟರು. ಏಸ್ ಲಿಫ್ಟರ್ ಮೀರಾಬಾಯಿ ಚಾನು ಅವರು ಶನಿವಾರ ತನ್ನ ಭರವಸೆಯನ್ನು ಉಳಿಸಿಕೊಂಡು ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದರು. ಜೆರೆಮಿ ಸ್ನ್ಯಾಚ್ ಈವೆಂಟ್‌ನಲ್ಲಿ 140 ಕೆಜಿ ಎತ್ತುವ ಮೂಲಕ ಹೊಸ ಕಾಮನ್‌ವೆಲ್ತ್ … Continued

ಶಿರಸಿ: ಮನ್ ಕಿ ಬಾತ್‌ನಲ್ಲಿ ತಾರಗೋಡದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ

ಕಾರವಾರ: ಪ್ರಧಾನಿ ನರೇಂದ್ರ ಮೋದಿ ನಡೆಸಿದ 91ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಾರಗೋಡ ಗ್ರಾಮದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರನ್ನು ಶ್ಲಾಘಿಸಿದ್ದಾರೆ. ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಯುರ್ವೇದಿಕ್ ಔಷಧಿಗಳ ಮಹತ್ವ, ಜೇನು ಕೃಷಿ, ಜಾತ್ರೆ- ಸಂಸ್ಕೃತಿಗಳ ಬಗ್ಗೆ ಮಾತನಾಡಿರುವ … Continued

ಐಸಿಸ್ ಉಗ್ರರ ಜೊತೆ ಸಂಪರ್ಕ : ಕರ್ನಾಟಕದಲ್ಲೂ ಎನ್‌ಐಎ ದಾಳಿ, ಭಟ್ಕಳದಲ್ಲಿ ಇಬ್ಬರು, ತುಮಕೂರಿನಲ್ಲಿ ಓರ್ವ ವಶಕ್ಕೆ

ಕಾರವಾರ/ನವದೆಹಲಿ: ಐಎಸ್‍ಐಎಸ್ ನಂಟು ಹೊಂದಿರುವ ಶಂಕೆ ಮೇಲೆ ಎನ್ಐಎ ತಂಡವು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದೆ. ಹಾಗೂ ತುಮಕೂರಿನಲ್ಲಿ ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಭಟ್ಕಳದಲ್ಲಿ ಬೆಳ್ಳಂಬೆಳಗ್ಗೆ 4 ಗಂಟೆಗೆ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಎನ್ಐಎ ದಾಳಿ ನಡೆಸಿದೆ. ಐಸಿಸ್​ ಉಗ್ರ ಸಂಘಟನೆ ಜತೆ ನಂಟಿನ … Continued

ಇನ್ಸ್ಟಂಟ್‌ ಕರ್ಮ ಫಾಲೋವ್ಸ್‌..: ಕತ್ತೆಗೆ ಬೇಕಾಬಿಟ್ಟಿ ಒದ್ದು ಹಿಂಸೆ ಮಾಡಿದ ವ್ಯಕ್ತಿಗೆ ತಕ್ಷಣವೇ ಸಿಕ್ತು ಕುಕರ್ಮದ ಫಲ | ವೀಕ್ಷಿಸಿ

“ನೀವು ಬಿತ್ತಿದಂತೆ ಕೊಯ್ಯುತ್ತೀರಿ” ಎಂಬ ನಾಣ್ಣುಡಿಯನ್ನು ಕೇಳಿರಬಹುದು. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೊವೊಂದರಲ್ಲಿ ಅದು ಸಂಪೂರ್ಣವಾಗಿ ಸಾಬೀತಾಗಿದೆ. ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಸಹಾಯಕ ಪುಟ್ಟ ಕತ್ತೆಯನ್ನು ವ್ಯಕ್ತಿಯೊಬ್ಬ ಮನಬಂದಂತೆ ಥಳಿಸುತ್ತಿರುವ ದೃಶ್ಯ ಕಂಡು ಬರುತ್ತದೆ. ಈ ವೀಡಿಯೊವನ್ನು ಬಾಲಿವುಡ್ ನಟ ಶಕ್ತಿ ಕಪೂರ್ ಅವರು Instagram ನಲ್ಲಿ “ಜೈಸಿ ಕರ್ನಿ ವೈಸಿ … Continued

ಅಪಾರ ಹಣದೊಂದಿಗೆ ಪಶ್ಚಿಮ ಬಂಗಾಳದಲ್ಲಿ ಸಿಕ್ಕಿಬಿದ್ದ ಮೂವರು ಜಾರ್ಖಂಡ್ ಶಾಸಕರನ್ನು ಅಮಾನತು ಮಾಡಿದ ಕಾಂಗ್ರೆಸ್

ನವದೆಹಲಿ: ನಿನ್ನೆ ಬಂಗಾಳದಲ್ಲಿ ನಗದು ರಾಶಿಯೊಂದಿಗೆ ಬಂಧನಕ್ಕೊಳಗಾದ ಮೂವರು ಜಾರ್ಖಂಡ್ ಕಾಂಗ್ರೆಸ್ ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ಪಕ್ಷ ಇಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದೆ. ಜಾರ್ಖಂಡ್‌ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಉಸ್ತುವಾರಿ ಅವಿನಾಶ್ ಪಾಂಡೆ ಅವರು, “ನಿನ್ನೆಯಷ್ಟೇ ನಗದು ಹಣದೊಂದಿಗೆ ಬಂಧನಕ್ಕೊಳಗಾದ ಮೂವರು ಶಾಸಕರನ್ನು ತಕ್ಷಣದಿಂದ ಜಾರಿಗೆ … Continued

ವಿಚಿತ್ರ ಚಟ: ದುರ್ಗಾಪುರದಲ್ಲಿ ಕಾಂಡೋಮ್‌ ಖರೀದಿ ದಿಢೀರ್‌ ಹೆಚ್ಚಳ, ನಶೆ ಏರಿಸಿಕೊಳ್ಳಲು‌ ಕಾಂಡೋಮ್ ಬಳಕೆ..!

ದುರ್ಗಾಪುರ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಸುವಾಸನೆಯ ಕಾಂಡೋಮ್‌ಗಳ ಮಾರಾಟ ಈಗ ತೀವ್ರವಾಗಿ ಹೆಚ್ಚಿದ್ದು, ಇದು ಸ್ಥಳೀಯ ಅಂಗಡಿಕಾರರನ್ನು ಗಾಬರಿಪಡಿಸಿದೆ. ದುರ್ಗಾಪುರ ಜಿಲ್ಲೆಯ ಕೆಲವು ಯುವಕರು ಇದನ್ನು ಮಾದಕ ವಸ್ತುವಾಗಿ ಬಳಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ನ್ಯೂಸ್ 18 ವರದಿಯ ಪ್ರಕಾರ, ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಕೆಲವು ವಿದ್ಯಾರ್ಥಿಗಳು ಕಾಂಡೋಮ್ ಬಳಸುವ ಚಟಕ್ಕೆ ಬಿದ್ದಿದ್ದಾರೆ. … Continued

ಬೆಂಗಳೂರಿಗೆ ಬಂದಿದ್ದ ಇಥಿಯೋಪಿಯಾ ಪ್ರಜೆಗೆ ಬಂದಿದ್ದು ಮಂಕಿಪಾಕ್ಸ್ ಅಲ್ಲ: ಆರೋಗ್ಯ ಸಚಿವ ಡಾ.ಸುಧಾಕರ

ಬೆಂಗಳೂರು : ಈ ತಿಂಗಳ ಆರಂಭದಲ್ಲಿ ಬೆಂಗಳೂರಿಗೆ ಬಂದಿದ್ದ ಇಥಿಯೋಪಿಯಾ ಪ್ರಜೆಗೆ ಮಂಕಿಪಾಕ್ಸ್ ರೋಗಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಟೆಸ್ಟ್ ಬಳಿಕ ಆ ವ್ಯಕ್ತಿಗೆ ಇರುವುದು ಮಂಕಿಪಾಕ್ಸ್‌ ಅಲ್ಲ, ಬದಲಿಗೆ ಚಿಕನ್ ಫಾಕ್ಸ್ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿಗೆ ಚಿಕಿತ್ಸೆಗೆಂದು ಬಂದಿದ್ದ ಇಥಿಯೋಪಿಯಾದ 55 … Continued

ರಾಜ್ಯದ 95 ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಿ ಆದೇಶ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ 95 ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿ ಆದೇಶ ನೀಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ರಾಜ್ಯದ 100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳಾಗಿ ಉನ್ನತೀಕರಿಸಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆ ಪರಿಶೀಲಿಸಿದ ಶಾಲಾ ಶಿಕ್ಷಣ … Continued

ಗೃಹ ಸಚಿವ ಆರಗ ಮನೆಗೆ ಎಬಿವಿಪಿ ಮುತ್ತಿಗೆ: ಪಿಎಸ್‌ಐ, ಹೆಡ್ ಕಾನ್‌ಸ್ಟೆಬಲ್ ಸಸ್ಪೆಂಡ್‌

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸರ್ಕಾರಿ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಸಿ.ನಗರ ಠಾಣೆ ಪಿಎಸ್‌ಐ ರಾಜೇಸಾಬ್ ಹಾಗೂ ಹೆಡ್ ಕಾನ್‌ಸ್ಟೆಬಲ್ ಶ್ರೀನಿವಾಸ್ ಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಜಯಮಹಲ್ ಬಳಿಯ ಆರಗ ಜ್ಞಾನೇಂದ್ರ ಅವರ ಸರ್ಕಾರಿ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಶನಿವಾರ ಬೆಳಿಗ್ಗೆ ಮುತ್ತಿಗೆ ಹಾಕಿದ್ದರು. … Continued

ಕಾಮನ್‌ವೆಲ್ತ್ ಗೇಮ್ಸ್ 2022 : ಮಹಿಳೆಯರ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಬಿಂದ್ಯಾರಾಣಿ ದೇವಿ

ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಮಹಿಳೆಯರ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕವನ್ನು ಗೆದ್ದು ಶನಿವಾರ ಭಾರತದ ಪದಕದ ಮೊತ್ತವನ್ನು ನಾಲ್ಕಕ್ಕೆ ಕೊಂಡೊಯ್ದರು. 114 ಕೆಜಿ ತೂಕದ ತನ್ನ ಎರಡನೇ ಕ್ಲೀನ್ ಮತ್ತು ಜರ್ಕ್ ಪ್ರಯತ್ನದಲ್ಲಿ ವಿಫಲವಾದಾಗ ಅವರು ಕಂಚಿಗೆ ಸಿದ್ಧರಾದರು. ಆದರೆ ಅವರು ತನ್ನ ಅಂತಿಮ ಲಿಫ್ಟ್‌ನಲ್ಲಿ 116 ಕೆ.ಜಿ … Continued