ಶಿವಸೇನಾ ನಾಯಕ ಸಂಜಯ್ ರಾವತ್ ಮನೆ ಮೇಲೆ ಇ.ಡಿ ದಾಳಿ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಎರಡು ಬಾರಿ ಸಮನ್ಸ್ ನೀಡಿದ್ದರೂ ಹಾಜರಾಗದೇ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಭಾನುವಾರ ಶೋಧ ನಡೆಸಿದರು. ದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಅಧಿವೇಶನವನ್ನು ಉಲ್ಲೇಖಿಸಿ ಹಿಂದಿನ ಸಮನ್ಸ್‌ಗೆ ಹಾಜರಾಗದ ನಂತರ ಶಿವಸೇನಾ ನಾಯಕನನ್ನು ಜುಲೈ 27 … Continued

ಹಣ ಅಕ್ರಮ ವರ್ಗಾವಣೆ ಪ್ರಕರಣ: ಡಿಕೆಶಿ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಇ.ಡಿ ನ್ಯಾಯಾಲಯ

ನವದೆಹಲಿ : ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಇತರ ನಾಲ್ವರು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿಯ ಇ.ಡಿ. ನ್ಯಾಯಾಲಯ ತನ್ನ ಆದೇಶವನ್ನು ಕಾಯ್ದಿರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ವಾದ -ಪ್ರತಿವಾದ ಅಲಿಸಿರುವ ನ್ಯಾಯಪೀಠ ಆಗಸ್ಟ್‌ 2ರ ವರೆಗೆ ಆದೇಶ ಕಾಯ್ದಿರಿಸಿದೆ. ಆಗಸ್ಟ್‌ 2ರಂದು ಮಧ್ಯಾಹ್ಬ … Continued

34,000 ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಪುಣೆ ರಿಯಾಲ್ಟರ್‌ನಿಂದ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ವಶ

ನವದೆಹಲಿ: 34,614 ಕೋಟಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಮೂಲದ ಉದ್ಯಮಿ ಅವಿನಾಶ್ ಭೋನ್ಸಾಲೆ ಅವರ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಅನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಶನಿವಾರ ವಶಪಡಿಸಿಕೊಂಡಿದೆ. ಬೋನ್ಸಾಲೆ ಅವರ ಮನೆಯ ಆವರಣದಲ್ಲಿ ಶೋಧ ನಡೆಸಿದಾಗ ಅಧಿಕಾರಿಗಳು ಹೆಲಿಕಾಪ್ಟರ್ ಅನ್ನು ಪತ್ತೆ ಮಾಡಿದರು, ನಂತರ ಫೆಡರಲ್ ತನಿಖಾ ಸಂಸ್ಥೆ ಶನಿವಾರ ಅದನ್ನು … Continued

ಕರಾವಳಿ ಘಟನೆ ನೋವು ತಂದಿದೆ, ಇಸ್ರೇಲ್ ನಲ್ಲಿ ಬೆಳಗ್ಗೆ ಇಂಥ ಘಟನೆಯಾದರೆ ಸಂಜೆಗೇ ಗಲ್ಲಿಗೆ ಹಾಕ್ತಾರೆ: ಹೊರಟ್ಟಿ

ಹಾವೇರಿ: ರಾಜ್ಯದ ಕರಾವಳಿ ಭಾಗದಲ್ಲಿ ನಡೆದ ಹತ್ಯೆ ಘಟನೆ ಬಹಳ ನೋವು ತಂದಿದೆ. ಇಂತಹ ಕೃತ್ಯ ಮಾಡಿದವರಿಗೆ ಶಿಕ್ಷೆ ಆಗಿರುವುದು ಇವತ್ತಿನವರೆಗೂ ಗೊತ್ತಾಗಿಲ್ಲ. ಶಿಕ್ಷೆಯಾದರೆ ಮಾತ್ರ ಇಂತಹ ಘಟನೆಗಳು ಕಡಿಮೆಯಾಗುತ್ತವೆ. ಶಿಕ್ಷೆ ಆಗಿದ್ದನ್ನು ಜನರಿಗೆ ಗೊತ್ತು ಮಾಡಿಕೊಡಬೇಕು. ಹಾಗಾದರೆ ಮಾತ್ರ ಇದನ್ನು ತಡೆಯಬಹುದು ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಹಾವೇರಿಯಲ್ಲಿ … Continued

ಕಾಮನ್‌ವೆಲ್ತ್ ಗೇಮ್ಸ್ 2022: ವೇಟ್‌ಲಿಫ್ಟಿಂಗ್‌ನಲ್ಲಿ ಹೊಸ ದಾಖಲೆ ನಿರ್ಮಿಸಿ ಚಿನ್ನ ಗೆದ್ದ ಮೀರಾಬಾಯಿ ಚಾನು, ಭಾರತಕ್ಕೆ ಮೊದಲ ಬಂಗಾರ

ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತದ ಚಿನ್ನದ ಪದಕದ ಭರವಸೆಗಳಲ್ಲಿ ಒಬ್ಬರಾದ ಮೀರಾಬಾಯಿ ಚಾನು ಅವರು ಶನಿವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮಹಿಳೆಯರ 49 ಕೆಜಿ ವೇಟ್‌ಲಿಫ್ಟಿಂಗ್ ಈವೆಂಟ್‌ನಲ್ಲಿ ಮೊದಲ ಸ್ಥಾನ ಗಳಿಸಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು. ಮೀರಾಬಾಯಿ ಅವರು 201 ಕೆಜಿ ಎತ್ತುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನ ವೇಟ್‌ಲಿಫ್ಟಿಂಗ್ ದಾಖಲೆಯನ್ನು ಮುರಿದರು. ಗಮನಾರ್ಹವಾಗಿ, … Continued

ಜಿಂಬಾವ್ವೆ ವಿರುದ್ಧದ ಏಕದಿನ ಸರಣಿಗೆ ಶಿಖರ್‌ ಧವನ್‌ ನಾಯಕ: ಹಿರಿಯರಿಗೆ ವಿಶ್ರಾಂತಿ, ಚಹಾರ್‌, ತ್ರಿಪಾಠಿಗೆ ಬುಲಾವ್‌

ಮುಂಬೈ : ವಿಂಡೀಸ್‌ ಪ್ರವಾಸದಿಂದ ಮರಳಿದ ಬಳಿಕ, ಭಾರತ ಕ್ರಿಕೆಟ್‌ ತಂಡವು ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಹರಾರೆಯಲ್ಲಿ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆ ಸಮಿತಿಯು ಭಾರತ ತಂಡವನ್ನು ಪ್ರಕಟಿಸಿದೆ. ವಿಂಡೀಸ್‌ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ್ದ ನಾಯಕ ಶಿಖರ್‌ ಧವನ್‌ಗೆ ಮತ್ತೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಜಿಂಬಾಬ್ವೆಯಲ್ಲಿಯೂ … Continued

ಬೆಂಗಳೂರಿನಲ್ಲಿ ಇಥಿಯೋಪಿಯದಿಂದ ಬಂದ ವ್ಯಕ್ತಿಯಲ್ಲಿ ಶಂಕಿತ ಮಂಕಿಪಾಕ್ಸ್‌ ಪತ್ತೆ

ಬೆಂಗಳೂರು: ಶಂಕಿತ ಮಂಕಿಪಾಕ್ಸ್ ಪ್ರಕರಣ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದೆ. ಮಂಕಿಪಾಕ್ಸ್ ಗುಣಲಕ್ಷಣಗಳಿರುವ ವಿದೇಶಿ ಪ್ರಜೆಯನ್ನು ಆರೋಗ್ಯ ಇಲಾಖೆ ಪತ್ತೆ ಮಾಡಿದೆ. ಆಫ್ರಿಕಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಗುಣಲಕ್ಷಣಗಳು ಪತ್ತೆಯಾಗಿರುವುದರಿಂದ ಶಂಕಿತ ರೋಗಿಯನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ನಿಗಾ ವಹಿಸಲಾಗಿದೆ. ಜುಲೈ 4ರಂದು ಇಥಿಯೋಪಿಯಾದಿಂದ ಬೆಂಗಳೂರಿಗೆ ಬಂದಿದ್ದ ಈ ವ್ಯಕ್ತಿಗೆ ಗುಣಲಕ್ಷಣಗಳು ಕಂಡು … Continued

ಧಾರವಾಡ: ಸಿಇಟಿ ಪರೀಕ್ಷೆಯಲ್ಲಿ ಜೆಎಸ್‌ಎಸ್‌- ಆರ್.ಎಸ್. ಹುಕ್ಕೇರಿಕರ ಪದವಿಪೂರ್ವ ಕಾಲೇಜ್‌ ವಿದ್ಯಾರ್ಥಿಗಳ ಉತ್ತಮ ಸಾಧನೆ

ಧಾರವಾಡ: ಧಾರವಾಡ ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಸಂಸ್ಥೆಯ ಆರ್.ಎಸ್. ಹುಕ್ಕೇರಿಕರ ಪದವಿ ಪೂರ್ವ ಮಹಾವಿದ್ಯಾಲಯದ 2021-22ರ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಿಇಟಿ–2022 ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಹೆಸರು: ರ್ಯಾಂಕ್‌ 1. ಸುಚೇತ ನಾಯಕ- ENG: 602 2. ಸೂರಜ- B.SC (AGRI) : 646, … Continued

ಒಡಿಶಾ ರಾಷ್ಟ್ರೀಯ ಉದ್ಯಾನವನದಲ್ಲಿ ತನ್ನ ಪ್ರದೇಶದ ವ್ಯಾಪ್ತಿ ಗುರುತಿಸುತ್ತಿರುವ ಅಪರೂಪದ ಕಪ್ಪು ಹುಲಿ | ವೀಕ್ಷಿಸಿ

ನವದೆಹಲಿ: ಒಡಿಶಾದ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ದೃಶ್ಯವೊಂದರಲ್ಲಿ ಕಪ್ಪು ಹುಲಿಯೊಂದು ತನ್ನ ಪ್ರದೇಶದ ಗಡಿಯನ್ನು ಗುರುತಿಸುತ್ತಿರುವುದು ಕಂಡುಬಂದಿದೆ. ಅಂತಾರಾಷ್ಟ್ರೀಯ ಹುಲಿಗಳ ದಿನದ ಸಂದರ್ಭದಲ್ಲಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ 15 ಸೆಕೆಂಡುಗಳ ಕ್ಲಿಪ್‌ನಲ್ಲಿ ಮರದ ಮೇಲೆ ಈ ಕಪ್ಪು ಹುಲಿ ಉಗುರಿನಿಂದ ಗೀರುತ್ತಿರುವುದು ಕಂಡುಬಂದಿದೆ. “ಅಂತಾರರಾಷ್ಟ್ರೀಯ ಹುಲಿಗಳ ದಿನದಂದು ತನ್ನ ಪ್ರದೇಶವನ್ನು ಗುರುತಿಸುವ ಅಪರೂಪದ ಮೆಲನಿಸ್ಟಿಕ್ … Continued

ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿ ಸಚಿವ ಆನಂದ ಸಿಂಗ್‌ ನೇಮಕ ಮಾಡಿದ್ದ ಆದೇಶ ಏಕಾಏಕಿ ರದ್ದು..!

ಬೆಂಗಳೂರು: ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆನಂದ್ ಸಿಂಗ್ ಅವರನ್ನು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಈಗ ಅದನ್ನು ರದ್ದುಪಡಿಸಿದೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆನಂದ್ ಸಿಂಗ್ ಅವರನ್ನು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ಅವರನ್ನು … Continued