ನಂಬಲಸಾಧ್ಯ ಸಾಹಸ.. : ಚಲಿಸುವ ಕಾರಿನಿಂದ ಮತ್ತೊಂದು ಕಾರಿನೊಳಗೆ ತೂರಿ ಮತ್ತದೇ ಚಲಿಸುವ ಕಾರಿನ ಮೇಲೆ ಹಾರುವ ರಷ್ಯಾದ ಸ್ಟಂಟ್‌ಮ್ಯಾನ್: ಈತ ಮಾನವ-ಬುಲೆಟ್ ಎಂದ ಇಂಟರ್ನೆಟ್‌ | ವೀಕ್ಷಿಸಿ

ರಷ್ಯಾದ ಸ್ಟಂಟ್‌ಮ್ಯಾನ್ ಒಬ್ಬರು “ಮಾನವ ಬುಲೆಟ್” ನಂತೆ ಕಾರಿನ ಮೂಲಕ ಒಳ ತೂರುವ ತಮ್ಮ ಇತ್ತೀಚಿನ ಸಾಹಸದಿಂದ ಇಂಟರ್ನೆಟ್ ಬೆರಗಾಗಿದೆ. ವೈರಲ್ ಹಾಗ್ ಹಂಚಿಕೊಂಡ ಈ ವೀಡಿಯೊವು ವಿಭಿನ್ನ ಕೋನಗಳಿಂದ ಸಾಹಸವನ್ನು ತೋರಿಸುತ್ತದೆ, ಎವ್ಗೆನಿ ಚೆಬೊಟರೆವ್ ಎಂಬವರು ಚಲಿಸುವ ಕಾರಿನಿಂದ ಬೀಳುವ ಮೊದಲು ಮತ್ತೊಂದು ವಾಹನದ ಮೂಲಕ ತೂರಿ ಹೊಗುತ್ತಾರೆ. ಅಲ್ಲದೆ ನಂತರ  ಈ ಮೊದಲು … Continued

ವಿಧಾನ ಪರಿಷತ್‌ ಉಪಚುನಾವಣೆ : ಬಾಬುರಾವ್ ಚಿಂಚನಸೂರ ಅವಿರೋಧ ಆಯ್ಕೆ

ಬೆಂಗಳೂರು : ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ಆಯ್ಕೆಯಾಗುವ ಒಂದು ಸ್ಥಾನದ ಉಪಚುನಾವಣೆಯಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ವಿಧಾನಪರಿಷತ್ ಸ್ಥಾನ ಹಿನ್ನೆಲೆಯಲ್ಲಿ ಈ ಸ್ಥಾನಕ್ಕೆ ಚುನಾವಣಾ ಆಯೋಗ ಚುನಾವಣೆ ನಡೆಸಿತ್ತು. ಆಡಳಿತಾರೂಢ ಬಿಜೆಪಿಯಿಂದ ಬಾಬುರಾವ್ ಚಿಂಚನಸೂರ ಮಾತ್ರ ಚುನಾವಣಾ ಕಣದಲ್ಲಿ ಇದ್ದಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ … Continued

ದಕ್ಷಿಣ ಕನ್ನಡದಲ್ಲಿ ನಾಳೆಯಿಂದ ಹೊಸ ನಿಯಮ: ದ್ವಿಚಕ್ರ ವಾಹನದಲ್ಲಿ ಹಿಂಬದಿ ಪುರುಷ ಸವಾರರಿಗೆ ನಿರ್ಬಂಧ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಯುವಕರ ಹತ್ಯೆ ಪ್ರಕರಣದ ನಂತರ ಈಗ ಜಿಲ್ಲೆಯಾದ್ಯಂತ ಅಹಿತಕರ ಘಟನೆ ನಿಯಂತ್ರಿಸುವ ಸಲುವಾಗಿ  ಶುಕ್ರವಾರದಿಂದ  ದ್ವಿಚಕ್ರ ವಾಹನದಲ್ಲಿ ಇಬ್ಬರು ಪುರುಷ ಸವಾರರಿಗೆ ಅವಕಾಶ ಇಲ್ಲ ಎಂದು ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ. ಮಂಗಳೂರಿನ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ … Continued

ಚಾತುರ್ಮಾಸದಲ್ಲಿ ಶಿಷ್ಯರಿಗೆ ಹಸಿರು ಪ್ರೀತಿ ಬಿತ್ತುತ್ತಿರುವ ಸ್ವರ್ಣವಲ್ಲೀ ಸ್ವಾಮೀಜಿ : ಶಿಷ್ಯರಿಗೆ ವೃಕ್ಷ ಮಂತ್ರಾಕ್ಷತೆ, ಈವರೆಗೆ 75 ಸಹಸ್ರಕ್ಕೂ ಅಧಿಕ ಸಸಿಗಳ ವಿತರಣೆ

ಶಿರಸಿ: ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣೆಗೆ ಕಂಕಣ ಕಟ್ಟಿಕೊಂಡ ಪರಿಸರ ಪ್ರಿಯ ಸ್ವಾಮೀಜಿ ಎಂದೇ ಹೆಸರಾದ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಸೋಂದಾ‌ ಸ್ವರ್ಣವಲ್ಲೀ‌ ಮಠಾಧೀಶರು‌ ಶಿಷ್ಯರಲ್ಲಿ ಪರಿಸರ ಜಾಗೃತಿ ಕಾರ್ಯ ಮಾಡುತ್ತಿದ್ದಾರೆ. ವನಸ್ಪತಿ ಗಿಡಗಳ‌ ಮಹತ್ವ, ಅವುಗಳ ಸಂರಕ್ಷಣೆಗೆ ಶಿಷ್ಯರು ಹಾಗೂ ಮಠದ ಭಕ್ತರಲ್ಲಿ ಮುತವರ್ಜಿ ವಹಿಸಲು ಸೂಚಿಸುತ್ತಿದ್ದಾರೆ. ಪವಿತ್ರ ಚಾತುರ್ಮಾಸ್ಯದ ಅವಧಿಯಲ್ಲಿ … Continued

ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಎಲ್ಲ ಪಕ್ಷಗಳು ತಯಾರಿ ಆರಂಭಿಸಿವೆ. ಈಗ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಇನ್ನಿತರ ಹಿರಿಯ ಮುಖಂಡರ ಸಮ್ಮುಖದಲ್ಲಿ ನಟ ಟೆನ್ನಿಸ್ … Continued

ಭಾರೀ ಮಳೆಯಿಂದಾಗಿ ಪ್ರವಾಹದಲ್ಲಿ ಸಿಲುಕಿಕೊಂಡ ಕಾಡಾನೆ | ವೀಕ್ಷಿಸಿ

ವೀಡಿಯೊವೊಂದರಲ್ಲಿ, ಕೇರಳದ ಭೀಕರ ಪ್ರವಾಹದಲ್ಲಿ ಕಾಡಾನೆಯೊಂದು ಸಿಲುಕಿಕೊಂಡಿರುವುದು ಕಂಡುಬಂದಿದೆ. ಪ್ರಸ್ತುತ ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ. ಪ್ರವಾಹದ ಪ್ರಕ್ಷುಬ್ಧ ನೀರಿನ ಮಧ್ಯದಿಂದ ಹೊರಬರಲು ಕಾಡಾನೆಯೊಂದು ಹೆಣಗಾಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. “ಕೇರಳದ ಅತಿರಪ್ಪಿಲ್ಲಿಯ ಚಲಕುಡಿ ನದಿಯ ಮಧ್ಯದಲ್ಲಿ ಮಂಗಳವಾರ ಕಾಡಾನೆ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದೆ. ಹಲವಾರು ಗಂಟೆಗಳ ಸುದೀರ್ಘ ಪ್ರಯತ್ನದ ನಂತರ, … Continued

ಸಿದ್ದಾಪುರ: ಆಗಸ್ಟ್‌ 6ರಂದು ʼಮಾಸದ ನೆನಪುಗಳುʼ ಕೃತಿ ಬಿಡುಗಡೆ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಪತ್ರಕರ್ತ ಗಂಗಾಧರ ಕೊಳಗಿ ಅವರ ಮಾಸದ ನೆನಪುಗಳು ಕೃತಿ ಬಿಡುಗಡೆ ಸಮಾರಂಭ ಆಗಸ್ಟ್‌ 6 ರಂದು, ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಸಿದ್ದಾಪುರದ ಲಯನ್ಸ್‌ ಬಾಲಭವನದಲ್ಲಿ ನಡೆಯಲಿದೆ. ಸಾಹಿತಿಗಳು ಹಾಗೂ ವಿಮರ್ಷಕರಾದ ಬೆಳಗಾವಿ ಡಾ.ಮೈತ್ರೇಯಿಣಿ ಗದಿಗೆಪ್ಪ ಗೌಡ ಅವರು ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಉತ್ತರ … Continued

ಯಾರದ್ದು ನಿಜವಾದ ಶಿವಸೇನೆ ಹೋರಾಟದಲ್ಲಿ ಉದ್ಧವ್‌ ಠಾಕ್ರೆ ಬಣಕ್ಕೆ ಸುಪ್ರೀಂ ಕೋರ್ಟ್ ರಿಲೀಫ್‌

ನವದೆಹಲಿ: ನಿಜವಾದ ಶಿವಸೇನೆ ಹೋರಾಟದಲ್ಲಿ ಉದ್ಧವ್ ಠಾಕ್ರೆ ಅವರಿಗೆ ರಿಲೀಫ್ ಸಿಕ್ಕಿದೆ. ತಮ್ಮ ಗುಂಪನ್ನು ನಿಜವಾದ ಶಿವಸೇನೆ ಗುಂಪು ಎಂದು ಗುರುತಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾಡಿರುವ ಮನವಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸುಪ್ರೀಂ ಕೋರ್ಟ್ ಇಂದು, ಗುರುವಾರ ಚುನಾವಣಾ ಆಯೋಗಕ್ಕೆ ಹೇಳಿದೆ. ಈ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಅಗತ್ಯವಿದೆಯೇ ಎಂಬ … Continued

ಟ್ರಕ್‌ ಡಿಕ್ಕಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸ್ಕೇಟಿಂಗ್ ಮೂಲಕ ತೆರಳುತ್ತಿದ್ದ ಕೇರಳ ಸ್ಕೇಟರ್‌ ಸಾವು

ಚಂಡೀಗಡ: ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಮೂಲಕ ಪ್ರಯಾಣಿಸುತ್ತಿದ್ದ ಸ್ಕೇಟರ್ ಒಬ್ಬರು ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದು ಸಾವಿಗೀಡಾದ ಅಹಿತಕರ ಘಟನೆ ನಡೆದಿದೆ. ಅಪಘಾತದ ವೇಳೆ 31 ವರ್ಷದ ಕೇರಳ ಯುವಕ ಅನಸ್ ತನ್ನ ಸ್ಕೇಟ್‌ ಬೋರ್ಡ್‌ನಲ್ಲಿದ್ದ ಎಂದು ಪಿಂಜೋರ್ ಪೊಲೀಸರು ತಿಳಿಸಿದ್ದಾರೆ. ಅಪಘಾತದ ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, … Continued

ಸುದೀರ್ಘ ನ್ಯಾಯಾಲಯದ ಹೋರಾಟದ ನಂತರ ಪಾಕ್‌ನಲ್ಲಿ 1200 ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯದ ಜೀರ್ಣೋದ್ಧಾರ

ಲಾಹೋರ್: ಸುದೀರ್ಘ ನ್ಯಾಯಾಲಯದ ಹೋರಾಟದ ನಂತರ ಅಕ್ರಮ ನಿವಾಸಿಗಳನ್ನು ಹೊರಹಾಕಿದ ನಂತರ ಪಾಕಿಸ್ತಾನದ ಲಾಹೋರ್ ನಗರದಲ್ಲಿ 1,200 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವನ್ನು ಪುನಃಸ್ಥಾಪಿಸಲಾಗುವುದು ಎಂದು ದೇಶದ ಅಲ್ಪಸಂಖ್ಯಾತರ ಪೂಜಾ ಸ್ಥಳಗಳ ಮೇಲ್ವಿಚಾರಣೆಯ ಫೆಡರಲ್ ಸಂಸ್ಥೆ ಬುಧವಾರ ತಿಳಿಸಿದೆ. ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಕಳೆದ ತಿಂಗಳು ಲಾಹೋರ್ ಪ್ರಸಿದ್ಧ ಅನಾರ್ಕಲಿ ಬಜಾರ್ ಬಳಿ … Continued