ಭಟ್ಕಳ: ಭೂ ಕುಸಿತದಿಂದ ನಾಲ್ವರು ಮೃತಪಟ್ಟ ಮುಟ್ಟಳ್ಳಿ ಭಾಗದಲ್ಲಿ ಮತ್ತೆ ಗುಡ್ಡ ಕುಸಿತ, ಹತ್ತಕ್ಕೂ ಅಧಿಕ ಕುಟುಂಬಗಳ ಸ್ಥಳಾಂತರ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಸಂಭವಿಸಿ ನಾಲ್ವರು ಮೃತಪಟ್ಟಿದ್ದ ಮುಟ್ಟಳ್ಳಿ ಭಾಗದಲ್ಲಿ ಕುಸಿತವಾಗಿದೆ ಎಂದು ವರದಿಯಾಗಿದ್ದು,ಆತಂಕಕ್ಕೆ ಕಾರಣವಾಗಿದೆ. ಆಗಸ್ಟ್‌ 2 ರಂದು ಬೆಳಗಿನ ಜಾವ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಕುಸಿದು ನಾಲ್ವರು ಸಾವಿಗೀಡಾಗಿದ್ದರು. ಈಗ ಅದೇ ಊರಿನಲ್ಲಿ ಗುಡ್ಡದ ಭಾಗ … Continued

ಸಿಎಂ ಬೊಮ್ಮಾಯಿಗೆ ಕೊರೊನಾ ಸೋಂಕು ದೃಢ : ದೆಹಲಿ ಪ್ರವಾಸ ರದ್ದು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, ಹೀಗಾಗಿ ಮುಖ್ಯಮಂತ್ರಿಗಳ ದೆಹಲಿ ಪ್ರವಾಸ ರದ್ದಾಗಿದೆ. ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಆರೋಗ್ಯವಾಗಿ ಇದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ನನ್ನ ದೆಹಲಿಯ ಪ್ರವಾಸ ರದ್ದಾಗಿರುತ್ತದೆ ಎಂದು … Continued

ಡೋಲೋ 650 ತಯಾರಕ, ಇತರ 5 ಫಾರ್ಮಾ ಕಂಪನಿಗಳಿಂದ ಉಚಿತ ಉಡುಗೊರೆ ಪಡೆದ ವೈದ್ಯರ ವಿವರ ನೀಡಿ: ಐಟಿ ಇಲಾಖೆಗೆ ಎನ್‌ಎಂಸಿ ಪತ್ರ

ನವದೆಹಲಿ: ಡೊಲೊ 650 ಮಾತ್ರೆ ತಯಾರಕ ಕಂಪನಿ ಮೈಕ್ರೋ ಲ್ಯಾಬ್ಸ್ ಸೇರಿದಂತೆ ಆರು ಫಾರ್ಮಾ ಕಂಪನಿಗಳಿಂದ ಉಚಿತ ಹಣ ಪಡೆದಿರುವ ವೈದ್ಯರ ವಿವರಗಳನ್ನು ನೀಡುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದು ಮಾಹಿತಿ ಕೇಳಿದೆ. ವ್ಯಾಪಕವಾಗಿ ಬಳಸಲಾಗುವ ಡೋಲೊ-650 ಟ್ಯಾಬ್ಲೆಟ್‌ನ ತಯಾರಕರು ಅನೈತಿಕ ಮಾರ್ಗ ಅನುಸರಿಸುತ್ತಿದೆ ಮತ್ತು ಅದರ ಉತ್ಪನ್ನಗಳ … Continued

ಕಡ್ಡಾಯ ಮತದಾನ ಪ್ರಾಯೋಗಿಕವಲ್ಲ ಎಂದು ಹೇಳಿದ ಕೇಂದ್ರ ಸರ್ಕಾರ

ನವದೆಹಲಿ: ಶುಕ್ರವಾರ ಲೋಕಸಭೆಯಲ್ಲಿ ಸರ್ಕಾರವು ನಾಗರಿಕರಿಗೆ ಕಡ್ಡಾಯವಾಗಿ ಮತದಾನ ಜಾರಿ ಮಾಡುವುದು “ಅಪ್ರಾಯೋಗಿಕ ಕಲ್ಪನೆಯಾಗಿದೆ.  ಮತದಾನವು  ಕಡ್ಡಾಯ ಕರ್ತವ್ಯವಲ್ಲ ಎಂದು ಹೇಳಿದೆ. ಬಿಜೆಪಿ ಸಂಸದ ಜನಾರ್ದನ್ ಸಿಗ್ರಿವಾಲ್ ಅವರು ಮಂಡಿಸಿದ ಖಾಸಗಿ ಸದಸ್ಯರ ಮಸೂದೆ, ಕಡ್ಡಾಯ ಮತದಾನ ಮಸೂದೆ, 2019 ರ ಮೂರು ವರ್ಷಗಳ ಸುದೀರ್ಘ ಚರ್ಚೆಗೆ ಪ್ರತಿಕ್ರಿಯಿಸುವಾಗ ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ … Continued

ಕಾಮನ್‌ವೆಲ್ತ್ ಗೇಮ್ಸ್ -2022: ಕುಸ್ತಿಯಲ್ಲಿ ಚಿನ್ನ ಗೆದ್ದ ಭಾರತದ ದೀಪಕ್ ಪುನಿಯಾ

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ 23 ವರ್ಷದ ಭಾರತದ ದೀಪಕ್ ಪುನಿಯಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಕಿಸ್ತಾನದ ಮುಹಮ್ಮದ್ ಇನಾಮ್ ಅವರನ್ನು ಸೋಲಿಸಿ ತಮ್ಮ ಮೊದಲ ಚಿನ್ನದ ಪದಕ ಗೆದ್ದರು. ಪುನಿಯಾ, ಹಾಲಿ ಚಾಂಪಿಯನ್ ಮತ್ತು 2 ಬಾರಿ ಕಾಮನ್‌ವೆಲ್ತ್‌ ಚಿನ್ನದ ಪದಕ ವಿಜೇತ ಚಿನ್ನದ ಪದಕದ ನೆಚ್ಚಿನ ಆಟಗಾರ ಮುಹಮ್ಮದ್ ಇನಾಮ್ ಅವರನ್ನು ಸೋಲಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನ ಅಂತಿಮ … Continued