ಸ್ವಾತಂತ್ರ್ಯ ದಿನದಂದು 21-ಗನ್ ಸೆಲ್ಯೂಟ್‌ಗೆ ಸ್ವದೇಶಿ ಬಂದೂಕು ಬಳಕೆ: ರಕ್ಷಣಾ ಸಚಿವಾಲಯ

ನವದೆಹಲಿ: ಆತ್ಮನಿರ್ಭರ ಭಾರತದ ಕನಸನ್ನು ಬಲಪಡಿಸುವ ಪ್ರಯತ್ನದಲ್ಲಿ, 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಿಧ್ಯುಕ್ತ 21-ಗನ್ ಸೆಲ್ಯೂಟ್‌ಗೆ ಭದ್ರತಾ ಪಡೆಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಬಂದೂಕುಗಳನ್ನು ಬಳಸುತ್ತವೆ ಎಂದು ಭಾರತದ ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ ಕುಮಾರ್ ಹೇಳಿದ್ದಾರೆ.. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹಿಂದೆ ನಾವು ಬ್ರಿಟಿಷ್ ಒಂದು ಪೌಂಡ್ ಗನ್ ಅನ್ನು ಬಳಸುತ್ತಿದ್ದೆವು, ಆದರೆ … Continued

ಜಾಗತಿಕ ಕದನ ವಿರಾಮಕ್ಕಾಗಿ ಪ್ರಧಾನಿ ಮೋದಿ ಸೇರಿದಂತೆ 3 ನಾಯಕರ ನೇತೃತ್ವದಲ್ಲಿ ಆಯೋಗದ ರಚನೆ ಪ್ರಸ್ತಾಪಿಸಿದ ಮೆಕ್ಸಿಕನ್ ಅಧ್ಯಕ್ಷ

ನವದೆಹಲಿ: ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು ವಿಶ್ವಸಂಸ್ಥೆಗೆ ಲಿಖಿತ ಪ್ರಸ್ತಾವನೆಯನ್ನು ಸಲ್ಲಿಸಲು ಯೋಜಿಸಿದ್ದು, ವಿಶ್ವವನ್ನು ಶಾಂತಿಯನ್ನು ಉತ್ತೇಜಿಸಲು ಐದು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಆಯೋಗ ರಚಿಸುವ ಮಾತನ್ನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮೂವರು ವಿಶ್ವ ನಾಯಕರ ಹೆಸರು ಸೂಚಿಸಿದ್ದಾರೆ ಎಂದು ಎಂಎಸ್ಎನ್ ನ್ಯೂಸ್ ವರದಿ ಮಾಡಿದೆ. ನಾನು … Continued

ಸೆರೆಯಾಗದ ಚಿರತೆ: ಬೆಳಗಾವಿ ಕೆಲ ಶಾಲೆಗಳಿಗೆ ಗುರುವಾರವೂ ರಜೆ ಘೋಷಣೆ

ಬೆಳಗಾವಿ :ಬೆಳಗಾವಿ ಗಾಲ್ಫ್ ಮೈದಾನದಲ್ಲಿ ಚಿರತೆ ಪತ್ತೆಯಾಗಿದೆ ಈ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರಿದಿರುವುದರಿಂದ ಬೆಳಗಾವಿ ನಗರ ಮತ್ತು ಗ್ರಾಮೀಣ ಶಿಕ್ಷಣ ವಲಯದ ವ್ಯಾಪ್ತಿಯ ಶಾಲೆಗಳಿಗೆ ಗುರುವಾರ(ಆಗಸ್ಟ್‌ 11) ರಜೆಯನ್ನು ಮುಂದುವರಿಸಲಾಗಿದೆ ಎಂದು ಡಿಡಿಪಿಐ ಬಸವರಾಜ ನಾಲತವಾಡ ತಿಳಿಸಿರುತ್ತಾರೆ. ನಗರ ಶಿಕ್ಷಣ ವಲಯದ 12 ಹಾಗೂ ಗ್ರಾಮೀಣ ಶಿಕ್ಷಣ ವಲಯದ‌ 9 ಶಾಲೆಗಳಿಗೆ ಬುಧವಾರ … Continued

ಕಾಶ್ಮೀರಿ ಪಂಡಿತ ರಾಹುಲ್ ಭಟ್‌ ಕೊಂದಿದ್ದ ಭಯೋತ್ಪಾದಕ ಸೇರಿ ಮೂವರು ಉಗ್ರರ ಹೊಡೆದುರಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಕಾಶ್ಮೀರಿ ಪಂಡಿತ ರಾಹುಲ್ ಭಟ್, ಅಮರೀನ್ ಭಟ್ ಸೇರಿದಂತೆ ಹಲವು ನಾಗರಿಕ ಹತ್ಯೆಗಳಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಲತೀಫ್ ರಾಥರ್‌ನನ್ನು ಭದ್ರತಾ ಪಡೆಗಳು ಎನ್‌ಕೌಂಟರ್ ಮಾಡಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಇಂದು, ಬುಧವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲತೀಫ್ ರಾಥರ್ ಸೇರಿದಂತೆ ಮೂವರು ಲಷ್ಕರ್-ಎ-ತೊಯ್ಬಾ(ಎಲ್‌ಇಟಿ) ಭಯೋತ್ಪಾದಕರು ಹತರಾಗಿದ್ದಾರೆ … Continued

ಶೂಟಿಂಗ್ ವೇಳೆ ಗಾಯಗೊಂಡ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

ಮುಂಬೈ: ಮುಂಬರುವ ಪ್ರೈಮ್ ವಿಡಿಯೋ ಸರಣಿ “ಇಂಡಿಯನ್ ಪೊಲೀಸ್ ಫೋರ್ಸ್” ಚಿತ್ರೀಕರಣದ ವೇಳೆ ಕಾಲು ಮುರಿದಿದೆ ಎಂದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬುಧವಾರ ಹೇಳಿದ್ದಾರೆ. ನಟ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಇದನ್ನು ಹಂಚಿಕೊಂಡಿದ್ದಾರೆ. “ನಿಕಮ್ಮಾ” ಎಂಬ ಆಕ್ಷನ್ ಕಾಮಿಡಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿರುವ ಶಿಲ್ಪಾ ಅವರಿಗೆ ವೈದ್ಯರು ಆರು ವಾರಗಳ ಕಾಲ ವಿಶ್ರಾಂತಿ … Continued

ಪಶ್ಚಿಮ ಬಂಗಾಳ : ಶಿಕ್ಷಣ ಹಗರಣದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಬುಧವಾರ ಇದೇ ಮೊದಲ ಸಲ ಬಂಧನಗಳನ್ನು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ (ಎಸ್‌ಎಸ್‌ಸಿ) ಮಾಜಿ ಸಲಹೆಗಾರ ಶಾಂತಿ ಪ್ರಸಾದ್ ಸಿನ್ಹಾ ಮತ್ತು ಎಸ್‌ಎಸ್‌ಸಿಯ ಮಾಜಿ ಅಧ್ಯಕ್ಷ ಅಶೋಕ ಸಹಾ ಅವರನ್ನು ಬಂಧಿಸಿದೆ. … Continued

ಮಾಜಿ ಸೈನಿಕನನ್ನು ಥಳಿಸುತ್ತಿರುವ ಮತ್ತೊಬ್ಬ ಬಿಜೆಪಿ ಯುವ ನಾಯಕನ ಕೃತ್ಯ ಕ್ಯಾಮರಾದಲ್ಲಿ ಸೆರೆ | ವೀಕ್ಷಿಸಿ

ರೇವಾ (ಮಧ್ಯಪ್ರದೇಶ): ಸ್ವಯಂ ಘೋಷಿತ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಗೂಂಡಾಗಿರಿ ಕ್ಯಾಮೆರಾದಲ್ಲಿ ಸೆರೆಯಾದ ಬೆನ್ನಲ್ಲೇ, ಮಧ್ಯಪ್ರದೇಶದ ರೇವಾದಲ್ಲಿಯೂ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಿಸಿಟಿವಿ ವೀಡಿಯೊದಲ್ಲಿ, ರಿತುರಾಜ್ ಚತುರ್ವೇದಿ ಎಂದು ಗುರುತಿಸಲಾಗಿರುವ ಬಿಜೆಪಿ ಯುವ ಮುಖಂಡ ನಿವೃತ್ತ ಸೇನಾಧಿಕಾರಿಯೊಬ್ಬರ ಅಂಗಡಿಗೆ ನುಗ್ಗಿ ಥಳಿಸುತ್ತಿರುವುದು ಕಂಡುಬಂದಿದೆ. ಗಮನಾರ್ಹವಾಗಿ, ಪುರುಷರ ಸಲೂನ್ ಅಂಗಡಿಯು ಮಾಜಿ ಸೈನಿಕ ದಿನೇಶ್ … Continued

ಬಿಹಾರ ಸಿಎಂ ಆಗಿ ನಿತೀಶಕುಮಾರ್, ಡಿಸಿಎಂ ಆಗಿ ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕಾರ

ಪಾಟ್ನಾ: ಬದಲಾದ ಸನ್ನಿವೇಶ ಹಾಗೂ ಹೊಸ ಮೈತ್ರಿ ಸರ್ಕಾರದಲ್ಲಿ ಜನತಾ ದಳ (ಸಂಯುಕ್ತ) ಮುಖ್ಯಸ್ಥ ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾಗಿ ಹಾಗೂ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಬುಧವಾರ, ಆಗಸ್ಟ್ 10 ರಂದು ಪ್ರಮಾಣ ವಚನ ಸ್ವೀಕರಿಸಿದರು. ಜೆಡಿಯು ಮುಖ್ಯಸ್ಥ ನಿತೀಶ್‌ ಎಂಟನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ … Continued

ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ

ನವದೆಹಲಿ: ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಯು.ಯು.ಲಲಿತ್ ಅವರನ್ನು ನೇಮಕ ಮಾಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಅಂಕಿತ ಹಾಕಿದ್ದಾರೆ. ಅವರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ವಿ ರಮಣ ಅವರ ಉತ್ತರಾಧಿಕಾರಿಯಾಗಲಿದ್ದಾರೆ, ಅವರ ಅಧಿಕಾರಾವಧಿಯು ಆಗಸ್ಟ್ 26 ರಂದು ಕೊನೆಗೊಳ್ಳುತ್ತದೆ. ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ … Continued

ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ : ತಲೆಮರೆಸಿಕೊಂಡಿರುವ ಆರೋಪಿಗಳ ಆಸ್ತಿ ಸೀಜ್‌ ಮಾಡಲು ಕ್ರಮ ಕೈಗೊಳ್ತೇವೆ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಆಸ್ತಿ ಸೀಜ್ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಡಿಜಿಪಿ ಅಲೋಕಕುಮಾರ್ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಾರಿಯಾದ ಆರೋಪಿಗಳನ್ನು ಪತ್ತೆಹಚ್ಚಲು ಕೋರ್ಟ್‌ ಮುಖಾಂತರ ವಾರೆಂಟ್‌ ಪಡೆದು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳುತ್ತೇವೆ. … Continued