ಅಫ್ಘಾನಿಸ್ತಾನ: ಕಾಬೂಲ್ ಬಾಂಬ್ ದಾಳಿಯಲ್ಲಿ ರಷ್ಯಾ ರಾಯಭಾರಿ ಕಚೇರಿ ಇಬ್ಬರು ಸೇರು ಕನಿಷ್ಠ ಆರು ಮಂದಿ ಸಿಬ್ಬಂದಿ ಸಾವು

ಕಾಬೂಲ್:‌ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ ಆರು ಮಂದಿ ಸಾವಿಗೀಡಾಗಿದ್ದು, ರಷ್ಯಾದ ರಾಯಭಾರಿ ಕಚೇರಿಯ ಇಬ್ಬರು ಸಿಬ್ಬಂದಿ ಸೇರಿದ್ದಾರೆ ಎಂದು ರಷ್ಯಾ ಮತ್ತು ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಕೋರನು ಕಾನ್ಸುಲರ್ ವಿಭಾಗದ ಪ್ರವೇಶದ್ವಾರವನ್ನು ಸಮೀಪಿಸುತ್ತಿದ್ದಂತೆ ಗಾರ್ಡ್‌ಗಳು ಗುಂಡಿಕ್ಕಿ ಕೊಂದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು … Continued

ಬ್ರಿಟನ್ ಪ್ರಧಾನಿ ಹುದ್ದೆಗೆ ಲಿಜ್ ಟ್ರಸ್ ಆಯ್ಕೆ : ಭಾರತೀಯ ಮೂಲದ ರಿಷಿ ಸುನಕ್ ಜೊತೆ ತುರುಸಿನ ಸ್ಪರ್ಧೆಯಲ್ಲಿ ಜಯಿಸಿದ ಟ್ರಸ್‌

ಲಂಡನ್: ಬ್ರಿಟನ್‌ ವಿದೇಶಾಂಗ ಸಚಿವೆ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಸ್ ಅವರು ಬ್ರಿಟನ್ನಿನ ಮುಂದಿನ ಪ್ರಧಾನಿಯಾಗಿ ಸೋಮವಾರ ಆಯ್ಕೆಯಾಗಿದ್ದಾರೆ. ಲಿಜ್ ಟ್ರಸ್ ಅವರು ರಾಜೀನಾಮೆ ನೀಡಿದ್ದ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಟೋರಿ ನಾಯಕತ್ವ ಸ್ಪರ್ಧೆ ಗೆಲ್ಲಲು ಲಿಜ್ ಟ್ರಸ್ ತನ್ನ ಪ್ರತಿಸ್ಪರ್ಧಿ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರನ್ನು ಸೋಲಿಸಿದರು. … Continued

ನೇಗಿನಹಾಳ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ : ಡೆತ್ ನೋಟ್‌ನಲ್ಲೇನಿದೆ?

ಬೈಲಹೊಂಗಲ: ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡ ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಪಾರ್ಥಿವ ಶರೀರದ ಬಳಿ ಡೆತ್ ನೋಟ್ ಪತ್ತೆಯಾಗಿದೆ. ಭಾನುವಾರ ರಾತ್ರಿ ಮಠದ ತಮ್ಮ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಸ್ವಾಮೀಜಿಗಳು ಬರೆದಿದ್ದು ಎಂದು ಹೇಳಲಾಗುವ ಡೆತ್ ನೋಟ್ … Continued

ಬಳ್ಳಾರಿ ಗ್ರಾಮಾಂತರದಲ್ಲೊಂದು ವಿಚಿತ್ರ ಘಟನೆ; ಮೃತ ಬಾಲಕನನ್ನು ಬದುಕಿಸಲು ದೇಹವನ್ನು ಉಪ್ಪಿನಲ್ಲಿಟ್ಟ ಗ್ರಾಮಸ್ಥರು….!

ಬಳ್ಳಾರಿ: ನೀರಿನ ಹೊಂಡದಲ್ಲಿ ಈಜಲು ಹೋಗಿದ್ದ ಬಾಲಕ ಸಾವಿಗೀಡಾಗಿದ್ದು, ಉಪ್ಪಿನ ರಾಶಿಯಲ್ಲಿ ಮಲಗಿಸಿದರೆ ಬದುಕಿ ಉಳಿಯುತ್ತಾನೆ ಎಂಬ ನಂಬಿಕೆಯಿಂದ ಬಾಲಕನ ಮೃತದೇಹವನ್ನು ಗಂಟೆಗಟ್ಟಲೆ ಉಪ್ಪಿನ ರಾಶಿ ಮಧ್ಯೆ ಮಲಗಿಸಿಟ್ಟ ಘಟನೆ ಬಳ್ಳಾರಿ ತಾಲೂಕಿನ ಸಿರವಾರ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಸಿರವಾರ ಗ್ರಾಮದಲ್ಲಿ ನೀರಿನ ಹೊಂಡದಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಸುರೇಶ(10) ಎಂಬ ಬಾಲಕ ಮೃತಪಟ್ಟಿದ್ದಾನೆ. … Continued

ಬೆಂಗಳೂರಿಗೆ ಕಾವೇರಿ ನೀರು ಪೂರೈಸುವ ಪಂಪ್‌ಹೌಸ್‌ಗೆ ನುಗ್ಗಿದ ನೀರು: ಕಾವೇರಿ ನೀರು ಪೂರೈಕೆಗೆ ಎರಡು ದಿನ ತೊಂದರೆ

ಬೆಂಗಳೂರು: ಕಾವೇರಿ ನದಿಯಿಂದ ನಗರಕ್ಕೆ ನೀರನ್ನು ಮೇಲಕ್ಕೆ ಎತ್ತುವ ಪಂಪಿಂಗ್ ಸ್ಟೇಷನ್ ಮಂಡ್ಯದಲ್ಲಿ ಮುಳುಗಿರುವ ಕಾರಣ ಬೆಂಗಳೂರಿನ ಕೆಲವು ಭಾಗಗಳಲ್ಲಿ ಕುಡಿಯುವ ನೀರು ಸರಬರಾಜು ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಮಳವಳ್ಳಿ ಟಿಕೆ ಹಳ್ಳಿ ನೀರು ಸರಬರಾಜು ಘಟಕ ಜಲಾವೃತವಾಗಿದೆ. ಹೀಗಾಗಿ ಯಂತ್ರೋಪಕರಣಗಳು ನೀರಲ್ಲಿ ಮುಳುಗಡೆಯಾಗಿದೆ. ನೀರನ್ನು ಹೊರಹಾಕಲು ಹಾಗೂ ನೀರಿನಿಂದ ಯಂತ್ರ ಮೇಲೆತ್ತಲು ಸಿಬ್ಬಂದಿ ಪರದಾಡುತ್ತಿದ್ದಾರೆ. ಹೀಗಾಗಿ … Continued

ರಾಜಸ್ಥಾನದಲ್ಲಿ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ

ಜೈಪುರ: ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಕೃಪಾಲ್ ಸಿಂಗ್ ಜಘಿನಾ ಅವರನ್ನು ಕೆಲವು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಭಾನುವಾರ ತಡರಾತ್ರಿ ಬಿಜೆಪಿ ಮುಖಂಡ ತನ್ನ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ರಾತ್ರಿ 10:45 ರ ಸುಮಾರಿಗೆ ಜಘಿನ ಗೇಟ್ ಬಳಿ ಹತ್ತಕ್ಕೂ ಹೆಚ್ಚು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು … Continued

ಆಗ್ರಾದ ಟೋಲ್ ಗೇಟ್ ಮುರಿದು ಸಾಗಿದ ಮರಳು ಮಾಫಿಯಾದ 13 ಟ್ರ್ಯಾಕ್ಟರ್‌ಗಳು: ಕೋಲುಗಳಿಂದ ತಡೆಯುವ ಸಿಬ್ಬಂದಿ ಪ್ರಯತ್ನ ವಿಫಲ | ವೀಕ್ಷಿಸಿ

ಆಗ್ರಾ: ಉತ್ತರ ಪ್ರದೇಶದ ಆಗ್ರಾದಿಂದ ಅಕ್ರಮವಾಗಿ ಮರಳು ಸಾಗಾಣೆ ನಡೆಸುತ್ತಿದ್ದ 13 ಟ್ರ್ಯಾಕ್ಟರ್‌ಗಳು ಟೋಲ್ ಪ್ಲಾಜಾದಲ್ಲಿ ನಿಲ್ಲಿಸದೇ ಬ್ಯಾರಿಕೇಡ್‌ ಮುರಿದು ಮುಂದೆ ಸಾಗಿರುವ ಘಟನೆ ನಡೆದಿದೆ. ಟೋಲ್‌ ಸಿಬ್ಬಂದಿ ಕೋಲುಗಳನ್ನು ಬಳಸಿ ತಡೆಯಲು ಪ್ರಯತ್ನಿಸಿದರೂ ಅವರು ಟೋಲ್‌ ಗೇಟುಗಳನ್ನು ಮುರಿದುಕೊಂಡು ಮುಂದೆ ಸಾಗಿದ್ದಾರೆ. ಈ ಟ್ರ್ಯಾಕ್ಟರ್‌ಗಳು ಸ್ಥಳೀಯ ಮರಳು ಮಾಫಿಯಾಕ್ಕೆ ಸೇರಿದವು ಎಂದು ಹೇಳಲಾಗಿದೆ. ಈ … Continued

ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಕ್ಕೆ ಮೌಲಾನಾಗಳಿಂದ ನನಗೆ ಜೀವ ಬೆದರಿಕೆ ಬಂದಿದೆ: ಬಿಜೆಪಿ ನಾಯಕಿ ರೂಬಿ ಖಾನ್‌

ಲಕ್ನೋ: ಉತ್ತರ ಪ್ರದೇಶದ ಮೀರತ್‌ನಲ್ಲಿರುವ ತನ್ನ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಕ್ಕೆ ತನಗೆ ಮುಸ್ಲಿಂ ಧರ್ಮಗುರುಗಳಿಂದ  ಜೀವ  ಬೆದರಿಕೆ ಬಂದಿದೆ ಎಂದು ಬಿಜೆಪಿ ನಾಯಕಿ ರೂಬಿ ಖಾನ್ ಹೇಳಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮನೆಯಲ್ಲಿ ಪೂಜೆ ಸಲ್ಲಿಸಿದಾಗ ತನ್ನ ವಿರುದ್ಧ ಫತ್ವಾ ಹೊರಡಿಸಲಾಗಿತ್ತು ಎಂದು ಬಿಜೆಪಿ ನಾಯಕಿ ಹೇಳಿದ್ದಾರೆ. ನಾನು 7 ದಿನಗಳ ಕಾಲ … Continued

ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಮುರುಘಾ ಶರಣರಿಗೆ ಸೆಪ್ಟೆಂಬರ್ 14ರ ವರೆಗೆ ನ್ಯಾಯಾಂಗ ಬಂಧನ

ಚಿತ್ರದುರ್ಗ: ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಶರಣರಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಇಂದು, ಸೋಮವಾರ ಪೊಲೀಸ್ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮುರುಘಾ ಶರಣರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿದರು. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಮುರುಘಾ ಶರಣರಿಗೆ ಸೆಪ್ಟೆಂಬರ್ 14ರವರೆಗೆ 9 … Continued