ಇಡಬ್ಲ್ಯೂಎಸ್ ಮೀಸಲಾತಿ: ಸೆಪ್ಟೆಂಬರ್‌ 13ರಿಂದ ವಿಚಾರಣೆ ಆರಂಭಿಸಲಿರುವ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ

ನವದೆಹಲಿ: ಆರ್ಥಿಕವಾಗಿ ದರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್) ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರದ ಸಾಂವಿಧಾನಿಕ ಸಿಂಧುತ್ವದ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಸೆಪ್ಟೆಂಬರ್‌ 13ರಿಂದ ವಿಚಾರಣೆ ಪ್ರಾರಂಭಿಸುವುದಾಗಿ ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ. ಈ ವಿಷಯದ ಕುರಿತು ಒಟ್ಟು 40 ಅರ್ಜಿಗಳಿವೆ. ಈ ಎಲ್ಲದರ ಕುರಿತು ವಾದ ಮಂಡಿಸಲು … Continued

ಚೀನಾ ಭೂಕಂಪದಲ್ಲಿ 65ಕ್ಕೂ ಹೆಚ್ಚು ಜನರು ಸಾವು: 6.8 ತೀವ್ರತೆಯ ಭೂಕಂಪದ ಮೈ ಜುಂ ಎನ್ನುವ ಕ್ಷಣದ ದೃಶ್ಯಗಳು ವೀಡಿಯೊದಲ್ಲಿ ಸೆರೆ | ವೀಕ್ಷಿಸಿ

ಸೋಮವಾರ 6.8 ತೀವ್ರತೆಯ ಭೂಕಂಪದಿಂದ ಚೀನಾ ತತ್ತರಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ನೈಋತ್ಯ ಸಿಚುವಾನ್ ಪ್ರಾಂತ್ಯದಲ್ಲಿ ಸಂಭವಿಸಿದ ಅತ್ಯಂತ ಶಕ್ತಿಶಾಲಿ ಕಂಪನಗಳಲ್ಲಿ ಒಂದಾಗಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, 65 ಜನರು ಮೃತಪಟ್ಟಿದ್ದಾರೆ ಹಾಗೂ 50,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಸ್ಥಳೀಯ ಕಾಲಮಾನ ಮಧ್ಯಾಹ್ನ 12:25 ಕ್ಕೆ ಸಂಭವಿಸಿದ ಭೂಕಂಪವು 16 ಕಿಮೀ … Continued

ಕೋವಿಡ್‌ ವಿರುದ್ಧ ಭಾರತದ ಮತ್ತೊಂದು ಸಾಧನೆ: ಭಾರತ್ ಬಯೋಟೆಕ್‌ನ ಮೂಗಿನ ಮೂಲಕ ಬಿಡುವ ಕೋವಿಡ್-19 ಲಸಿಕೆ ಬಳಕೆಗೆ ಅನುಮೋದನೆ

ನವದೆಹಲಿ: ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಸಂಸ್ಥೆ ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ (ಮೂಗಿನ ಮೂಲಕ ಬಿಡುವ) ಸೂಜಿ ಮುಕ್ತ ಕೋವಿಡ್ -19 ಲಸಿಕೆಯನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ತುರ್ತು ಬಳಕೆಯ ಅನುಮತಿ ನೀಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ಪ್ರಕಟಿಸಿದ್ದಾರೆ. ಸೆಂಟ್ರಲ್ ಡ್ರಗ್ಸ್ … Continued

ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್ : ಅಕ್ಟೋಬರ್‌ನಲ್ಲಿ ಏಳನೇ ವೇತನ ಆಯೋಗ ರಚನೆ ; ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಅಕ್ಟೋಬರ್ ನಲ್ಲಿ ಏಳನೇ ವೇತನ ಆಯೋಗ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ವಿಧಾನಸೌಧ ಬ್ಯಾಂಕ್ವೆಟ್ ಹಾಲ್​ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ದಿನ ಉದ್ಘಾಟಿಸಿ ರ್ವೋತ್ತಮ ಸೇವಾ‌ ಪ್ರಶಸ್ತಿ ಪ್ರದಾನ ಮಾಡಿದ ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರಿಗೆ ಕೊಟ್ಟ ಮಾತಿನಂತೆ ಅಕ್ಟೋಬರ್ … Continued

ಮೈಸೂರು ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ: ಬಿಜೆಪಿಯ ಶಿವಕುಮಾರ್ ಮೇಯರ್ ಆಗಿ ಆಯ್ಕೆ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಅಧಿಕಾರದ ಗದ್ದುಗೆ ಏರಿದೆ. ಮೈಸೂರು ಮಹಾನಗರಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಮೈಸೂರು ನಗರ ಪಾಲಿಕೆ ಮೇಯರ್​ ಆಗಿ ಬಿಜೆಪಿಯ ಶಿವಕುಮಾರ್​ ಆಯ್ಕೆಯಾಗಿದ್ದಾರೆ. ಶಿವಕುಮಾರ್​ ಪರ 48 ಮತಗಳು ಚಲಾವಣೆಯಾಗಿದ್ದು ಅವರು 20 ಮತಗಳ ಅಂತರದಿಂದ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಸೋಮವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಮೇಯರ್ ಸ್ಥಾನ ಸಾಮಾನ್ಯ … Continued

ಐಟಿ ದಿಗ್ಗಜ ಗೂಗಲ್​ನಲ್ಲಿ ಹೊಸಬರಿಗೆ ಉದ್ಯೋಗಾವಕಾಶ; ವಾರ್ಷಿಕ 10 ಲಕ್ಷ ರೂ.ಗಳ ಪ್ಯಾಕೇಜ್​

ಐಟಿ ದೈತ್ಯ ಗೂಗಲ್​ (Google India) ಭಾರತದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಮಹಾರಾಷ್ಟ್ರದ ಪುಣೆ ಕಚೇರಿಯಲ್ಲಿ ಈ ನೇಮಕಾತಿ ನಡೆಯಲಿದ್ದು, ಟೆಕ್ನಿಕಲ್​ ಸೊಲ್ಯೂಷನ್​ ಇಂಜಿನಿಯರ್ ಹುದ್ದೆ ಭರ್ತಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಬಿಸಿಎ, ಬಿಎಸ್ಸಿ ಮತ್ತು ಬಿಇ ಪದವಿ ಹೊಂದಿರುವ 2020, 21 ಮತ್ತು 2022ರ ಬ್ಯಾಚ್​ ಪದವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಗೂಗಲ್​​ನ ಗೂಗಲ್​ ಕ್ಲೌಡ್​ಗೆ … Continued

ಪ್ರವಾಹ ಪೀಡಿತ ಬೆಂಗಳೂರಿನಲ್ಲಿ ಟ್ರಾಕ್ಟರ್‌ನಲ್ಲಿ ಕಚೇರಿಗೆ ತೆರಳುತ್ತಿರುವ ಟೆಕ್ಕಿಗಳು

ಬೆಂಗಳೂರು: ಭಾರೀ ಮಳೆಯ ನಂತರ ಬೆಂಗಳೂರಿನ ಹಲವು ಪ್ರದೇಶಗಳು ತೀವ್ರ ಜಲಾವೃತಗೊಂಡಿದ್ದು, ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ನಗರದ ಅನೇಕ ಐಟಿ ವೃತ್ತಿಪರರು ತಮ್ಮ ಕೆಲಸದ ಸ್ಥಳಗಳಿಗೆ ತಲುಪಲು ಈಗ ಟ್ರ್ಯಾಕ್ಟರ್ ಅನ್ನು ಆಶ್ರಯಿಸಿದ್ದಾರೆ…! ಎಚ್‌ಎಎಲ್ ವಿಮಾನ ನಿಲ್ದಾಣದ ಬಳಿಯಿರುವ ಯಮಲೂರು ಮುಳುಗಡೆಯಾಗಿದ್ದು, ಸಮೀಪದಲ್ಲೇ ನೆಲೆಸಿರುವ ಐಟಿ ಕಂಪನಿಗಳ ಹಲವು ಉದ್ಯೋಗಿಗಳು ಟ್ರ್ಯಾಕ್ಟರ್‌ನಲ್ಲಿ ತಮ್ಮ … Continued

ಹೈದರಾಬಾದ್‌ನಲ್ಲಿರುವ ನನ್ನ ಸ್ನೇಹಿತರು ಇಷ್ಟಪಡುವುದಿಲ್ಲ: ಬೆಂಗಳೂರು ಪ್ರವಾಹದ ಕುರಿತು ತೆಲಂಗಾಣ ಸಚಿವರು ಮಾಡಿದ ಟ್ವೀಟ್‌ ಮೆಸೇಜ್‌ ವೈರಲ್‌…!

ಹೈದರಾಬಾದ್: ಜಲಾವೃತವಾಗಿರುವ ಬೆಂಗಳೂರಿನ ದೃಶ್ಯಗಳು ಟೆಲಿವಿಷನ್ ಪರದೆಗಳಲ್ಲಿ ಪ್ಲೇ ಆಗುತ್ತಿದ್ದಂತೆ, ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರು ಐಟಿ ಹಬ್ ಅನ್ನು ಲೇವಡಿ ಮಾಡುವವರಿಗೆ ಸಂದೇಶವನ್ನು ಕಳುಹಿಸಿದ್ದಾರೆ ಮತ್ತು “ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮಗಳಿಂದ ಭಾರತದ ಯಾವುದೇ ನಗರವು ಇದಕ್ಕೆ ಹೊರತಾಗಿಲ್ಲ ಎಂದು ಹೇಳಿದ್ದಾರೆ. ಕೆಟಿಆರ್‌ (KTR)ಎಂದು ಜನಪ್ರಿಯವಾಗಿರುವ ಸಚಿವರು, ಕ್ಷಿಪ್ರ ನಗರೀಕರಣದ ಸವಾಲುಗಳನ್ನು ನಿಭಾಯಿಸಲು … Continued

ಉಸಿರಾಟದ ಮೂಲಕ ತೆಗೆದುಕೊಳ್ಳುವ ವಿಶ್ವದ ಮೊದಲ ಕೋವಿಡ್ ಲಸಿಕೆಗೆ ಅನುಮೋದಿಸಿದ ಚೀನಾ

ಟಿಯಾಂಜಿನ್ ಮೂಲದ ಕ್ಯಾನ್ಸಿನೊ ಬಯೋಲಾಜಿಕ್ಸ್ ಇಂಕ್ ತಯಾರಿಸಿದ ಸೂಜಿ-ಮುಕ್ತ, ಉಸಿರಾಟ ಮೂಲಕ ತೆಗೆದುಕೊಳ್ಳುವ (ಇನ್ಹೇಲ್) ಕೋವಿಡ್ -19 ಲಸಿಕೆಯನ್ನು ಚೀನಾ ಅನುಮೋದಿಸಿದೆ. ಇದನ್ನು ಅನುಮೋದಿಸಿದ ಮೊದಲ ದೇಶವಾಗಿದೆ. ಇದಕ್ಕೆ ಅನುಮೋದನೆ ದೊರೆತ ನಂತರ ಹಾಂಗ್ ಕಾಂಗ್‌ನಲ್ಲಿ ಸೋಮವಾರ ಬೆಳಿಗ್ಗೆ ಕಂಪನಿಯ ಷೇರುಗಳನ್ನು 14.5% ರಷ್ಟು ಹೆಚ್ಚಿಸಿದೆ. ಚೀನಾದ ರಾಷ್ಟ್ರೀಯ ವೈದ್ಯಕೀಯ ಉತ್ಪನ್ನಗಳ ಆಡಳಿತವು CanSino ನ … Continued

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: 32 ಕಡೆ ದಾಳಿ ನಡೆಸಿದ ಎನ್‌ಐಎ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ ‌ನೆಟ್ಟಾರು ಹತ್ಯೆ ಪ್ರಕರಣ ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳ ತಂಡ ಪುತ್ತೂರು, ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಎರಡು ತಿಂಗಳ ಹಿಂದೆ ದುಷ್ಕರ್ಮಿಗಳ ಚೂಕು ಇರಿತಕ್ಕೆ ಮೃತಪಟ್ಟಿದ್ದ ಪ್ರವೀಣ ನೆಟ್ಟಾರು ಹತ್ಯೆ ತನಿಖೆಯನ್ನು ಎನ್‌ಐಎ ತಂಡ ನಡೆಸುತ್ತಿದೆ. … Continued