ಸೆಪ್ಟೆಂಬರ್ 19 ರಂದು ರಾಣಿ ಎಲಿಜಬೆತ್ II ಸರ್ಕಾರಿ ಅಂತ್ಯಕ್ರಿಯೆ

ಲಂಡನ್‌: ರಾಣಿ ಎಲಿಜಬೆತ್ II ಅವರ ಸರ್ಕಾರಿ ಅಂತ್ಯಕ್ರಿಯೆಯು ಸೆಪ್ಟೆಂಬರ್ 19ರಂದು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ನಡೆಯಲಿದೆ ಎಂದು ಬಕಿಂಗ್‌ಹ್ಯಾಮ್ ಅರಮನೆ ಶನಿವಾರ ಪ್ರಕಟಿಸಿದೆ. ಸರ್ಕಾರಿ ಅಂತ್ಯಕ್ರಿಯೆಯ ಮೊದಲು, ದಿವಂಗತ ಬ್ರಿಟಿಷ್ ರಾಣಿಗೆ ಸಾರ್ವಜನಿಕರಿಗೆ ಗೌರವ ಸಲ್ಲಿಸಲು ನಾಲ್ಕು ದಿನಗಳ ಕಾಲ ಹತ್ತಿರದ ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ಪಾರ್ಥೀವ ಶರೀರವನ್ನು ಲೈಯಿಂಗ್-ಇನ್-ಸ್ಟೇಟ್‌ನಲ್ಲಿ ಇಡಲಾಗುತ್ತದೆ. ಲೈಯಿಂಗ್-ಇನ್-ಸ್ಟೇಟ್ ಸಮಯದಲ್ಲಿ, ಸಾರ್ವಜನಿಕರು … Continued

ಕುಮಟಾ: ಖ್ಯಾತ ವಕೀಲ ಶ್ರೀಪಾದ ಶಾಸ್ತ್ರೀ ನಿಧನ

ಕುಮಟಾ :ಖ್ಯಾತ ವಕೀಲರಾಗಿದ್ದ ಕುಮಟಾದ ಶ್ರೀಪಾದ ಶಾಸ್ತ್ರೀ (86) ಅವರು ಶನಿವಾರ ನಗರದ ತಮ್ಮ ಮನೆಯಲ್ಲಿ ನಿಧನರಾದರು. ಮೃತರು ವಕೀಲರ ಸಂಘದ ಅಧ್ಯಕ್ಷರಾಗಿ, ನೋಟರಿಯಾಗಿ ಸೇವೆ ಸಲ್ಲಿಸಿದ್ದರು. ಸುಮಾರು 60 ವರ್ಷಗಳ ದೀರ್ಘ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಇವರು ಸಾವಿರಾರು ಯುವ ವಕೀಲರಿಗೆ ಮಾರ್ಗ ದರ್ಶಕರಾಗಿಯೂ ಸಹಾಯ ಮಾಡಿದ್ದರು. ಶಾಸ್ತ್ರೀಯವರ ಆತ್ಮಕ್ಕೆ ಶಾಂತಿ ಕೋರಿ … Continued

ರಾಣಿ ಎಲಿಜಬೆತ್ ನಿಧನದ ನಂತರ ಚಾರ್ಲ್ಸ್ lll ಬ್ರಿಟನ್ ದೊರೆಯೆಂದು ಅಧಿಕೃತವಾಗಿ ಘೋಷಣೆ

ಲಂಡನ್‌: ಲಂಡನಲ್ಲಿರುವ ಸೇಂಟ್‌ ಜೇಮ್ಸ್ ಅರಮನೆಯಲ್ಲಿ ಶನಿವಾರ ನಡೆದ ಸಿಂಹಾಸನಾರೋಹಣ ಸಭೆಯಲ್ಲಿ ಚಾರ್ಲ್ಸ್ llI (Charles llI) ಅವರನ್ನು ಬ್ರಿಟನ್ನಿನ ದೊರೆ ಎಂದು ಘೋಷಿಸಲಾಗಿದ್ದು ಈ ವಿಷಯವನ್ನು ಟೆಲಿವಿಷನ್ ಮೂಲಕ ಬಿತ್ತರಿಸಲಾಗಿದೆ. ಪ್ರಿನ್ಸ್ ವಿಲಿಯಮ್ಸ್, ಪ್ರಧಾನ ಮಂತ್ರಿ ಲಿಜ್ ಟ್ರಸ್, ಆರ್ಚ್ ಬಿಷಪ್ ಜಸ್ಟಿನ್ ವೆಬ್ಲಿ ಅವರ ಸಮ್ಮುಖದಲ್ಲಿ ಬ್ರಿಟನ್ನಿನ ದೊರೆ ಅಧಿಕೃತ ಘೋಷಣೆಯ ಮೇಲೆ … Continued

ಪರೀಕ್ಷೆ ಕೇಂದ್ರಕ್ಕೆ ಹೋಗಲು ಕುಟುಂಬದವರ ಸಹಾಯದಿಂದ ತುಂಬಿ ಹರಿಯುತ್ತಿದ್ದ ನದಿ ಈಜಿದ ದಾಟಿದ ವಿದ್ಯಾರ್ಥಿನಿ : ವೀಕ್ಷಿಸಿ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ 21 ವರ್ಷದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಗೆ ಹಾಜರಾಗಲು ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ತುಂಬಿ ಹರಿಯುತ್ತಿರುವ ಈಜಿ ನದಿ ದಾಟಿ ಪರೀಕ್ಷೆಗೆ ತೆರಳಿದ ಘಟನೆ ವರದಿಯಾಗಿದೆ. ತಡ್ಡಿ ಕಲಾವತಿ ಎಂದು ಗುರುತಿಸಲಾದ ವಿದ್ಯಾರ್ಥಿನಿ ವಿಶಾಖಪಟ್ಟಣಂನಲ್ಲಿ ಪರೀಕ್ಷೆ ತೆಗೆದುಕೊಳ್ಳಬೇಕಾಗಿತ್ತು. ಉಕ್ಕಿ ಹರಿಯುತ್ತಿದ್ದ ಚಂಪಾವತಿ ನದಿಯನ್ನು ತನ್ನ ಸಹೋದರ ಹಾಗೂ ಮತ್ತೊಬ್ಬ ಕುಟುಂಬದವರ … Continued

ಮೈಸೂರು ದಸರಾ ಉದ್ಘಾಟಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು : ಸಿಎಂ ಬೊಮ್ಮಾಯಿ

ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ನಾಡಹಬ್ಬ ಮೈಸೂರು ದಸರಾ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಬಾರಿಯ ದಸರಾ ಉದ್ಘಾಟನೆ ನೆರವೇರಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಪ್ಪಿರುವುದಾಗಿ ಶನಿವಾರ ಹೇಳಿದರು. 2022ರ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ವೈಭವಯುತವಾಗಿ ದಸರಾ ಆಚರಣೆಗೆ ಸಿದ್ಧತೆ ನಡೆದಿದೆ. ಸೆಪ್ಟೆಂಬರ್‌ 26ರಂದು ಬೆಳಿಗ್ಗೆ … Continued

17 ಕೋಟಿ ರೂ….ಮುಂದುವರಿದ ಎಣಿಕೆ: ಗೇಮಿಂಗ್ ಆ್ಯಪ್ ಹಗರಣದಲ್ಲಿ ಕೋಲ್ಕತ್ತಾದ ಉದ್ಯಮಿಯಿಂದ ಭಾರೀ ಪ್ರಮಾಣದ ನಗದು ವಶಪಡಿಸಿಕೊಂಡ ಇ.ಡಿ.

ಕೋಲ್ಕತ್ತಾ: ಜಾರಿ ನಿರ್ದೇಶನಾಲಯ (ED) ಕೋಲ್ಕತ್ತಾದ ಆರು ಸ್ಥಳಗಳಲ್ಲಿ ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಮೂಲಕ ವಂಚನೆ ಆರೋಪದ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಇ.ಡಿ. ಅಧಿಕಾರಿಗಳ ತಂಡ, ಬ್ಯಾಂಕ್ ಅಧಿಕಾರಿಗಳೊಂದಿಗೆ ಶನಿವಾರ ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿರುವ ಉದ್ಯಮಿ ಅಮೀರ್ ಖಾನ್ ಅವರ ಮನೆ ಮೇಲೆ ದಾಳಿ ನಡೆಸಿತು. ಇಲ್ಲಿಯವರೆಗೆ 17 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ … Continued

ಹಿರಿಯ ಅಧಿಕಾರಿ ಅವಮಾನ ಮಾಡಿದ ಆರೋಫ: ಠಾಣೆಯೊಳಗೆ ಗುಂಡು ಹಾರಿಸಿಕೊಂಡು ಪೊಲೀಸ್‌ ಅಧಿಕಾರಿ ಆತ್ಮಹತ್ಯೆ

ಹೋಶಿಯಾರಪುರ: : ಹರ್ಯಾಣಾದ ಹೋಶಿಯಾರ್‌ಪುರ ಜಿಲ್ಲೆಯ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರು ಶನಿವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸತೀಶ್‌ ಕುಮಾರ್‌ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಹಿರಿಯ ಅಧಿಕಾರಿಗಳಿಂದ ತುಂಬಾ ತೊಂದರೆ ಅನುಭವಿಸಿದ್ದೇನೆ. ಹೀಗಾಗಿ ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ವೀಡಿಯೋ ಮಾಡಿ ನಂತರ ಪೊಲೀಸ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಠಾಣೆಯೊಳಗೆ ತನ್ನ ಸರ್ವಿಸ್‌ … Continued

ಮಂತ್ರಿ ಡೆವಲಪರ್ಸ್‌ನ ಎಂಡಿ ಸುಶೀಲ್ ಮಂತ್ರಿ ಬಂಧನ

posted in: ರಾಜ್ಯ | 0

ಬೆಂಗಳೂರು: ದೇಶದ ಪ್ರತಿಷ್ಟಿತ ಡೆವೆಲಪರ್ಸ್‌ ಸಂಸ್ಥೆ ಮಂತ್ರಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಸುಶೀಲ್‌ ಮಂತ್ರಿ ಮತ್ತವರ ಮಗ ಪ್ರತೀಕ್‌ ಮಂತ್ರಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಸುಶೀಲ್ ಮಂತ್ರಿ ವಿರುದ್ಧ ಮನಿ ಲ್ಯಾಂಡರಿಂಗ್ ಆರೋಪ ಹಿನ್ನೆಲೆ ಜೂ.25ರಂದು ಸುಶೀಲ್ ಬಂಧಿಸಿ ಇಡಿ ವಿಚಾರಣೆ ನಡೆಸಿತ್ತು. ಬಳಿಕ ಜಾಮೀನಿನ ಮೇಲೆ ಸುಶೀಲ್ ಹೊರಬಂದಿದ್ದರು. ಈಗ ಮತ್ತೆ ಸಿಐಡಿ ತನಿಖಾ … Continued

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಶೀಘ್ರವೇ ಅಧಿಸೂಚನೆ: ಶಿಕ್ಷಣ ಸಚಿವ ನಾಗೇಶ

posted in: ರಾಜ್ಯ | 0

ಬೆಂಗಳೂರು: ರಾಜ್ಯ ಸರ್ಕಾರದಿಂದ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ 778 ಹುದ್ದೆಗಳ ಭರ್ತಿಗೆ ಘ್ರದಲ್ಲೇ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಅವರು ತಿಳಿಸಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 778 ಉಪನ್ಯಾಸಕರ ಖಾಲಿ ಹುದ್ದೆಗಳನ್ನು ನೇರ … Continued

ಪ್ರವೀಣ ನೆಟ್ಟಾರು ಕುಟುಂಬಕ್ಕೆ ಸಿಎಂ ಕಚೇರಿಯಲ್ಲಿ ಕೆಲಸ: ಜನಸ್ಪಂದನ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಘೋಷಣೆ

posted in: ರಾಜ್ಯ | 0

ದೊಡ್ಡಬಳ್ಳಾಪುರ: ರಾಜ್ಯದ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆ ಮುಂದಿಟ್ಟುಕೊಂಡು ಬಿಜೆಪಿ ಶಕ್ತಿ ಪ್ರದಶರ್ನಕ್ಕೆ ಮುಂದಾಗಿರುವ ಬಿಜೆಪಿ ಇಂದು ಶನಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಅದ್ದೂರಿ ಬಿಜೆಪಿ ಜನಸ್ಪಂದನ ಸಮಾವೇಶ ಆಯೋಜನೆ ಮಾಡಿದೆ. ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಜನಸ್ಪಂದನ ಸಮಾವೇಶ ಆಯೋಜನೆ ಮಾಡಿದ್ದು, 3 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದಲ್ಲಿ … Continued