ಜಾಗತಿಕವಾಗಿ ಪ್ರತಿ 44 ಸೆಕೆಂಡಿಗೆ ಒಬ್ಬ ವ್ಯಕ್ತಿ ಕೋವಿಡ್-19ರಿಂದ ಸಾಯುತ್ತಿದ್ದಾನೆ : ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ಕೊರೊನಾವೈರಸ್ ಸಾಂಕ್ರಾಮಿಕ ರೋಗದೊಂದಿಗೆ ಸಾಮಾನ್ಯ ಸ್ಥಿತಿಯ ನಡುವೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಾಗತಿಕವಾಗಿ ಪ್ರತಿ 44 ಸೆಕೆಂಡಿಗೆ ಕೋವಿಡ್ -19ನಿಂದ ಒಬ್ಬರು ಸಾಯುತ್ತಿದ್ದಾರೆ ಎಂದು ಎಚ್ಚರಿಸಿದೆ.ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಈ ವೈರಸ್ ತಕ್ಷಣ ಮರೆಯಾಗುವುದಿಲ್ಲ ಎಂದು ಹೇಳಿದ್ದಾರೆ. “ದಾಖಲಾದ ಪ್ರಕರಣಗಳು ಮತ್ತು ಸಾವುಗಳಲ್ಲಿ ಜಾಗತಿಕವಾಗಿ ಕುಸಿತ … Continued

ಗಣೇಶನಮೂರ್ತಿ ತಬ್ಬಿಕೊಂಡು ವಿಸರ್ಜನೆಗೆ ಒಯ್ಯಲು ಬಿಡದ ಪುಟ್ಟ ಹುಡುಗಿ, ಮೂರ್ತಿ ತಬ್ಬಿಕೊಂಡು ಅಳುವ ಕಂದ | ವೀಕ್ಷಿಸಿ

10 ದಿನಗಳ ಗಣೇಶ ಚತುರ್ಥಿ ಹಬ್ಬವು ಮುಕ್ತಾಯವಾಗಿದ್ದು ಒಂದು ದಿನದ ಹಿಂದೆ ಮಹಾರಾಷ್ಟ್ರ ಮತ್ತು ಭಾರತದ ಇತರ ಭಾಗಗಳಾದ್ಯಂತ ಜನರು ವಿವಿಧ ಜಲಮೂಲಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದರು. ಒಂದು ಕುಟುಂಬವು ತಮ್ಮ ಗಣಪತಿ ವಿಗ್ರಹವನ್ನು ನಿಮಜ್ಜನಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ, ಒಂದು ಚಿಕ್ಕ ಹುಡುಗಿ ಗಣಪತಿ ಬಪ್ಪನನ್ನು ತನ್ನ ಮನೆಯಿಂದ ವಿಸರ್ಜನೆಗೆ ಹೋಗಲು ಬಿಡಲಿಲ್ಲ. ಹಬ್ಬದ ಕೊನೆಯ … Continued

ದೆಹಲಿ ಸರ್ಕಾರದ ಡಿಟಿಸಿ ಬಸ್‌ಗಳ ಖರೀದಿಯಲ್ಲಿ ‘ಅಕ್ರಮ’ ಆರೋಪ ಪ್ರಕರಣ: ಸಿಬಿಐ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಒಪ್ಪಿಗೆ

ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ದೆಹಲಿ ಸರ್ಕಾರವು 1000 ಲೋ ಫ್ಲೋರ್ ಬಸ್‌ಗಳನ್ನು ಖರೀದಿಸಿರುವ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಭಾನುವಾರ ಅನುಮೋದಿಸಿದ್ದಾರೆ. ಜೂನ್‌ನಲ್ಲಿ ಬಂದ ದೂರಿನ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿ ನರೇಶ್‌ಕುಮಾರ್ ಅವರು ಈ ಕುರಿತು ಶಿಫಾರಸು ಮಾಡಿದ್ದರು. ಡಿಟಿಸಿ ಬಸ್‌ಗಳ ಟೆಂಡರ್ ಮತ್ತು ಖರೀದಿಗೆ … Continued

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಇನ್ನು ತಿಂಗಳ ಮೊದಲ ದಿನವೇ ಸಂಬಳ

ಬೆಂಗಳೂರು: ಎಲ್ಲಾ ನೌಕರರಿಗೆ ಇನ್ನು ಪ್ರತಿ ತಿಂಗಳ ಮೊದಲ ದಿನವೇ ವೇತನ ಪಾವತಿ ಮಾಡಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಅಕ್ಟೋಬರ್‌ನಿಂದ ಈ ಹೊಸ ಪದ್ಧತಿ ಜಾರಿಗೆ ಬರಲಿದೆ. ಕೆಎಸ್ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಈ ಬಗ್ಗೆ ತಿಳಿಸಿದ್ದು, ಸಾರಿಗೆ ಸಂಸ್ಥೆಯ ಕಾರ್ಮಿಕರ ಕ್ಷೇಮಾಭಿವೃದ್ಧಿ, ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಅಕ್ಟೋಬರ್ ತಿಂಗಳಿನಿಂದ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ … Continued

ಕಾರ್ಯನಿರ್ವಹಣೆಯಿಂದ ಅತೃಪ್ತಿ : 5 ಅಧೀನ ಪೊಲೀಸ್‌ ಅಧಿಕಾರಿಗಳನ್ನೇ ಲಾಕಪ್‌ನಲ್ಲಿ ಇರಿಸಿದ ಎಸ್‌ಪಿ | ವೀಡಿಯೋ ವೈರಲ್

ಪಾಟ್ನಾ: ಬಿಹಾರದ ನವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಐವರು ಅಧೀನ ಅಧಿಕಾರಿಗಳ ಕಾರ್ಯವೈಖರಿಯಿಂದ ಅತೃಪ್ತರಾಗಿದ್ದಕ್ಕೆ ಅವರನ್ನು ಎರಡು ಗಂಟೆಗಳ ಕಾಲ ಲಾಕಪ್‌ನಲ್ಲಿ ಇರಿಸಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗಿರುವ ವೀಡಿಯೊದಲ್ಲಿ, ಐವರು ಬಿಹಾರ ಪೊಲೀಸರು ಲಾಕಪ್‌ನಲ್ಲಿ ಪರಸ್ಪರ ಮಾತನಾಡುತ್ತಿರುವುದನ್ನು ಕಾಣಬಹುದು. ಮೂವರು ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ಗಳು ಮತ್ತು ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ಗಳ … Continued

ಉನ್ನತ ನಾಯಕರ ರಾಜೀನಾಮೆ, 5 ಸಂಸದರ ಪತ್ರದ ನಂತರ ಆಂತರಿಕ ಚುನಾವಣೆ ನಿಯಮ ಬದಲಾವಣೆಗೆ ಒಪ್ಪಿದ ಕಾಂಗ್ರೆಸ್ ನಾಯಕತ್ವ

ನವದೆಹಲಿ: ಮುಂದಿನ ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಗೆ ಮಹತ್ವದ ಚುನಾವಣೆ ನಡೆಯಲಿದ್ದು, ಹಿರಿಯ ನಾಯಕರ ಒತ್ತಾಯದ ಮೇರೆಗೆ ಚುನಾವಣಾ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ತರಲು ಕಾಂಗ್ರೆಸ್‌ ಪಕ್ಷದ ನಾಯಕತ್ವ ಒಪ್ಪಿಗೆ ನೀಡಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಬಯಸುವ ಯಾರಾದರೂ ಚುನಾವಣಾ ಕಾಲೇಜನ್ನು ರೂಪಿಸುವ ಎಲ್ಲಾ 9,000 ಪ್ರತಿನಿಧಿಗಳ ಪಟ್ಟಿಯನ್ನು ನೋಡಲು ಸಾಧ್ಯವಾಗಲಿದೆ. ಈ ಪಟ್ಟಿಯು … Continued

ಗಣೇಶ ಮೂರ್ತಿ ವಿಸರ್ಜನೆ ವೇಳೆ ಯುವಕನ ಹತ್ಯೆ: ನಾಲ್ವರ ಬಂಧನ

ಬೆಳಗಾವಿ : ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಯುವಕನನ್ನು  ಕೊಲೆ ಮಾಡಿರುವ ಘಟನೆ ನಡೆದಿದೆ. ಅರ್ಜುನಗೌಡ ಪಾಟೀಲ (20) ಎಂಬಾತನನ್ನುಕೊಲೆ ಮಾಡಲಾಗಿದೆ. ಕೊಲೆ ಮಾಡಿ ಪಕ್ಕದ ಊರಿನಲ್ಲಿ ಅಡಗಿ ಕುಳಿತಿದ್ದ ಉದಯ್ ಭನದ್ರೋಲಿ (21), ಸುಭಾಷ್ ಸೋಲನ್ನವರ್ (21), ವಿಠ್ಠಲ ಮೀಸಿ (20),ಓರ್ವ ಅಪ್ರಾಪ್ತ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. … Continued

ತೆಲುಗು ಸಿನೆಮಾ ‘ರೆಬೆಲ್ ಸ್ಟಾರ್’ ಕೃಷ್ಣಂ ರಾಜು ನಿಧನ

ಹೈದರಾಬಾದ್‌: ಹಿರಿಯ ತೆಲುಗು ನಟ ಉಪ್ಪಲಪತಿ ಕೃಷ್ಣಂ ರಾಜು ಅವರು ಸೆಪ್ಟೆಂಬರ್ 11 ರ ಭಾನುವಾರದ ಮುಂಜಾನೆ 83 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ನಟ ಪ್ರಭಾಸ್ ಅವರ ದೊಡ್ಡಪ್ಪ. ಟಾಲಿವುಡ್‌ನ ‘ರೆಬೆಲ್ ಸ್ಟಾರ್’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೃಷ್ಣಂ ರಾಜು ಐದು ದಶಕಗಳ ಕಾಲದ ವೃತ್ತಿಜೀವನದಲ್ಲಿ 180ಕ್ಕೂ … Continued

ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ರಾಜ್ಯ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ನಾಲ್ಕು ದಿನ ಮಳೆ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇನ್ನು 4 ದಿನ ಹಳದಿ ಅಲರ್ಟ್​ (Yellow Alert) ಘೋಷಿಸಲಾಗಿದೆ. ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಾದ … Continued

ಪೆರ್ನಾಲ್‌, ರಮೇಶ ಕಾಮತ್‌, ಕುಮುದಾಗೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2022ರ ವಾರ್ಷಿಕ ಗೌರವ ಪ್ರಶಸ್ತಿಗಳಿಗಾಗಿ ಎಚ್.ಎಂ. ಪೆರ್ನಾಲ್‌-ಮಂಗಳೂರು (ಸಾಹಿತ್ಯ), ರಮೇಶ ಕಾಮತ್-ಬೆಂಗಳೂರು (ಕಲೆ) ಮತ್ತು ಕುಮುದಾ ಗಡ್ಕರ್-ಕಾರವಾರ (ಜಾನಪದ) ಅವರನ್ನು ಆಯ್ಕೆ ಮಾಡಿದೆ. ಸೆಪ್ಟೆಂಬರ್ 18 ರಂದು ಭಾನುವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕಾಶಿ ಮಠದಲ್ಲಿ ನಡೆಯುವ ಕೊಂಕಣಿ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳ ಕೊನೆಯಲ್ಲಿ … Continued