ಲಂಡನ್‌ನಲ್ಲಿ ರಾಣಿ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಣಿ ಎಲಿಜಬೆತ್ IIರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸುತ್ತಾರೆ. ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು  ಸೆಪ್ಟೆಂಬರ್ 17ರಿಂದ 19ರ ವರೆಗೆ ಲಂಡನ್‌ಗೆ ಭೇಟಿ ನೀಡಲಿದ್ದಾರೆ. ರಾಣಿ ಎಲಿಜಬೆತ್ II, ಬ್ರಿಟನ್‌ ರಾಣಿ ಮತ್ತು ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರಾಗಿದ್ದರು, ಅವರು ಸೆಪ್ಟೆಂಬರ್ 8 … Continued

6 ವಾರಗಳೊಳಗೆ ಸರ್ಕಾರಿ ಬಂಗ್ಲೆ ಖಾಲಿ ಮಾಡುವಂತೆ ಸುಬ್ರಮಣಿಯನ್‌ ಸ್ವಾಮಿಗೆ ದೆಹಲಿ ಹೈಕೋರ್ಟ್‌ ಆದೇಶ

ನವದೆಹಲಿ: ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಮಾಜಿ ಸಂಸದ ಡಾ.ಸುಬ್ರಮಣಿಯನ್ ಸ್ವಾಮಿ ಅವರಿಗೆ ದೆಹಲಿ ಹೈಕೋರ್ಟ್‌ ಶಾಕ್‌ ನೀಡಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಲುಟ್ಯೆನ್ಸ್‌ ಬಂಗಲೆ ವಲಯದಲ್ಲಿರುವ ಸುಬ್ರಮಣಿಯನ್‌ ಸ್ವಾಮಿ ಅವರ ಸರ್ಕಾರಿ ವಸತಿ ಸೌಲಭ್ಯವನ್ನು 6 ವಾರಗಳೊಳಗೆ ಖಾಲಿ ಮಾಡುವಂತೆ ದೆಹಲಿ ಹೈಕೋರ್ಟ್‌ ಆದೇಶಿಸಿದೆ. ಆದ್ದರಿಂದ, ಏಕಸದಸ್ಯ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿದ್ದ ಏಕ … Continued

ಗುಜರಾತ್ ಕರಾವಳಿ ಬಳಿ ಪಾಕ್ ಬೋಟ್‌ನಲ್ಲಿದ್ದ 200 ಕೋಟಿ ರೂ.ಮೌಲ್ಯದ ಡ್ರಗ್ಸ್ ವಶ, ಪಂಜಾಬ್ ಜೈಲಿನಿಂದ ಇದಕ್ಕೆ ಆರ್ಡರ್‌: ಮೂಲಗಳು

ಗಾಂಧಿನಗರ: ಜಂಟಿ ಕಾರ್ಯಾಚರಣೆಯಲ್ಲಿ, ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬುಧವಾರ ಪಾಕಿಸ್ತಾನದ ಬೋಟ್‌ ಅನ್ನು ಆರು ಮೈಲುಗಳಷ್ಟು ದೂರದ ಭಾರತೀಯ ಸಮುದ್ರದೊಳಗೆ ವಶಕ್ಕೆ ಪಡೆದಿದೆ. ದೋಣಿಯಲ್ಲಿ 40 ಕೆಜಿಯಷ್ಟು ಡ್ರಗ್ಸ್ ತುಂಬಿದ್ದು, ಇದರ ಅಂತಾಋಾಷ್ಟ್ರೀಯ ಮಾರುಕಟ್ಟೆಯ ಮೌಲ್ಯ ಸುಮಾರು 200 ಕೋಟಿ ರೂ.ಗಳಾಗಿದೆ. ಪಂಜಾಬ್‌ನ ಜೈಲಿನಿಂದ ಡ್ರಗ್ಸ್ … Continued

ಹುಬ್ಬಳ್ಳಿ : ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಕಾರು, ಮಹಿಳೆ ಸೇರಿ ಮೂವರು ಸಾವು

ಹುಬ್ಬಳ್ಳಿ : ತಾಲೂಕಿನ ವರೂರು ಗ್ರಾಮದ ಗಣೇಶ ಹೊಟೇಲ್‌ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮಹಿಳೆ ಸೇರಿ ಮೂವರು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಅಪಘಾತದಲ್ಲಿ ದಾವಣಗೆರೆ ಮೂಲದ ಚಾಲಕ ಶಾರೂಕ್‌ (27), ಸೊಹೇಲ್ (26), ಚಿಕ್ಕಮಗಳೂರು ಜಿಲ್ಲೆ ಆಲದೂರಿನ ಎಚ್.ಕೆ. ಸುಶೀಲಾ (35) ಮೃತಪಟ್ಟಿದ್ದಾರೆ ಹಾಗೂ … Continued

‘ಕಾಂಗ್ರೆಸ್ ಚೋಡೋ, ಬಿಜೆಪಿ ಕೋ ಜೋಡೋ’: ಕಾಂಗ್ರೆಸ್‌ನ 11 ಶಾಸಕರಲ್ಲಿ 8 ಮಂದಿ ಬಿಜೆಪಿಗೆ ಸೇರ್ಪಡೆ

ಪಣಜಿ: ಗೋವಾ ಕಾಂಗ್ರೆಸ್‌ನ 11 ಶಾಸಕರಲ್ಲಿ ಎಂಟು ಶಾಸಕರು ಉನ್ನತ ನಾಯಕರಾದ ದಿಗಂಬರ್ ಕಾಮತ್ ಮತ್ತು ಮೈಕೆಲ್ ಲೋಬೋ ನೇತೃತ್ವದಲ್ಲಿ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡರು. ಈಗ ಗೋವಾದಲ್ಲಿ ಪ್ರತಿಪಕ್ಷವಾದ ಕಾಂಗ್ರೆಸ್‌ ಶಾಸಕರ ಸಂಖ್ಯೆ ಕೇವಲ ಮೂರಕ್ಕೆ ಇಳಿದಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ನಡುವೆಯೇ ನಡೆದ ಈ ಸಾಮೂಹಿಕ ಪಕ್ಷಾಂತರವು ಕಾಂಗ್ರೆಸ್‌ಗೆ ಭಾರಿ ಮುಜುಗರವನ್ನುಂಟು … Continued

ಕೇವಲ 47 ಸೆಕೆಂಡ್‌ಗಳಲ್ಲಿ ಹೇರ್‌ ಕಟ್‌ ಮಾಡಿ ವಿಶ್ವ ದಾಖಲೆ ನಿರ್ಮಿಸಿದ ಗ್ರೀಕ್ ಕೇಶ ವಿನ್ಯಾಸಕ | ವೀಕ್ಷಿಸಿ

ಉತ್ತಮ ಕ್ಷೌರವು ಮುಖದ ವೈಶಿಷ್ಟ್ಯಗಳನ್ನು ಹೆಚ್ಚಿಸುತ್ತದೆ. ಹೇರ್ ಸ್ಟೈಲಿಂಗ್ ಒಂದು ಕಲೆ, ಉತ್ತಮ ಕೇಶವಿನ್ಯಾಸ ಮಾಡಲುಸಾಕಷ್ಟು ತಾಳ್ಮೆ ಬೇಕಾಗುತ್ತದೆ. ಆದರೆ ಈ ನಂಬಿಕೆಗೆ ತದ್ವಿರುದ್ಧವಾಗಿ, ತನ್ನ ಗ್ರಾಹಕರ ಕೂದಲನ್ನು ಒಂದು ನಿಮಿಷದೊಳಗೆ ಕತ್ತರಿಸಿ ಗ್ರೀಕ್ ಕೇಶ ವಿನ್ಯಾಸಕ ಈಗ ಗಿನ್ನಿಸ್‌ ದಾಖಲೆ ನಿರ್ಮಿಸಿದ್ದಾರೆ. ಗ್ರೀಸ್‌ನ ಅಥೆನ್ಸ್‌ನ ಕೇಶ ವಿನ್ಯಾಸಕ ಕಾನ್ಸ್ಟಾಂಟಿನೋಸ್ ಕೌಟೌಪಿಸ್ ಅವರು ಕೇವಲ 47 … Continued

ಯಶಸ್ವಿನಿ ಯೋಜನೆ ಅಕ್ಟೋಬರ್‌ 2ರಿಂದ ಮರುಜಾರಿ: ಸಚಿವ ಸೋಮಶೇಖರ

ಬೆಂಗಳೂರು: ‘ಯಶಸ್ವಿನಿ’ ಯೋಜನೆಯನ್ನು ಹಾಲಿ ಇರುವ ಪರಿಸ್ಥಿತಿಗೆ ತಕ್ಕಂತೆ ಪರಿಷ್ಕರಿಸಿ ಬರುವ ಅಕ್ಟೋಬರ್‌ 2ರಿಂದ ಮರುಜಾರಿ ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ವಿಧಾನ ಪರಿಷತ್ತಿಗೆ ತಿಳಿಸಿದರು. ಕಾಂಗ್ರೆಸ್‌ನ ಪ್ರಕಾಶ ರಾಥೋಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮೀಣ ಪ್ರದೇಶದ ರೈತ ಕುಟುಂಬಗಳಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಬಜೆಟ್‌ನಲ್ಲಿ 300 ಕೋಟಿ ರು. … Continued

ಮತ್ತೊಂದು ಕೋವಿಡ್ ರೂಪಾಂತರವು ಈಗ ಹರಡುತ್ತಿದೆ – ಇದರ ಬಗ್ಗೆ ನಾವು ತಿಳಿದುಕೊಳ್ಳಬೇಕಾದದ್ದು…

ಲಂಡನ್: ಅಮೆರಿಕದಲ್ಲಿ ವೇಗವಾಗಿ ಕೊರೊನಾ ಹೆಚ್ಚಳಕ್ಕೆ ಕಾರಣವಾಗಿರುವ ಕೋವಿಡ್‌ನ ಓಮಿಕ್ರಾನ್ ರೂಪಾಂತರದ ಉಪರೂಪವಾದ BA.4.6, ಇದೀಗ ಬ್ರಿಟನ್‌ನಲ್ಲಿ ಹರಡುತ್ತಿದೆ ಎಂದು ದೃಢಪಡಿಸಲಾಗಿದೆ. ಬ್ರಿಟನ್ನಿನ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (UKHSA) ಯ ಇತ್ತೀಚಿನ ಬ್ರೀಫಿಂಗ್ ಡಾಕ್ಯುಮೆಂಟಿನಲ್ಲಿ BA.4.6 ಬ್ರಿಟನ್ನಿನಲ್ಲಿ 3.3%ರಷ್ಟು ಮಾದರಿಗಳನ್ನು ಹೊಂದಿದೆ ಎಂದು ಗಮನಿಸಿದೆ. ಅಂದಿನಿಂದ ಇದು ಈಗ ಅನುಕ್ರಮ ಪ್ರಕರಣಗಳಲ್ಲಿ ಸುಮಾರು 9%ರಷ್ಟು ಬೆಳೆದಿದೆ. … Continued

ಗೋವಾದ 8 ಕಾಂಗ್ರೆಸ್ ಶಾಸಕರು ಇಂದು ಬಿಜೆಪಿ ಸೇರಬಹುದು : ಮೂಲಗಳು

ಪಣಜಿ: ಕೇವಲ ಎರಡು ತಿಂಗಳ ನಂತರ ಕಾಂಗ್ರೆಸ್ ಪಕ್ಷಾಂತರದ ಪ್ರಯತ್ನವನ್ನು ನಿಲ್ಲಿಸಿದೆ ಎಂದು ತೋರುತ್ತಿದೆ, ಅದರ 11 ಶಾಸಕರ ಪೈಕಿ ಎಂಟು ಶಾಸಕರು ಇಂದು, ಬುಧವಾರ ಆಡಳಿತಾರೂಢ ಬಿಜೆಪಿಗೆ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ವಿಧಾನಸಭಾ ಸ್ಪೀಕರ್ ಮತ್ತು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯ ಬಿಜೆಪಿ ಮುಖ್ಯಸ್ಥ ಸದಾನಂದ ಶೇಟ್ ತನವಾಡೆ … Continued

ಮಕ್ಕಳ ಕಳ್ಳರೆಂದು ಶಂಕಿಸಿ ಪಂಢರಪುರಕ್ಕೆ ಹೋಗುತ್ತಿದ್ದ ನಾಲ್ವರು ಸಾಧುಗಳ ಮೇಲೆ ದೊಣ್ಣೆಯಿಂದ ಥಳಿಸಿ ಹಲ್ಲೆ

ಮುಂಬೈ: ಮಂಗಳವಾರ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರೆಂದು ಶಂಕಿಸಿ ನಾಲ್ವರು ಸಾಧುಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಸಾಂಗ್ಲಿ ಜಿಲ್ಲೆಯ ಲವಣ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಜನ ವಸತಿ ಪ್ರದೇಶದಲ್ಲಿ ಸಾಧುಗಳನ್ನು ದೊಣ್ಣೆಯಿಂದ ಥಳಿಸುತ್ತಿರುವುದು ಕಂಡುಬಂದಿದೆ. … Continued