ರಾಹುಲ್ ಗಾಂಧಿಗೆ ಮತ್ತೆ ಅಧ್ಯಕ್ಷರಾಗುವಂತೆ ಕಾಂಗ್ರೆಸ್‌ನಲ್ಲಿ ಜೋರಾದ ಧ್ವನಿ

ನವದೆಹಲಿ: ಪುನಃ ಕಾಂಗ್ರೆಸ್‌ ಅಧ್ಯಕ್ಷರಾಗುವಂತೆ ದೇಶಾದ್ಯಂತ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರಿಗೆ ಒತ್ತಡ ಹೇರಲು ಆರಂಭಿಸಿದ್ದಾರೆ. ರಾಜಸ್ಥಾನ, ಛತ್ತೀಸ್‌ಗಢ, ಅಸ್ಸಾಂ, ಒಡಿಶಾ ಮತ್ತು ಗುಜರಾತ್‌ನ ಪಕ್ಷದ ರಾಜ್ಯ ಘಟಕಗಳು ರಾಹುಲ್‌ ಗಾಂಧಿ ಅವರನ್ನು ಮತ್ತೆ ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ನಿರ್ಣಯಗಳನ್ನು ಅಂಗೀಕರಿಸಿವೆ. ಇತರ ರಾಜ್ಯ ಘಟಕಗಳು ಇದೇ ರೀತಿಯ ನಿರ್ಣಯಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. … Continued

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಡಾ.ಪುಷ್ಪಾ ಆಯ್ಕೆ

posted in: ರಾಜ್ಯ | 0

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಕವಯತ್ರಿ ಹಾಗೂ ಲೇಖಕಿ ಡಾ.ಎಚ್‌.ಎಲ್‌. ಪುಷ್ಪಾ ಅವರು ಆಯ್ಕೆಯಾಗಿದ್ದಾರೆ. ಅವರು ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿರುತ್ತಾರೆ. ಹಾಲಿ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ ಹಾಗೂ ಪುಷ್ಪಾ ಅವರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಪುಷ್ಪಾ ಅವರು 62 ಮತಗಳ ಅಂತರದಿಂದ ಜಯಗಳಿಸಿದರು. ಬೆಂಗಳೂರು … Continued

ಹುಬ್ಬಳ್ಳಿ-ಧಾರವಾಡ ಪಾಲಿಕೆಯಿಂದ 26ರಂದು ಸೆಪ್ಟೆಂಬರ್‌ 26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪೌರ ಸನ್ಮಾನ

posted in: ರಾಜ್ಯ | 0

ಹುಬ್ಬಳ್ಳಿ:  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಸೆಪ್ಟೆಂಬರ್‌ 26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹಮ್ಮಿಕೊಂಡಿರುವ ಪೌರ ಸನ್ಮಾನ ಸಮಾರಂಭಕ್ಕೆ ಐದು ಸಾವಿರ ಜನರನ್ನು ಆಹ್ವಾನ ನೀಡಲಾಗುವುದು ಎಂದು ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಹೇಳಿದರು. ದೇಶಪಾಂಡೆ ನಗರದ ಕರ್ನಾಟಕ ಜಿಮ್‌ಖಾನಾ ಮೈದಾನದಲ್ಲಿ ಸಮಾರಂಭ ಏರ್ಪಡಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, … Continued

200 ಕೋಟಿ ರೂ. ಸುಕೇಶ್‌ ಸುಲಿಗೆ ಹಗರಣ: ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ನಾಳೆ ಮತ್ತೊಮ್ಮೆ ಹಾಜರಾಗಲು ಸಮನ್ಸ್ ನೀಡಿದ ದೆಹಲಿ ಪೊಲೀಸರು

ನವದೆಹಲಿ: ಸುಕೇಶ ಚಂದ್ರಶೇಖರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದೆಹಲಿ ಪೊಲೀಸರು ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದ್ದಾರೆ. ನಾಳೆ, ಸೋಮವಾರ (ಸೆಪ್ಟೆಂಬರ್‌ 19) ಬೆಳಗ್ಗೆ 11 ಗಂಟೆಗೆ ಆರ್ಥಿಕ ಅಪರಾಧ ವಿಭಾಗದ ಮುಂದೆ ಹಾಜರಾಗುವಂತೆ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸೂಚಿಸಲಾಗಿದೆ. ಸುಲಿಗೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಮೂರನೇ … Continued

‌ಅಯ್ಯೋ ರಾಮಾ..: ಮಹಿಳೆಯ ಹೊಟ್ಟೆಯಿಂದ 55 ಬ್ಯಾಟರಿಗಳನ್ನು ಹೊರತೆಗೆದ ವೈದ್ಯರು…! ಇದು ಈವರೆಗೆ ವರದಿಯಾದ ಅತ್ಯಧಿಕ ಸಂಖ್ಯೆ…!!

ವೈದ್ಯರು ಉದ್ದೇಶಪೂರ್ವಕವಾಗಿ ಸ್ವಯಂ-ಹಾನಿ ಮಾಡಿಕೊಳ್ಳಲು ನುಂಗಿದ ಮಹಿಳೆಯ ಕರುಳು ಮತ್ತು ಹೊಟ್ಟೆಯಿಂದ 55 ಬ್ಯಾಟರಿಗಳನ್ನು ಹೊರತೆಗೆದ ವಿದ್ಯಮಾನ ಐರ್ಲೆಂಡ್‌ನಲ್ಲಿ ನಡೆದಿದೆ. ಐರಿಶ್ ಮೆಡಿಕಲ್ ಜರ್ನಲ್‌ನಲ್ಲಿ ಗುರುವಾರ (ಸೆ. 15) ಪ್ರಕಟವಾದ ಪ್ರಕರಣದ ವರದಿಯ ಪ್ರಕಾರ, ಆರಂಭದಲ್ಲಿ “ಗೊತ್ತಿರದ ಸಂಖ್ಯೆಯ” ಸಿಲಿಂಡರಾಕಾರದ ಹೊಸ ಟ್ಯಾಬ್ ಬ್ಯಾಟರಿಗಳನ್ನು ನುಂಗಿದ ನಂತರ, 66 ವರ್ಷದ ಮಹಿಳೆ ಡಬ್ಲಿನ್‌ನ ಸೇಂಟ್ ವಿನ್ಸೆಂಟ್ಸ್ … Continued

ಓಣಂ ಬಂಪರ್ ಲಾಟರಿಯಲ್ಲಿ ಆಟೋರಿಕ್ಷಾ ಚಾಲಕನಿಗೆ ಒಲಿದುಬಂತು 25 ಕೋಟಿ ರೂ.ಗಳ ಮೊದಲ ಬಹುಮಾನ…!

ತಿರುವನಂತಪುರಂ: ಕೇರಳದ ರಾಜಧಾನಿ ತಿರುವನಂತಪುರಂನ ಶ್ರೀವರಹಂ ನಿವಾಸಿ ಅನೂಪ್ ಅವರು ರಾಜ್ಯ ಲಾಟರಿ ಇಲಾಖೆಯ ತಿರುವೋಣಂ ಬಂಪರ್ ಲಾಟರಿಯಲ್ಲಿ 25 ಕೋಟಿ ರೂ.ಗಳನ್ನು ಗೆದ್ದಿದ್ದಾರೆ. ಭಾನುವಾರ ಮಧ್ಯಾಹ್ನ ನಡೆದ ಡ್ರಾದ ಸಮಯದಲ್ಲಿ ಅವರು ಖರೀಸಿದ ಟಿಕೆಟ್ — ಸಂಖ್ಯೆ TJ-750605ಕ್ಕೆ 25 ಕೋಟಿ ರೂ.ಗಳ ಬಂಪರ್‌ ಬಹುಮಾನ ಸಿಕ್ಕಿದೆ. ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಅನೂಪ್ ಅವರು … Continued

ಕುಮಟಾ: ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘಟನೆ ರಾಜ್ಯಾಧ್ಯಕ್ಷರಾಗಿ ರವೀಂದ್ರ ಭಟ್ಟ ಸೂರಿ ಆಯ್ಕೆ

posted in: ರಾಜ್ಯ | 0

ಕುಮಟಾ: ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘಟನೆ ರಚನೆಯಾಗಿದ್ದು ರಾಜ್ಯಾಧ್ಯಕ್ಷರಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆ ಪ್ರಾಥಮಿಕ ಶಾಲೆಯ ದೈಹಿಕ  ಶಿಕ್ಷಣ ಶಿಕ್ಷಕ ರವೀಂದ್ರ ಭಟ್ಟ ಸೂರಿ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಇಂದು, ಭಾನುವಾರ ಬೆಂಗಳೂರಿನ ಐಸಾಕ್ ನ್ಯೂಟನ್ ಹೈಸ್ಕೂಲ್ ಸಭಾಂಗಣದಲ್ಲಿ … Continued

ಕಾಶ್ಮೀರದಲ್ಲಿ 35 ವರ್ಷಗಳ ಬಳಿಕ ಸಿನಿಮಾ ಥಿಯೇಟರ್‌ಗಳು ಆರಂಭ, ಪುಲ್ವಾಮಾ-ಶೋಪಿಯಾನ್‌ದಲ್ಲಿ ಚಾಲನೆ..! ಶ್ರೀನಗರದಲ್ಲಿ ರಾಜ್ಯದ ಮೊದಲ ಮಲ್ಟಿಪ್ಲೆಕ್ಸ್ ಮಂಗಳವಾರ ಉದ್ಘಾಟನೆ

ಶ್ರೀನಗರ : ಕಾಶ್ಮೀರ ಕಣಿವೆಯ ಮೊದಲ ಮಲ್ಟಿಪ್ಲೆಕ್ಸ್ ಸೆಪ್ಟೆಂಬರ್ 20 ರಂದು ಈ ರಾಜಧಾನಿಯ ಹೆಚ್ಚಿನ ಭದ್ರತಾ ವಲಯದ ಸೋನ್ವಾರ್ ಪ್ರದೇಶದಲ್ಲಿ ಅನಾವರಣಗೊಳ್ಳಲು ಸಿದ್ಧವಾಗಿದೆ.ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮಂಗಳವಾರ ಬೆಳಿಗ್ಗೆ 11:00 ಗಂಟೆಗೆ INOX ವಿನ್ಯಾಸಗೊಳಿಸಿದ ಮಲ್ಟಿಪ್ಲೆಕ್ಸ್ ಅನ್ನು ಉದ್ಘಾಟಿಸಲಿದ್ದಾರೆ. ಪ್ರಮುಖ ಕಾಶ್ಮೀರಿ ಉದ್ಯಮಿ ಮತ್ತು ಯೋಜನೆಯ ಹಿಂದಿನ … Continued

29 ವರ್ಷದ ತಮಿಳು ನಟಿ ದೀಪಾ ಅಪಾರ್ಟ್‌ಮೆಂಟ್‌ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಚೆನ್ನೈ: ಮತ್ತೊಬ್ಬ ಯುವ ನಟಿ ಸಾವು ಚಿತ್ರರಂಗವನ್ನು ದಿಗ್ಭ್ರಮೆಗೊಳಿಸಿದೆ, ಈ ಬಾರಿ ತಮಿಳು ಚಿತ್ರರಂಗದಲ್ಲಿ ಇದು ಸಂಭವಿಸಿದೆ. ಆರಂಭಿಕ ಪೋಲೀಸ್ ವರದಿಯ ಪ್ರಕಾರ ದೀಪಾ ಎಂಬ ಹೆಸರಿನಿಂದ ಕರೆಯಲ್ಡುವ ತಮಿಳು ಯುವ ನಟಿ ಪಾಲಿನ್ ಜೆಸ್ಸಿಕಾ ಅವರು ತಮ್ಮ ಅಪಾರ್ಟ್ಮೆಂಟಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಶವ ಆಕೆಯ ಮನೆಯ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. … Continued

ಸಂಸತ್ತಿನಲ್ಲಿ ಮಹಿಳಾ ಕೋಟಾ: “ಉತ್ತರ ಭಾರತದ ಮನಸ್ಥಿತಿ” ಇನ್ನೂ ಅನುಕೂಲಕರವಾಗಿಲ್ಲ ಎಂದ ಶರದ್ ಪವಾರ್

ಪುಣೆ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ಉತ್ತರ ಭಾರತ ಮತ್ತು ಸಂಸತ್ತಿನ “ಮನಸ್ಸು” ಇನ್ನೂ ಅನುಕೂಲಕರವಾಗಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. ಪುಣೆಯ ವೈದ್ಯರ ಸಂಘವು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮತ್ತು ಅವರ ಪುತ್ರಿ, ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ಅವರನ್ನು ಸಂದರ್ಶನ ಮಾಡಿದ … Continued