ವಿಧಾನಸಭೆಯಲ್ಲಿ ಮತಾಂತರ ವಿರೋಧಿ ಮಸೂದೆ ಅಂಗೀಕಾರ

ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್‌ನ ಪ್ರತಿಭಟನೆ ಮತ್ತು ವಾಕ್‌ ಔಟ್ ನಡುವೆ, ಕರ್ನಾಟಕ ವಿಧಾನಸಭೆ ಬುಧವಾರ “ಮತಾಂತರ ವಿರೋಧಿ ಮಸೂದೆ” ಯನ್ನು ಅಂಗೀಕರಿಸಿತು. ಕಳೆದ ವಾರ ವಿಧಾನ ಪರಿಷತ್ತು ಅಂಗೀಕರಿಸಿತ್ತು. ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ರಕ್ಷಣಾ ಮಸೂದೆಯನ್ನು ಈ ಹಿಂದೆ ವಿಧಾನಸಭೆಯು ಕಳೆದ ಡಿಸೆಂಬರ್‌ನಲ್ಲಿ ಅಂಗೀಕರಿಸಿತ್ತು. ಆಗ ಆಡಳಿತಾರೂಢ ಬಿಜೆಪಿಗೆ ಬಹುಮತದ ಕೊರತೆಯಿದ್ದ ಈ ವಿಧೇಯಕವು ವಿಧಾನ … Continued

ಕಾಡಾನೆ ದಾಳಿಯಿಂದ ಬೆಳೆ ಹಾನಿಯಾದರೆ ಪರಿಹಾರ ಹೆಚ್ಚಳ : ಸಿಎಂ ಬೊಮ್ಮಾಯಿ

ಬೆಂಗಳೂರು: ಕಾಡಾನೆ ದಾಳಿಯಿಂದಾದ ಬೆಳೆ ಹಾನಿ ಪರಿಹಾರ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಬುಧವಾರ ವಿಧಾನಸಭೆಯ ಸದನದಲ್ಲಿ ನಿಯಮ 69 ಅಡಿಯಲ್ಲಿ ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ವಿಚಾರವಾಗಿ ನಡೆದ ಚರ್ಚೆಯ ಸಂದರ್ಭದಲ್ಲಿ ಅವರು ಉತ್ತರಿಸಿದರು. ಸಕಲೇಶಪುರ ಶಾಸಕ ಎಚ್. ಕೆ. ಕುಮಾರಸ್ವಾಮಿ ಅವರು ಸರ್ಕಾರದ ಗಮನ ಸೆಳೆದು ಆನೆ … Continued

ಗುಜರಾತ್ ಗಲಭೆ: ಸಾಕ್ಷ್ಯ ತಿರುಚಿದ ಪ್ರಕರಣದಲ್ಲಿ ತೀಸ್ತಾ ಸೆತಲ್ವಾಡ್, ಇತರ ಇಬ್ಬರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಎಸ್‌ಐಟಿ

ಅಹಮದಾಬಾದ್‌: ವಿಶೇಷ ತನಿಖಾ ತಂಡವು (SIT) 2002 ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದ ಪ್ರಕರಣದಲ್ಲಿ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಆರ್.ಬಿ.ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್ ಭಟ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಅಹಮದಾಬಾದ್‌ನ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ … Continued

ಮೂನ್‌ಲೈಟಿಂಗ್‌: 300 ಉದ್ಯೋಗಿಗಳನ್ನು ವಜಾ ಮಾಡಿದ ವಿಪ್ರೋ

ನವದೆಹಲಿ: ಪ್ರಮುಖ ಐಟಿ ಕಂಪನಿಗಳ ಮೂನ್‌ಲೈಟಿಂಗ್ ಕುರಿತು ಮಾತುಕತೆಗಳ ನಡುವೆ, ವಿಪ್ರೋ ತನ್ನ ಪ್ರಮುಖ ಪ್ರತಿಸ್ಪರ್ಧಿ ಕಂಪನಿಯೊಂದಿಗೆ ಒಂದೇ ಸಮಯದಲ್ಲಿ ಮೂನ್‌ಲೈಟ್ ಮಾಡುತ್ತಿದ್ದ 300 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಅದರ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಬುಧವಾರ ಹೇಳಿದ್ದಾರೆ. ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ​​(AIMA) ರಾಷ್ಟ್ರೀಯ ನಿರ್ವಹಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಮೂನ್‌ಲೈಟಿಂಗ್ ಅನ್ನು “ಅದರ … Continued

ಭಾರತ್ ಜೋಡೋ ಯಾತ್ರೆ ಪೋಸ್ಟರ್‌ನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಸಾವರ್ಕರ್ ಚಿತ್ರ : ಮುಜುಗರದ ನಂತರ ಇದು ‘ಮುದ್ರಣ ದೋಷ’ ಎಂದ ಕಾಂಗ್ರೆಸ್…! ವೀಕ್ಷಿಸಿ

ಕೊಚ್ಚಿ: ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದ ಮತ್ತೊಂದು ವಿವಾದದಲ್ಲಿ, ಕೇರಳದ ಕಾಂಗ್ರೆಸ್ ತಮ್ಮ ನಾಯಕರನ್ನು ಸ್ವಾಗತಿಸುವ ದೊಡ್ಡ ಪೋಸ್ಟರ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನಡುವೆ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ ಚಿತ್ರವೂ ಕಾಣಿಸಿಕೊಂಡಿದೆ. ಕೇರಳದ ಕೊಚ್ಚಿಯಲ್ಲಿ ಅಲುವಾಗೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಸ್ಥಳೀಯ ಕಾಂಗ್ರೆಸ್ ಮುಖಂಡರು … Continued

ಟಿವಿ ಚಾನೆಲ್‌ಗಳಿಂದ ದ್ವೇಷ ಭಾಷಣ ನಿಭಾವಣೆ: ಸುಪ್ರೀಂಕೋರ್ಟ್ ಅತೃಪ್ತಿ

ನವದೆಹಲಿ: ದೇಶದ ಮುಖ್ಯವಾಹಿನಿಯ ಟಿವಿ ಸುದ್ದಿ ವಾಹಿನಿಗಳ ಕಾರ್ಯವೈಖರಿ ಬಗ್ಗೆ ಸುಪ್ರೀಂಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅವು ಆಗಾಗ್ಗೆ ದ್ವೇಷ ಭಾಷಣಕ್ಕೆ ಅವಕಾಶ ಕಲ್ಪಿಸಿ ಬಳಿಕ ಶಿಕ್ಷೆ, ನಿರ್ಬಂಧಗಳಿಲ್ಲದೆ ತಪ್ಪಿಸಿಕೊಳ್ಳುತ್ತವೆ ಎಂದು ಹೇಳಿದೆ. ಟಿವಿಗಳಲ್ಲಿ ನಿರೂಪಕರ ಪಾತ್ರ ಬಹಳ ಮುಖ್ಯ. ಮುಖ್ಯವಾಹಿನಿಯ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಭಾಷಣಗಳು ಅನಿಯಂತ್ರಿತವಾಗಿವೆ. ದ್ವೇಷ ಭಾಷಣ … Continued

ರಾಜ್ಯದಲ್ಲಿ ಏಳು ಹೊಸ ವಿವಿ ಸ್ಥಾಪನೆಗಾಗಿ ಮಸೂದೆ ಅಂಗೀಕಾರ

ಬೆಂಗಳೂರು: ಹಾವೇರಿ, ಬಾಗಲಕೋಟೆ, ಕೊಪ್ಪಳ, ಬೀದರ್‌, ಕೊಡಗು, ಚಾಮರಾಜನಗರ ಹಾಗೂ ಹಾಸನ ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ 2022 ಕ್ಕೆ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರ ದೊರೆಯಿತು. ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಅವರು ಮಸೂದೆ ಮಂಡಿಸಿ, ಏಳು ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂಬ ಬೇಡಿಕೆ ಇತ್ತು. … Continued

ಪೇ-ಸಿಎಂ ಅಭಿಯಾನದ ಮೂಲಕ ರಾಜ್ಯ-ನನ್ನ ಹೆಸರು ಕೆಡಿಸಲು ಷಡ್ಯಂತ್ರ: ಸಿಎಂ ಬೊಮ್ಮಾಯಿ ಆಕ್ರೋಶ

ಬೆಂಗಳೂರು: ಪೇ – ಸಿಎಂ ಅಭಿಯಾನ ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ನಡೆಸಿರುವ ಷಡ್ಯಂತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಬುಧವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇದು ವ್ಯವಸ್ಥಿತವಾಗಿ ಕರ್ನಾಟಕ ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ಮಾಡಿರುವ ಷಡ್ಯಂತ್ರ. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಪ್ರಕರಣ ದಾಖಲು ಮಾಡಲು ಸೂಚಿಸಿದ್ದೇನೆ … Continued

ಬಾಲಕಿ ಕಾಪಾಡಲು ಹೋಗಿ ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋದ ಸಹೋದರರು

ರಾಯಚೂರು: ಕೃಷ್ಣಾ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಅಣ್ಣನ ಮಗಳನ್ನು ಕಾಪಾಡಲು ಹೋಗಿ ಅಣ್ಣತಮ್ಮಂದಿರಿಬ್ಬರು ನದಿಯಲ್ಲಿ ಕೊಚ್ಚಿ ಹೋದ ಘಟನೆ ರಾಯಚೂರು ತಾಲೂಕಿನ ದೇವದುರ್ಗದ ಕೋಪ್ಪರ ಗ್ರಾಮದ ಬಳಿ ಸಂಭವಿಸಿದ ವರದಿಯಾಗಿದೆ. ಕೊಚ್ಚಿ ಹೋದವರನ್ನು ರಜಾಕ್ ಮುಲ್ಲಾಉಸ್ಮಾನ್ (35), ಮೌಲಾಲಿ ಉಸ್ಮಾನ (32) ಎಂದು ಹೇಳಲಾಗಿದೆ. ಕೊಪ್ಪರ ಗ್ರಾಮದ ಇವರು ಕುಟುಂಬ ಸಮೇತ ನದಿ ದಂಡೆಯಲ್ಲಿ ಬಟ್ಟೆ … Continued