ರತನ್‌ ಟಾಟಾ ಈಗ ಪಿಎಂ ಕೇರ್ಸ್‌ ಫಂಡ್‌ ಟ್ರಸ್ಟಿ, ಸುಧಾಮೂರ್ತಿ ಸಲಹಾ ಮಂಡಳಿಗೆ ನೇಮಕ

ನವದೆಹಲಿ: ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಯ (PM-CARES) ಮೂರು ಹೊಸ ಟ್ರಸ್ಟಿಗಳಲ್ಲಿ ಒಬ್ಬರಾಗಿ ನೇಮಕವಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಕೇಂದ್ರ ಗೃಹ ಸಚಿವರು ಮತ್ತು ಕೇಂದ್ರ ಹಣಕಾಸು ಸಚಿವರನ್ನು ಒಳಗೊಂಡ ಪಿಎಂ-ಕೇರ್ಸ್ ಟ್ರಸ್ಟಿಗಳ ಮಂಡಳಿಯ ಸಭೆಯ ಅಧ್ಯಕ್ಷತೆ … Continued

ಪ್ರೊ ಕಬಡ್ಡಿ ಲೀಗ್ ಸೀಸನ್-9 ಬೆಂಗಳೂರಲ್ಲಿ ಅಕ್ಟೋಬರ್ 7ರಂದು ಆರಂಭ

ಪ್ರೊ ಕಬಡ್ಡಿ ಲೀಗ್‌ನ ಒಂಬತ್ತನೇ ಸೀಸನ್ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 7 ರಂದು ಪ್ರಾರಂಭವಾಗಲಿದೆ ಎಂದು ಮಶಾಲ್ ಸ್ಪೋರ್ಟ್ಸ್ ಬುಧವಾರ ಪ್ರಕಟಿಸಿದೆ. ಋತುವಿನ ಮೊದಲ ಹಂತವು ಅಕ್ಟೋಬರ್ 7ರಿಂದ ಬೆಂಗಳೂರಿನಲ್ಲಿ ನಡೆಯಲಿದ್ದು, ಅದರ ಮುಂದಿನ ಹಂತಕ್ಕಾಗಿ ಅಕ್ಟೋಬರ್ 28 ರಂದು ಪುಣೆಯ ಬಾಲೆವಾಡಿಯ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಳ್ಳಲಿದೆ ಎಂದು … Continued

ಸರ್ಕಾರದ ವಿರುದ್ಧ ಪ್ರತಿಭಟಿಸಲು ಹಸುವನ್ನೇ ವಿಧಾನಸೌಧಕ್ಕೆ ಕರೆತಂದ ರಾಜಸ್ಥಾನ ಶಾಸಕ, ಮಾತನಾಡುತ್ತಿದ್ದಾಗಲೇ ಪರಾರಿಯಾದ ಗೋವು..| ವೀಕ್ಷಿಸಿ

ಬಿಜೆಪಿ ಶಾಸಕ ಸುರೇಶ್ ಸಿಂಗ್ ರಾವತ್ ಅವರು ಸೋಮವಾರ ರಾಜಸ್ಥಾನ ವಿಧಾನಸಭೆಗೆ ಹಸುವಿನ ಜೊತೆ ಆಗಮಿಸಿ ಮುದ್ದೆ ಚರ್ಮದ ಕಾಯಿಲೆ (lumpy skin disease)ಯ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದರು. ಆದರೆ, ಸಚಿವರು ವಿಧಾನಸೌಧದ ಗೇಟ್‌ ಸಮೀಪ ಮಾಧ್ಯಮದವರ ಜೊತೆ ಮಾತನಾಡುತ್ತಿರುವಾಗ ಹಸು ಅಕ್ಷರಶಃ ಓಡಿಹೋಗಿದೆ..! ರಾವತ್ ವಿಧಾನಸಭೆ ಗೇಟ್‌ನ ಹೊರಗೆ ಶಾಸಕರು ಮಾತನಾಡುತ್ತಿರುವಾಗ … Continued

ಪ್ರಯಾಣದ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬೇಷರ್‌ ಕಮ್ಷೆಯಾಚಿಸಿದ ರಾಬರ್ಟ್ ವಾದ್ರಾ: ಇ.ಡಿ. ಅರ್ಜಿಯ ತೀರ್ಪು ನಾಳೆ ಪ್ರಕಟಿಸಲಿರುವ ದೆಹಲಿ ಕೋರ್ಟ್‌

ನವದೆಹಲಿ: ವಿದೇಶಿ ಪ್ರಯಾಣಕ್ಕೆ ನ್ಯಾಯಾಲಯ ವಿಧಿಸಿರುವ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಉದ್ಯಮಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ರಾಬರ್ಟ್ ವಾದ್ರಾ ವಿರುದ್ಧ ಸ್ಥಿರ ಠೇವಣಿ ಮತ್ತು ಕಾನೂನು ಕ್ರಮಗಳನ್ನು ಪ್ರಾರಂಭಿಸಲು ಜಾರಿ ನಿರ್ದೇಶನಾಲಯ (ಇಡಿ) ಮಾಡಿದ ಮನವಿಯ ಕುರಿತು ದೆಹಲಿ ನ್ಯಾಯಾಲಯವು ಬುಧವಾರ ತನ್ನ ಆದೇಶವನ್ನು ನಾಳೆ ಗುರುವಾರಕ್ಕೆ ಕಾಯ್ದಿರಿಸಿದೆ ಎಂದು ಹಿಂದುಸ್ತಾನ್‌ಟೈಮ್ಸ್‌.ಕಾಮ್‌ ವರದಿ … Continued

ಜೈಲರ್‌ಗೆ ಬೆದರಿಕೆ ಹಾಕಿದ ಆರೋಪ: ಉತ್ತರ ಪ್ರದೇಶ ಮಾಜಿ ಶಾಸಕ ಮುಖ್ತಾರ್ ಅನ್ಸಾರಿಗೆ 2 ವರ್ಷ ಜೈಲು ಶಿಕ್ಷೆ

ನವದೆಹಲಿ: ಜೈಲರ್‌ಗೆ ಬೆದರಿಕೆ ಮತ್ತು ಪಿಸ್ತೂಲ್ ತೋರಿಸಿದ ಆರೋಪದಲ್ಲಿ ಗ್ಯಾಂಗ್‌ಸ್ಟರ್-ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ದೋಷಿ ಎಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಬುಧವಾರ ತೀರ್ಪು ನೀಡಿದೆ. ಅನ್ಸಾರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಉತ್ತರ ಪ್ರದೇಶ ಸರ್ಕಾರದ ಅರ್ಜಿಯ ವಿಚಾರಣೆ ವೇಳೆ ಈ … Continued

Instagram ದೋಷ ಕಂಡುಹಿಡಿದ ಜೈಪುರ ವಿದ್ಯಾರ್ಥಿಗೆ 38 ಲಕ್ಷ ರೂಪಾಯಿ ಬಹುಮಾನ…!

ಜೈಪುರ: ಕೋಟ್ಯಂತರ ಜನರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಆಗದಂತೆ ಕಾಪಾಡಿದ್ದಕ್ಕಾಗಿ ಜೈಪುರದ ನೀರಜ್ ಶರ್ಮಾ ಎಂಬ ವಿದ್ಯಾರ್ಥಿ ಇನ್‌ಸ್ಟಾಗ್ರಾಮ್‌ನಿಂದ 38 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ. ಮಾಹಿತಿಯ ಪ್ರಕಾರ, ಶರ್ಮಾ ಇನ್‌ಸ್ಟಾಗ್ರಾಮ್‌ನಲ್ಲಿ ದೋಷವನ್ನು ಕಂಡುಹಿಡಿದಿದ್ದಾರೆ, ಇದರಿಂದಾಗಿ ಲಾಗಿನ್ ಮತ್ತು ಪಾಸ್‌ವರ್ಡ್ ಇಲ್ಲದೆ ಯಾವುದೇ ಬಳಕೆದಾರರ ಖಾತೆಯಲ್ಲಿ ಥಂಬ್‌ನೇಲ್‌ಗಳನ್ನು ಬದಲಾಯಿಸಬಹುದಾಗಿತ್ತು. ಈ ದೋಷದ ಬಗ್ಗೆ ಇನ್‌ಸ್ಟಾಗ್ರಾಮ್ … Continued

‘ಪೇ ಸಿಎಂ’ ಘೋಷಣೆಯ ಭಿತ್ತಿಪತ್ರ- ಕ್ಯೂ ಆರ್ ಕೋಡ್ ಅಭಿಯಾನ ಆರಂಭಿಸಿದ ಕಾಂಗ್ರೆಸ್

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ‘ಶೇ 40 ಕಮಿಷನ್ ಸರ್ಕಾರ’ವೆಂದು ಆರೋಪಿಸಿ ‘ಪೇ ಸಿಎಂ’ (Pay CM) ಘೋಷಣೆಯ ಭಿತ್ತಿಪತ್ರ ಮತ್ತು ಕ್ಯೂ ಆರ್ ಕೋಡ್ ಸಹಿತ ಕಾಂಗ್ರೆಸ್ ಪಕ್ಷವು ಅಭಿಯಾನ ಆರಂಭಿಸಿದೆ. ಬೆಂಗಳೂರು ನಗರದ ವಿವಿಧೆಡೆ ಮುಖ್ಯಮಂತ್ರಿ ಚಿತ್ರ ಸಹಿತ ಈ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ರಾಜ್ಯ ಸರ್ಕಾರದ … Continued

ರಷ್ಯಾ ಸೇನೆಯ ಭಾಗಶಃ ಸಜ್ಜುಗೊಳಿಸುವಿಕೆಗೆ ಪುತಿನ್ ಆದೇಶ, ವಿರೋಧಿಗಳಿಗೆ ಎಚ್ಚರಿಕೆ

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಬುಧವಾರ ರಷ್ಯಾದ ಸೇನೆಯ ಭಾಗಶಃ ಸಜ್ಜುಗೊಳಿಸುವಿಕೆಗೆ ಆದೇಶಿಸಿದ್ದಾರೆ. ಎರಡನೇ ಮಹಾಯುದ್ಧದ ನಂತರ ರಷ್ಯಾ ಅಧ್ಯಕ್ಷರೊಬ್ಬರು ನೀಡಿದ ಈ ರೀತಿಯ ಮೊದಲ ಆದೇಶ ಇದಾಗಿದೆ. ಪಾಶ್ಚಿಮಾತ್ಯ ದೇಶಗಳು ‘ಪರಮಾಣು ಬ್ಲ್ಯಾಕ್‌ಮೇಲ್’ಮುಂದುವರೆಸಿದರೆ ರಷ್ಯಾ ತನ್ನ ಎಲ್ಲ ವಿಶಾಲವಾದ ಶಸ್ತ್ರಾಗಾರದ ಶಕ್ತಿಯೊಂದಿಗೆ ಪ್ರತಿಕ್ರಿಯಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ನಮ್ಮ ದೇಶದ ಪ್ರಾದೇಶಿಕ … Continued

ಸುಪ್ರೀಂಕೋರ್ಟ್ ಸಂವಿಧಾನ ಪೀಠದ ವಿಚಾರಣೆ ಸೆಪ್ಟೆಂಬರ್ 27ರಿಂದ ನೇರ ಪ್ರಸಾರ

ನವದೆಹಲಿ : ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ವಿಚಾರಣೆಗಳು ಸೆಪ್ಟೆಂಬರ್ 27 ರಿಂದ ಲೈವ್ ಸ್ಟ್ರೀಮ್ ಆಗಲಿವೆ. ಮಂಗಳವಾರ ಎಲ್ಲಾ ನ್ಯಾಯಾಧೀಶರ ನಡುವೆ ಈ ವಿಷಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಚರ್ಚಿಸಿದ ನಂತರ ಈ ನಿರ್ಧಾರವು ಬಂದಿದೆ, ಇದರಲ್ಲಿ ಪ್ರಕ್ರಿಯೆಗಳನ್ನು ಲೈವ್ ಸ್ಟ್ರೀಮ್ ಮಾಡಲು ನಿರ್ಧರಿಸಲಾಯಿತು. ಬೆಳವಣಿಗೆಯ ಬಗ್ಗೆ ತಿಳಿದಿರುವ ಜನರ ಪ್ರಕಾರ, ನ್ಯಾಯಾಧೀಶರು ಸೆಪ್ಟೆಂಬರ್ 27ರಿಂದ … Continued

ಫಲಿಸದ ಚಿಕಿತ್ಸೆ: ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ ನಿಧನ

ನವದೆಹಲಿ; ಆಗಸ್ಟ್ 10 ರಂದು ಬುಧವಾರ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದ ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ ಅವರು ಜೀನ್ಮರಣದ ಮಧ್ಯೆ ಸುದೀರ್ಘ ಹೋರಾಟದ ನಂತರ ಇಂದು ಸೆಪ್ಟೆಂಬರ್ 21 ರಂದು ನಿಧನರಾಗಿದ್ದಾರೆ. ರಾಜು ಶ್ರೀವಾಸ್ತವ ಅವರ ಕುಟುಂಬ ಸದಸ್ಯರು – ಅವರ ಪತ್ನಿ, ಮಗ ಮತ್ತು ಮಗಳು – ಪ್ರಸ್ತುತ ಏಮ್ಸ್‌ನಲ್ಲಿದ್ದಾರೆ. ಅವರನ್ನು … Continued