140 ವರ್ಷದ ಹಳೆಯದಾದ ಗುಜರಾತ್ ಕೇಬಲ್‌ ಸೇತುವೆ ಕುಸಿತ : 141ಕ್ಕೆ ಏರಿದ ಸಾವಿನ ಸಂಖ್ಯೆ

ಅಹ್ಮದಾಬಾದ್: ಗುಜರಾತ್‌ನ ಮೊರ್ಬಿಯಲ್ಲಿ ಬ್ರಿಟಿಷರ ಕಾಲದ ಸೇತುವೆಯೊಂದು ನವೀಕರಣಗೊಂಡ ಒಂದು ವಾರದ ನಂತರ ಕುಸಿದು ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಸುಮಾರು 177 ಜನರನ್ನು ರಕ್ಷಿಸಲಾಗಿದೆ ಮತ್ತು ತಂಡಗಳು ಇನ್ನೂ ನಾಪತ್ತೆಯಾಗಿರುವ ಹಲವರಿಗಾಗಿ ಹುಡುಕಾಟ ನಡೆಸುತ್ತಿವೆ. ಶೋಧಕಾರ್ಯ ಹಾಗೂ ರಕ್ಷಣಾ ಕಾರ್ಯ ಮುಂದುವರಿದೆ. ಸ್ಥಳದಲ್ಲಿ ಸೇನೆ, ಎಸ್​ಡಿಆರ್​ಎಫ್, ಎನ್​ಡಿಆರ್​ಎಫ್​ ಬೀಡುಬಿಟ್ಟಿದೆ.ಭಾನುವಾರ ಸಂಜೆ 6:42ಕ್ಕೆ ತೂಗುಸೇತುವೆ ಕುಸಿಯುವ … Continued

ಆರ್‌ಎಸ್‌ಎಸ್ ನಿಜವಾದ ಕಾಫಿ, ಬಿಜೆಪಿ ಕೇವಲ ಮೇಲ್ಭಾಗದ ನೊರೆ: ಪ್ರಶಾಂತ್ ಕಿಶೋರ್ ವ್ಯಾಖ್ಯಾನ

ಪಾಟ್ನಾ: ರಾಜಕೀಯ ತಂತ್ರಜ್ಞ, ಕಾರ್ಯಕರ್ತ ಪ್ರಶಾಂತ್ ಕಿಶೋರ್ ಭಾನುವಾರ ಬಿಜೆಪಿ-ಆರ್‌ಎಸ್‌ಎಸ್ ಸಂಯೋಜನೆಯನ್ನು ಒಂದು ಕಪ್ ಕಾಫಿಗೆ ಹೋಲಿಸಿದ್ದಾರೆ. ಅದರಲ್ಲಿ ಬಿಜೆಪಿ ಪಕ್ಷವು ಕಾಫಿಯ ಮೇಲ್ಭಾಗದ ನೊರೆಯಂತಿದ್ದರೆ ಅದರ ಕೆಳಗಿರುವ ಕಾಫಿ ಮಾತೃ ಸಂಸ್ಥೆ ಆರ್‌ಆರ್‌ಎಸ್‌ ನಿಜವಾದ ವಿಷಯವಾಗಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಬಿಹಾರದಲ್ಲಿ 3500 ಕಿಲೋಮೀಟರ್ ಉದ್ದದ “ಪಾದ-ಯಾತ್ರೆ”ಯಲ್ಲಿರುವ ಪ್ರಶಾಂತ್‌ ಕಿಶೋರ್, ಪಶ್ಚಿಮ ಚಂಪಾರಣ್ … Continued

ಗುಜರಾತಿನಲ್ಲಿ 140 ವರ್ಷಗಳಷ್ಟು ಹಳೆಯ ಕೇಬಲ್ ಸೇತುವೆ ಕುಸಿದು ಕನಿಷ್ಠ 35 ಮಂದಿ ಸಾವು: ದುರಸ್ತಿ ಮಾಡಿ ಕಳೆದ ವಾರ ತೆರೆಯಲಾಗಿತ್ತು…

ಅಹ್ಮದಾಬಾದ್‌: ಗುಜರಾತ್‌ನ ಮೊರ್ಬಿ ಪ್ರದೇಶದಲ್ಲಿ ಇಂದು, ಭಾನುವಾರ ಮಚ್ಚು ನದಿಯಲ್ಲಿ ಕೇಬಲ್ ಸೇತುವೆ ಕುಸಿದ ಪರಿಣಾಮ ಕನಿಷ್ಠ 35 ಜನರು ಮೃತಪಟ್ಟಿದ್ದು, ಇನ್ನೂ ಹಲವರು ನೀರಿನಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ, ಘಟನೆ ಸಂಭವಿಸಿದಾಗ ಸುಮಾರು 400 ಜನರು ಸೇತುವೆಯ ಮೇಲೆ ಇದ್ದರು ಮತ್ತು ಸುಮಾರು 100 ಜನರು ನದಿಗೆ ಬಿದ್ದಿದ್ದಾರೆ. ವರದಿಗಳ ಪ್ರಕಾರ, … Continued

ತನ್ನ ಮದುವೆಗೆ ಪ್ರಧಾನಿ, ಯೋಗಿ ಆದಿತ್ಯನಾಥ್ ಅವರನ್ನು ಮದುವೆಗೆ ಆಹ್ವಾನಿಸಲು ಬಯಸಿದ 2.3 ಅಡಿ ಎತ್ತರದ ವ್ಯಕ್ತಿ

ನವದೆಹಲಿ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ನಿವಾಸಿ ಅಜೀಂ ಮನ್ಸೂರಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮದುವೆಗೆ ಆಹ್ವಾನಿಸಲು ಬಯಸಿದ್ದಾರೆ. 2.3 ಅಡಿ ಎತ್ತರದ ವ್ಯಕ್ತಿ ಈ ವರ್ಷದ ನವೆಂಬರ್‌ನಲ್ಲಿ ಮದುವೆಯಾಗಲು ಸಿದ್ಧರಾಗಿದ್ದಾರೆ. “ನಾನು ನವೆಂಬರ್‌ನಲ್ಲಿ ಮದುವೆಯಾಗಲಿದ್ದೇನೆ. ನಾನು ನನ್ನ ಮದುವೆಯ ಆಮಂತ್ರಣ ಪತ್ರಗಳನ್ನು ಪ್ರಧಾನಿ … Continued

ಕೇಬಲ್ ಸೇತುವೆ ಕುಸಿತ : ಹಲವರು ಗಾಯಗೊಂಡಿರುವ ಶಂಕೆ

ಗುಜರಾತ್‌ನ ಮೊರ್ಬಿ ಪ್ರದೇಶದ ಮಚ್ಚು ನದಿಯಲ್ಲಿ ಭಾನುವಾರ ಕೇಬಲ್ ಸೇತುವೆ ಕುಸಿದಿದ್ದು, ಹಲವಾರು ಮಂದಿ ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ವರದಿಗಳಿಗಾಗಿ ಕಾಯಲಾಗುತ್ತಿದೆ. ಗಾಯಗೊಂಡವರಲ್ಲಿ ಅನೇಕ ಪ್ರವಾಸಿಗರು ಇರಬಹುದು ಎಂದು ಕೆಲವು ಸ್ಥಳೀಯ ವರದಿಗಳು ತಿಳಿಸಿವೆ. ಆರಂಭಿಕ ವರದಿಗಳ ಪ್ರಕಾರ, ನವೀಕರಣದ ನಂತರ ಕೇಬಲ್ ಸೇತುವೆಯನ್ನು ಐದು ದಿನಗಳ ಹಿಂದೆ ಪುನರಾರಂಭಿಸಲಾಗಿದೆ.ಅಪಘಾತದ ಕುರಿತು ಪ್ರಧಾನಿ ನರೇಂದ್ರ … Continued

67 ಸಾಧಕರಿಗೆ 2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಂಗಳೂರು: ರಾಜ್ಯ ಸರ್ಕಾರ 2022-23ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂದು, ಭಾನುವಾರ(ಅಕ್ಟೋಬರ್‌ 30) ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು 67 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ನವೆಂಬರ್‌ 1ರಂದು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 2022ನೇ ಸಾಲಿನ ಕನ್ನಡ ರಾಜೋತ್ಸವ ಪ್ರಶಸ್ತಿಗೆ ಅರ್ಹ ಮಹನೀಯರನ್ನುಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ … Continued

ವಿಷಕಾರಿ ರಾಸಾಯನಿಕ ಬಳಸುತ್ತಿದ್ದಾರೆಂದು ಕುರಿತು ಬಿಜೆಪಿ ಸಂಸದರ ಆಕ್ರೋಶದ ನಂತರ ಯಮುನಾ ನೀರಿನಲ್ಲಿ ಸ್ನಾನ ಮಾಡಿ ತೋರಿಸಿದ ದೆಹಲಿ ಜಲ ಮಂಡಳಿ ಅಧಿಕಾರಿ| ವೀಕ್ಷಿಸಿ

ನವದೆಹಲಿ: ಛತ್ ಹಬ್ಬಕ್ಕೆ ಮುನ್ನ ಯಮುನಾ ನದಿ ನೊರೆ ತೆಗೆಯಲು ವಿಷಕಾರಿ ವಸ್ತುವನ್ನು ಬಳಸುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಛೀಮಾರಿ ಹಾಕಿದ ಕೆಲವೇ ದಿನಗಳಲ್ಲಿ, ದೆಹಲಿ ಜಲ ಮಂಡಳಿಯ ಗುಣಮಟ್ಟ ನಿಯಂತ್ರಣ ನಿರ್ದೇಶಕ ಸಂಜಯ್ ಶರ್ಮಾ ಅವರು ನದಿಯಲ್ಲಿ ಸ್ನಾನ ಮಾಡುವ ಮೂಲಕ ಇದು ವಿಷಕಾರಿಯಲ್ಲ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ … Continued

ಬಿಜೆಪಿ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು ಯಾಕೆ ಜಾರಿಗೆ ತರುತ್ತಿಲ್ಲ: ಗುಜರಾತ್‌ನಲ್ಲಿ ಪ್ರಶ್ನಿಸಿದ ಕೇಜ್ರಿವಾಲ

ನವದೆಹಲಿ: ಗುಜರಾತ್‌ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗಾಗಿ ಸಮಿತಿಯನ್ನು ರಚಿಸಲು ಸಂಪುಟ ನಿರ್ಧರಿಸಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಶನಿವಾರ ಘೋಷಿಸಿದ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರೋಧ ಪಕ್ಷಗಳಿಂದ ದಾಳಿಗೆ ಒಳಗಾಗಿದೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಂತರ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಗುಜರಾತ್‌ನಲ್ಲಿ … Continued

ಭಗತ್ ಸಿಂಗ್ ನೇಣುಗಂಬಕ್ಕೇರುವ ಪಾತ್ರದ ಅಭ್ಯಾಸ ಮಾಡುತ್ತಿದ್ದಾಗ ವಿದ್ಯಾರ್ಥಿ ಸಾವು

ಚಿತ್ರದುರ್ಗ: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ನೇಣುಗಂಬಕ್ಕೆ ಏರುವ ಪಾತ್ರದ ಪ್ರಾಕ್ಟೀಸ್‌ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೇಣು ಬಿಗಿದು ವಿದ್ಯಾರ್ಥಿಯೊಬ್ಬ ಮೃತಪಟ್ಟ ಆಘಾತಕಾರಿ ಘಟನೆ ನಗರದ ಕೆಳಗೋಟೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಸಂಜಯ್ ಗೌಡ (12) ಎಂದು ಗುರುತಿಸಲಾಗಿದೆ. ಈತ ನಗರದ ಎಸ್.ಎಲ್.ವಿ ಶಿಕ್ಷಣ ಸಂಸ್ಥೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ಹೇಳಲಾಗಿದೆ. ನವೆಂಬರ್‌ … Continued

ಬಂಡೆಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಕಣ್ಣೂರು ಶ್ರೀ, ಯುವತಿ ಸೇರಿ ಮೂವರ ಬಂಧನ

ರಾಮನಗರ: ಕೆಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಹಾಗೂ ಮಾಗಡಿಯ ಕಣ್ಣೂರು ಮಠದ ಪೀಠಾಧಿಪತಿಗಳಾದ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಾಮೀಜಿಯವರ ಜೊತೆಗೆ ಬಂಧನಕ್ಕೀಡಾಗಿರುವ ಆರೋಪಿಗಳನ್ನು ನೀಲಾಂಬಿಕೆ ಅಲಿಯಾಸ್ ಚಂದು (21), ವಕೀಲ ಹಾಗೂ  ನಿವೃತ್ತ ಶಿಕ್ಷಕ ಮಹದೇವಯ್ಯ (61) ಎಂದು ಎಂದು ಹೇಳಲಾಗಿದೆ .ಬಸವಲಿಂಗ ಶ್ರೀಗಳು ಆತ್ಮಹತ್ಯೆಗೂ … Continued