ಟ್ವಿಟರ್ ಮ್ಯಾನೇಜರ್‌ಗಳ ಬಳಿ ವಜಾಗೊಳಿಸಬೇಕಾದ ಸಿಬ್ಬಂದಿ ಪಟ್ಟಿ ಕೇಳಿದ ಎಲೋನ್ ಮಸ್ಕ್ : ವರದಿ

ನ್ಯೂಯಾರ್ಕ್‌: ಸಾಮಾಜಿಕ ಮಾಧ್ಯಮ ಕಂಪನಿ ಟ್ವಟರ್‌ ಸ್ವಾಧೀನ ಪಡಿಸಿಕೊಂಡ ನಂತರ ಎಲೋನ್ ಮಸ್ಕ್ ಟ್ವಿಟರ್‌ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಟ್ವಿಟರ್‌ನಲ್ಲಿ ಮಸ್ಕ್ “ಕಾರ್ಮಿಕರನ್ನು ವಜಾಗೊಳಿಸಲು ಪ್ರಾರಂಭಿಸಲು ಯೋಜಿಸಿದ್ದಾರೆ” ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಪರಿಸ್ಥಿತಿಯ ಜ್ಞಾನವಿರುವ ಜನರನ್ನು ಉಲ್ಲೇಖಿಸಿ, “ಉದ್ಯೋಗಿಗಳನ್ನು ಕಡಿತಗೊಳಿಸಲು ಅವರ ಪಟ್ಟಿಗಳನ್ನು ವ್ಯವಸ್ಥಾಪಕರಿಂದ ಕೇಳಲಾಗುತ್ತಿದೆ ಎಂದು … Continued

ಜೈಲಿನಲ್ಲಿ ಮಸಾಜ್ ಸೌಲಭ್ಯ ಪಡೆಯುತ್ತಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್, ಸಹ-ಆರೋಪಿಗಳನ್ನೂ ಭೇಟಿ ಮಾಡ್ತಾರೆ: ಇ.ಡಿ.ಆರೋಪ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈ ವರ್ಷ ಮೇ ತಿಂಗಳಲ್ಲಿ ಬಂಧಿತರಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರು ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಮತ್ತು ಪ್ರಕರಣದ ಸಹ-ಆರೋಪಿಗಳನ್ನು ನಿಯಮಿತವಾಗಿ ಭೇಟಿ ಮಾಡುವ ಮೂಲಕ ತನಿಖೆ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ದೆಹಲಿ … Continued

ಭಾರತ್ ಜೋಡೋ ಯಾತ್ರೆ: ಮಕ್ಕಳೊಂದಿಗೆ ರಾಹುಲ್‌ ಗಾಂಧಿ ರನ್ನಿಂಗ್‌ ರೇಸ್‌, ಅವರ ಹಿಂಬಾಲಿಸಿ ಓಡಿದ ಇತರರು | ವೀಕ್ಷಿಸಿ

ಹೈದರಾಬಾದ್‌: ಭಾರತ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಕೆಲವು ಶಾಲಾ ಮಕ್ಕಳೊಂದಿಗೆ ಇದ್ದಕ್ಕಿದ್ದಂತೆ ಓಡಲು ಪ್ರಾರಂಭಿಸಿದಾಗ ಪಾದಯಾತ್ರೆಯಲ್ಲಿ ಬಂದವರಿಗೆ ಕೆಲವು ರೋಚಕ ಕ್ಷಣಗಳನ್ನು ನೀಡಿತು. ಹಠಾತ್ ಓಟದ ಅರಿವಿಲ್ಲದೆ ಸಿಕ್ಕಿಬಿದ್ದ ರಾಹುಲ್‌ ಗಾಂಧಿ ಅವರ ಭದ್ರತಾ ಸಿಬ್ಬಂದಿ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ ಮತ್ತು ಇತರರು … Continued

ತಾಯ್ತನ ಅಂದ್ರೆ ಇದೇ ಅಲ್ಲವೇ..: ಕೌಟುಂಬಿಕ ಕಲಹದ ಕಾರಣ ಅಪಹರಣಕ್ಕೊಳಗಾಗಿದ್ದ 12 ದಿನದ ಮಗುವಿಗೆ ತನ್ನ ಎದೆ ಹಾಲುಣಿಸಿ ಮಗು ಕಾಪಾಡಿದ ಮಹಿಳಾ ಪೋಲೀಸ್ ಅಧಿಕಾರಿ…!

ಕೋಝಿಕ್ಕೋಡ್: ಅಪಹರಣಕ್ಕೀಡಾಗಿದ್ದ 12 ದಿನಗಳ ಮಗುವಿಗೆ ಹೃದಯಸ್ಪರ್ಶಿ ತಾಯಿಯಾಗುವ ಮೂಲಕ ಚೇವಾಯೂರ್ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ (ಸಿಪಿಒ) ಎಂ. ರಮ್ಯಾ ಅವರು ಈಗ ಹೃದಯಗಳನ್ನು ಗೆಲ್ಲುತ್ತಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಪಹರಣಕ್ಕೊಳಗಾಗಿದ್ದ 12 ದಿನಗಳ ಮಗುವಿಗೆ ಈ ಮಹಿಳಾ ಪೊಲೀಸ್‌ ಅಧಿಕಾರಿ ತನ್ನ ಎದೆ ಹಾಲುಣಿಸಿ ತಾಯಿಯ ಆರೈಕೆ ಮಾಡಿದ್ದಾರೆ. ಮಾಧ್ಯಮಗಳು ಈ … Continued

ಪತ್ರಕರ್ತರಿಗೆ ಉಡುಗೊರೆ ಆರೋಪ ಕಾಂಗ್ರೆಸ್​ನ ಅಪಪ್ರಚಾರದ ಟೂಲ್ ಕಿಟ್: ಸಿಎಂ ಬೊಮ್ಮಾಯಿ‌ ವಾಗ್ದಾಳಿ

ಬೆಂಗಳೂರು : ಎಲ್ಲ ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯಿಂದ ಉಡುಗೊರೆ ನೀಡಲಾಗಿದೆ ಎನ್ನುವುದು ಕಾಂಗ್ರೆಸ್​ನ ಅಪಪ್ರಚಾರದ ಟೂಲ್ ಕಿಟ್. ಸುಳ್ಳು ಹೇಳುವ ಮೂಲಕ ಎಲ್ಲ ಪತ್ರಕರ್ತರಿಗೆ ಅವಮಾನಿಸಿರುವುದನ್ನು ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿಗಳ ಕಚೇರಿಯಿಂದ ಕೆಲವು ಪತ್ರಕರ್ತರಿಗೆ ದೀಪಾವಳಿ ಉಡುಗೊರೆಯಾಗಿ 1 ಲಕ್ಷ ರೂಪಾಯಿ ನಗದು ಉಡುಗೊರೆ ನೀಡಿರುವ … Continued

ಪುನೀತ್ ಸ್ಮರಣೆ‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವಕ ಆತ್ಮಹತ್ಯೆಗೆ ಶರಣು

ಮಂಡ್ಯ: ಪವರ್‌ಸ್ಟಾರ್ ಪುನೀತರಾಜ್‍ಕುಮಾರ (Puneeth Rajkumar) ಅವರ ಒಂದು ವರ್ಷ ಕಳೆದಿದ್ದು, ಅವರ ಸ್ಮರಣೆಯಲ್ಲಿ ಭಾಗವಹಿಸಿದ್ದ ಅಭಿಮಾನಿಯೊಬ್ಬ ನಂತರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಹೊಸ ಆನಂದೂರು ಗ್ರಾಮದ ಕಿರಣ(22) ಎಂಬವರು ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಶನಿವಾರ ಗ್ರಾಮದಲ್ಲಿ ನಡೆದ ಅಪ್ಪು ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, … Continued

ಹ್ಯಾಲೋವೀನ್ ದುರಂತ: ದಕ್ಷಿಣ ಕೊರಿಯಾದ ಕಾಲ್ತುಳಿತದ ಘಟನೆ, ಸಾವಿನ ಸಂಖ್ಯೆ 151ಕ್ಕೆ ಏರಿಕೆ

ಸಿಯೋಲ್‌: ಶನಿವಾರ ರಾತ್ರಿ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಹ್ಯಾಲೋವೀನ್ ಹಬ್ಬದ ಆಚರಣೆ ದುರಂತವಾಗಿ ಮಾರ್ಪಟ್ಟಿತು. ಪ್ರಮುಖ ಮಾರುಕಟ್ಟೆಯಲ್ಲಿ ನೂಕುನುಗ್ಗಲು ಸಂಭವಿಸಿ ಕಾಲ್ತುಳಿತದಿಂದ 151 ಜನರು ಮೃತಪಟ್ಟಿದ್ದಾರೆ ಮತ್ತು 82 ಜನರು ಗಾಯಗೊಂಡಿದ್ದಾರೆ. 20 ರ ವಯೋಮಾನದವರು ಕಾಲ್ತುಳಿತದಿಂದ ಹೆಚ್ಚು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಾಲ್ತುಳಿತದಲ್ಲಿ 97 … Continued

ಹಬ್ಬದಲ್ಲಿ ಪತ್ರಕರ್ತರಿಗೆ ಸ್ವೀಟ್‌ಬಾಕ್ಸ್ ನೀಡುವ ಸಂಪ್ರದಾಯ ಮೊದಲಿನಿಂದಲೂ ಇದೆ : ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು

ಬೆಂಗಳೂರು : ರಾಜ್ಯದಲ್ಲಿ ಹಬ್ಬದ ಸಂದರ್ಭದಲ್ಲಿ ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ನೀಡುವ ಸಂಪ್ರದಾಯ ಮೊದಲಿನಿಂದಲೂ ಇದ್ದು, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾ ಅವರು ಈ ಬಗ್ಗೆ ರಾಜ್ಯದ ಕಾಂಗ್ರೆಸ್‌ ನಾಯಕರಿಂದ ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು ಎಂದು ಬಿಜೆಪಿ ಹೇಳಿದೆ. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಹಾಗೂ ರಾಜ್ಯದ ಕಾಂಗ್ರೆಸ್ ನಾಯಕರು ಅನಗತ್ಯ ಆಧಾರ … Continued

ದಕ್ಷಿಣ ಕೊರಿಯಾದಲ್ಲಿ ಹ್ಯಾಲೋವೀನ್ ಹಬ್ಬದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 59 ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ : ಬೀದಿಗಳಲ್ಲಿ ಹೃದಯ ವಿದ್ರಾವಕ ದೃಶ್ಯಗಳು

ಸಿಯೋಲ್: ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನ ಪ್ರಮುಖ ಮಾರುಕಟ್ಟೆಯೊಂದರಲ್ಲಿ ಹ್ಯಾಲೋವೀನ್ ಹಬ್ಬಕ್ಕಾಗಿ ಸೇರಿದ್ದ ಭಾರಿ ಜನಸ್ತೋಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 59 ಜನರು ಸಾವಿಗೀಡಾಗಿದ್ದಾರೆ ಹಾಗೂ 150 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಿರಿದಾದ ಬೀದಿಗಳಲ್ಲಿ ಅವ್ಯವಸ್ಥೆಯ ನಡುವೆ ಹೃದಯ ಸ್ತಂಭನಕ್ಕೆ ಒಳಗಾದ ಜನರನ್ನು ಪುನರುಜ್ಜೀವನಗೊಳಿಸಲು ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಪ್ರಯತ್ನಿಸುತ್ತಿರುವುದು ವೀಡಿಯೊಗಳಲ್ಲಿ … Continued

ಚೀನಾದಲ್ಲಿ ಕ್ರೇನ್ ಬಳಸಿ ಕೋವಿಡ್ ರೋಗಿಯನ್ನು ಮೇಲಕ್ಕೆತ್ತುತ್ತಿರುವ ವೀಡಿಯೋ ವೈರಲ್ | ವೀಕ್ಷಿಸಿ

ಚೀನಾದಲ್ಲಿ ಮತ್ತೆ ಕೋವಿಡ್‌ ಹರಡುವಿಕೆಯೊಂದಿಗೆ, ಸರ್ಕಾರವು ಲಾಕ್‌ಡೌನ್‌ಗಳಂತಹ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಮತ್ತೆ ಜಾರಿ ಮಾಡಿದೆ. ಈ ಮಧ್ಯೆ, ಚೀನಾದಲ್ಲಿ ರೋಗಿಯೊಬ್ಬರನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತಿದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ಪರಿಶೀಲಿಸದ ಈ ವೀಡಿಯೊವನ್ನು ಅದೇ ಪ್ರದೇಶದ ಸ್ಥಳೀಯರ ಕಿಟಕಿಯಿಂದ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲುಅಧಿಕಾರಿಗಳು ಕ್ರೇನ್‌ನಿಂದ ವ್ಯಕ್ತಿಯನ್ನು ಎಚ್ಚರಿಕೆಯಿಂದ … Continued