11 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

posted in: ರಾಜ್ಯ | 0

ಬೆಂಗಳೂರು: ಆಡಳಿತ ವಿಭಾಗ ಎಡಿಜಿಪಿಯಾಗಿದ್ದ ಡಾ.ಎಂ ಅಬ್ದುಲ್‌ ಸಲೀಂ, ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಆಯುಕ್ತರಾಗಿದ್ದ ಡಾ. ರವಿಕಾಂತೇಗೌಡ ಸೇರಿದಂತೆ ರಾಜ್ಯ ಸರ್ಕಾರ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಆಡಳಿತ ವಿಭಾಗ ಎಡಿಜಿಪಿಯಾಗಿದ್ದ ಡಾ.ಎಂ ಅಬ್ದುಲ್ಲಾ ಸಲೀಂ ಅವರನ್ನು ಬೆಂಗಳೂರು ನಗರ ಸಂಚಾರ ವಿಭಾಗದ ಎಡಿಜಿಪಿ … Continued

ಕೆಎಸ್ಆರ್‌ಟಿಸಿ ಸಿಬ್ಬಂದಿಗೆ 1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆ ಜಾರಿ

posted in: ರಾಜ್ಯ | 0

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ ಟಿಸಿ) ಸಿಬ್ಬಂದಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿ ಮಾಡಲಾಗಿದೆ. ಈಗಾಗಲೇ 50 ಲಕ್ಷ ರೂ. ಗಳಷ್ಟು ವಿಮೆ ಸೌಲಭ್ಯವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಹಾಗೂ ಇಂದು, ಸೋಮವಾರ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಾವರ ಜೊತೆ ಮಾಡಿಕೊಂಡ … Continued

ನಂದಿನಿ ಹಾಲು, ಮೊಸರಿನ ದರ ಹೆಚ್ಚಳಕ್ಕೆ ಸದ್ಯಕ್ಕೆ ಸಿಎಂ ಬೊಮ್ಮಾಯಿ ಬ್ರೇಕ್: ನ.20ರ ನಂತರ ನಿರ್ಧಾರ

posted in: ರಾಜ್ಯ | 0

ಕಲಬುರಗಿ : ನಂದಿನಿ ಹಾಲಿನ ದರ ಏರಿಕೆ ಬಗ್ಗೆ ನವೆಂಬರ್‌ 20ರ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಸೋಮವಾರ ಸೇಡಂನಲ್ಲಿ ನಂದಿನಿ ಹಾಲಿನ ದರ ಪರಿಷ್ಕರಣೆ ಬಗ್ಗೆ ಮಾಧ್ಯಮವರಿಗೆ ಪ್ರತಿಕ್ರಿಯೆ ನೀಡಿ, ಕಳೆದ … Continued

ಪ್ರಸಾರ ಭಾರತಿ ಸಿಇಒ ಆಗಿ ಹಿರಿಯ ಐಎಎಸ್ ಅಧಿಕಾರಿ ಗೌರವ್ ದ್ವಿವೇದಿ ನೇಮಕ

ನವದೆಹಲಿ: ಹಿರಿಯ ಐಎಎಸ್ ಅಧಿಕಾರಿ ಗೌರವ್ ದ್ವಿವೇದಿ ಅವರನ್ನು ಸೋಮವಾರ ಸಾರ್ವಜನಿಕ ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ. ಛತ್ತೀಸ್‌ಗಢ ಕೇಡರ್‌ನ 1995-ಬ್ಯಾಚ್ ಅಧಿಕಾರಿ, ದ್ವಿವೇದಿ ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರುತ್ತಾರೆ. ಈ ಹಿಂದೆ, ದ್ವಿವೇದಿ ಅವರು ಸರ್ಕಾರದ MyGovIndia ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಶಶಿ ಶೇಖರ್ ವೆಂಪಾಟಿ … Continued

2023ರ ಜಿ20 ಶೃಂಗಸಭೆಗೆ 200ಕ್ಕೂ ಹೆಚ್ಚು ಕಾರ್ಯಕ್ರಮ ಆಯೋಜಿಸಲಿರುವ ಭಾರತ

ನವದೆಹಲಿ: : ಭಾರತವು ಡಿಸೆಂಬರ್ 1, 2022 ರಿಂದ ಒಂದು ವರ್ಷದ ಅವಧಿಗೆ G20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. 2023 ರಲ್ಲಿ ಶೃಂಗಸಭೆಯನ್ನು ನಡೆಸಲು ರಾಷ್ಟ್ರವು ತನ್ನ ಸಿದ್ಧತೆಯನ್ನು ವೇಗಗೊಳಿಸುತ್ತಿದ್ದಂತೆಯೇ, ಶೃಂಗಸಭೆಯ ಭಾಗವಾಗಿ ದೆಹಲಿ, ಚೆನ್ನೈ, ಕೋಲ್ಕತ್ತಾ, ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಭಾರತವು 200 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ಸರ್ಕಾರದ ಮೂಲಗಳು … Continued

ರಾಷ್ಟ್ರಪತಿ ಬಗ್ಗೆ ತೃಣಮೂಲ ನಾಯಕನ ಹೇಳಿಕೆಗೆ ಕ್ಷಮೆಯಾಚಿಸಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾದ ತಮ್ಮ ಸಚಿವ ಅಖಿಲ್ ಗಿರಿ ಪರವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಕ್ಷಮೆಯಾಚಿಸಿದರು. “ನನ್ನ ಶಾಸಕರು ಅಧ್ಯಕ್ಷರ ಬಗ್ಗೆ ಹೇಳಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಪಕ್ಷವು ಈಗಾಗಲೇ ಕ್ಷಮೆಯಾಚಿಸಿದೆ ಮತ್ತು ನಾನು ಅಧ್ಯಕ್ಷರನ್ನು ತುಂಬಾ … Continued

ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೆಳಗಾವಿ, ಹುಬ್ಬಳ್ಳಿಯಿಂದ ಕೊಲ್ಲಂಗೆ ವಿಶೇಷ ರೈಲು ಸಂಚಾರ

posted in: ರಾಜ್ಯ | 0

ಹುಬ್ಬಳ್ಳಿ:  ಬೆಳಗಾವಿಯ ಸಂಸದರಾದ ಮಂಗಲಾ ಅಂಗಡಿ ಅವರು ಶಬರಿಮಲೆಗೆ ಹೋಗುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೆಳಗಾವಿಯಿಂದ ಕೊಲ್ಲಂಗೆ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೇ ಸಚಿವಾಲಯಕ್ಕೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಈಗ, ಕೊಲ್ಲಂಗೆ ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ರೈಲು ಸಂಖ್ಯೆ 07357 ಬೆಳಗಾವಿ – ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ ರೈಲು (1 ಟ್ರಿಪ್) ನವೆಂಬರ್ … Continued

ದೆಹಲಿ-ಹುಬ್ಬಳ್ಳಿ – ದೆಹಲಿ ಇಂಡಿಗೋ ವಿಮಾನಯಾನಕ್ಕೆ ಸಚಿವ ಜೋಶಿ ಚಾಲನೆ

posted in: ರಾಜ್ಯ | 0

ಹುಬ್ಬಳ್ಳಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಜೊತೆ ವರ್ಚುವಲ್ ಸಭೆಯ ಮೂಲಕ ದೆಹಲಿ-ಹುಬ್ಬಳ್ಳಿ, ಹುಬ್ಬಳ್ಳಿ-ದೆಹಲಿ ನಡುವೆ ನೇರ ವಿಮಾನಯಾನಕ್ಕೆ ಇಂದು, ಸೋಮವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ವಿಮಾನಯಾನ ಸೇವೆಯಿಂದ ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕ ಜನರ … Continued

ರಾಜ್ಯಪಾಲರ ಜೊತೆ ಸಂಘರ್ಷದ ನಡುವೆ ಕೇರಳ ಸಿಎಂಗೆ ಹೈಕೋರ್ಟ್‌ ಹಿನ್ನಡೆ: ಕುಫೋಸ್ ಉಪಕುಲಪತಿ ನೇಮಕಾತಿ ರದ್ದು ಮಾಡಿದ ಹೈಕೋರ್ಟ್‌

ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ನಿಲುವಿಗೆ ಪ್ರಮುಖ ಸಮರ್ಥನೆಯಾಗಿ, ಕೇರಳ ಹೈಕೋರ್ಟ್ ಸೋಮವಾರ ಪಿಣರಾಯಿ ವಿಜಯನ್ ಸರ್ಕಾರದ ಪ್ರಮುಖ ನೇಮಕಾತಿಯನ್ನು ರದ್ದುಗೊಳಿಸಿದೆ. ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯದ (ಕುಫೋಸ್) ಉಪಕುಲಪತಿ ಡಾ.ರಿಜಿ ಜಾನ್ ಅವರ ನೇಮಕಾತಿಯನ್ನು ನ್ಯಾಯಾಲಯ ರದ್ದುಗೊಳಿಸಿದೆ. ಈ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಸರ್ಕಾರ ಮಾಡಿದ ಮನವಿಯನ್ನು … Continued

ವಿಎಲ್‌ಸಿ (VLC) ಮೀಡಿಯಾ ಪ್ಲೇಯರ್ ಈಗ ಭಾರತದಲ್ಲಿ ಡೌನ್‌ಲೋಡ್ ಮಾಡಲು ಈಗ ಲಭ್ಯ : ನಿಷೇಧ ತೆಗೆದುಹಾಕಿದ ಸರ್ಕಾರ

ನವದೆಹಲಿ: ವಿಎಲ್‌ಸಿ (VLC) ಮೀಡಿಯಾ ಪ್ಲೇಯರ್ ಈಗ ಭಾರತದಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಈ ವರ್ಷದ ಆರಂಭದಲ್ಲಿ ನಿಷೇಧಕ್ಕೊಳಗಾದ ಮಲ್ಟಿಮೀಡಿಯಾ ಪ್ಲೇಯರ್ ಈಗ ಪುನಃ ಹಿಂತಿರುಗಿದೆ ಮತ್ತು ಜನರು ಅದನ್ನು ಮತ್ತೆ ಬಳಸಬಹುದು. ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ವಿಎಲ್‌ಸಿ ಮೀಡಿಯಾ ಪ್ಲೇಯರ್‌ನ ವೆಬ್‌ಸೈಟ್ ಮೇಲಿನ ನಿಷೇಧವನ್ನು ತೆಗೆದುಹಾಕಿದೆ. ಈ ಸುದ್ದಿಯನ್ನು ಮೊದಲು ಭಾರತದ … Continued