ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು 62,000ಕ್ಕೂ ಹೆಚ್ಚು ಬುಲೆಟ್ ಪ್ರೂಫ್ ಜಾಕೆಟ್‌ಗಳ ಖರೀದಿಗೆ ಟೆಂಡರ್‌ ಕರೆದ ಸೇನೆ

ನವದೆಹಲಿ: ಭಾರತದಲ್ಲಿ ಭಯೋತ್ಪಾದಕರು ಬಳಸುತ್ತಿರುವ ಸ್ಟೀಲ್ ಕೋರ್ ಬುಲೆಟ್‌ಗಳ ಅಪಾಯದ ಮಧ್ಯೆ ಭಾರತೀಯ ಸೇನೆಯು ತನ್ನ ಮುಂಚೂಣಿ ಪಡೆಗೆ 62,500 ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು (ಬಿಪಿಜೆ) ಪಡೆಯಲು ಟೆಂಡರ್‌ ಕರೆದಿದೆ. ರಕ್ಷಣಾ ಸಚಿವಾಲಯವು ಮೇಕ್-ಇನ್-ಇಂಡಿಯಾ ಉಪಕ್ರಮದ ಅಡಿಯಲ್ಲಿ ಜಾಕೆಟ್‌ಗಳಿಗೆ ಸಾಮಾನ್ಯ ಮಾರ್ಗದಲ್ಲಿ 47,627 ಜಾಕೆಟ್‌ಗಳಿಗೆ ಟೆಂಡರ್‌ಗಳನ್ನು ನೀಡಿದೆ ಮತ್ತು ಇನ್ನೊಂದು ತುರ್ತು ಖರೀದಿ ಪ್ರಕ್ರಿಯೆಗಳ ಅಡಿಯಲ್ಲಿ … Continued

ಪುಣೆ: ಹೆದ್ದಾರಿಯ ನವಲೆ ಸೇತುವೆಯಲ್ಲಿ ಭಾರಿ ಅಪಘಾತ; 48 ವಾಹನಗಳಿಗೆ ಹಾನಿ | ವೀಕ್ಷಿಸಿ

ಪುಣೆ: ಪುಣೆ-ಬೆಂಗಳೂರು ಹೆದ್ದಾರಿಯ ಪುಣೆ ಬಳಿಯ ನವಲೆ ಸೇತುವೆಯಲ್ಲಿ 48 ವಾಹನಗಳ ದೊಡ್ಡ ಸರಣಿ ಅಪಘಾತ ಸಂಭವಿಸಿದೆ. ಸ್ಥಳೀಯ ಅಧಿಕಾರಿಗಳು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಪುಣೆ ಅಗ್ನಿಶಾಮಕ ದಳ ಮತ್ತು ಪುಣೆ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಪಿಎಂಆರ್‌ಡಿಎ) ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿವೆ ಎಂದು ಪುಣೆ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. … Continued

ಮಂಗಳೂರು ಸ್ಫೋಟದ ಆರೋಪಿಗೆ ಕೊಯಮತ್ತೂರು ನಂಟು: ಪ್ರಮುಖ ಆರೋಪಿ ಕೊಯಮತ್ತೂರಿನಲ್ಲಿ ತಂಗಿದ್ದ, ಅಲ್ಲಿ ಸಿಮ್ ಕಾರ್ಡ್ ಖರೀದಿಸಿದ್ದ…!

posted in: ರಾಜ್ಯ | 0

ಚೆನ್ನೈ: ಕರ್ನಾಟಕದ ಮಂಗಳೂರಿನಲ್ಲಿ ಶನಿವಾರ ನಡೆದ ಆಟೋ ರಿಕ್ಷಾ ಸ್ಫೋಟದ ಪ್ರಾಥಮಿಕ ತನಿಖೆಯಿಂದ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಶಾರಿಕ್ ಸೆಪ್ಟೆಂಬರ್‌ನಲ್ಲಿ ಪಶ್ಚಿಮ ತಮಿಳುನಾಡಿನ ಕೊಯಮತ್ತೂರಿನಲ್ಲಿ ತಂಗಿದ್ದ ಮತ್ತು ಮೊಬೈಲ್ ಫೋನ್ ಸಿಮ್ ಕಾರ್ಡ್ ಅಲ್ಲಿ ಖರೀದಿಸಿದ್ದ ಎಂದು ತಿಳಿದುಬಂದಿದೆ. ಕಳೆದ ತಿಂಗಳಷ್ಟೇ, ಕೊಯಮತ್ತೂರಿನ ದೇವಸ್ಥಾನವೊಂದರ ಬಳಿ ಶಂಕಿತ ಭಯೋತ್ಪಾದಕ ಜಮೀಶಾ ಮುಬಿನ್ ಕಾರು … Continued

ಆನೆ ದಾಳಿಗೆ ಮಹಿಳೆ ಸಾವು

posted in: ರಾಜ್ಯ | 0

ಚಿಕ್ಕಮಗಳೂರು: ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರಿನಲ್ಲಿ ನಡೆದಿದೆ. ಮೃತ ಮಹಿಳೆಯರನ್ನು ಹುಲ್ಲೆಮನೆ ಗ್ರಾಮದ ಶೋಭಾ (45) ಎಂದು ಗುರುತಿಸಲಾಗಿದೆ. ಶೋಭಾ ಭಾನುವಾರ ತನ್ನ ಪತಿ ಸತೀಶ್‍ಗೌಡ ಅವರೊಂದಿಗೆ ಅಡಕೆ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದರು. ಇವರ ಜೊತೆಗೆ … Continued

ಶ್ರದ್ಧಾ ಕೊಲೆ ಪ್ರಕರಣ : ತಲೆಬುರುಡೆಯ ಭಾಗ, ಮೂಳೆಗಳನ್ನು ಪತ್ತೆ ಹಚ್ಚಿದ ಪೊಲೀಸರು, ಡಿಎನ್ಎ ಪರೀಕ್ಷೆಗೆ ರವಾನೆ

ನವದೆಹಲಿ: 27 ವರ್ಷದ ಶ್ರದ್ಧಾ ವಾಕರ್‌ ಅವರನ್ನು ಆಕೆಯ ಲಿವ್‌ ಇನ್‌ ಬಾಯ್‌ಫ್ರೆಂಡ್‌ ಅಫ್ತಾಬ್‌ ಅಮೀನ್‌ ಪೂನಾವಾಲಾ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಮೆಹ್ರೌಲಿ ಅರಣ್ಯದಿಂದ ಹೆಚ್ಚಿನ ಮಾನವ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ತಲೆಬುರುಡೆಯ ಬುಡ, ಶಿರಚ್ಛೇದಿತ ದವಡೆ ಮತ್ತು ಹೆಚ್ಚಿನ ಮೂಳೆಗಳು ಇಂದು, ಭಾನುವಾರ ಪತ್ತೆಯಾಗಿವೆ. ಶ್ರದ್ಧಾ ಅವರ ತಂದೆಯ ಡಿಎನ್‌ಎ ಮಾದರಿಗಳೊಂದಿಗೆ … Continued

ನಾಳೆ ಮಾಜಿ ಶಾಸಕ ಯು.ಬಿ ಬಣಕಾರ ಕಾಂಗ್ರೆಸ್ ಸೇರ್ಪಡೆ

posted in: ರಾಜ್ಯ | 0

ಬೆಂಗಳೂರು : ಬಿಜೆಪಿಗೆ ‘ಗುಡ್ ಬೈ’ ಹೇಳಿರುವ ಮಾಜಿ ಶಾಸಕ ಯು.ಬಿ ಬಣಕಾರ ಅವರು ಸೋಮವಾರ ನವೆಂಬರ್‌ 21ರಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಚುನಾವಣೆ ಸನಿಹ ಬರುತ್ತಿದ್ದಂತೆಯೇ ಬಿಜೆಪಿ ತೊರೆದ ಶಾಕ್ ನೀಡಿದ್ದ ಯು ಬಿ.ಬಣಕಾರ ಅವರು ಸೋಮವಾರ ಕಾಂಗ್ರೆಸ್ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್‌ ಪಕ್ಷವು ಯು,ಬಿ ಬಣಕಾರ ಅವರನ್ನು … Continued

ಮಂಗಳೂರು ಸ್ಫೋಟದ ಶಂಕಿತ ಆರೋಪಿ ಗುರುತು ಪತ್ತೆ : ಆರೋಪಿ ಮೇಲೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು

ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಸ್ಫೋಟ ಸಂಭವಿಸಿದ ಒಂದು ದಿನದ ನಂತರ, ಸ್ಫೋಟದ ಶಂಕಿತನನ್ನು ಮೊಹಮ್ಮದ್ ಶಾರಿಕ್ ಎಂದು ಪೊಲೀಸರು ಗುರುತಿಸಿದ್ದಾರೆ.ಶಾರಿಕ್ ಈ ಹಿಂದೆ ಮಂಗಳೂರಿನಲ್ಲಿ ಗೋಡೆಗಳ ಮೇಲೆ ಗೀಚುಬರಹಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಅವರ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದ. ಅಷ್ಟೇ ಅಲ್ಲ ಭಯೋತ್ಪಾದನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ … Continued

ಗುಜರಾತ್‌ ಚುನಾವಣೆ : 7 ನಾಯಕರನ್ನು ಪಕ್ಷದಿಂದ ಅಮಾನತುಗೊಳಿಸಿದ ಬಿಜೆಪಿ

ಗಾಂಧಿನಗರ: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ನಿರಾಕರಿಸಿದ ನಂತರ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ಶಿಸ್ತು ಕ್ರಮ ಕೈಗೊಂಡು ಪಕ್ಷದ ಏಳು ಮುಖಂಡರನ್ನು ಬಿಜೆಪಿ ಅಮಾನತುಗೊಳಿಸಿದೆ. ಎಲ್ಲಾ ಏಳು ಅಭ್ಯರ್ಥಿಗಳು ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಟಿಕೆಟ್ ಬಯಸಿದ್ದರು. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಕ್ಕಾಗಿ ಈ ಶಾಸಕರನ್ನು … Continued

ಧಾರವಾಡ: ಹೆಸರಾಂತ ವಿದ್ವಾಂಸ ಪಂ. ಜಯತೀರ್ಥ ಆಚಾರ್ಯ ಮಳಗಿ ನಿಧನ

posted in: ರಾಜ್ಯ | 0

ಧಾರವಾಡ: ವಿದ್ವಾಂಸ ಪಂಡಿತ ಜಯತೀರ್ಥಾಚಾರ್ಯ ಮಳಗಿ ಅವರು ಇಂದು, ಭಾನುವಾರ ನಿಧನರಾದರು. ಅವರಿಗೆ 73  ವರ್ಷ ವಯಸ್ಸಾಗಿತ್ತು. ಮೃತರು ಒಬ್ಬ ಮಗ, ಒಬ್ಬ ಮಗಳು, ಬಂಧು ಬಳಗ ಹಾಗೂ ಅಪಾರ ಶಿಷ್ಯವರ್ಗ, ಬಂಧಗಳನ್ನು ಅಗಲಿದ್ದಾರೆ. ಪಂಡಿತ ಜಯತೀರ್ಥಾಚಾರ್ಯ ವಾಸುದೇವಾಚಾರ್ಯ ಮಳಗಿ ಅವರು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು. ವೇದವ್ಯಾಸ ಅನೇಕ ಗ್ರಂಥಗಳ ಕರ್ತೃವಾಗಿ, ಧಾರ್ಮಿಕ ಪತ್ರಿಕೆಗಳ … Continued

ಮಂಗಳೂರು : ಆಟೋದಲ್ಲಿ ನಿಗೂಢ ಸ್ಪೋಟ ಪ್ರಕರಣ…ಎಡಿಜಿಪಿ ಹೇಳಿದ್ದೇನೆಂದರೆ…

ಮಂಗಳೂರು: ಕಂಕನಾಡಿ ಸಮೀಪ ಆಟೋರಿಕ್ಷಾದಲ್ಲಿ ಸಂಭವಿಸಿದ ನಿಗೂಢ ಸ್ಪೋಟಕ್ಕೆ ಸಂಬಂಧಿಸಿದಂತೆ, ಆಟೋದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಬೇರೆಡೆ ಹೋಗಿ ಬಾಂಬ್​ ಬ್ಲಾಸ್ಟ್​​ ಮಾಡುವ ಉದ್ದೇಶ ಹೊಂದಿದ್ದ. ಆದರೆ ಆಕಸ್ಮಿಕವಾಗಿ ಆಟೋದಲ್ಲಿ ಅದು ಬ್ಲಾಸ್ಟ್​​ ಆಗಿದೆ ಎಂದು ಎಡಿಜಿಪಿ ಅಲೋಕ​​ಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ಪ್ರಕರಣದಲ್ಲಿ ಇರುವುದು ಯಾರು ಎಂಬ ಮಾಹಿತಿ … Continued