ಚುನಾವಣೆಗೂ ಮೊದಲು ಬದಲಾವಣೆಗೆ ಮುನ್ನುಡಿ..?: ಕಾಂಗ್ರೆಸ್‌ನಿಂದ ಐದು ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಕ

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ ಪಕ್ಷದೊಳಗೆ ಬದಲಾವಣೆಗೆ ಮುಂದಾಗಿದ್ದು, ಐದು ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ ಐದು ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಕೂಡಲೇ ಜಾರಿಗೆ ಬರುವಂತೆ ಐದು ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ ಎಂದು … Continued

ಮನೆಗೆ ಕರೆದೊಯ್ಯಲು ಬರುತ್ತಾಳೆಂದು ರಸ್ತೆಯ ಝೀಬ್ರಾ ಕ್ರಾಸಿಂಗ್‌ನಲ್ಲೇ ಮಾಲೀಕಳಿಗಾಗಿ ಕಾಯುತ್ತಿರುವ ಹಸುವಿನ ವೀಡಿಯೊ ವೈರಲ್ | ವೀಕ್ಷಿಸಿ

ಹಲವಾರು ಘಟನೆಗಳು ಮತ್ತು ಉದಾಹರಣೆಗಳು ಮಾನವರು ಮತ್ತು ಪ್ರಾಣಿಗಳ ನಡುವಿನ ಗಾಢ ಸಂಬಂಧವನ್ನು ಪ್ರದರ್ಶಿಸುತ್ತವೆ. ನಾಯಿಗಳು, ಹಸುಗಳು, ಕುದುರೆಗಳು ಮತ್ತು ಮೇಕೆಗಳಂತಹ ಸಾಕುಪ್ರಾಣಿಗಳು ಈ ಪ್ರೀತಿಯ ಬಾಂಧವ್ಯದ ಅತ್ಯುತ್ತಮ ನಿದರ್ಶನಗಳಾಗಿವೆ. ಹಸು ತನ್ನ ಮಾಲೀಕರಿಗಾಗಿ ತಾಳ್ಮೆಯಿಂದ ಕಾಯುತ್ತಿರುವ ವೈರಲ್ ವೀಡಿಯೊವೊಂದು ಜನರು ಮತ್ತು ಪ್ರಾಣಿಗಳ ನಡುವೆ ಇರುವ ನಂಬಿಕೆಯ ಬಲವಾದ ಸಂಬಂಧದ ಮತ್ತೊಂದು ಪುರಾವೆಯಾಗಿ ಸಾಕ್ಷೀಕರಿಸುತ್ತದೆ. … Continued

ಕಾಂತಾರ ಸಿನೆಮಾ “ವರಾಹರೂಪಂ” ಹಾಡಿನ ವಿವಾದ: ಹೊಂಬಾಳೆ ಫಿಲ್ಮ್ಸ್‌ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್‌

ತಿರುವನಂತಪುರಂ: ಕಾಂತಾರ ಚಿತ್ರದ ʼವರಾಹರೂಪಂʼ ಹಾಡಿನ ಬಳಕೆಗೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಬೇಕೆಂದು ಕೋರಿ ಹೊಂಬಾಳೆ ಫಿಲ್ಮ್ಸ್‌ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ವಜಾಗೊಳಿಸಿದೆ. ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ಮೇಲೆ ಎರಡು ಜಿಲ್ಲಾ ನ್ಯಾಯಾಲಯಗಳು “ವರಾಹ ರೂಪಂ” ಹಾಡು ಬಳಸುವುದರ ವಿರುದ್ಧ ಎರಡು ಜಿಲ್ಲಾ ನ್ಯಾಯಾಲಯಗಳು ನೀಡಿದ ಮಧ್ಯಂತರ ತಡೆಯಾಜ್ಞೆ ನೀಡಿವೆ. ಇದರ ವಿರುದ್ಧ ಕಾಂತಾರ … Continued

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಉತ್ಸವ : ಮತ್ತೆ ಕಾಣಿಸಿಕೊಂಡ ಅನ್ಯಧರ್ಮೀಯರ ವ್ಯಾಪಾರ-ವಹಿವಾಟು ನಿಷೇಧಿಸುವ ಪೋಸ್ಟರ್‌

ಮಂಗಳೂರು: ಹೆಸರಾಂತ ಯಾತ್ರಾ ಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ‘ಚಂಪಾ ಷಷ್ಠಿ’ ಸಂದರ್ಭದಲ್ಲಿ, ಅನ್ಯಧರ್ಮೀಯರ ಅಂಗಡಿ-ಮುಂಗಟ್ಟುಗಳನ್ನು ನಿಷೇಧಿಸುವ ಪೋಸ್ಟ್‌ರ್‌ ಕಾಣಿಸಿಕೊಂಡಿದೆ. ‘ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿಯ ಸಂದರ್ಭದಲ್ಲಿಈ ಪರಿಸರದಲ್ಲಿ ಅನ್ಯ ಮತೀಯರ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ’ ಎಂಬ ಬ್ಯಾನರ್‌ ಕಾಣಿಸಿಕೊಂಡಿದ್ದು, ಹಿಂದೂ ಜಾಗರಣ ವೇದಿಕೆ ಸುಬ್ರಹ್ಮಣ್ಯ ಘಟಕದ ಹೆಸರಿನಲ್ಲಿ ಈ ಬ್ಯಾನರ್‌ … Continued

ಡಿಜಿಟಲ್ ಮಾಧ್ಯಮ ನಿಯಂತ್ರಣಕ್ಕೆ ಕಾನೂನು ತರಲು ಚಿಂತನೆ : ಸಚಿವ ಅನುರಾಗ ಠಾಕೂರ್

ಜೈಪುರ: ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸುವ ಮಸೂದೆ ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕೆಲಸ ಮಾಡುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಹಿಂದೆ ಸುದ್ದಿಗಳ ಏಕಮುಖ ಸಂವಹನವಿತ್ತು, ಆದರೆ ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳ ಬೆಳವಣಿಗೆಯೊಂದಿಗೆ, ಸುದ್ದಿ ಸಂವಹನವು ಬಹು ಆಯಾಮವಾಗಿದೆ.ಈಗ ಒಂದು ಹಳ್ಳಿಯ ಸಣ್ಣ ಸುದ್ದಿಯೂ … Continued

₹7,000 ಕೋಟಿಗೆ ಬಿಸ್ಲೇರಿ ಕಂಪನಿ ಖರೀದಿಸಲಿರುವ ಟಾಟಾ: ವರದಿ

ನವದೆಹಲಿ: ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ₹7000 ಕೋಟಿಗೆ ಬಿಸ್ಲೆರಿ ಇಂಟರ್‌ನ್ಯಾಶನಲ್ ಅನ್ನು ಖರೀದಿಸಲಿದೆ. ಪ್ಯಾಕೇಜ್ಡ್ ವಾಟರ್ ಮೇಕರ್‌ನ ಅಧ್ಯಕ್ಷ ರಮೇಶ್ ಚೌಹಾಣ್ ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ಪತ್ರಿಕೆ ಗುರುವಾರ ವರದಿ ಮಾಡಿದ್ದು, ಬಿಸ್ಲೆರಿ ಇಂಟರ್‌ನ್ಯಾಶನಲ್ ಇನ್ನು ಮುಂದೆ ತನ್ನದೇ ಆದ ಅಸ್ತಿತ್ವವಾಗಿ ಇರುವುದಿಲ್ಲ. ಪ್ರಮುಖ ವಿತರಣಾ ಕ್ರಮದಲ್ಲಿ, ರಮೇಶ್ ಚೌಹಾಣ್ … Continued

ದಡಾರ ಉಲ್ಬಣ: ಮುಂಬೈನಲ್ಲಿ 12ಕ್ಕೆ ತಲುಪಿದ ಸಾವಿನ ಸಂಖ್ಯೆ, 3 ರಾಜ್ಯಗಳಿಗೆ ಧಾವಿಸಿದ ಕೇಂದ್ರದ ತಂಡಗಳು

ನವದೆಹಲಿ: ದಡಾರ ಉಲ್ಬಣದ ಎಚ್ಚರಿಕೆ ನೀಡುತ್ತಿರುವ ಕೇಂದ್ರವು ರಾಂಚಿ, ಅಹಮದಾಬಾದ್ ಮತ್ತು ಮಲಪ್ಪುರಂಗೆ ತಂಡಗಳನ್ನು ಕಳುಹಿಸಿದೆ ಮತ್ತು ದುರ್ಬಲ ಪ್ರದೇಶಗಳಲ್ಲಿ 9 ತಿಂಗಳಿಂದ 5 ವರ್ಷಗಳ ಎಲ್ಲಾ ಮಕ್ಕಳಿಗೆ ಒಂದು ಹೆಚ್ಚುವರಿ ಡೋಸ್ ದಡಾರ ಮತ್ತು ರುಬೆಲ್ಲಾ ಲಸಿಕೆಗಳನ್ನು ನೀಡುವುದನ್ನು ಪರಿಗಣಿಸುವಂತೆ ರಾಜ್ಯಗಳಿಗೆ ಸೂಚಿಸಿದೆ. . ಬಿಹಾರ, ಗುಜರಾತ್, ಹರಿಯಾಣ, ಜಾರ್ಖಂಡ್, ಕೇರಳ ಮತ್ತು ಮಹಾರಾಷ್ಟ್ರದ … Continued

ನಟ ಕಮಲ್ ಹಾಸನ್ ಚೆನ್ನೈ ಆಸ್ಪತ್ರೆಗೆ ದಾಖಲು

ಚೆನ್ನೈ : ಬಹುಭಾಷಾ ನಟ ಕಮಲ್ ಹಾಸನ್ ಅವರು ನವೆಂಬರ್ 23ರಂದು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರದಿಗಳ ಪ್ರಕಾರ, ಕಮಲ್ ಅವರನ್ನು ರಾಮಚಂದ್ರ ವೈದ್ಯಕೀಯ ಕೇಂದ್ರಕ್ಕೆ (SRMC) ನಿಯಮಿತ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಜ್ವರ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಇನ್ನೆರಡು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. … Continued