ಮಹಾರಾಷ್ಟ್ರ ಗಡಿ ವಿವಾದ : ಕರ್ನಾಟಕ ಸಾರಿಗೆ ಬಸ್‌ಗೆ ಕಪ್ಪು ಮಸಿ ಬಳಿದ ಪ್ರತಿಭಟನಾಕಾರರು

ಪುಣೆ : ಗಡಿ ವಿವಾದದ ಕುರಿತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗಳನ್ನು ವಿರೋಧಿಸಿ ಮರಾಠಾ ಮಹಾಸಂಘದ ಸದಸ್ಯರು ಗುರುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್‌ಗೆ ಕಪ್ಪು ಬಣ್ಣ ಬಳಿದಿದ್ದಾರೆ.
ಪುಣೆ ಜಿಲ್ಲೆಯ ದೌಂಡ್‌ನಲ್ಲಿ ನಿಪ್ಪಾಣಿ-ಔರಂಗಾಬಾದ್ ಬಸ್‌ನಲ್ಲಿ “ಜೈ ಮಹಾರಾಷ್ಟ್ರ” ಮತ್ತು “ಜಾಹಿರ್ ನಿಷೇಧ್‌” (ಖಂಡನೆ) ಪದಗಳನ್ನು ಕಿತ್ತಳೆ ಮತ್ತು ಕಪ್ಪು ಬಣ್ಣದಲ್ಲಿ ಬರೆಯಲಾಗಿದೆ ಎಂದು ಅದರ ಸದಸ್ಯರೊಬ್ಬರು ತಿಳಿಸಿದ್ದಾರೆ. ಅವರು ಕರ್ನಾಟಕದ ಮುಖ್ಯಮಂತ್ರಿ ವಿರುದ್ಧವೂ ಘೋಷಣೆ ಕೂಗಿದರು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್‌ ತಾಲೂಕಿನ ಕೆಲವು ಗ್ರಾಮ ಪಂಚಾಯತಿಗಳು ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವಾಗ ಕರ್ನಾಟಕದೊಂದಿಗೆ ವಿಲೀನಗೊಳಿಸಲು ಈ ಹಿಂದೆ ನಿರ್ಣಯವನ್ನು ಅಂಗೀಕರಿಸಿದ್ದವು ಎಂದು ಬೊಮ್ಮಾಯಿ ಮಂಗಳವಾರ ಪ್ರತಿಪಾದಿಸಿದ್ದರು.

ಈ ಹೇಳಿಕೆಯು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಇದು 2012 ರಲ್ಲಿ ಮಾಡಿದ ಬೇಡಿಕೆಯಾಗಿದ್ದು ಈಗ ಯಾವುದೇ ಪ್ರಸ್ತುತತೆ ಹೊಂದಿಲ್ಲ ಎಂದು ಟೀಕಿಸಿದ್ದರು. “ಮಹಾರಾಷ್ಟ್ರದ ಒಂದು ಹಳ್ಳಿಯೂ ಎಲ್ಲಿಯೂ ಹೋಗುವುದಿಲ್ಲ” ಎಂದು ಅವರು ಹೇಳಿದರು. ಈಗ ಈ ಬೆಳವಣಿಗೆ ನಡೆದಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಕುರಿತ ವಾಕ್ಸಮರ ಜೋರಾಗುತ್ತಿದ್ದಂತೆಯೇ ಮರಾಠ ಮಹಾಸಂಘವು ನವೆಂಬರ್ 25 ರಂದು ಪುಣೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ವಿರುದ್ಧವಾಗಿ ಪ್ರತಿಭಟನೆ ನಡೆಸಿತು.

ಪ್ರಮುಖ ಸುದ್ದಿ :-   ಬಿಜೆಪಿ ಅಭ್ಯರ್ಥಿಗಳ 7ನೇ ಪಟ್ಟಿ ಪ್ರಕಟ : ಚಿತ್ರದುರ್ಗದಲ್ಲಿ ಹಾಲಿ ಸಂಸದರಿಗೆ ಕೊಕ್, ಯಡಿಯೂರಪ್ಪ ಆಪ್ತನಿಗೆ ಟಿಕೆಟ್‌

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement