ಗೆಹ್ಲೋಟ್-ಪೈಲಟ್ ಜಗಳ: ‘ಕಠಿಣ ನಿರ್ಧಾರ’ ತೆಗೆದುಕೊಳ್ಳುವುದರಿಂದ ಹಿಂದೆ ಸರಿಯುವುದಿಲ್ಲ-ಕಾಂಗ್ರೆಸ್

ಇಂದೋರ್: ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಅಧಿಕಾರದ ಜಗಳದ ನಡುವೆ ಅಗತ್ಯವಿದ್ದರೆ, ಆ ರಾಜ್ಯದಲ್ಲಿ ಸಂಘಟನೆ ಬಲಪಡಿಸಲು ಪಕ್ಷವು “ಕಠಿಣ ನಿರ್ಧಾರಗಳನ್ನು” ತೆಗೆದುಕೊಳ್ಳುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಭಾನುವಾರ ಹೇಳಿದ್ದಾರೆ. ಕಾಂಗ್ರೆಸ್‌ಗೆ, ರಾಜಸ್ಥಾನದಲ್ಲಿ ಅದರ ಸಂಘಟನೆಯು ಅತ್ಯಂತ ಮುಖ್ಯವಾಗಿದೆ ಎಂದು … Continued

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಪ್ರತಿಪಕ್ಷದ ನಾಯಕರ ಜೊತೆ ಚರ್ಚಿಸಿ ಸರ್ವಪಕ್ಷಗಳ ಸಭೆ ನಿಗದಿ-ಸಿಎಂ ಬೊಮ್ಮಾಯಿ

ಬೆಂಗಳೂರು: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಕಾನೂನಿನ ಸಮರಕ್ಕೆ ಎಲ್ಲ ರೀತಿಯಲ್ಲಿ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಭಾನುವಾರ ಮುಖ್ಯಮಂತ್ರಿ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಇದೇ 30 ರಂದು ವಿಚಾರಣೆಗೆ ಬರಲಿರುವ ಗಡಿ ವಿಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನ್ಯಾಯಮೂರ್ತಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. 2004 … Continued

ಕಡಿಮೆ ಜ್ವರಕ್ಕೆ ಎಂಟಿಬಯೋಟಿಕ್ಸ್‌ ಬಳಸಬೇಡಿ: ವೈದ್ಯರಿಗೆ ಐಸಿಎಂಆರ್‌ ಸಲಹೆ

ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಡಿಮೆ ಗ್ರೇಡ್‌ ಜ್ವರ ಮತ್ತು ವೈರಲ್ ಬ್ರಾಂಕೈಟಿಸ್ ರೋಗಿಗಳ ಪ್ರಕರಣಗಳಲ್ಲಿ ಪ್ರತಿಜೀವಕಗಳನ್ನು ಬಳಸದಂತೆ ವೈದ್ಯರಿಗೆ ಸಲಹೆ ನೀಡಿದೆ. ಶನಿವಾರ ಬಿಡುಗಡೆಯಾದ ತನ್ನ ಮಾರ್ಗಸೂಚಿಗಳಲ್ಲಿ, ರಾಷ್ಟ್ರೀಯ ಆರೋಗ್ಯ ಸಂಶೋಧನಾ ಸಂಸ್ಥೆಯು ಪ್ರತಿಜೀವಕಗಳನ್ನು ಶಿಫಾರಸು ಮಾಡುವಾಗ ಸಮಯವನ್ನು ಅನುಸರಿಸಲು ವೈದ್ಯರಿಗೆ ಸಲಹೆ ನೀಡಿದೆ. ಸಮುದಾಯದ ನ್ಯುಮೋನಿಯಾದ ಸಂದರ್ಭದಲ್ಲಿ ಐದು … Continued

ಹಿಜಾಬ್ ಧರಿಸದ ಮಹಿಳೆಗೆ ಬ್ಯಾಂಕ್‌ ಸೇವೆ ನೀಡಿದ್ದಕ್ಕೆ ಬ್ಯಾಂಕ್ ವ್ಯವಸ್ಥಾಪಕರನ್ನು ಹುದ್ದೆಯಿಂದ ವಜಾಗೊಳಿಸಿದ ಇರಾನ್ ಆಡಳಿತ : ವರದಿ

ಟೆಹ್ರಾನ್‌ : ಹಿಜಾಬ್‌ ಧರಿಸದ ಮಹಿಳೆಗೆ ಬ್ಯಾಂಕ್‌ ಸರ್ವೀಸ್‌ ನೀಡಿದ ಕಾರಣಕ್ಕೆ ಇರಾನ್ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ವಜಾ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಏಜೆನ್ಸ್ ಫ್ರಾನ್ಸ್-ಪ್ರೆಸ್ (ಎಎಫ್‌ಪಿ) ಸ್ಥಳೀಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. 8 ಕೋಟಿಗೂ ಹೆಚ್ಚು ಜನರಿರುವ ಇರಾನ್‌ ದೇಶದಲ್ಲಿ ನೈತಿಕತೆಯ ಪೊಲೀಸರು ಜಾರಿಗೊಳಿಸಿದ ಕಾನೂನಿನ ಪ್ರಕಾರ ಮಹಿಳೆಯರು ತಮ್ಮ … Continued

“ಮಹಿಳೆಯರು ಯಾವಾಗ ಚೆನ್ನಾಗಿ ಕಾಣುತ್ತಾರೆಂದರೆ…”: ವಿವಾದಕ್ಕೆ ಕಾರಣವಾದ ಬಾಬಾ ರಾಮದೇವ ಕಾಮೆಂಟ್‌

ನವದೆಹಲಿ: ಯೋಗ ಗುರು ಬಾಬಾ ರಾಮದೇವ ಅವರು ಮಹಿಳೆಯರ ವೇಷಭೂಷಣದ ಬಗ್ಗೆ ಹೇಳಿಕೆ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ಥಾಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಬಾ ರಾಮದೇವ ಅವರು, ಮಹಿಳೆಯರು ಸೀರೆ, ಸಲ್ವಾರ್ ಕಮೀಜ್ ಅಥವಾ ಅವರು ಏನನ್ನೂ ಧರಿಸದಿದ್ದರೂ ಸಹ ಉತ್ತಮವಾಗಿ ಕಾಣಬಹುದು ಎಂದು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಬಾಬಾ ರಾಮದೇವ ಅವರ … Continued

ಬಾಗಲಕೋಟೆ: ವ್ಯಕ್ತಿಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 187 ನಾಣ್ಯಗಳನ್ನು ಹೊರತೆಗೆದ ವೈದ್ಯರು…!

ಬಾಗಲಕೋಟೆ: ವೈದ್ಯರು ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿದ್ದ ಬರೋಬ್ಬರಿ 187 ನಾಣ್ಯಗಳನ್ನು ಹೊರತೆಗೆದಿದ್ದಾರೆ…! ವೈದ್ಯರು ಎಂಡೋಸ್ಕೋಪಿ ಮೂಲಕ 187 ನಾಣ್ಯಗಳನ್ನು ಹೊರತೆಗೆದಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಸಂತೆಕೆಲ್ಲೂರು ಗ್ರಾಮದ ದ್ಯಾ‌ಮಪ್ಪ ಹರಿಜನ ಎಂಬ 58 ವರ್ಷದ ವ್ಯಕ್ತಿ ಇಷ್ಟೊಂದು ನಾಣ್ಯಗಳನ್ನು ನುಂಗಿದ್ದರು. ಸದ್ಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ 5 ರೂಪಾಯಿಯ 56 ನಾಣ್ಯ, 2 ರೂಪಾಯಿಯ 51 … Continued

ಮಗ್ಗಿ ಹೇಳದ್ದಕ್ಕೆ ಪವರ್ ಡ್ರಿಲ್‌ನಿಂದ ಅಪ್ರಾಪ್ತ ವಿದ್ಯಾರ್ಥಿಯ ಕೈ ಕೊರೆದ ಶಿಕ್ಷಕ…!

ಕಾನ್ಪುರ: ಆಘಾತಕಾರಿ ಘಟನೆಯೊಂದರಲ್ಲಿ, ಕಾನ್ಪುರದ ಪ್ರೇಮ್ ನಗರ ಪ್ರದೇಶದ ಸರ್ಕಾರಿ ಶಾಲೆಯೊಂದರ ಶಾಲೆಯ ಶಿಕ್ಷಕರೊಬ್ಬರು ಒಂಬತ್ತು ವರ್ಷದ ವಿದ್ಯಾರ್ಥಿಯನ್ನು “ಶಿಕ್ಷಿಸಲು” ಪವರ್ ಡ್ರಿಲ್ ಅನ್ನು ಬಳಸಿದ್ದಾರೆ ಮತ್ತು ಅಪ್ರಾಪ್ತ ಬಾಲಕನ ಕೈ ಕೊರೆದು ಗಾಯಗೊಳಿಸಿದ್ದಾರೆ. ಹುಡುಗನಿಗೆ ಮಗ್ಗಿ ಹೇಳಲು ಸಾಧ್ಯವಾಗದ ಕಾರಣ ಶಿಕ್ಷಕನು ಕೋಪಗೊಂಡ ಈ ಕೃತ್ಯ ಎಸಗಿದ್ದಾರೆ. ಆರೋಪಿ ಶಿಕ್ಷಕ ಗ್ರಂಥಾಲಯದಲ್ಲಿ ಕೆಲವು ದುರಸ್ತಿ … Continued

ಪ್ರಯಾಣಿಕ ಕೊಟ್ಟ ₹ 500 ನೋಟನ್ನು ಕ್ಷಣಾರ್ಧದಲ್ಲಿ ಬದಲಿಸಿ ಕೊಟ್ಟಿದ್ದು 20 ರೂ ನೋಟು ಎಂದ ರೈಲ್ವೆ ಸಿಬ್ಬಂದಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ನಗದು ವಹಿವಾಟಿನ ವೇಳೆ ರೈಲ್ವೆ ಉದ್ಯೋಗಿಯೊಬ್ಬ ಪ್ರಯಾಣಿಕರಿಗೆ ವಂಚಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶುಕ್ರವಾರ ರೈಲ್ ವಿಸ್ಪರ್ಸ್ ಎಂಬ ಬಳಕೆದಾರರು ಈ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನ ಶೀರ್ಷಿಕೆಯಂತೆ ಮಂಗಳವಾರ ಈ ಘಟನೆ ನಡೆದಿದೆ. ವೀಡಿಯೊದಲ್ಲಿ ಟಿಕೆಟಿಂಗ್ ಕೌಂಟರ್ ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬ ಹಣ ವಂಚನೆ ಮಾಡುತ್ತಿದ್ದಾನೆ. … Continued

ಮಂಗಳೂರು: ಇಸ್ಲಾಂಗೆ ಮತಾಂತರಿಸಿ ಲೈಂಗಿಕ ಕಿರುಕುಳ-ಯುವತಿಯಿಂದ ದೂರು ದಾಖಲು

ಮಂಗಳೂರು: ವ್ಯಕ್ತಿಯೋರ್ವ ತನಗೆ ಲೈಂಗಿಕ ಕಿರುಕುಳ ನೀಡಿ ಅನ್ಯ ಧರ್ಮಕ್ಕೆ ಮತಾಂತರಗೊಳಿಸಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬರು ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ನಡೆಸಿ ಆಯೇಷಾ ಎಂದು ಹೆಸರು ಬದಲಿಸಲಾಗಿತ್ತು. ಮತಾಂತರದ ಬಳಿಕ ಯುವತಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಬಿಕರ್ನಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಗ … Continued

24 ಗಂಟೆಯೊಳಗೆ ಅನಂತನಾಗ್‌ನಲ್ಲಿರುವ ಸರ್ಕಾರಿ ಕ್ವಾರ್ಟರ್ಸ್ ಖಾಲಿ ಮಾಡಲು ಮೆಹಬೂಬಾ ಮುಫ್ತಿಗೆ ನೋಟಿಸ್

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ಮೂವರು ಮಾಜಿ ಶಾಸಕರು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹೌಸಿಂಗ್ ಕಾಲೋನಿ ಖಾನಬಲ್ ಪ್ರದೇಶದಲ್ಲಿ ಸರ್ಕಾರಿ ಕ್ವಾರ್ಟರ್ಸ್ ಅನ್ನು ಖಾಲಿ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಮೆಹಬೂಬಾ ಮುಫ್ತಿ ಮತ್ತು ಮೂವರು ಮಾಜಿ ಶಾಸಕರು ಅನಂತನಾಗ್ ಜಿಲ್ಲೆಯ ಖಾನಬಾಲ್ ಹೌಸಿಂಗ್ … Continued