ನಾಗ್ಪುರದ ಆರ್‌ಎಸ್‌ಎಸ್ ಕೇಂದ್ರ ಸ್ಥಾನ ಸ್ಫೋಟಿಸುವುದಾಗಿ ಅಪರಿಚಿತ ಫೋನ್‌ ಬೆದರಿಕೆ, ಬಿಗಿ ಭದ್ರತೆ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕೇಂದ್ರ ಕಚೇರಿಗೆ ಶನಿವಾರ ಅಪರಿಚಿತ ಕರೆ ಮಾಡಿದವರು ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಫೋನ್ ಕರೆ ಬಂದಿತು. ಮಹಲ್ ಪ್ರದೇಶದಲ್ಲಿನ ಆರ್‌ಎಸ್‌ಎಸ್ ಕೇಂದ್ರ ಕಚೇರಿಯನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬ … Continued

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆ: ಅಮಿತ್ ಶಾ

posted in: ರಾಜ್ಯ | 0

ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಇಂದು, ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ … Continued

ನಿವೃತ್ತ ಪ್ರಾಚಾರ್ಯ ಜಿ. ವಿ. ಭಟ್ಟ ಕೊಂಕೇರಿ ನಿಧನ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕದ ಕೊಂಕೇರಿಯವರಾದ ನಿವೃತ್ತ ಪ್ರಾಚಾರ್ಯ ಜಿ. ವಿ. ಭಟ್ಟ (87) ಕೊಂಕೇರಿ ಶನಿವಾರ ನಿಧನರಾದರು. ಕಾರವಾರದ ಪ್ರತಿಷ್ಠಿತ ದಿವೇಕರ ಕಾಲೇಜಿನ ಪ್ರಥಮ ಪ್ರಾಚಾರ್ಯರಾಗಿದ್ದರು ಸತತವಾಗಿ 23 ವರ್ಷ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ತಮ್ಮ ಮೂಲ ಮನೆ ಕಡತೋಕದಲ್ಲಿ ನೆಲೆಸಿ ಅನೇಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. … Continued

ಮಾನಸ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರ ವಾಹನವನ್ನು 3 ಕಿಮೀ ವರೆಗೆ ಬೆನ್ನಟ್ಟಿದ ಕೋಪೋದ್ರಿಕ್ತ ದೈತ್ಯ ಘೇಂಡಾಮೃಗ : ವೀಕ್ಷಿಸಿ

ಗುವಾಹತಿ: ಅಸ್ಸಾಂನ ಮಾನಸ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ; ಘೇಂಡಾಮೃಗವೊಂದು ಇದ್ದಕ್ಕಿದ್ದಂತೆ ಅವರ ವಾಹನವನ್ನು ಬೆನ್ನಟ್ಟಿದೆ ಘಟನೆ ನಡೆದಿದೆ. ರಾಷ್ಟ್ರೀಯ ಉದ್ಯಾನವನದ ಬಾನ್ ಹಬರಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಫಾರಿ ಜೀಪ್ ಉದ್ಯಾನವನದ ಹಬರಿ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ ಘೇಂಡಾಮೃಗವು ಪೊದೆಯಿಂದ ಹೊರಬಂದು ಅವರ ವಾಹನವನ್ನು ಹಿಂಬಾಲಿಸಲು ಪ್ರಾರಂಭಿಸಿತು. … Continued

ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಖಾಸಗಿ ಬಸ್: ಹೊಸ ವರ್ಷದ ಬಟ್ಟೆ ಖರೀದಿಗೆ ತಂದೆಯೊಂದಿಗೆ ಹೊರಟಿದ್ದ ಬಾಲಕಿ ಸಾವು

posted in: ರಾಜ್ಯ | 0

ಕಾರವಾರ: ಸ್ಕೂಟಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟು ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಬಿಣಗಾ ಬಳಿ ಶನಿವಾರ ನಡೆದಿದೆ. ಬಿಣಗಾದ ಲವಿಟಾ ಜಾರ್ಜ್ ಫರ್ನಾಂಡೀಸ್ (೧೩) ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಬಾಲಕಿ ತಂದೆ ಜಾರ್ಜ್ ಫರ್ನಾಂಡೀಸ್ (೪೧) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ … Continued

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ..!

posted in: ರಾಜ್ಯ | 0

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲೇ ಎರಡು ಬಣಗಳ ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡ ಘಟನೆ ಶನಿವಾರ ನಡೆದಿದೆ. ರಾಜಾಜೀನಗರ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಬಣಗಳ ನಡುವೆ ಗದ್ದಲ ನಡೆದಿದೆ. ಮಾಜಿ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ರಾಜಾಜಿನಗರ ಕ್ಷೇತ್ರದ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಟಿಕೆಟ್ ಆಕಾಂಕ್ಷಿಗಳ ಆಯ್ಕೆ ಸಂಬಂಧ ಕರೆದಿದ್ದ ಸಭೆಯಲ್ಲಿ ಬಣಗಳ ನಡುವೆ ಪರಸ್ಪರ … Continued

2022 ರಲ್ಲಿ ಭಾರತದ ಸರ್ಕಾರಿ ಏಜೆನ್ಸಿಗಳ ಮೇಲೆ ಅತಿ ಹೆಚ್ಚು ಸೈಬರ್ ದಾಳಿಗಳು : ವರದಿ

ನವದೆಹಲಿ: 2022ರಲ್ಲಿ ಸರ್ಕಾರದ ವಿರುದ್ಧ ಸೈಬರ್ ದಾಳಿಗಳ ಸಂಖ್ಯೆ ದ್ವಿಗುಣಗೊಂಡಿದ್ದು, 2022 ರಲ್ಲಿ ಭಾರತವು ಈ ವಲಯದಲ್ಲಿ ಹೆಚ್ಚು ಗುರಿಯಾಗಿರುವ ದೇಶವಾಗಿದೆ. ಶೇ.13.7 ರಷ್ಟು ಸೈಬರ್ ದಾಳಿಗಳು ಭಾರತೀಯ ಘಟಕಗಳ ವಿರುದ್ಧವಾಗಿದೆ ಎಂದು ಶುಕ್ರವಾರ ವರದಿಯೊಂದು ಬಹಿರಂಗಪಡಿಸಿದೆ. “2022ರಲ್ಲಿ, ಭಾರತ ಸರ್ಕಾರದ ಮೇಲಿನ ದಾಳಿಗಳು ಈ ವಲಯದಲ್ಲಿ ಹೆಚ್ಚಾಗಿ ಗುರಿಯಾಗಿರುವ ದೇಶವಾಗುವಂತೆ ಮಾಡಿದೆ ಎಂದು ಕ್ಲೌಡ್‌ಸೆಕ್ … Continued

ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿ ಸ್ಫೋಟ : 4 ಮಂದಿ ಸಾವು, 7 ಮಂದಿಗೆ ಗಾಯ

ಚೆನ್ನೈ: ಶನಿವಾರ ನಸುಕಿನಲ್ಲಿ ನಾಮಕ್ಕಲ್ ಜಿಲ್ಲೆಯ ಪಟಾಕಿ ಅಂಗಡಿ ಮಾಲೀಕನ ಮನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ. ಮೃತ ನಾಲ್ವರಲ್ಲಿ ಮೂವರು ಮಹಿಳೆಯರು ಮತ್ತು ಪಟಾಕಿ ಅಂಗಡಿಯ ಮಾಲೀಕರು ಸೇರಿದ್ದಾರೆ. ಶನಿವಾರ, ನಸುಕಿನ 4 ಗಂಟೆಗೆ ಅವರೆಲ್ಲರೂ ತಮ್ಮ ಮನೆಗಳಲ್ಲಿ ಮಲಗಿದ್ದಾಗ ಸ್ಫೋಟ ಸಂಭವಿಸಿದೆ. ಬೆಂಕಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿಗಳಿಗೆ … Continued

ಪವಿತ್ರಾ ಲೋಕೇಶ ಜೊತೆ ಶೀಘ್ರದಲ್ಲೇ ಮದುವೆ: ವೀಡಿಯೊ ಮೂಲಕ ಹೇಳಿಕೊಂಡ ನಟ ನರೇಶ

posted in: ರಾಜ್ಯ | 0

ನಟ ನರೇಶ್ ತಮ್ಮ ಟ್ವಿಟರ್ ಮೂಲಕ ವಿಶೇಷ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ನಟಿ ಪವಿತ್ರಾ ಲೋಕೇಶ ಅವರನ್ನು ಮದುವೆಯಾಗುವುದಾಗಿ ಹೇಳಿದ್ದಾರೆ. ಟ್ವಿಟರ್‌ನಲ್ಲಿ ಕಿರು ವೀಡಿಯೊ ಕ್ಲಿಪ್‌ ಮೂಲಕ ಪವಿತ್ರಾ ಲೋಕೇಶ ಜೊತೆಗೆ ವಿವಾಹವನ್ನು ನರೇಶ್ ಘೋಷಿಸಿದ್ದಾರೆ. ‘ಹೊಸ ವರ್ಷ, ಹೊಸ ಆರಂಭ, ನಿಮ್ಮೆಲ್ಲರ ಆಶೀರ್ವಾದ ಬೇಕು’ ಎಂಬ ಶೀರ್ಷಿಕೆಯಡಿ, ನಟ ಈ ವೀಡಿಯೊದೊಂದಿಗೆ … Continued

ಬಿಹಾರದ ಬಿಜೆಪಿ ಉಪಾಧ್ಯಕ್ಷರ ಉಚ್ಚಾಟನೆ

ಪಾಟ್ನಾ: ಬಿಹಾರದ ಬಿಜೆಪಿಯು ಪಕ್ಷದ ಉಪಾಧ್ಯಕ್ಷ ರಾಜೀವ ರಂಜನ್ ಅವರನ್ನು ಅಶಿಸ್ತಿನ ಕಾರಣಕ್ಕಾಗಿ ವಜಾಗೊಳಿಸಿದೆ. ರಂಜನ್ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿಕೊಂಡ ಸ್ವಲ್ಪ ಸಮಯದ ನಂತರ ಡಿಸೆಂಬರ್ 29 ರಂದು ರಾಜ್ಯ ಘಟಕದ ಮುಖ್ಯಸ್ಥ ಸಂಜಯ ಜೈಸ್ವಾಲ್ ಅವರು ಹೊರಡಿಸಿದ ಪತ್ರವನ್ನು ಪಕ್ಷವು ಹಂಚಿಕೊಂಡಿದೆ. ನಿಮ್ಮ ಮಾತುಗಳು ರಾಜ್ಯ ಉಪಾಧ್ಯಕ್ಷರಿಗೆ ಯೋಗ್ಯವಲ್ಲ … Continued