ಬೆಂಗಳೂರು: ನಿರ್ಮಾಣ ಹಂತದ ನಮ್ಮ ಮೆಟ್ರೋ ಪಿಲ್ಲರ್‌ ಬಿದ್ದು ತಾಯಿ-ಮಗು ಸಾವು

ಬೆಂಗಳೂರು: ಬೆಂಗಳೂರಿನ ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಮಂಗಳವಾರ ಕುಸಿದುಬಿದ್ದಿದ್ದು, ಅದರ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಹಾಗೂ ಮಗು ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಮೃತರನ್ನು ತೇಜಸ್ವಿನಿ (35) ಹಾಗೂ ವಿಹಾನ್ (2 ವರ್ಷ 6 ತಿಂಗಳು) ಎಂದು ಗುರುತಿಸಲಾಗಿದೆ. ನಾಗವಾರ ರಿಂಗ್ ರೋಡ್‍ನ ಎಚ್‍ಬಿಆರ್ ಲೇಔಟ್ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿತ್ತು. … Continued

ಭಾರತದ ಮೊದಲ ಸ್ವದೇಶಿ ಐಫೋನ್ ತಯಾರಕನಾಗುವ ಹೊಸ್ತಿಲಲ್ಲಿ ಟಾಟಾ ಗ್ರೂಪ್ : ವರದಿ

ನವದೆಹಲಿ: ಟಾಟಾ ಗ್ರೂಪ್ ಬೆಂಗಳೂರಿನ ಬಳಿಯಿರುವ ಐಫೋನ್ ತಯಾರಿಕಾ ಕಾರ್ಖಾನೆಯನ್ನು ಖರೀದಿಸಲು ತೈವಾನ್ ಮೂಲದ ವಿಸ್ಟ್ರಾನ್ ಕಾರ್ಪೊರೇಷನ್‌ನೊಂದಿಗೆ ಅಂತಿಮ ಹಂತದ ಮಾತುಕತೆ ನಡೆಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಸೆಪ್ಟೆಂಬರ್ 9, 2022 ರಂದು, ಕಾರ್ಖಾನೆಯನ್ನು ಖರೀದಿಸಲು ಟಾಟಾ ಗ್ರೂಪ್ ವಿಸ್ಟ್ರಾನ್ ಕಾರ್ಪರೇಶನ್‌ನೊಂದಿಗೆ ಮಾತುಕತೆ ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ. ಇತ್ತೀಚಿನ ವರದಿಯ ಪ್ರಕಾರ, ಏರ್‌ಲೈನ್‌ನಿಂದ … Continued

ಮಹಿಳಾ ಸಂವೇದನೆಯ ಕನ್ನಡದ ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್‌ ವಿಧಿವಶ

ಮಂಗಳೂರು: ಕನ್ನಡದ ಪ್ರಮುಖ ಕಾದಂಬರಿಗಾರ್ತಿ ಹಾಗೂ ಮೇರು ಸಾಹಿತಿ ಸಾರಾ ಅಬೂಬಕ್ಕರ್‌ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕೇರಳದ ಕಾಸರಗೋಡು ಜಿಲ್ಲೆಯವರಾದ ಸಾರಾ ಅಬೂಬಕ್ಕರ್ ತಮ್ಮ ಸಾಹಿತ್ಯಗಳಲ್ಲಿ ಮುಸ್ಲಿಂ ಸಮುದಾಯದ ಕಟ್ಟರ್‌ ಸಂಪ್ರದಾಯಗಳನ್ನು ಬಲವಾಗಿ ಟೀಕಿಸುತ್ತಿದ್ದರು. ಅವರ ಪಾರ್ಥಿವ ಶರೀರವನ್ನು ಮಂಗಳೂರಿನ ಹಾಥಿಲ್‌ನಲ್ಲಿರುವ … Continued

‘ಪತ್ನಿ ಕೋಪಗೊಂಡಿದ್ದಾಳೆ, ನನಗೆ ರಜೆ ಕೊಡಿ’: ನವವಿವಾಹಿತ ಪೊಲೀಸ್‌ ಕಾನ್‌ಸ್ಟೇಬಲ್‌ ರಜೆ ಅರ್ಜಿ ಈಗ ಸಖತ್‌ ವೈರಲ್…!

ಮಹಾರಾಜಗಂಜ್‌ : ‘ಹೆಂಡತಿ ಕೋಪಗೊಂಡಿದ್ದಾಳೆ, ರಜೆ ಕೊಡಿ’ ಎಂದು ಉತ್ತರ ಪ್ರದೇಶದ ಕಾನ್‌ಸ್ಟೇಬಲ್ ಬರೆದಿರುವ ರಜೆ ಅರ್ಜಿ ಈಗ ವೈರಲ್ ಆಗಿದೆ. ಈ ಪೊಲೀಸ್‌ ಪೇದೆ ಕಳೆದ ತಿಂಗಳು ವಿವಾಹವಾಗಿದ್ದು, ಅಂದಿನಿಂದ ಅವರು ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ನೌತಾನ್ವಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಮೌ ಜಿಲ್ಲೆಯ ನಿವಾಸಿಯಾಗಿದ್ದು, ಇಂಡೋ-ನೇಪಾಳ ಗಡಿಯ ಪಿಆರ್‌ಬಿ(PRB)ಯಲ್ಲಿ … Continued

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ದೆಹಲಿಗೆ ಟೇಕ್ ಆಫ್ ಆದ ಗೋ ಫರ್ಸ್ಟ್‌ ವಿಮಾನ…!

ಬೆಂಗಳೂರು: ಬೆಂಗಳೂರು ಕೆಂಪೇ ಗೌಡ ವಿಮಾನ ನಿಲ್ದಾಣದಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ಗೋ ಫಸ್ಟ್ ವಿಮಾನವೊಂದು ಟೇಕಾಫ್ ಆಗಿದೆ ಎಂದು ಆರೋಪಿಸಲಾಗಿದೆ. ಹಲವಾರು ಫ್ಲೈಯರ್‌ಗಳು ಟ್ವಿಟರ್‌ಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಿಂದ ದೆಹಲಿಗೆ ಗೋ ಫಸ್ಟ್ ಫ್ಲೈಟ್ ಜಿ8116 ಸೋಮವಾರ ಬೆಳಿಗ್ಗೆ 6:30ಕ್ಕೆ ಹೊರಟಿತ್ತು. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರ ಪ್ರಕಾರ, ವಿಮಾನವು 54 … Continued

ಆಸ್ಕರ್‌ 2023 : ಆಸ್ಕರ್ ಸ್ಪರ್ಧೆಯ ಪಟ್ಟಿಯಲ್ಲಿ ಅತ್ಯುತ್ತಮ ಚಿತ್ರ-ಅತ್ಯುತ್ತಮ ನಟ ವಿಭಾಗದ ಪ್ರಶಸ್ತಿಗೆ ಅರ್ಹತೆ ಪಡೆದ ‘ಕಾಂತಾರ’ ಸಿನೆಮಾ

ಬೆಂಗಳೂರು: ರಿಷಭ ಶೆಟ್ಟಿ ಅವರ ನಿರ್ದೇಶನದ ಕಾಂತಾರ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ಈ ಎರಡು ವಿಭಾಗಗಳಲ್ಲಿ ಅಕಾಡೆಮಿ ಪ್ರಶಸ್ತಿ (ಆಸ್ಕರ್‌)ಗಳ ಸ್ಪರ್ಧೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದರರ್ಥ ಚಲನಚಿತ್ರವು ಮುಖ್ಯ ನಾಮನಿರ್ದೇಶನಗಳಿಗೆ ಹೋಗಲು ಆಸ್ಕರ್ ಸದಸ್ಯರು ಮತ ಚಲಾಯಿಸಲು ಇದು ಅರ್ಹವಾಗಿದೆ. ಕಾಂತಾರ ಸಿನೆಮಾ ಆಸ್ಕರ್‌ ಸ್ಪರ್ಧೆಗೆ ತಡವಾಗಿ ಪ್ರವೇಶ ಪಡೆದಿದೆ. ಎಸ್‌ಎಸ್ … Continued

ಯಾತ್ರಾರ್ಥಿಗಳು ಶಬರಿಮಲೆ ಸನ್ನಿಧಾನಕ್ಕೆ ಸಿನಿಮಾ ತಾರೆಯರು, ರಾಜಕಾರಣಿಗಳ ಪೋಸ್ಟರ್‌ ಒಯ್ಯುವುದನ್ನು ನಿಷೇಧಿಸಿದ ಕೇರಳ ಹೈಕೋರ್ಟ್‌

ತಿರುವನಂತಪುರಂ: ಪೂಜ್ಯ ಶಬರಿಮಲೆ ಸನ್ನಿಧಾನಂ ಪ್ರವೇಶಿಸುವ ಯಾತ್ರಾರ್ಥಿಗಳು ಚಲನಚಿತ್ರ ತಾರೆಯರು, ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಪೋಸ್ಟರ್‌ಗಳು ಮತ್ತು ದೊಡ್ಡ ಛಾಯಾಚಿತ್ರಗಳನ್ನು ಹೊಂದಿದ್ದರೆ ಅವರಿಗೆ ಪ್ರವೇಶ ನಿರಾಕರಿಸಲಾಗುವುದು ಎಂದು ಕೇರಳ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ. ಈ ಕುರಿತು ಯಾತ್ರಾರ್ಥಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌ , … Continued

ಬೆಕ್ಕುಗಳಿಗೂ ಸಂತಾನಹರಣ ಚಿಕಿತ್ಸೆ ಮಾಡಿ : ಬಿಬಿಎಂಪಿಗೆ ಹೀಗೊಂದು ಮನವಿ..!

ಬೆಂಗಳೂರು : ಇಷ್ಟು ದಿನ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಬಿಬಿಎಂಪಿಗೆ ದೂರು ದಾಖಲಾಗುತ್ತಿತ್ತು. ಆದರೆ ಈಗ ಬೆಕ್ಕುಗಳ ಕಾಟಗಳ ವಿರುದ್ಧ ಸ್ಥಳೀಯ ನಿವಾಸಿಗಳು ದೂರು ನೀಡಿದ್ದಾರೆ…! ಬೆಕ್ಕಿನ ಹಾವಳಿಯಿಂದ ಕಂಗಾಲಾಗಿರುವ ಸ್ಥಳೀಯರು ನಾಯಿಗಳಿಗೆ ಮಾಡಿದಂತೆ ಬೆಕ್ಕುಗಳಿಗೂ ಸಂತನಾಹರಣ ಚಿಕಿತ್ಸೆ ಮಾಡುವಂತೆ ಮನವಿ ಬಿಬಿಎಂಪಿಗೆ ಮಾಡಿದ್ದಾರೆ. ಬೆಂಗಳೂರಿನ ವಾರ್ಡ್ ನಂಬರ್ 5ರ ನ್ಯಾಯಾಂಗ ಬಡಾವಣೆಯಲ್ಲಿ … Continued

ಅಫ್ಘಾನಿಸ್ತಾನದಲ್ಲಿ 1 ರಿಂದ 6ನೇ ತರಗತಿ ಹುಡುಗಿಯರಿಗೆ ಶಿಕ್ಷಣಕ್ಕೆ ಅವಕಾಶ ನೀಡಿದ ತಾಲಿಬಾನ್

ಕಾಬೂಲ್‌: ತಾಲಿಬಾನ್‌ನ ಶಿಕ್ಷಣ ಸಚಿವಾಲಯವು ಈಗ ಆರನೇ ತರಗತಿ ವರೆಗೆ ಹುಡುಗಿಯರಿಗೆ ಶಾಲೆಗಳಲ್ಲಿ ಅಧ್ಯಯನ ಮುಂದುವರಿಸಲು ಅವಕಾಶ ನೀಡಿದೆ. ತಾಲಿಬಾನ್‌ನ ಶಿಕ್ಷಣ ಸಚಿವಾಲಯವು ಆರನೇ ತರಗತಿಗಿಂತ ಕೆಳಗಿನ ಬಾಲಕಿಯರಿಗಾಗಿ ಶಾಲೆಗಳು ಮತ್ತು ಶೈಕ್ಷಣಿಕ ಕೇಂದ್ರಗಳನ್ನು ತೆರೆಯುವಂತೆ ಅಧಿಕಾರಿಗಳಿಗೆ ಪತ್ರವೊಂದನ್ನು ಕಳುಹಿಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವು ವಿಶ್ವ ವಿದ್ಯಾಲಯಗಳಲ್ಲಿ ಮಹಿಳಾ ಶಿಕ್ಷಣವನ್ನು ನಿಷೇಧಿಸಿದ ವಾರಗಳ ನಂತರ ಈ … Continued