ಹೊಸಪೇಟೆ: ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಸಾವು, ಹಲವರು ಅಸ್ವಸ್ಥ

ಹೊಸಪೇಟೆ (ವಿಜಯನಗರ): ನಗರದಲ್ಲಿ ಕಲುಷಿತ ನೀರಿನ ಸೇವನೆಯಿಂದ ಮಹಿಳೆಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನಗರದ ರಾಣಿಪೇಟೆಯ 12ನೇ ಕ್ರಾಸ್‌ ನಿವಾಸಿ ಲಕ್ಷ್ಮಿದೇವಿ (50) ಮೃತ ಮಹಿಳೆಯಾಗಿದ್ದಾರೆ. 40 ಕ್ಕೂ ಹೆಚ್ಚು ಜನರು ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. ಬಡಾವಣೆಯಲ್ಲಿ ಆರೋಗ್ಯ ಇಲಾಖೆಯವರು ಬೀಡು ಬಿಟ್ಟಿದ್ದು, ಜನರಿಗೆ ವಾಂತಿ, ಭೇದಿ ಪ್ರಕರಣಗಳು ನಿಲ್ಲುವ ಲಕ್ಷಣಗಳು … Continued

ಹುಬ್ಬಳ್ಳಿಗೆ ನಾಳೆ ಪ್ರಧಾನಿ ಮೋದಿ ಆಗಮನ : ಹುಬ್ಬಳ್ಳಿ ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ಜನವರಿ 12ರಂದು ನಡೆಯುತ್ತಿರುವ 26ನೇ ಯುವಜನೋತ್ಸವ-2023 ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ನಿಮಿತ್ತ ನಗರದಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಹಾಗೂ ಪಾರ್ಕಿಂಗ್ ಸ್ಥಳ ನಿಗದಿಪಡಿಸಲಾಗಿದೆ. ನವಲಗುಂದ ಕಡೆಯಿಂದ ಬರುವ ಬಸ್ಸುಗಳು ಕೆ.ಎಚ್. ಪಾಟೀಲ ರಸ್ತೆ ಶೃಂಗಾರ ಕ್ರಾಸ್ ಬಳಿ ಪ್ರಯಾಣಿಕರನ್ನು ಇಳಿಸಬೇಕು. ಗದಗ ರಸ್ತೆ ವಿನೋಭಾ ನಗರದ ಮೈದಾನದಲ್ಲಿ ವಾಹನಗಳನ್ನು … Continued

ಗೋಲ್ಡನ್ ಗ್ಲೋಬ್ಸ್ 2023 ಪ್ರಶಸ್ತಿ ಗೆದ್ದ ಆರ್‌ಆರ್‌ಆರ್‌ ಸಿನೆಮಾದ ‘ನಾಟು ನಾಟು’ ಚಿತ್ರಗೀತೆ

80ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಎಸ್‌ಎಸ್ ರಾಜಮೌಳಿ ಮತ್ತು ಅವರ ತಂಡವು ಭಾರತವನ್ನು ಹೆಮ್ಮೆಪಡುವಂತೆ ಮಾಡಿದೆ. ಜೂನಿಯರ್ ಎನ್‌ಟಿಆರ್‌ ಮತ್ತು ರಾಮಚರಣ ಅಭಿನಯದ ಆರ್‌ಆರ್‌ಆರ್‌ ಸಿನೆಮಾದ ‘ನಾಟು ನಾಟು’ ಅತ್ಯುತ್ತಮ ಮೂಲ ಹಾಡು, ಚಲನಚಿತ್ರ ವಿಭಾಗದಲ್ಲಿ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆರ್‌ಆರ್‌ಆರ್‌ನ ಸಂಗೀತ ಸಂಯೋಜಕ – ಎಂಎಂ ಕೀರವಾಣಿ ಅವರಿಗೆ ತಂಡವು ಜೋರಾಗಿ ಹರ್ಷೋದ್ಗಾರ ಮಾಡುತ್ತಿದ್ದಂತೆ … Continued

‘ಜಿಲೇಬಿ ಬಾಬಾ’ನ ಸಾಲುಸಾಲು ದುಷ್ಕೃತ್ಯ : ಮಾದಕ ದ್ರವ್ಯ, 100 ಮಹಿಳೆಯರ ಮೇಲೆ ಅತ್ಯಾಚಾರ, 14 ವರ್ಷಗಳ ಜೈಲು ಶಿಕ್ಷೆ

ಫತೇಹಾಬಾದ್ : ಹರ್ಯಾಣದ ಫತೇಹಾಬಾದ್‌ನ ತ್ವರಿತ ನ್ಯಾಯಾಲಯವು ಅಮರಪುರಿ ಅಥವಾ ಜಿಲೇಬಿ ಬಾಬಾ ಎಂದು ಕರೆಯಲ್ಪಡುವ ಸ್ವಯಂ ಘೋಷಿತ ದೇವಮಾನವನಿಗೆ 100ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದುಷ್ಕೃತ್ಯದ ವೀಡಿಯೊ ಕ್ಲಿಪ್‌ಗಳನ್ನು ಮಾಡಿದ್ದಕ್ಕಾಗಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆರೋಪಿ ಜಿಲೇಬಿ ಬಾಬಾ ಸಹಾಯ ಕೇಳಲು ಬರುವ ಮಹಿಳೆಯರಿಗೆ ಮಾದಕ ವಸ್ತು ನೀಡಿ … Continued

ಶಿವಸೇನೆ ಚಿಹ್ನೆಯ ವಿವಾದ : ಜನವರಿ 17ರಂದು ಶಿಂಧೆ-ಠಾಕ್ರೆ ಬಣದ ವಿವಾದದ ವಿಚಾರಣೆ ನಡೆಸಲಿರುವ ಚುನಾವಣಾ ಆಯೋಗ

ಮುಂಬೈ: ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಮಹಾರಾಷ್ಟ್ರದಲ್ಲಿ ಹೈ-ಡೆಸಿಬಲ್ ರಾಜಕೀಯ ನಾಟಕ ಕೊನೆಗೊಂಡಿತು. ಮಹಾರಾಷ್ಟ್ರದಲ್ಲಿ ಯಾರು ಅಧಿಕಾರದಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿದ್ದರೂ, ನಿಜವಾದ ಶಿವಸೇನೆ ಯಾವುದು ಎಂಬ ಪ್ರಶ್ನೆ ಉಳಿದಿದೆ. ಜನವರಿ 17 ರಂದು ಚುನಾವಣಾ ಆಯೋಗವು ಶಿವಸೇನೆ ಚಿಹ್ನೆ ವಿವಾದದ ಬಗ್ಗೆ ಆಲಿಸಲಿದೆ. ಶಿಂಧೆ ಬಣವು ಶಿವಸೇನೆ ಎಂಬ ಹೆಸರಿನ … Continued

ಉತ್ತರ ಕರ್ನಾಟಕದಲ್ಲಿ ಶೀತ ಗಾಳಿ ಮುನ್ನೆಚ್ಚರಿಕೆ ; ಬೆಂಗಳೂರಿನಲ್ಲಿ ದಟ್ಟ ಮಂಜು

ಬೆಂಗಳೂರು: ಕರ್ನಾಟಕದ ಕೆಲ ದಿನಗಳಿಂದ ಚಳಿ ಹೆಚ್ಚಾಗಿದೆ. ಬೆಂಗಳೂರು, ಮಲೆನಾಡು ಭಾಗಗಳಲ್ಲಿ ವಿಪರೀತ ಚಳಿ ಶುರುವಾಗಿದ್ದು, ಉತ್ತರ ಕರ್ನಾಟಕದಲ್ಲಿಯೂ ಕೂಡ ಚಳಿ ಗಾಳಿ ಬೀಸಲಿದೆ. ಇಂದಿನಿಂದ ಐದಾರು ದಿನಗಳ ಕಾಲ ರಾಜ್ಯಾದ್ಯಂತ ಚಳಿ ವಾತಾವರಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕದಲ್ಲಿ ಶೀತಗಾಳಿ ಮುನ್ನೆಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ದಟ್ಟ ಮಂಜು … Continued