ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಗುಂಡಿಗೆ ಬಿದ್ದು ಕಾಡಾನೆ ಸಾವು

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಅಟ್ಟೂರು-ನಲ್ಲೂರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಮಂಪರು ಔಷಧ ನಾಟಿದ್ದ ಸುಮಾರು 20 ವರ್ಷದ ಕಾಡಾನೆ 35 ಅಡಿ ಆಳದ ಗುಂಡಿಗೆ ಬಿದ್ದು ಮೃತಪಟ್ಟಿದೆ. ಈ ಪ್ರದೇಶದಲ್ಲಿ ಜನರಿಗೆ ಭಾರೀ ತೊಂದರೆ ನೀಡಿದ್ದ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದರು. … Continued

ಊಟದ ವಿಚಾರಕ್ಕೆ ಜಗಳ: ತಾಯಿ, ಮಗ ಆತ್ಮಹತ್ಯೆ

ರಾಮನಗರ: ಕೌಟುಂಬಿಕ ಕಲಹದಿಂದ ನೊಂದು ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದ ಕುಮಾರಸ್ವಾಮಿ ಲೇಔಟ್‍ನಲ್ಲಿ ನಡೆದ ವರದಿಯಾಗಿದೆ. ಮೃತರನ್ನು ವಿಜಯಲಕ್ಷ್ಮೀ (50) ಹಾಗೂ ಹರ್ಷ (25) ಎಂದು ಗುರುತಿಸಲಾಗಿದೆ. ತಾಯಿ ವಿಜಯಲಕ್ಷ್ಮೀ ಜೊತೆ ಊಟದ ವಿಚಾರಕ್ಕೆ ಮಗ ಹರ್ಷ ರಾತ್ರಿ ಜಗಳವಾಡಿದ್ದ ಎನ್ನಲಾಗಿದೆ. ಮಗನ ಮಾತಿನಿಂದ ಮನನೊಂದ ವಿಜಯಲಕ್ಷ್ಮಿ ಮನೆಯ ಬಳಿ ಸಂಪಿಗೆ ಬಿದ್ದು … Continued

ಟಿವಿ ವಾಹಿನಿಗಳು ಸಮಾಜದಲ್ಲಿ ಒಡಕು ಸೃಷ್ಟಿಸುತ್ತಿವೆ: ಸುಪ್ರೀಂ ಕೋರ್ಟ್‌

ನವದೆಹಲಿ: ಟಿವಿ ವಾಹಿನಿಗಳು ನಿರ್ದಿಷ್ಟ ಕಾರ್ಯಸೂಚಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದು, ಸುದ್ದಿಯನ್ನು ರೋಚಕಗೊಳಿಸುವ ಸ್ಪರ್ಧೆಗೆ ಇಳಿದಿವೆ. ದೇಶದಲ್ಲಿ ಒಡಕು ಉಂಟು ಮಾಡುತ್ತಿವೆ ಎಂದು ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ದ್ವೇಷ ಭಾಷಣ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳುವಂತೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ. ಎಂ. ಜೋಸೆಫ್‌ ಮತ್ತು ಬಿ. ವಿ. ನಾಗರತ್ನ ಅವರ ನೇತೃತ್ವದ … Continued

ಗ್ವಾಟೆಮಾಲಾದ ಮಳೆಕಾಡಿನ ಕೆಳಗೆ 2,000 ವರ್ಷಗಳಷ್ಟು ಪುರಾತನ ಮಾಯನ್ ನಗರ ಪತ್ತೆ…!

ಮೆಟ್ರೋ ನ್ಯೂಸ್ ಪ್ರಕಾರ, ಉತ್ತರ ಗ್ವಾಟೆಮಾಲಾದಲ್ಲಿ ಸಮೀಕ್ಷೆ ಮಾಡುವಾಗ ಮಳೆಕಾಡಿನ ಕೆಳಗೆ ಸಮಾಧಿ ಮಾಡಿದ ದೊಡ್ಡ ಮಾಯನ್ ಪಟ್ಟಣದ ಅವಶೇಷಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಸುದ್ದಿವಾಹಿನಿಯ ಪ್ರಕಾರ, ಮೆಕ್ಸಿಕನ್ ಗಡಿಗೆ ಸಮೀಪವಿರುವ ಮತ್ತು 650 ಚದರ ಮೈಲುಗಳಷ್ಟು ವ್ಯಾಪಿಸಿರುವ ಪ್ರದೇಶವನ್ನು ಮಿರಾಡೋರ್-ಕಲಕ್ಮುಲ್ ಕಾರ್ಸ್ಟ್ ಬೇಸಿನ್ ಎಂದು ಕರೆಯಲಾಗುತ್ತದೆ. 2,000 ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ನಗರವು 110 … Continued

ಧಾರವಾಡ ಜೆಎಸ್‌ಎಸ್‌ನಲ್ಲಿ ಇಗ್ನೋ ಕೋರ್ಸುಗಳಿಗೆ ಪ್ರವೇಶ ಪ್ರಾರಂಭ

ಧಾರವಾಡ: ಇಂಧಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) ದೂರ ಶಿಕ್ಷಣದ ಕೋರ್ಸಗಳಿಗೆ ಜನೇವರಿ ೨೦೨೩ ನೇ ಸಾಲಿಗೆ ಪ್ರವೇಶ ಪ್ರಾರಂಭವಾಗಿದೆ. ಪ್ರವೇಶಕ್ಕಾಗಿ ಧಾರವಾಡ ಜೆ.ಎಸ್.ಎಸ್. ಕಾಲೇಜಿನಲ್ಲಿರುವ ಇಗ್ನೋದ ಧಾರವಾಡ ಅಧ್ಯಯನ ಕೇಂದ್ರದಿಂದ ಮಾಹಿತಿ ಪಡೆಯಬಹುದಾಗಿದೆ. ಇಗ್ನೋ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ, ಎಂಬಿಎ, ಎಂಸಿಎ, ಎಂ.ಕಾಂ, ಎಂ..ಎ.(ಇಂಗ್ಲಿಷ್‌) ಎಂ.ಎ.(ಇತಿಹಾಸ), ಎಂ.ಎ.(ಅರ್ಥಶಾಸ್ತ್ರ) ಮುಂತಾದ ಸ್ನಾತಕೋತ್ತರ ಕೋರ್ಸಗಳು ಬಿಎ, ಬಿ.ಕಾಂ, … Continued

ಭಾರತ ಜೋಡೋ ಯಾತ್ರೆ ವೇಳೆ ಜಲಂಧರ್‌ ಕಾಂಗ್ರೆಸ್ ಸಂಸದ ನಿಧನ

ಜಲಂಧರ್‌ : ಪಂಜಾಬ್‌ನ ಫಿಲ್ಲೌರ್‌ನಲ್ಲಿ ಶನಿವಾರ ಬೆಳಗ್ಗೆ ಭಾರತ ಜೋಡೋ ಯಾತ್ರೆಯ ವೇಳೆ ಜಲಂಧರ್‌ನ ಕಾಂಗ್ರೆಸ್ ಸಂಸದ ಚೌಧರಿ ಸಂತೋಖ್ ಸಿಂಗ್ ನಿಧನರಾಗಿದ್ದಾರೆ. ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರಿಗೆ ಹೃದಯ ಬಡಿತ ಹೆಚ್ಚಾಗಿ ಇದ್ದಕ್ಕಿದ್ದಂತೆ ಅಸ್ವಸ್ಥರಾದರು. ತಕ್ಷಣವೇ ಕಾಂಗ್ರೆಸ್ ನಾಯಕನನ್ನು ಫಗ್ವಾರದ ವಿರ್ಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು … Continued

10 ವರ್ಷಗಳ ಜೈಲು ಶಿಕ್ಷೆ : ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಲೋಕಸಭೆಯಿಂದ ಅನರ್ಹ

ನವದೆಹಲಿ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ಲೋಕಸಭೆಯ ಸೆಕ್ರೆಟರಿಯೇಟ್ ಶುಕ್ರವಾರ ತಡರಾತ್ರಿ ತಿಳಿಸಿದೆ. 2009ರಲ್ಲಿ ದಾಖಲಾದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ, ಇತರ ಮೂವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ ನಂತರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ಲೋಕಸಭೆಯ … Continued

‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದರೆ ಸಾಲದು, ಶ್ರೀರಾಮನಂತೆ ಜನರನ್ನು ಉನ್ನತಿಗೆ ತರುವ ಕೆಲಸ ಮಾಡಬೇಕು: ದತ್ತಾತ್ರೇಯ ಹೊಸಬಾಳೆ

ಸುಲ್ತಾನಪುರ (ಉತ್ತರ ಪ್ರದೇಶ): ಕೇವಲ “ಭಾರತ ಮಾತಾ ಕಿ ಜೈ” ಎಂದು ಘೋಷಣೆ ಕೂಗುವುದು ಮಾತ್ರ ದೇಶಭಕ್ತಿಗೆ ಕಾರಣವಾಗುವುದಿಲ್ಲ, ಅದಕ್ಕೆ ನಿಸ್ವಾರ್ಥ ಸೇವೆಯ ಅಗತ್ಯವಿದೆ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ (ಸರ ಕಾರ್ಯವಾಹ) ದತ್ತಾತ್ರೇಯ ಹೊಸಬಾಳೆ ಶುಕ್ರವಾರ ಹೇಳಿದ್ದಾರೆ. ಒಂದು ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಶ್ರೀರಾಮನ ಹೆಸರಿನಿಂದ ಜನರ ಉನ್ನತಿಯಾಗಿಲ್ಲ, ಆದರೆ ಶ್ರೀರಾಮನ ಕೆಲಸಗಳು ಜನರನ್ನು … Continued