ಇಂಡಿಗೋ ವಿಮಾನದಲ್ಲಿ ತುರ್ತು ನಿರ್ಗಮನ ತೆರೆದಿದ್ದು ಸಂಸದ ತೇಜಸ್ವಿ ಸೂರ್ಯ: ಕಾಂಗ್ರೆಸ್ ಆರೋಪ, ಬಿಜೆಪಿ ವಿರುದ್ಧ ವಾಗ್ದಾಳಿ

ಬೆಂಗಳೂರು: ಕಳೆದ ತಿಂಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಹತ್ತಿದ ನಂತರ ಆಕಸ್ಮಿಕವಾಗಿ ತುರ್ತು ನಿರ್ಗಮನ ತೆರೆದ ಪ್ರಯಾಣಿಕ ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥ ಎಂಬ ವರದಿಗಳ ನಡುವೆಯೇ ಪ್ರತಿಪಕ್ಷ ಕಾಂಗ್ರೆಸ್ ಮಂಗಳವಾರ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದೆ. ಸರ್ಕಾರ ಇಷ್ಟು ದಿನ ಘಟನೆಯನ್ನು ಮರೆಮಾಚಿದ್ದು ಏಕೆ … Continued

ಬೀದರ : ಹಸುಗೂಸುಗಳಿಗೆ ವಿಷವುಣಿಸಿ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ

ಬೀದರ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ನಿಲಮನಹಳ್ಳಿ ತಾಂಡಾದಲ್ಲಿ ನಡೆದ ವರದಿಯಾಗಿದೆ. 25 ವರ್ಷದ ಮೀರಾಬಾಯಿ ಎಂಬವರು ತನ್ನ ಮೂರು ಮತ್ತು ಎರಡು ವರ್ಷದ ಮಕ್ಕಳಿಗೆ ವಿಷವುಣಿಸಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಮೀರಾಬಾಯಿ ತನ್ನಮಕ್ಕಳಾದ … Continued

ಕಳ್ಳತನದ ಆರೋಪ : ನೂರಾರು ಜನರ ಮುಂದೆಯೇ ನಾಲ್ವರ ಕೈ ಕತ್ತರಿಸಿದ ತಾಲಿಬಾನ್‌…!

ಕಂದಹಾರ: ಮಂಗಳವಾರ ಕಂದಹಾರ್‌ನ ಅಹ್ಮದ್ ಶಾಹಿ ಸ್ಟೇಡಿಯಂನಲ್ಲಿ ಭಾರೀ ಜನಸಮೂಹದ ಸಮ್ಮುಖದಲ್ಲಿ ಕಳ್ಳತನದ ಆರೋಪ ಹೊತ್ತಿದ್ದ ನಾಲ್ವರ ಕೈಗಳನ್ನು ತಾಲಿಬಾನ್ ಆಡಳಿತ ಸಾರ್ವಜನಿಕವಾಗಿ ಕತ್ತರಿಸಿದೆ. ಅಲ್ಲದೆ, ವಿವಿಧ ಅಪರಾಧಗಳಿಗಾಗಿ ಫುಟ್ಬಾಲ್ ಕ್ರೀಡಾಂಗಣದಲ್ಲಿ ಒಂಬತ್ತು ಪುರುಷರನ್ನು ಸಾರ್ವಜನಿಕವಾಗಿ ಥಳಿಸಲಾಯಿತು ಎಂದು ಗವರ್ನರ್ ಕಚೇರಿಯ ವಕ್ತಾರ ಹಾಜಿ ಝೈದ್ ಹೇಳಿದ್ದಾರೆ. ವಕ್ತಾರರ ಪ್ರಕಾರ, ಅಪರಾಧಿಗಳನ್ನು 35-39 ಬಾರಿ ಹೊಡೆಯಲಾಯಿತು … Continued

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಸಿಸ್ಟರ್ ಆಂಡ್ರೆ ನಿಧನ

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ, ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್, ಮಂಗಳವಾರ ಫ್ರಾನ್ಸ್‌ನ ಟೌಲನ್ ನಗರದಲ್ಲಿ ತಮ್ಮ 118 ನೇ ವಯಸ್ಸಿನಲ್ಲಿ ನಿಧನರಾದರು. ರಾಂಡನ್ ಅವರ ವಕ್ತಾರ ಡೇವಿಡ್ ತವೆಲ್ಲಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಲುಸಿಲ್ ರಾಂಡನ್ ಅವರು ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ನಿಧನರಾದರು. “ಅತ್ಯಂತ ದುಃಖವಿದೆ, ಆದರೆ ಅದು ಸಂಭವಿಸಬೇಕೆಂದು … Continued

ನಟಿ ಅಮಲಾ ಪೌಲ್‌ ಗೆ ಕೇರಳದ ದೇವಾಲಯದೊಳಕ್ಕೆ ಹೋಗಲು ಪ್ರವೇಶ ನಿರಾಕರಣೆ

ಕೊಚ್ಚಿ: ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ದೇವಸ್ಥಾನಕ್ಕೆ ಪ್ರವೇಶಿಸಲು ಅಧಿಕಾರಿಗಳು “ಧಾರ್ಮಿಕ ತಾರತಮ್ಯ” ದಿಂದ ಅನುಮತಿ ನಿರಾಕರಿಸಿದ್ದಾರೆ ಎಂದು ನಟಿ ಅಮಲಾ ಪೌಲ್ ಆರೋಪಿಸಿದ್ದಾರೆ. ಸೋಮವಾರ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಆವರಣದೊಳಗೆ ಹಿಂದೂಗಳನ್ನು ಮಾತ್ರ ಅನುಮತಿಸುವ ಸಂಪ್ರದಾಯಗಳನ್ನು ಉಲ್ಲೇಖಿಸಿ ದೇವಸ್ಥಾನದ ಅಧಿಕಾರಿಗಳು ದರ್ಶನವನ್ನು ನಿರಾಕರಿಸಿದರು. ದೇವಸ್ಥಾನದ ಮುಂಭಾಗದ ರಸ್ತೆಯಿಂದ ದೇವಿಯ ದರ್ಶನಕ್ಕೆ ಒತ್ತಾಯಿಸಿ ದರ್ಶನ ನಿರಾಕರಿಸಲಾಗಿದೆ … Continued

ಬೆಳಗಾವಿ – ಸಿಕಂದರಾಬಾದ್ ನಡುವೆ ನಿತ್ಯ ರೈಲು ಸೇವೆ ಆರಂಭ

ನವದೆಹಲಿ : ಬೆಳಗಾವಿ ಹಾಗೂ ಸಿಕಂದರಾಬಾದ್ ಮಾರ್ಗದಲ್ಲಿ ನಿತ್ಯ ರೈಲು ಸೇವೆ ಜನವರಿ 17ರಿಂದ ಆರಂಭವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಬೆಳಗಾವಿಯಿಂದ ಹೊರಡುವ ಈ ರೈಲು ಖಾನಪುರ, ಲೋಂಡಾ, ಧಾರವಾಡ, ಹುಬ್ಬಳ್ಳಿ, ಕೊಪ್ಪಳ, ಬಳ್ಳಾರಿ, ಗುಂತಕಲ್ಲ, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಚಿತ್ತಾಪುರ, ಮಳಖೇಡ ರೋಡ್, ವಿಕಾರಬಾದ್, ಬೇಗಂಪೇಟ ಮಾರ್ಗದ ಮೂಲಕ … Continued