ದೆಹಲಿ ಮದ್ಯ ಪ್ರಕರಣ : ಗೋವಾ ಚುನಾವಣಾ ಪ್ರಚಾರಕ್ಕೆ ಹಗರಣದ ಹಣ ಬಳಸಿಕೊಂಡ ಎಎಪಿ-ಇ.ಡಿ.ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ನವದೆಹಲಿ: ಆಮ್ ಆದ್ಮಿ ಪಕ್ಷವು ದೆಹಲಿ ಮದ್ಯ ಹಗರಣದಿಂದ ಬಂದ ಹಣವನ್ನು ಗೋವಾದಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ಹೇಳಿದೆ. “ಇದುವರೆಗಿನ ಈ ಕಿಕ್‌ಬ್ಯಾಕ್‌ನ ಜಾಡು ತನಿಖೆಯಿಂದ ಈ ಹಣವನ್ನು ಎಎಪಿಯ ಚುನಾವಣಾ ಪ್ರಚಾರಕ್ಕೆ ಬಳಸಲಾಗಿದೆ ಎಂದು ತಿಳಿದುಬಂದಿದೆ” ಎಂದು ಪ್ರಕರಣದಲ್ಲಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಇ.ಡಿ. ಹೇಳಿದೆ. 2022ರಲ್ಲಿ ನಡೆದ ಗೋವಾ … Continued

ಕಣ್ಣೂರಿನಲ್ಲಿ ಕಾರಿಗೆ ಆಕಸ್ಮಿಕ ಬೆಂಕಿ: ಗರ್ಭಿಣಿ ಮಹಿಳೆ-ಪತಿ ಸಜೀವ ದಹನ…

ಕಣ್ಣೂರು: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರಿನಲ್ಲಿದ್ದ ಗರ್ಭಿಣಿ ಮಹಿಳೆ ಮತ್ತು ಆಕೆಯ ಪತಿ ಸಜೀವ ದಹನಗೊಂಡ ದಾರುಣ ಘಟನೆ ಕಣ್ಣೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆ ಬಳಿ ಸಂಭವಿಸಿದೆ. ಮೃತ ದಂಪತಿಯನ್ನು ಕುಟ್ಟಿಯತ್ತೂರು ಕರಂಬುವಿನ ಪ್ರಜಿತ್(32) ಮತ್ತು ಅವರ ಪತ್ನಿ ರೀಶಾ (26) ಎಂದು ಗುರುತಿಸಲಾಗಿದೆ. ಇಬ್ಬರೂ ಕುಟ್ಟಿಯತ್ತೂರಿನಿಂದ ಜಿಲ್ಲಾ ಆಸ್ಪತ್ರೆಗೆ ತೆರಳುತ್ತಿದ್ದಾಗ … Continued

ವಿಶ್ವದ ಟಾಪ್‌ 15 ಶ್ರೀಮಂತರ ಪಟ್ಟಿಯಿಂದಲೂ ಹೊರಬಿದ್ದ ಗೌತಮ್‌ ಅದಾನಿ…! ಈಗ ಮುಕೇಶ ಅಂಬಾನಿ ಏಷ್ಯಾದ ನಂ.1 ಶ್ರೀಮಂತ

ನವದೆಹಲಿ : ಕಳೆದ ಕೆಲ ದಿನಗಳಿಂದ ಅದಾನಿ ಗ್ರೂಪ್‌ ಷೇರುಗಳು ಭಾರೀ ಕುಸಿತ ಕಾಣುತ್ತಿವೆ. ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಕ್ಯಾಪ್ ಸುಮಾರು $ 100 ಬಿಲಿಯನ್‌ನಷ್ಟು ಕುಸಿದಿದೆ. ಕಳೆದ ವಾರ ಅಮೆರಿಕ (US) ಮೂಲದ ಶಾರ್ಟ್‌ ಸೆಲ್ಲರ್‌ ಸಂಸ್ಥೆ ‘ಹಿಂಡೆನ್‌ಬರ್ಗ್ ರಿಸರ್ಚ್‌’ನ ವರದಿಯು ಅದಾನಿ ಗ್ರೂಪ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಖಾತೆ ವಂಚನೆಯಲ್ಲಿ ತೊಡಗಿಸಿಕೊಂಡಿದೆ … Continued

ಅದಾನಿ ಗ್ರೂಪ್‌ಗೆ ಸಾಲ : ಭಾರತೀಯ ಬ್ಯಾಂಕ್‌ಗಳಿಂದ ಮಾಹಿತಿ ಕೇಳಿದ ಆರ್‌ಬಿಐ

ನವದೆಹಲಿ: ಅಮೆರಿಕದ ಹಿಂಡಬ್‌ಬರ್ಗ್ ವರದಿಯ ಬಳಿಕ ಅದಾನಿ ಗ್ರೂಪ್ ಕಂಪನಿಯ ಷೇರುಗಳು ನಿರಂತರವಾಗಿ ಕುಸಿತ ಕಾಣುತ್ತಿದೆ. ಹಾಗೆಯೇ ಸಂಸ್ಥೆಯು ಬುಧವಾರ ತನ್ನ 20,000 ಕೋಟಿ ರೂಪಾಯಿಗಳ ಎಫ್‌ಪಿಒ ಹಿಂಪಡೆಯುವ ನಿರ್ಧಾರವನ್ನು ಕೂಡಾ ಘೋಷಣೆ ಮಾಡಿದೆ. ಇದೆಲ್ಲದರ ನಡುವೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಅದಾನಿ ಗ್ರೂಪ್‌ಗೆ ಯಾವೆಲ್ಲಾ ಬ್ಯಾಂಕ್‌ಗಳು ಸಾಲ ನೀಡಿವೆ ಹಾಗೂ ಎಷ್ಟು ಪ್ರಮಾಣದ … Continued

ಸಿ.ಡಿ. ಪ್ರಕರಣ : ಸಿಬಿಐ ತನಿಖೆ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಚರ್ಚೆ- ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು : ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ ಜಾರಕಿಹೊಳಿ ನನಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಬುಧವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿ.ಡಿ. ಪ್ರಕರಣವನ್ನು ಸಿಬಿಐಗೆ ವಹಿಸುವ ವಿಷಯದ ಬಗ್ಗೆ ರಮೇಶ ಜಾರಕಿಹೊಳಿ ನನಗೆ ಮಾಹಿತಿ … Continued

1410 ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಎಸ್‌ಎಸ್‌ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು

ಭಾರತೀಯ ಸೇನೆಯ ಗಡಿ ಭದ್ರತಾ ಪಡೆ (BSF) ವಿಭಾಗದಲ್ಲಿರುವ ಖಾಲಿ ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿದೆ. ಒಟ್ಟು 1410 ಕಾನ್ಸ್​ಟೇಬಲ್ (ಟ್ರೇಡ್ಸ್​ಮೆನ್) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಬಯಸುವವರು ಗಡಿ ಭದ್ರತಾ ಪಡೆಯ ಅಧಿಕೃತ ವೆಬ್​ಸೈಟ್​ rectt.bsf.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಿವರಗಳು: ಸಂಸ್ಥೆ-ಗಡಿ ಭದ್ರತಾ ಪಡೆ ಹುದ್ದೆ-ಕಾನ್ಸ್​ಟೇಬಲ್ (ಟ್ರೇಡ್ಸ್​ಮೆನ್) … Continued

14 ನಾಯಿಗಳು ಕೊಂಗಾ ಲೈನ್‌ನಲ್ಲಿ ನಡೆಯುವಂತೆ ಮಾಡಿ ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಾಣ: ಅಪರೂಪದ ವೀಡಿಯೊ ವೀಕ್ಷಿಸಿ

ಜರ್ಮನಿಯ ನಾಯಿ ತರಬೇತುದಾರರೊಬ್ಬರು ತಮ್ಮ ತಮ್ಮ ನಾಯಿಗಳನ್ನು ಕೊಂಗಾ ಸಾಲಿನಲ್ಲಿ ನಿಲ್ಲಲು ಕಲಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕೊಂಗಾ ಎಂಬುದು ಲ್ಯಾಟಿನ್ ಅಮೆರಿಕನ್ ನೃತ್ಯವಾಗಿದೆ., ಇದರಲ್ಲಿ ಜನರು ಒಬ್ಬರ ನಂತರ ಒಬ್ಬರಂತೆ ಸಾಲಿನಲ್ಲಿ ಇರುತ್ತಾರೆ ಮತ್ತು ನೃತ್ಯ ಮಾಡುವಾಗ ಪರಸ್ಪರರ ಭುಜ ಅಥವಾ ಸೊಂಟವನ್ನು ಹಿಡಿದುಕೊಳ್ಳುತ್ತಾರೆ. ಜರ್ಮನಿಯ ಸ್ಟಕೆನ್‌ಬ್ರಾಕ್‌ನ ವೋಲ್ಫ್‌ಗ್ಯಾಂಗ್ ಲಾಯೆನ್‌ಬರ್ಗರ್ ಎಂದು ಗುರುತಿಸಲಾದ … Continued

ಅದಾನಿ ಷೇರು ಕುಸಿತದ ಬಗ್ಗೆ ಸಂಸದೀಯ ಸಮಿತಿ ತನಿಖೆಗೆ ಪ್ರತಿಪಕ್ಷಗಳ ಒತ್ತಾಯ

ನವದೆಹಲಿ : ಅಮೆರಿಕದ ಆರೋಪಗಳಿಗೆ ಸಂಬಂಧಿಸಿದಂತೆ ಅದಾನಿ ಗ್ರೂಪ್ ವಿರುದ್ಧ ಆಪಾದಿತ “ಆರ್ಥಿಕ ಹಗರಣ” ಕುರಿತು ಸಂಸದೀಯ ಸಮಿತಿ ಅಥವಾ ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯಿಂದ ತನಿಖೆ ನಡೆಸಬೇಕೆಂದು ವಿರೋಧ ಪಕ್ಷಗಳು ಗುರುವಾರ ಒತ್ತಾಯಿಸಿವೆ. ಸಂಸತ್ತಿನ ಬಜೆಟ್ ಅಧಿವೇಶನದ ಮೂರನೇ ದಿನದಂದು ಆರಂಭವಾದ ಕೆಲವೇ ಹೊತ್ತಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯನ್ನು … Continued

ಅಯೋಧ್ಯೆ ರಾಮ ಮಂದಿರ ನಿರ್ಮಾಣ : ನೇಪಾಳದಿಂದ ಅಯೋಧ್ಯೆಗೆ ಬಂತು 6 ಕೋಟಿ ವರ್ಷಗಳಷ್ಟು ಹಳೆಯ ಅಪರೂಪದ ಸಾಲಿಗ್ರಾಮ ಶಿಲೆಗಳು…!

ನವದೆಹಲಿ: ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಭಗವಾನ್ ರಾಮ ಮತ್ತು ಜಾನಕಿ ದೇವಿಯ ವಿಗ್ರಹವನ್ನು ಕೆತ್ತಲು ಎರಡು ಅಪರೂಪದ ಸಾಲಿಗ್ರಾಮ ಶಿಲೆಗಳು ಗುರುವಾರ (ಫೆಬ್ರವರಿ 2, 2023) ನೇಪಾಳದಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ತಲುಪಿದವು. ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಪಂಕಜ್ ನೇಪಾಳದ ಮುಸ್ತಾಂಗ್ ಜಿಲ್ಲೆಯಿಂದ ಎರಡು ಪವಿತ್ರ ಶಿಲೆಗಳನ್ನು ಬರಮಾಡಿಕೊಂಡರು. ಈ … Continued

7.30 ಕೆ.ಜಿ ತೂಕದ, 2 ಅಡಿ ಎತ್ತರದ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ…!

ಇತ್ತೀಚೆಗಷ್ಟೇ 7.30 ಕೆ.ಜಿ. (16 ಪೌಂಡ್) ತೂಕದ ಎರಡು ಅಡಿ ಎತ್ತರದ ಗಂಡು ಮಗುವಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದಾರೆ. ಬ್ರೆಜಿಲ್‌ನ ಪ್ಯಾರಿಂಟಿನ್ಸ್‌ನಲ್ಲಿರುವ ಆಸ್ಪತ್ರೆ ಪಾಡ್ರೆ ಕೊಲಂಬೊದಲ್ಲಿ ಜನವರಿ 18 ರಂದು ಸಿಸೇರಿಯನ್ ಮೂಲಕ ತನ್ನ ಆರನೇ ಮಗು ಬೇಬಿ ಆಂಗರ್ಸನ್‌ಗೆ ಜನ್ಮ ನೀಡಿದಾಗ “ಈ ಆಶ್ಚರ್ಯವನ್ನು ನಿರೀಕ್ಷಿಸಿರಲಿಲ್ಲ” ಎಂದು ಕ್ಲೈಡಿಯನ್ ಸ್ಯಾಂಟೋಸ್ ಡಾಸ್ ಸ್ಯಾಂಟೋಸ್ ಹೇಳಿದರು. … Continued