ದ್ವೇಷ ಭಾಷಣ : ಬಾಬಾ ರಾಮದೇವ್ ವಿರುದ್ಧ ಎಫ್‌ಐಆರ್ ದಾಖಲು

ಬಾರ್ಮರ್: ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದ ಧರ್ಮಗುರುಗಳ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ದ್ವೇಷ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದ ಮೇಲೆ ಯೋಗ ಗುರು ರಾಮದೇವ ವಿರುದ್ಧ ಭಾನುವಾರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ನಿವಾಸಿ ಪಥಾಯಿ ಖಾನ್ ನೀಡಿದ ದೂರಿನ ಆಧಾರದ ಮೇಲೆ ಚೌಹಾಟನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ … Continued

ಇಂದು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮನ, ಬೆಂಗಳೂರು, ತುಮಕೂರಿನ ಕಾರ್ಯಕ್ರಮಗಳಲ್ಲಿ ಭಾಗಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ನಾಳೆ, ಸೋಮವಾರ (ಫೆಬ್ರವರಿ 6) ಬೆಂಗಳೂರು, ತುಮಕೂರು ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಾಳೆ, ಫೆಬ್ರವರಿ 6ರಂದು ಬೆಂಗಳೂರು ಹೊರವಲಯ ನೆಲಮಂಗಲದ ಮಾದವಾರದ ಬಿಐಇಸಿಯಲ್ಲಿ, ಬೆಳಿಗ್ಗೆ 11ಕ್ಕೆ ಇಂಡಿಯಾ ಎನರ್ಜಿ ವೀಕ್ 2023ಕ್ಕೆ ಚಾಲನೆ ನೀಡಲಿದ್ದಾರೆ. ಇದರಲ್ಲಿ 30 ಸಾವಿರಕ್ಕೂ ಹೆಚ್ಚು ಜನರು, 8,000 ಹೊರ ದೇಶದ ಪ್ರತಿನಿಧಿಗಳು, … Continued

ಹೈದರಾಬಾದ್ ಎರಡು ಆಸ್ಪತ್ರೆಗಳಲ್ಲಿ ಅಪರೂಪದ ಅಂತಾರಾಜ್ಯ ಕಿಡ್ನಿ ವಿನಿಮಯ

ಹೈದರಾಬಾದ್‌: ಛತ್ತೀಸ್‌ಗಢದ ಸಂದೀಪ್ ಭಟ್ನಾಗರ್ ಮತ್ತು ತೆಲಂಗಾಣದ ಹನುಮಂತು ಇವರಿಬ್ಬರೂ ತಮಗೆ ಸೂಕ್ತ ಹೊಂದಾಣಿಕೆಯಾಗುವ ಕಿಡ್ನಿ ದಾನಕ್ಕಾಗಿ ಕಾಯುತ್ತಿದ್ದರು. ಆದರೆ ಅವರ ಕುಟುಂಬಗಳಲ್ಲಿ ಅವರಿಗೆ ಒಬ್ಬರೂ ಸಿಗಲಿಲ್ಲ. ಅಂತಿಮವಾಗಿ, ಸಂದೀಪ್ ಅವರ ಪತ್ನಿ ಇಂದು ಭಟ್ನಾಗರ್ (40) ಹನುಮಂತು ಅವರಿಗೆ ಮತ್ತು ಹನುಮಂತು ಅವರ ಪತ್ನಿ ವರಲಕ್ಷ್ಮಿ (37) ಸಂದೀಪ್‌ ಅವರಿಗೆ ತಮ್ಮ ಕಿಡ್ನಿ ದಾನ … Continued

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ : ಲಾಹೋರ್ ಘೋಷಣೆಯ ವಿಶ್ವಾಸದ್ರೋಹವೂ….ಕಾರ್ಗಿಲ್ ಯುದ್ಧದ ದುಸ್ಸಾಹಸವೂ…

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಭಾನುವಾರ ನಿಧನರಾಗಿದ್ದಾರೆ. ಅವರು 79 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ದುಬೈನ ಅಮೇರಿಕನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವಾರು ವರ್ಷಗಳ ಹಿಂದೆ, ಪರ್ವೇಜ್ ಮುಷರಫ್ ಅವರಿಗೆ ಮಾರಣಾಂತಿಕ ಕಾಯಿಲೆ ‘ಅಮಿಲೋಯ್ಡೋಸಿಸ್’ ಎಂದು ಗುರುತಿಸಲಾಯಿತು, ಈ ಕಾಯಿಲೆಯಿಂದ ಅಸಹಜ ಪ್ರೋಟೀನ್ ಅಂಗಗಳಲ್ಲಿ ಸಂಗ್ರಹಗೊಂಡು ಸಾಮಾನ್ಯ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತದೆ. ಪರ್ವೇಜ್ … Continued

ಆರ್ಕ್ಟಿಕ್ ಬ್ಲಾಸ್ಟ್ : ಅಮೆರಿಕದಲ್ಲಿ ದಾಖಲೆ ಚಳಿ, ಮೈನಸ್ 79 ಡಿಗ್ರಿ ಕುಸಿದ ತಾಪಮಾನ…! ಬದುಕು ತತ್ತರ

ವಾಷಿಂಗ್ಟನ್:  ಅಮೆರಿಕದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಆರ್ಕ್ಟಿಕ್ ಚಳಿಗಾಳಿಗೆ ಶನಿವಾರ ತಾಪಮಾನ ಬರೋಬ್ಬರಿ ಮೈನಸ್ 78 ಡಿಗ್ರಿಗೆ ಕುಸಿದಿದೆ…!ದಾಖಲೆಯ ಮಟ್ಟದ ಶೀತಗಾಳಿಯ ಅಪಾಯಕಾರಿ ಸಂಯೋಜನೆಯು ಮಾರಣಾಂತಿಕ ಪರಿಸ್ಥಿತಿಗಳನ್ನು ಸೃಷ್ಟಿಸಿದ್ದು, ಜನರು ಅಕ್ಷರಶಃ ಗಡಗಡ ನಡುಗಿತ್ತಿದ್ದಾರೆ. ಈ ಭಾಗದ ಬಹುತೇಕ ಕಡೆ ಕನಿಷ್ಠ ಉಷ್ಣಾಂಶವೇ ಮೈನಸ್ ಡಿಗ್ರಿ ಇದೆ. ನ್ಯೂ ಹ್ಯಾಂಪ್​ಶೈರ್​ನ ಮೌಂಟ್ ವಾಷಿಂಗ್ಟನ್ ಎಂಬಲ್ಲಿ ಶೀತಗಾಳಿಯ … Continued

ಪ್ರಶ್ನಾವಳಿ ಬಿಡುಗಡೆ ಮಾಡಿದ 7ನೇ ರಾಜ್ಯ ವೇತನ ಆಯೋಗ : ಸಲಹೆ, ಅಭಿಪ್ರಾಯ ಆಹ್ವಾನ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಪರಿಷ್ಕರಣೆ ಮಾಡಲು ರಚಿಸಲಾಗಿರುವ ಏಳನೇ ರಾಜ್ಯ ವೇತನ ಆಯೋಗವು ಪ್ರಶ್ನಾವಳಿ ಬಿಡುಗಡೆ ಮಾಡಿದ್ದು ಸಲಹೆ, ಅಭಿಪ್ರಾಯಗಳನ್ನು ಸೂಚಿತ ದಿನಾಂಕ ಫೆ.10ರೊಳಗೆ ಸಲ್ಲಿಸಬಹುದಾಗಿದೆ. ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾ ಅಂಶಗಳಿಗೆ ಸಾರ್ವಜನಿಕರು, ಸೇವಾ ಸಂಘಗಳು, ಸರ್ಕಾರಿ ನೌಕರರು, ಸಂಘಸಂಸ್ಥೆಗಳು, ಇಲಾಖೆಗಳಿಂದ ಮಾಹಿತಿ, ಅನಿಸಿಕೆ ಹಾಗೂ ಮುಕ್ತ ಸಲಹೆ ಪಡೆಯುವ … Continued

ಏಷ್ಯಾ ಕಪ್-2023 : ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ, ಸ್ಥಳಾಂತರಿಸುವುದು ಅನಿವಾರ್ಯ ಎಂದ ಬಿಸಿಸಿಐ-ವರದಿ

ನವದೆಹಲಿ: ಮುಂಬರುವ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತೊಮ್ಮೆ ತಮ್ಮ ನಿಲುವು ಸ್ಪಷ್ಟಪಡಿಸಿದೆ. ಬಹ್ರೇನ್‌ನಲ್ಲಿ ಶನಿವಾರ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಉತ್ಸುಕವಾಗಿಲ್ಲ ಎಂದು ಪುನರುಚ್ಚರಿಸಿದೆ. ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿ ಆಡಲು ಪಾಕಿಸ್ತಾನಕ್ಕೆ … Continued

ಉಡುಪಿಯಲ್ಲಿ ಫೆಬ್ರವರಿ 11, 12ರಂದು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ, 1300 ಕಲಾವಿದರು ಭಾಗಿ

ಕುಮಟಾ: ರಾಜ್ಯ ಸರ್ಕಾರದ ವತಿಯಿಂದ ರಾಜ್ಯಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನ ಫೆಬ್ರವರಿ 11ಮತ್ತು 12ರಂದು ಉಡುಪಿಯ ಎ. ಎಲ್. ಎಂ ಕಾಲೇಜಿನ ಎ. ಎಲ್. ಎನ್. ರಾವ್‌ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್‌.ಹೆಗಡೆ ತಿಳಿಸಿದ್ದಾರೆ. ಕುಮಟಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ … Continued

ಚೀನಾ ನಂಟಿರುವ 138 ಬೆಟ್ಟಿಂಗ್ ಅಪ್ಲಿಕೇಶನ್‌, 94 ಸಾಲದ ಅಪ್ಲಿಕೇಶನ್‌ ನಿಷೇಧಿಸಲು ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ಬೃಹತ್ ಬೆಳವಣಿಗೆಯಲ್ಲಿ, ಭಾರತ ಸರ್ಕಾರವು ಚೀನೀ  ನಂಟಿರುವ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ವರದಿಗಳ ಪ್ರಕಾರ, ಕೇಂದ್ರ ಗೃಹ ಸಚಿವಾಲಯವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ (MeitY) ಸಂದೇಶವನ್ನು ಕಳುಹಿಸಿದೆ. ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಹೊರಡಿಸಿದ ಸಂವಹನದ ಪ್ರಕಾರ, 138 ಬೆಟ್ಟಿಂಗ್ ಅಪ್ಲಿಕೇಶನ್‌ಗಳು … Continued

ಈ ಪುಟ್ಟ ನಾಯಿ ದೊಡ್ಡ ಚೆಂಡನ್ನು ತನ್ನ ತಲೆಯಲ್ಲಿ ಬ್ಯಾಲೆನ್ಸ್ ಮಾಡುವ ಕೌಶಲ್ಯಕ್ಕೆ ಬೆರಗಾದ ಇಂಟರ್ನೆಟ್‌ | ವೀಕ್ಷಿಸಿ

ಸಾಮಾಜಿಕ ಜಾಲತಾಣಗಳಲ್ಲಿ ನೀವು ಸ್ಕ್ರೋಲ್ ಮಾಡುವಾಗ ಹಲವು ಆಸಕ್ತಿದಾಯಕ ಹಾಗೂ ಅಚ್ಚರಿ ಮೂಡಿಸುವ ವಿಡಿಯೋಗಳು ಕಣ್ಣಿಗೆ ಬೀಳುತ್ತವೆ. ಅಚ್ಚರಿ ಮೂಡಿಸುವ ವೀಡಿಯೊವೊಂದರಲ್ಲಿ ನಾಯಿಯೊಂದು ದೊಡ್ಡ ಬಾಲ್​ ಅನ್ನು ತನ್ನ ತಲೆಯಲ್ಲಿ ಬ್ಯಾಲೆನ್ಸ್ ಮಾಡುವ ಮೂಲಕ ಗಮನ ಸೆಳೆದಿದೆ. ಈ ವೀಡಿಯೊವನ್ನು ಟ್ವಿಟರ್‌ನಲ್ಲಿ @buitengebiden ಹೆಸರಿನ ಪುಟದಿಂದ ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ, ನಾಯಿಯೊಂದು ಉದ್ಯಾನದಲ್ಲಿ ಆಡುತ್ತಿರುವುದನ್ನು ಕಾಣಬಹುದು. ಈ … Continued