ತುಮಕೂರು : ಹೆಚ್ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತುಮಕೂರು ಜಿಲ್ಲೆಯ ಜಿಲ್ಲೆಯ ಗುಬ್ಬಿ ತಾಲೂಕು ಬಿದರೆಹಳ್ಳಕಾವಲ್‌ನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್) ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಉದ್ಘಾಟಿಸಿದರು ಮತ್ತು ಲಘು ಉಪಯುಕ್ತತೆಯ ಹೆಲಿಕಾಪ್ಟರ್ ಅನ್ನು ಅನಾವರಣಗೊಳಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು. ಎಚ್‌ಎಎಲ್‌ನ ಗ್ರೀನ್‌ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆಯು ಬಿದರೆಹಳ್ಳಕಾವಲ್‌ನಲ್ಲಿ … Continued

ಬೆಂಗಳೂರು: ಭಾರತದ ಇಂಧನ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆದಾರರಿಗೆ ಪ್ರಧಾನಿ ಮೋದಿ ಆಹ್ವಾನ

ಬೆಂಗಳೂರು: ಭಾರತದ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಸಾಧ್ಯತೆಗಳನ್ನು ಅನ್ವೇಷಿಸಲು ಮತ್ತು ಹೂಡಿಕೆಗೆ ಭಾರತವು ವಿಶ್ವದ ಅತ್ಯಂತ ಸೂಕ್ತವಾದ ಸ್ಥಳವಾಗಿರುವುದರಿಂದ ಭಾರತದೊಂದಿಗೆ ತೊಡಗಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿದೇಶಿ ಹೂಡಿಕೆದಾರರಿಗೆ ಆಹ್ವಾನಿಸಿದರು. ಇಂದು, ಸೋಮವಾರ ಬೆಂಗಳೂರಿನಲ್ಲಿ ಇಂಡಿಯಾ ಎನರ್ಜಿ ವೀಕ್ (ಐಇಡಬ್ಲ್ಯು) 2023 ಅನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ವೇಗವಾಗಿ … Continued

ಟರ್ಕಿಯಲ್ಲಿ 24 ಗಂಟೆಗಳಲ್ಲಿ 3 ಪ್ರಬಲ ಭೂಕಂಪಗಳು: 2300 ದಾಟಿದ ಸಾವಿನ ಸಂಖ್ಯೆ

ಇಸ್ತಾಂಬುಲ್: ಸುಮಾರು ಒಂದು ಶತಮಾನದ ಅತ್ಯಂತ ಶಕ್ತಿಶಾಲಿ ಭೂಕಂಪವು ಸೋಮವಾರ ಮುಂಜಾನೆ ಟರ್ಕಿ ಮತ್ತು ಸಿರಿಯಾವನ್ನು ಅಪ್ಪಳಿಸಿತು, 2,300 ಕ್ಕೂ ಹೆಚ್ಚು ಜನರು ನಿದ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಏರುತ್ತಲೇ ಸಾಗಿದೆ. 7.8-ಪ್ರಮಾಣದ ಭೂ ಕಂಪದ ಗಂಟೆಗಳ ನಂತರ ಇನ್ನೂ ಎರಡು ದೊಡ್ಡ ಭೂ ಕಂಪಗಳು ಸಂಭವಿಸಿವೆ., ಸಿರಿಯಾದಲ್ಲಿನ ಅಂತರ್ಯುದ್ಧ ಮತ್ತು ಇತರ ಘರ್ಷಣೆಗಳಿಂದ ಪಲಾಯನ … Continued

ಹುಬ್ಬಳ್ಳಿಯಿಂದ ಪುಣೆಗೆ ನೇರ ವಿಮಾನ ಸೇವೆ ಆರಂಭ

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನ ಸೇವೆ ಆರಂಭಗೊಂಡ ಬೆನ್ನಲ್ಲೇ ಇದೀಗ ಹುಬ್ಬಳ್ಳಿಯಿಂದ ಪುಣೆಗೆ ನೇರವಾಗಿ ಸಂಪರ್ಕಿಸುವ ವಿಮಾನ ಸೇವೆ ಆರಂಭವಾಗಿದೆ.‌ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಕ್ಕೆ ಜಲಫಿರಂಗಿಯ ಮೂಲಕ ಸ್ವಾಗತ ನೀಡಲಾಯಿತು. ಮೊದಲ ದಿನವೇ ವಿಮಾನವು ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗಿತ್ತು. ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹಾಗೂ ಇಡೀ ಉತ್ತರ ಕರ್ನಾಟಕ ಭಾಗದ ಜನರಿಗೆ … Continued

ಬೆಳಗಾವಿ ಪಾಲಿಕೆಗೆ ಶೋಭಾ ಸೋಮನಾಚೆ ನೂತನ ಮೇಯರ್‌, ರೇಷ್ಮಾ ಪಾಟೀಲ ಉಪಮೇಯರ್‌

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಗೆ ನೂತನ ಮೇಯರ್ ಹಾಗೂ ಉಪಮೇಯರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಬೆಳಗಾವಿ ಮಹಾನಗರಪಾಲಿಕೆಗೆ ಶೋಭಾ ಸೋಮನಾಚೆ ಅವರು ನೂತನ ಮೇಯರ್ ಹಾಗೂ ರೇಷ್ಮಾ ಪಾಟೀಲ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಒಂದೂವರೆ ವರ್ಷದ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಆದರೆ, ಕೆಲ ಕಾರಣಗಳಿಂದ ಮೇಯರ್ ಹಾಗೂ ಉಪಮೇಯರ್ … Continued

ಕರ್ನಾಟಕ, ಅಲಹಾಬಾದ್, ಮದ್ರಾಸ್ ಹೈಕೋರ್ಟ್‌ಗಳಿಗೆ 13 ಹೆಚ್ಚುವರಿ ನ್ಯಾಯಾಧೀಶರ ನೇಮಕ

ನವದೆಹಲಿ: ಕರ್ನಾಟಕ ಹೈಕೋರ್ಟ್, ಅಲಹಾಬಾದ್ ಹೈಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್ ಈ ಮೂರು ಹೈಕೋರ್ಟ್‌ಗಳಿಗೆ ಹೆಚ್ಚುವರಿ ನ್ಯಾಯಾಧೀಶರಾಗಿ ಹದಿಮೂರು ನ್ಯಾಯಾಧೀಶರನ್ನು ನೇಮಕ ಮಾಡಲು ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ವಿಜಯಕುಮಾರ್ ಆದಗೌಡ ಪಾಟೀಲ್ ಮತ್ತು ರಾಜೇಶ್ ರೈ ಕಲ್ಲಂಗಲ್ಲ ಅವರನ್ನು ಹೆಚ್ಚುವರಿ ನ್ಯಾಯಾಧೀಶರಾಗಿ ಎರಡು ವರ್ಷಗಳ ಕಾಲ ಸರ್ಕಾರ ನೇಮಿಸಿದೆ. ಸೈಯದ್ … Continued

ಮುಂಬೈ ಆಸ್ಪತ್ರೆಯಲ್ಲಿ ತೃತೀಯ ಲಿಂಗಿಗಳಿಗಾಗಿಯೇ ಪ್ರತ್ಯೇಕ ವಾರ್ಡ್ ಆರಂಭ

ಮುಂಬೈ: ತೃತೀಯಲಿಂಗಿ ಸಮುದಾಯವನ್ನು ಮುಖ್ಯವಾಹಿನಿಗೆ ಸೇರಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ಅವರಿಗಾಗಿಯೇ ಮೀಸಲಾದ ಪ್ರತ್ಯೇಕ ವಾರ್ಡ್ ಅನ್ನು ಪ್ರಾರಂಭಿಸಿದೆ. ಧೋಬಿ ತಲಾವ್‌ನಲ್ಲಿರುವ ಸರ್ಕಾರಿ-ಸಂಯೋಜಿತ ಗೋಕುಲದಾಸ್ ತೇಜ್‌ಪಾಲ್ ಆಸ್ಪತ್ರೆಯಲ್ಲಿ ಇದನ್ನು ಸ್ಥಾಪಿಸಲಾಗಿದೆ, ಇದನ್ನು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಗಿರೀಶ್ ಮಹಾಜನ್ ಅವರು ಉದ್ಘಾಟಿಸಿದ್ದಾರೆ. 30 ಹಾಸಿಗೆಗಳ ತೃತೀಯ ಲಿಂಗಿಗಳಿಗಾಗಿಯೇ ಇರುವ ಈ ಸೌಲಭ್ಯವು ಪರೀಕ್ಷಾ … Continued

ಇಂಧನ ಉತ್ಪಾದನೆ-ವಿತರಣೆಯಲ್ಲಿ ವಿಶ್ವದ ಪ್ರಮುಖ ಶಕ್ತಿಗಳ ಪೈಕಿ ಭಾರತವೂ ಒಂದು: ಪ್ರಧಾನಿ ಮೋದಿ

ಬೆಂಗಳೂರು: ಇಂಧನ ಉತ್ಪಾದನೆ ಮತ್ತು ವಿತರಣೆಯಲ್ಲಿ ಭಾರತವು ವಿಶ್ವದ ಅತ್ಯಂತ ಮುಂದುವರಿದ ಶಕ್ತಿಗಳ ಪೈಕಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಇಂಡಿಯನ್ ಎನರ್ಜಿ ವೀಕ್-2023 ಉದ್ಘಾಟಿಸಿ ಮಾತನಾಡಿದ ಅವರು, ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ ಭಾರತವು ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. 2030ರಲ್ಲಿ 4 ಎಂಎಂಟಿ ಯಷ್ಟು ಗ್ರೀನ್ ಹೈಡ್ರೋಜನ್ ಉತ್ಪಾದಿಸುತ್ತೇವೆ. … Continued

ಟರ್ಕಿ-ಸಿರಿಯಾ ಗಡಿ ಭಾಗದಲ್ಲಿ ಪ್ರಬಲ ಭೂಕಂಪ: 1,300ಕ್ಕೂ ಹೆಚ್ಚು ಸಾವು, ಅಂದಾಜು 3000 ಕಟ್ಟಡಗಳು ನೆಲಸಮ, ಏರುತ್ತಲೇ ಇದೆ ಸಾವಿನ ಸಂಖ್ಯೆ

ಇಸ್ತಾಂಬುಲ್‌: ಸೋಮವಾರ ಮುಂಜಾನೆ ದಕ್ಷಿಣ ಟರ್ಕಿಯ ಉಸ್ಮಾನಿಯೆ ಪ್ರಾಂತ್ಯದಲ್ಲಿ 7.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ನಂತರ ಕನಿಷ್ಠ 1,300 ಜನರು ಮೃತಪಟ್ಟಿದ್ದಾರೆ. ಸಾವು-ನೋವುಗಳು ಇನ್ನೂ ಹೆಚ್ಚಾಗಬಹುದು ಎಂದು ವರದಿಗಳು ಹೇಳಿವೆ. ಟರ್ಕಿಯಲ್ಲಿ, ಕನಿಷ್ಠ 912 ಜನರು ಮೃತಪಟ್ಟ ವರದಿಯಾಗಿದ್ದರೆ, ಸಿರಿಯಾದಲ್ಲಿ ಕನಿಷ್ಠ 386 ಸಾವುಗಳು ವರದಿಯಾಗಿವೆ. ಎರಡೂ ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. … Continued

ಗಾಯಕಿ ವಾಣಿ ಜಯರಾಮ್ ನಿಗೂಢ ಸಾವು: ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ ?

ಚೆನ್ನೈ: ಫೆಬ್ರವರಿ 4 ರಂದು, ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಅವರು ಚೆನ್ನೈನ ನುಂಗಂಬಾಕ್ಕಂನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರ ಹಣೆಯ ಮೇಲೆ ಗಾಯದ ಕಂಡುಬಂದ ನಂತರ ಅನುಮಾನಾಸ್ಪದ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈಗ ಅವರ ಮರಣೋತ್ತರ ಪರೀಕ್ಷೆಯು ಹೊರಬಿದ್ದಿದೆ. ಪೊಲೀಸರು ಪ್ರಾಥಮಿಕ ಮರಣೋತ್ತರ ಪರೀಕ್ಷೆಯ … Continued