ಅಲಹಾಬಾದ್ ಹೈಕೋರ್ಟ್ ಕಾಂಪ್ಲೆಕ್ಸ್‌ನಲ್ಲಿರುವ ಮಸೀದಿಯನ್ನು 3 ತಿಂಗಳೊಳಗೆ ತೆರವು ಮಾಡಲು ಸುಪ್ರೀಂ ಕೋರ್ಟ್‌ ನಿರ್ದೇಶನ

ನವದೆಹಲಿ: ಅಲಹಾಬಾದ್ ಹೈಕೋರ್ಟ್ ಆವರಣದೊಳಗಿದ್ದ ಮಸೀದಿಯನ್ನು ಮೂರು ತಿಂಗಳೊಳಗೆ ತೆರವು ಮಾಡುವಂತೆ ಸೋಮವಾರ ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಕಟ್ಟಡವು ಮುಕ್ತಾಯಗೊಂಡ ಗುತ್ತಿಗೆ ಆಸ್ತಿಯಲ್ಲಿದೆ ಮತ್ತು ಅದನ್ನು ತಮ್ಮ ಹಕ್ಕಿನ ವಿಷಯವೆಂದು ಹೇಳಲು ಸಾಧ್ಯವಿಲ್ಲ ಎಂದು ಕೆಡವುವಿಕೆಯನ್ನು ವಿರೋಧಿಸಿದ ಅರ್ಜಿದಾರರಿಗೆ ಸುಪ್ರೀಂಕೋರ್ಟ್‌ ತಿಳಿಸಿದೆ. ಮಸೀದಿಯನ್ನು ಆವರಣದಿಂದ ಹೊರಗಡೆ ಸ್ಥಳಾಂತರಿಸಲು ಮೂರು ತಿಂಗಳ ಕಾಲಾವಕಾಶ ನೀಡಿದ್ದ … Continued

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ಮಹಿಳಾ ಲೋಕೋ ಪೈಲಟ್ ಆದ ಸುರೇಖಾ ಯಾದವ

ಏಷ್ಯಾದ ಮೊದಲ ಮಹಿಳಾ ಲೋಕೋಮೋಟಿವ್ ಪೈಲಟ್ ಸುರೇಖಾ ಯಾದವ್ ಅವರು ಸೋಮವಾರ ಸೋಲಾಪುರದಿಂದ ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ (CSMT) ವರೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನಿರ್ವಹಿಸಿದರು. ಅವರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೋ ಪೈಲಟ್ ಆಗಿದ್ದಾರೆ ಹಾಗೂ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಂದ ಪ್ರಶಂಸೆ ಗಳಿಸಿದರು. ಛತ್ರಪತಿ … Continued

ಧ್ವನಿವರ್ಧಕಗಳನ್ನು ಬಳಸಿದರೆ ಮಾತ್ರ ಅಲ್ಲಾ ಪ್ರಾರ್ಥನೆಗಳನ್ನು ಕೇಳುತ್ತಾನೆಯೇ? ; ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ಮಂಗಳೂರು: ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಕೆಎಸ್ ಈಶ್ವರಪ್ಪ ಭಾನುವಾರ (ಮಾರ್ಚ್ 12) ಆಜಾನ್ ಸಮಯದಲ್ಲಿ ಧ್ವನಿವರ್ಧಕಗಳನ್ನು ಬಳಸಿದರೆ ಮಾತ್ರ ಅಲ್ಲಾಹ ಪ್ರಾರ್ಥನೆಯನ್ನು ಕೇಳುತ್ತಾನೆಯೇ ಎಂದು ಪ್ರಶ್ನಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಕಾವೂರಿನಲ್ಲಿ ಬಿಜೆಪಿಯ ‘ವಿಜಯ್ ಸಂಕಲ್ಪ ಯಾತ್ರೆ’ಯ ಭಾಗವಾಗಿ ಆಯೋಜಿಸಲಾದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಜಾನ್ ಕೂಗುವುದು ನನಗೆ ತಲೆನೋವಿಗೆ ಕಾರಣವಾಗುತ್ತದೆ … Continued

ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸುಪ್ರೀಂ ಕೋರ್ಟ್ ಸೋಮವಾರ (ಮಾರ್ಚ್ 13) ಸಲಿಂಗ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಿದ ಅರ್ಜಿಗಳನ್ನು ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ  ಮಾಡಿದೆ.. ಈ ವಿಷಯವು “ಮೂಲಭೂತ ಪ್ರಾಮುಖ್ಯತೆ” ಎಂದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರನ್ನೊಳಗೊಂಡ ಪೀಠವು ಈ ವಿಷಯದ ಮೇಲಿನ ಸಲ್ಲಿಕೆಗಳು ಒಂದೆಡೆ ಸಾಂವಿಧಾನಿಕ ಹಕ್ಕುಗಳು ಮತ್ತು ವಿಶೇಷ … Continued

ಕರ್ನಾಟಕ ಪ್ರವಾಸದ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತೆ‌ ಪಾದಗಳಿಗೆ ನಮಸ್ಕರಿಸಿದ ಪ್ರಧಾನಿ ಮೋದಿ

ಭಾನುವಾರ ಕರ್ನಾಟಕಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ನಮಸ್ಕರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮಂಡ್ಯ ಬಳಿಯ ಗೆಜ್ಜಲಗೆರೆಗೆ ಆಗಮಿಸಿದ ಪ್ರಧಾನಿ ಮೋದಿಯವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯಲು ಮಹಿಳೆ ಪ್ರಯತ್ನಿಸಿದ್ದಾರೆ. ಆಗ ಪ್ರಧಾನಿ ಮೋದಿಯವರೇ ಮಹಿಳೆಯ ಪಾದಕ್ಕೆ ನಮಸ್ಕರಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. … Continued

ಕರ್ನಾಟಕಕ್ಕೆ ಹೆಚ್ಚುವರಿ 941.04 ಕೋಟಿ ರೂ. ಅನುದಾನ ಘೋಷಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕರ್ನಾಟಕಕ್ಕೆ 941.04 ಕೋಟಿ ರೂ.ಗಳ ಹೆಚ್ಚುವರಿ ಅನುದಾನವನ್ನ ಕೇಂದ್ರ ಸರ್ಕಾರ ಘೋಷಿಸಿದೆ. ಎನ್‌ಡಿಆರ್‌ಎಫ್ ಅಡಿಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 941.04 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಇಂದು, ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಐದು ರಾಜ್ಯಗಳಿಗೆ ಒಟ್ಟು 1,816.162 ಕೋಟಿ ರೂ.ಗಳನ್ನು ಬಿಡುಗಡೆ … Continued

ದೆಹಲಿ ಶಾಸಕರು, ಸಚಿವರ ಸಂಬಳ ಶೇ.66 ರಷ್ಟು ಹೆಚ್ಚಳ

ನವದೆಹಲಿ: ದೆಹಲಿಯ ಶಾಸಕರ ವೇತನ ಮತ್ತು ಭತ್ಯೆಗಳನ್ನು ಶೇಕಡಾ 66 ರಷ್ಟು ಹೆಚ್ಚಿಸುವ ಅರವಿಂದ್ ಕೇಜ್ರಿವಾಲ್ ಸರ್ಕಾರದ ಪ್ರಸ್ತಾವನೆಯನ್ನು ಭಾರತದ ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ದೆಹಲಿಯ ಶಾಸಕರು ಈಗ ತಿಂಗಳಿಗೆ 90,000 ರೂ.ಗಳನ್ನು ಪಡೆಯುತ್ತಾರೆ, ಈ ಹಿಂದೆ ಅವರ ವೇತನ 54,000 ರೂ.ಗಳಿತ್ತು. ಇಲ್ಲಿಯವರೆಗೆ ಅವರ ಮೂಲ ವೇತನ 12,000 ರೂ.ಗಳಷ್ಟಿದ್ದು ಈಗ 30,000 ರೂ.ಗಳಿಗೆ ಏರಿಕೆಯಾಗಿದೆ. … Continued

ಇಂದಿನಿಂದ ಎರಡನೇ ಹಂತದ ಬಜೆಟ್ ಅಧಿವೇಶನ ಆರಂಭ: ಹಲವು ಮಸೂದೆಗಳ ಅಂಗೀಕಾರದ ಸಾಧ್ಯತೆ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಲೆಗ್ ಇಂದಿನಿಂದ ಆರಂಭವಾಗಲಿದ್ದು, ಏಪ್ರಿಲ್ 6ರ ವರೆಗೆ ನಡೆಯಲಿದೆ. ಬಜೆಟ್ ಅಧಿವೇಶನದ ಎರಡನೇ ಭಾಗವು ಕೇಂದ್ರ ಬಜೆಟ್‌ನ ಅನುದಾನ ಮತ್ತು ಅಂಗೀಕಾರದ ಬೇಡಿಕೆಯ ಮೇಲೆ ಕೇಂದ್ರೀಕರಿಸುತ್ತದೆ. ದಾಖಲೆಗಳ ಪ್ರಕಾರ, ಪ್ರಸ್ತುತ ರಾಜ್ಯಸಭೆಯಲ್ಲಿ ಸುಮಾರು 26 ಮಸೂದೆಗಳು ಮತ್ತು ಲೋಕಸಭೆಯಲ್ಲಿ 9 ಮಸೂದೆಗಳು ಅಂಗೀಕಾರಕ್ಕಾಗಿ ಬಾಕಿ ಉಳಿದಿವೆ. ಬಹು-ರಾಜ್ಯ ಸಹಕಾರ … Continued

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ

ಕಳೆದ ವರ್ಷ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಮಹಿಳಾ ಮ್ಯಾಜಿಸ್ಟ್ರೇಟ್‌ಗೆ ಬೆದರಿಕೆ ಹಾಕಿದ್ದಕ್ಕಾಗಿ ಉಚ್ಚಾಟಿತ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನದ ನ್ಯಾಯಾಲಯವು ಸೋಮವಾರ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಸೋಮವಾರ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ. ಖಾತೂನ್ ನ್ಯಾಯಾಧೀಶರಾದ … Continued

ವೈದ್ಯಕೀಯ ತುರ್ತು ಸ್ಥಿತಿ ಕಾರಣಕ್ಕೆ ಕರಾಚಿಯಲ್ಲಿ ಲ್ಯಾಂಡ್‌ ಆದ ದೆಹಲಿ-ದೋಹಾ ಇಂಡಿಗೋ ವಿಮಾನ : ಪ್ರಯಾಣಿಕ ಸಾವು

ನವದೆಹಲಿ: ದೆಹಲಿ-ದೋಹಾ ಇಂಡಿಗೋ ವಿಮಾನವು ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ಅಸ್ವಸ್ಥ ಪ್ರಯಾಣಿಕರಿಗೆ ವೈದ್ಯಕೀಯ ನೆರವಿಗಾಗಿ ತುರ್ತು ಲ್ಯಾಂಡಿಂಗ್ ಮಾಡಿತು. ಆದರೆ ವಿಮಾನ ನಿಲ್ದಾಣದ ವೈದ್ಯಕೀಯ ತಂಡವು ಪ್ರಯಾಣಿಕ ಕರೆತರುವಾಗಲೇ ಮೃತಪಟ್ಟಿದ್ದ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಭಾನುವಾರ ರಾತ್ರಿ 10:17ಕ್ಕೆ ದೋಹಾಗೆ ತೆರಳುವ ವಿಮಾನ ದೆಹಲಿಯಿಂದ ಹೊರಟಿತ್ತು. ದೆಹಲಿಯಿಂದ ದೋಹಾಗೆ ಕಾರ್ಯಾಚರಿಸುತ್ತಿರುವ … Continued