ಚುನಾವಣೆ ಸನಿಹದಲ್ಲೇ ಬಿಜೆಪಿಯ ವಿಧಾನ ಪರಿಷತ್‌ ಸ್ಥಾನಕ್ಕೆ ಬಾಬುರಾವ್ ಚಿಂಚನಸೂರು ರಾಜೀನಾಮೆ : ಮುಂದಿನ ನಡೆ..?

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿಯ ಬಾಬುರಾವ್ ಚಿಂಚನಸೂರ್ ಸೋಮವಾರ ರಾಜೀನಾಮೆ ನೀಡಿದ್ದಾರೆ. ವಿಧಾನಸೌಧದಲ್ಲಿ ಬಾಬುರಾವ್ ಚಿಂಚನಸೂರು ರಾಜೀನಾಮೆ ನೀಡಿದ್ದು, ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ಅಂಗೀಕರಿಸಿದ್ದಾರೆ. ವಿಧಾನಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿ ವಿಧಾನ ಪರಿಷತ್‌ ಬಾಬುರಾವ್ ಚಿಂಚನಸೂರು ರಾಜೀನಾಮೆ ನೀಡಿದ್ದಾರೆ. ಚಿಂಚನಸೂರು ನಡೆ ಬಹಳ ಕುತೂಹಲ ಮೂಡಿಸಿದೆ. ಬಾಬುರಾವ್ ಚಿಂಚನಸೂರ್ ಅವರು ಗುರುಮಿಠಕಲ್ … Continued

7 ನೂತನ ವಿಶ್ವ ವಿದ್ಯಾಲಯಗಳಿಗೆ ಕುಲಪತಿಗಳ ನೇಮಕ

ಬೆಂಗಳೂರು: ರಾಜ್ಯ ಸರ್ಕಾರ ನೂತನವಾಗಿ ಸ್ಥಾಪಿಸಿರುವ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸಿ ಸೋಮವಾರ ಆದೇಶ ಹೊರಡಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಬೆಂಗಳೂರು ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಡಾ.ಬಿ.ಕೆ. ರವಿ ಅವರನ್ನು ಕೊಪ್ಪಳ ವಿಶ್ವ ವಿದ್ಯಾಲಯ, ಬಾಗಲಕೋಟೆಯ ತೋಟಗಾರಿಕೆ … Continued

ದಿ ಹಿಂದೂ ಸಂಗೀತ ಸ್ಪರ್ಧೆ: ಬಾಲಪ್ರತಿಭೆ ವಿಭಾಗದಲ್ಲಿ ಕುಮಟಾದ ಅದಿತಿ ಶಾನಭಾಗ ಪ್ರಥಮ

2022-23ನೇ ಸಾಲಿನ ದಿ ಹಿಂದೂ ಮಾರ್ಗಜಿ ಸಂಗೀತ ಸ್ಪರ್ಧೆಯ ಫಲಿತಾಂಶಗಳುಪ್ರಕಟವಾಗಿವೆ. ತೀರ್ಪುಗಾರರು ಸುಮಾರು 600 ಸ್ಪರ್ಧಿಗಳಲ್ಲಿ ವಿವಿಧ ವಿಭಾಗಗಳಲ್ಲಿ ಬಹುಮಾನಕ್ಕಾಗಿ  ಪ್ರಥಮ ಮೂರು ಬಹುಮಾನಗಳು ಹಾಗೂ ವಿಶೇಷ ಬಹುಮಾನಕ್ಕಾಗಿ ಆಯ್ಕೆ ಮಾಡಿದ್ದಾರೆ. ಇದರಲ್ಲಿ ಹಿಂದೂಸ್ತಾನೀ ಸಂಗೀತದ ಬಾಲಪ್ರತಿಭೆ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕುಮಾರಿ ಅದಿತಿ ಶಾನಭಾಗ ಪ್ರಥಮ ಸ್ಥಾನಗಳಿಸಿದ್ದಾರೆ. ಬಾಲಕಿ ಅದಿತಿ ಶಾನಭಾಗ … Continued

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ದೂತಾವಾಸದ ಮೇಲೆ ಖಾಲಿಸ್ತಾನ್ ಬೆಂಬಲಿಗರಿಂದ ದಾಳಿ: ಬಾಗಿಲು-ಕಿಟಕಿಗಳ ಗಾಜುಗಳನ್ನು ಒಡೆದು ಹಾಕಿದರು

ನವದೆಹಲಿ : ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಟ್ಟಡದಲ್ಲಿ ಖಾಲಿಸ್ತಾನ್ ಬೆಂಬಲಿಗರು ರಾಷ್ಟ್ರಧ್ವಜವನ್ನು ಕೆಳಗಿಳಿಸಿದ ಬೆನ್ನಲ್ಲೇ, ಬೃಹತ್ ಜನಸಮೂಹವು ಯುಎಸ್‌ನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಮೇಲೆ ದಾಳಿ ನಡೆಸುತ್ತಿರುವ ವೀಡಿಯೊಗಳು ಹೊರಹೊಮ್ಮಿವೆ. ಹಿನ್ನಲೆಯಲ್ಲಿ ಜೋರಾಗಿ ಪಂಜಾಬಿ ಸಂಗೀತ ಕೇಳುತ್ತದೆ. ಅವರು ಕಟ್ಟಡದ ಹೊರ ಗೋಡೆಯ ಮೇಲೆ “ಅಮೃತಪಾಲ್ ಬಿಡುಗಡೆ” ಎಂಬ ಬೃಹತ್ ಗೀಚುಬರಹವನ್ನು ಸಹ ಸಿಂಪಡಿಸಿದ್ದಾರೆ. … Continued

ಖಾಲಿಸ್ತಾನಿಗಳಿಗೆ ಭಾರತದ ದಿಟ್ಟ ಪ್ರತ್ಯುತ್ತರ; ಲಂಡನ್‌ ಹೈಕಮಿಷನ್‌ ಕಟ್ಟಡ ಅಲಂಕರಿಸಿದ ಬೃಹತ್‌ ತ್ರಿವರ್ಣ ಧ್ವಜ

ನವದೆಹಲಿ: ಪಂಜಾಬ್‌ನಲ್ಲಿ ತೀವ್ರಗಾಮಿ ಬೋಧಕ ಅಮೃತಪಾಲ್ ಸಿಂಗ್ ವಿರುದ್ಧದ ಕ್ರಮವನ್ನು ವಿರೋಧಿಸಿ ಖಾಲಿಸ್ತಾನಿ ಬೆಂಬಲಿಗರು ಭಾರತೀಯ ಧ್ವಜವನ್ನು ಕೆಳಗೆ ಎಳೆದುಹಾಕಿದ ಕೆಲವೇ ಗಂಟೆಗಳ ನಂತರ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಟ್ಟಡ ಬೃಹತ್ ತ್ರಿವರ್ಣ ಧ್ವಜವು ಅಲಂಕರಿಸಿದೆ. ದೈತ್ಯ ಭಾರತೀಯ ತ್ರಿವರ್ಣ ಧ್ವಜದ ಫೋಟೋಗಳು ಮತ್ತು ವೀಡಿಯೊಗಳು ಈಗ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿವೆ, ಅನೇಕರು … Continued

ಕಾಂಗ್ರೆಸ್ 4ನೇ ಗ್ಯಾರಂಟಿ ‘ಯುವ ನಿಧಿ’ ಯೋಜನೆ ; ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನಿರುದ್ಯೋಗ ಭತ್ಯೆ ಘೋಷಿಸಿದ ರಾಹುಲ್‌ ಗಾಂಧಿ

ಬೆಳಗಾವಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದ ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷಗಳವರೆಗೆ ಮಾಸಿಕ 3,000 ರೂ. ಮತ್ತು ಡಿಪ್ಲೋಮಾ ಕೋರ್ಸ್‌ ಮುಗಿಸಿದವರಿಗೆ ತಿಂಗಳಿಗೆ 1,500 ರೂ. ನೀಡಲಾಗುವುದು ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ. ಸೋಮವಾರ ಬೆಳಗಾವಿಯಲ್ಲಿ ನಡೆದ ಯುವಕ್ರಾಂತಿ ಸಮಾವೇಶದಲ್ಲಿ ಅವರು ನಿರುದ್ಯೋಗಿ ಯುವಕರಿಗಾಗಿ ʼಯುವ ನಿಧಿʼ ಎಂಬ ಪಕ್ಷದ … Continued

ಪ್ರಧಾನಿ ಮೋದಿಯವರ ದೊಡ್ಡ ಟಿಆರ್‌ಪಿಯೇ ರಾಹುಲ್‌ ಗಾಂಧಿ : ಮಮತಾ ಬ್ಯಾನರ್ಜಿ ವಾಗ್ದಾಳಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ಭಾನುವಾರ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಪಕ್ಷದ ಆಂತರಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ “ಅತಿದೊಡ್ಡ ಟಿಆರ್‌ಪಿ” ರೇಟಿಂಗ್‌ ಎಂದು ಟಿಎಂಸಿ ಕಾರ್ಯಕರ್ತರಿಗೆ ಮಮತಾ … Continued

5 ಮತ್ತು 8ನೇ ತರಗತಿಗೆ ಬೋರ್ಡ್​ ಪರೀಕ್ಷೆ : ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ, ಅರ್ಜಿ ಆಲಿಸಲು ಸಮ್ಮತಿ

ನವದೆಹಲಿ: ಕರ್ನಾಟಕ ರಾಜ್ಯದ ಬೋರ್ಡ್ ಪಠ್ಯಕ್ರಮ ಅಧ್ಯಯನ ಮಾಡುವ 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಸರ್ಕಾರಕ್ಕೆ ಅನುಮತಿ ನೀಡುವ ಕರ್ನಾಟಕ ಹೈಕೋರ್ಟ್ ಆದೇಶದ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಮಾರ್ಚ್ 27 ರಂದು ವಿಚಾರಣೆ ಮಾಡಲು ಒಪ್ಪಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು … Continued

ಉರಿಗೌಡ, ನಂಜೇಗೌಡ ಸಿನೆಮಾ ನಿರ್ಮಾಣ ಕೈಬಿಟ್ಟ ಸಚಿವ ಮುನಿರತ್ನ

ಮಂಡ್ಯ : ಆದಿಚುಂಚನಗಿರಿ ನಿರ್ಮಲಾನಂದನಾಥ ಶ್ರೀಗಳನ್ನ ಭೇಟಿಯಾಗಿ ಚರ್ಚಿಸಿದ ಬಳಿಕ ಉರಿಗೌಡ ನಂಜೇಗೌಡ ಕುರಿತು ಸಿನಿಮಾ ನಿರ್ಮಾಣ ಮಾಡುವುದಿಲ್ಲ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ. ಉರಿಗೌಡ ನಂಜೇಗೌಡ ಕುರಿತು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದ ಸಚಿವ ಮುನಿರತ್ನ ಶ್ರೀಗಳ ಭೇಟಿ ಬಳಿಕ ಸಿನಿಮಾ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಮುನಿರತ್ನ, … Continued

ನಟ ರಜನಿಕಾಂತ್‌ ಪುತ್ರಿಯ ಲಾಕರ್‌ನಿಂದ ಚಿನ್ನಾಭರಣ ಕಳ್ಳತನ: ಪೊಲೀಸರಿಗೆ ದೂರು ನೀಡಿದ ಐಶ್ವರ್ಯ

ಚೆನ್ನೈ: ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯ ರಜನಿಕಾಂತ್ ಅವರು ತೆನಾಂಪೇಟೆ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಲಾಕರ್‌ನಲ್ಲಿದ್ದ 60 ಪವನ್ ಚಿನ್ನ ಮತ್ತು ವಜ್ರದ ಆಭರಣಗಳು ತಮ್ಮ ಚೆನ್ನೈನ ಮನೆಯಿಂದ ನಾಪತ್ತೆಯಾಗಿವೆ ಎಂದು ಹೇಳಿದ್ದಾರೆ. ಬೆಲೆಬಾಳುವ ವಸ್ತುಗಳು 3.60 ಲಕ್ಷ ರೂಪಾಯಿಗಳಾಗಿದ್ದು, 2019 ರಲ್ಲಿ ತನ್ನ ಸಹೋದರಿ ಸೌಂದರ್ಯ ಅವರ ಮದುವೆಗೆ ಬಳಸಿದ್ದಾಗಿ ಹೇಳಿದ್ದಾರೆ. … Continued