ಮರ್ಸಿಡಿಸ್‌ ಬೆಂಜ್‌ನಿಂದ ಹಿಡಿದು ಮಾರುತಿ ಬ್ರೆಝಾದಿಂದ ಮೋಟಾರ್‌ ಸೈಕಲ್‌ ವರೆಗೆ: ಅಮೃತಪಾಲ್ ಸಿಂಗ್ ಪೊಲೀಸರಿಂದ ತಪ್ಪಿಸಿಕೊಂಡಿದ್ದು ಹೇಗೆ…?

ನವದೆಹಲಿ: ಪರಾರಿಯಾಗಿರುವ ಸ್ವಯಂ ಘೋಷಿತ ಖಾಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಕಳೆದ ವಾರ ಪೊಲೀಸರು ಬೆನ್ನಟ್ಟುತ್ತಿದ್ದಾಗ ವಾಹನಗಳನ್ನು ಹಾಗೂ, ಬಟ್ಟೆ ಬದಲಾಯಿಸಿಕೊಂಡು ಬೈಕ್‌ನಲ್ಲಿ ತನ್ನ ಸಹಾಯಕರೊಂದಿಗೆ ಪರಾರಿಯಾಗಿದ್ದಾನೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ. ಪಂಜಾಬಿನಲ್ಲಿ ನಾಲ್ಕು ದಿನಗಳಿಂದ ಪೊಲೀಸರಿಂದ ತಲೆತಪ್ಪಿಸಿಕೊಂಡು ಅಡ್ಡಾಡುತ್ತಿರುವ ಅಮೃತಪಾಲ್ ಸಿಂಗ್ ತಪ್ಪಿಸಿಕೊಳ್ಳುವಾಗ ವಿವಿಧ ಹಂತಗಳಲ್ಲಿ ಭದ್ರತಾ ಕ್ಯಾಮರಾಕ್ಕೆ ಸೆರೆ ಸಿಕ್ಕಿದ್ದಾನೆ, ವೀಡಿಯೊ … Continued

ಹಿಂದುತ್ವದ ಕುರಿತು ಟ್ವೀಟ್‌ ಪ್ರಕರಣ: ನಟ ಚೇತನಗೆ 14 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರು: ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಇಂದು ಮಂಗಳವಾರ ಬಂಧಿತರಾಗಿರುವ ನಟ ಚೇತನ್‌ ಅವರನ್ನು ಬೆಂಗಳೂರಿನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಚೇತನ್‌ ಅವರ ಜಾಮೀನು ಅರ್ಜಿಯನ್ನು 32ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಜೆ ಲತಾ ಅವರು ವಿಚಾರಣೆ ನಡೆಸಿದ್ದು, ವಿಚಾರಣೆಯನ್ನು ಮಾರ್ಚ್‌ 23ಕ್ಕೆ ಮುಂದೂಡಿದ್ದಾರೆ. ಬೆಂಗಳೂರಿನ … Continued

ಮಾರ್ಚ್‌ 26ರಂದು ಮೈಸೂರಿನಲ್ಲಿ ಜೆಡಿಎಸ್‌ ಪಂಚರತ್ನ ಯಾತ್ರೆ ಸಮಾರೋಪ

ಮೈಸೂರು: ಜೆಡಿಎಸ್‌ನ ಪಂಚರತ್ನ  ಯಾತ್ರೆಯ ಸಮಾರೋಪ ಸಮಾರಂಭ ಮಾರ್ಚ್‌ 26ರಂದು ಮೈಸೂರಿನಲ್ಲಿ ನಡೆಯಲಿದೆ. ಸಮಾವೇಶದಲ್ಲಿ ಸುಮಾರು ಹತ್ತು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರತ್ನ ರಥಯಾತ್ರೆಯಲ್ಲಿ ರಾಜ್ಯದಾದ್ಯಂತ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನತೆಯ ಬೆಂಬಲವನ್ನು ನಾನು ಕಳೆದ 3 ತಿಂಗಳ ರಥಯಾತ್ರೆಯಲ್ಲಿ … Continued

ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಸರು ಬದಲಾವಣೆ ಮಾಡಿ ಸರ್ಕಾರದ ಆದೇಶ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಹೆಸರನ್ನು ಬದಲಾಯಿಸಿ ಸರ್ಕಾರ ಆದೇಶಿಸಿದ್ದು ಅದಕ್ಕೆ ಶಾಲಾ ಶಿಕ್ಷಣ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ಸಾರ್ವಜನಿಕ ಶಿಕ್ಷಣ ಆಯುಕ್ತರು ಹಾಗೂ ಅದರ ಅಧೀನದಲ್ಲಿ ಬರುವ ಎಲ್ಲ ಕ್ಷೇತ್ರ ಕಚೇರಿಗಳು ಹಾಗೂ ರಾಜ್ಯದ ಎಲ್ಲಾ … Continued

ಕುಮಟಾ: ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ-ಷಡಕ್ಷರಿ ಅಕಾಡೆಮಿ ಭಜನಾ ಮಂಡಳಿ ಪ್ರಥಮ

ಕುಮಟಾ: ಯುಗಾದಿ ಉತ್ಸವದ ಅಂಗವಾಗಿ ಕುಮಟಾದ ಉಗಾದಿ ಉತ್ಸವ ಸಮಿತಿಯಿಂದ ಇಲ್ಲಿನ ನೆಲ್ಲೆಕೇರಿ ಮಹಾಸತಿ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಭಜನಾ ಸ್ಪರ್ಧೆಗಳು ನಡೆದವು. ಉತ್ತರ ಕನ್ನಡ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಂಡಿತ ಗೌರೀಶ ಯಾಜಿ ಕೂಜಳ್ಳಿ ಅವರ ಸಂಯೋಜಿತ ಕುಮಟಾದ ಷಡಕ್ಷರಿ ಅಕಾಡೆಮಿ ಭಜನಾ ಮಂಡಳಿ ಪ್ರಥಮ ಸ್ಥಾನ … Continued

ಕೊಡವ ಅಭಿವೃದ್ಧಿ ನಿಗಮ-ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರ ಕೊಡವ ಅಭಿವೃದ್ಧಿ ನಿಗಮ ಮತ್ತು ನೇಕಾರ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ ಆದೇಶ ಹೊರಡಸಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕೃತ ಟ್ವೀಟರ್ ಮತ್ತು ಫೇಸ್ ಬುಕ್ ಅಕೌಂಟ್ ಗಳಲ್ಲಿ ಅದೇಶದ ಪ್ರತಿಗಳನ್ನು ಪ್ರಕಟಿಸಿದ್ದಾರೆ. ಈ ಎರಡು ನಿಗಮಗಳನ್ನು ಸ್ಥಾಪಿಸುವುದಾಗಿ ಈ ಹಿಂದೆಯೇ ಭರವಸೆ ನೀಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಚುನಾವಣೆ … Continued

‘80,000 ಪೊಲೀಸರು ಏನು ಮಾಡುತ್ತಿದ್ದರು?’: ಅಮೃತಪಾಲ್ ಸಿಂಗ್ ಬಂಧಿಸುವಲ್ಲಿ ವಿಫಲವಾದ ಪಂಜಾಬ್ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಚಂಡೀಗಢ: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇಂದು, ಮಂಗಳವಾರ ಪಂಜಾಬ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದು, ಖಾಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ವಿರುದ್ಧದ ಕಾರ್ಯಾಚರಣೆಯ ಸ್ಥಿತಿಗತಿ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ. “ನಿಮ್ಮಲ್ಲಿ 80,000 ಪೊಲೀಸರಿದ್ದಾರೆ. ಅವರು ಏನು ಮಾಡುತ್ತಿದ್ದರು..? ಅಮೃತಪಾಲ್ ಸಿಂಗ್ ಹೇಗೆ ತಪ್ಪಿಸಿಕೊಂಡರು?” ಎಂದು ಹೈಕೋರ್ಟ್ ಪಂಜಾಬ್ ಸರ್ಕಾರವನ್ನು ಕೇಳಿದೆ. ಇದು ರಾಜ್ಯದ ಪೊಲೀಸರ … Continued

ಬಿಜೆಪಿ ವಿಶ್ವದ ಪ್ರಮುಖ ರಾಜಕೀಯ ಪಕ್ಷ : ವಾಲ್ ಸ್ಟ್ರೀಟ್ ಜರ್ನಲ್

ನವದೆಹಲಿ: ಬಿಜೆಪಿ ವಿಶ್ವದಲ್ಲೇ ಅತ್ಯಂತ ಪ್ರಮುಖ ವಿದೇಶಿ ರಾಜಕೀಯ ಪಕ್ಷವಾಗಿದ್ದು, ಅದನ್ನು ಅರ್ಥಮಾಡಿಕೊಂಡಿದ್ದು ಬಹಳ ಕಡಿಮೆ ಎಂದು ಅಮೆರಿಕದ ಅಂತಾರಾಷ್ಟ್ರೀಯ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ. ಇದನ್ನು ವಾಲ್ಟರ್ ರಸೆಲ್ ಮೀಡ್ ಬರೆದ ಲೇಖನದಲ್ಲಿ ಹೇಳಲಾಗಿದೆ. ಭಾರತದ ಆಡಳಿತ ಪಕ್ಷವಾದ ಬಿಜೆಪಿ, ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ವಿಶ್ವದ ಅತ್ಯಂತ ಪ್ರಮುಖ ವಿದೇಶಿ ಪಕ್ಷವಾಗಿದೆ. … Continued

ಹಣ್ಣು- ತರಕಾರಿ ತಾಜಾ ಇಡಲು ರಾಸಾಯನಿಕ ಬಳಕೆ: ರಾಸಾಯನಿಕ ನೀರಿನಲ್ಲಿ ಅದ್ದಿದ ನಂತರ ಬಾಡಿದ ಕೊತ್ತಂಬರಿ ಸೊಪ್ಪು ಹೇಗೆ ತಾಜಾ ಆಗುತ್ತದೆ ನೋಡಿ | ವೀಡಿಯೊ

ಹಿಟ್ಟಿನಿಂದ ಧಾನ್ಯಗಳವರೆಗೆ ಮತ್ತು ಹಣ್ಣುಗಳಿಂದ ತರಕಾರಿಗಳವರೆಗೆ, ಹಣ್ಣುಗಳು ಮತ್ತು ತರಕಾರಿಗಳು ತಾಜಾ ಕಾಣುವಂತೆ ಮಾಡಲು ಅವುಗಳನ್ನು ರಾಸಾಯನಿಕಗಳೊಂದಿಗೆ ಬೆರೆಸಲಾಗುತ್ತದೆ ಅಥವಾ ರಾಸಾಯನಿಕ ಬಳಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಮೂಲ ಮತ್ತು ಕಲಬೆರಕೆ ಉತ್ಪನ್ನದ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟ, ಯಾಕೆಂದರೆ ಕಲಬೆರಕೆ ಮಾಡುವವರು ಯಾವುದೇ ಸುಳಿವು ಸಹ ಸಿಗದಂತೆ ಮಾಡುತ್ತಾರೆ. ಈಗ ಟ್ವಿಟ್ಟರ್ ಮತ್ತು ಲಿಂಕ್ಡ್‌ಇನ್‌ನಲ್ಲಿ ಅಂತಹ … Continued

4 ಲಕ್ಷ ರೂ.ಮೌಲ್ಯದ ಬಂಗಾರದ ಸರ, ಮೊಬೈಲ್‌ ಕಳೆದುಕೊಂಡ ಅಂಗನವಾಡಿ ಶಿಕ್ಷಕಿ: ತಕ್ಷಣವೇ ಕಾರ್ಯಪ್ರವೃತ್ತರಾಗಿ ಪತ್ತೆ ಮಾಡಿ ಮರಳಿಸಿದ ಪೊಲೀಸರು

ಸಿದ್ದಾಪುರ: ಅಂಗನವಾಡಿ ಶಿಕ್ಷಕಿಯೊಬ್ಬರು ಶಾಲೆಗೆ ಹೋಗುವಾಗ ಸುಮಾರು 4 ಲಕ್ಷ ರೂ. ಮೌಲ್ಯದ ಬಂಗಾರದ ಸರ ಹಾಗೂ ಮೊಬೈಲ್‌ ಕಳೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಲೂಕಿನಲ್ಲಿ ನಡೆದಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ತಕ್ಷಣವೇ ಕಾರ್ಯಪ್ರವೃತ್ತರಾದ ಸಿದ್ದಾಪುರ ಪೊಲೀಸರು ಸೊರಬಾ ಬಳಿ ಪತ್ತೆ ಹಚ್ಚಿ ಅವುಗಳನ್ನು ವಾರಸುದಾರರಿಗೆ ಮರಳಿಸಿ ಸಾರ್ವಜನಿಕ ಪ್ರಶಂಸೆಗೆ … Continued