ವೀಡಿಯೊ | ಗೋಲ್‌ ಹೊಡೆದ ನಂತರ ಕ್ರಿಸ್ಟಿಯಾನೋ ರೊನಾಲ್ಡೊ ಸ್ಟೈಲ್‌ ಅನುಕರಿಸಲು ಹೋಗಿ ಆಸ್ಪತ್ರೆ ಸೇರಿದ ವಿಯೆಟ್ನಾಂ ಫುಟ್ಬಾಲ್ ಆಟಗಾರ

ಕ್ರಿಸ್ಟಿಯಾನೋ ರೊನಾಲ್ಡೊ ಫುಟ್ಬಾಲ್‌ ದಂತಕಥೆ ಮಾತ್ರವಲ್ಲ, ತನ್ನ ದಾಖಲೆಗಳು, ಟೈಟಲ್‌ಗಳು ಮತ್ತು ಗೋಲ್‌ ಗಳಿಸಿದ ನಂತರ ವಿಶಿಷ್ಟವಾಗಿ ಸಂಭ್ರಮ ಪಡುವುದಕ್ಕೂ ಯುವ ಪೀಳಿಗೆಗೆ ಸ್ಫೂರ್ತಿ ನೀಡುವ ಫುಟ್‌ಬಾಲ್ ತಾರೆ. 2013 ರಲ್ಲಿ ಸೌಹಾರ್ದ ಪಂದ್ಯದಲ್ಲಿ ಚೆಲ್ಸಿಯಾ ವಿರುದ್ಧ ಫ್ರೀ-ಕಿಕ್ ಗಳಿಸಿದ ನಂತರ ರೊನಾಲ್ಡೊ ಅವರ ಪ್ರಸಿದ್ಧ ‘ಸಿಯುಯು’ ಸಂಭ್ರಮಾಚರಣೆಯು ಪ್ರಪಂಚದಾದ್ಯಂತದ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಿದೆ. ಫುಟ್ಬಾಲ್ … Continued

ವಾಟ್ಸಾಪ್ ಗ್ರೂಪ್‌ನಲ್ಲಿ ಧರ್ಮನಿಂದೆಯ ವಿಷಯ ಪೋಸ್ಟ್‌ ಮಾಡಿದ್ದ ವ್ಯಕ್ತಿಗೆ ಮರಣದಂಡನೆ ವಿಧಿಸಿದ ಪಾಕಿಸ್ತಾನ ನ್ಯಾಯಾಲಯ

ಪೇಶಾವರ: ವಾಟ್ಸಾಪ್ ಗ್ರೂಪ್‌ನಲ್ಲಿ ಧರ್ಮನಿಂದನೆಯ ವಿಷಯವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ವಾಯವ್ಯ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವೊಂದು ಮುಸ್ಲಿಂ ವ್ಯಕ್ತಿಗೆ ಮರಣದಂಡನೆ ವಿಧಿಸಿದೆ. ಮುಸ್ಲಿಂ-ಬಹುಸಂಖ್ಯಾತ ಪಾಕಿಸ್ತಾನದಲ್ಲಿ ಧರ್ಮನಿಂದನೆಯು ಅತ್ಯಂತ ಸೂಕ್ಷ್ಮ ವಿಷಯವಾಗಿದೆ, ಅಲ್ಲಿ ಸಾಬೀತಾಗದ ಆರೋಪಗಳು ಸಹ ಗುಂಪು ಮತ್ತು ಹಿಂಸಾಚಾರವನ್ನು ಪ್ರಚೋದಿಸಬಹುದು. ಸೈಯದ್ ಮುಹಮ್ಮದ್ ಜೀಶಾನ್ ಎಂಬಾತನನ್ನು ಶುಕ್ರವಾರ ಪೇಶಾವರದ ನ್ಯಾಯಾಲಯವು ಎಲೆಕ್ಟ್ರಾನಿಕ್ … Continued

ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಭಾರತದ ನೀತು ಘಂಘಾಸ್, ಸವೀಟಿ ಬೂರಾ

ನವದೆಹಲಿ: ಶನಿವಾರ ನವದೆಹಲಿಯ ಇಂದಿರಾಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಇಬ್ಬರು ಬಾಕ್ಸರುಗಳು ಚಿನ್ನ ಗೆದ್ದಿದ್ದಾರೆ. 48 ಕೆಜಿ ಫೈನಲ್‌ನಲ್ಲಿ ನೀತು ಘಂಘಾಸ್ ಅವರು ಮಂಗೋಲಿಯಾದ ಲುತ್ಸೈಖಾನ್ ಅಲ್ಟಾನ್ಸೆಟ್ಸೆಗ್ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್ ಆದರು. ನಂತರದ ನಡೆದ ಮೂರು ಬಾರಿ ಏಷ್ಯನ್ ಪದಕ ವಿಜೇತೆ ಸವೀಟಿ ಬೂರಾ … Continued

ವೀಡಿಯೊ | ದಾವಣಗೆರೆಯಲ್ಲಿ ರೋಡ್‌ ಶೋ ವೇಳೆ ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪ : ವಾಹನದತ್ತ ನುಗ್ಗಿದ ವ್ಯಕ್ತಿ

ದಾವಣಗೆರೆ : ಶನಿವಾರ ದಾವಣಗೆರೆಯಲ್ಲಿ ಚುನಾವಣಾ ರ್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯನ್ನು ವ್ಯಕ್ತಿಯೊಬ್ಬ ಉಲ್ಲಂಘಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವ್ಯಕ್ತಿಯೊಬ್ಬ ಬ್ಯಾರಿಕೇಡ್ ಮೇಲೆ ಹಾರಿ ಪ್ರಧಾನಿಯ ಬಳಿಗೆ ಹೋಗಲು ಪ್ರಯತ್ನಿಸಿದ್ದಾನೆ. ಆತ ಭದ್ರತಾ ಕ್ರಮಗಳನ್ನು ಉಲ್ಲಂಘಿಸಿ ಪ್ರಧಾನಿ ವಾಹನದತ್ತ ಧಾವಿಸುತ್ತಿರುವಾಗ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಧಾವಿಸಿ ತಕ್ಷಣವೇ ಆತನನ್ನು ತಡೆದಿದ್ದಾರೆ. … Continued

ದೇಶದಲ್ಲಿದ್ದ ‘ಗ್ರಹಿಕೆ ರಾಜಕಾರಣ’ವನ್ನು ʼಕಾರ್ಯನಿರ್ವಹಣೆ ರಾಜಕಾರಣʼವನ್ನಾಗಿ ಬದಲಾಯಿಸಿದ್ದು ಬಿಜೆಪಿ ಸರ್ಕಾರ: ಪ್ರಧಾನಿ ಮೋದಿ ಪ್ರತಿಪಾದನೆ

ದಾವಣಗೆರೆ : ಬಿಜೆಪಿಯು ದೇಶದಲ್ಲಿನ ‘ಗ್ರಹಿಕೆಯ ರಾಜಕೀಯ’ವನ್ನು ‘ಕಾರ್ಯನಿರ್ವಹಣೆʼಯ ರಾಜಕೀಯವಾಗಿ ಪರಿವರ್ತಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕಸಭೆಯ ಸದಸ್ಯತ್ವದಿಂದ ಶುಕ್ರವಾರ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಕ್ಕೆ ಪ್ರತಿಪಕ್ಷಗಳ ನಾಯಕರು ರ್ಯಾಲಿ ಮಾಡಲು ಪ್ರಯತ್ನಿಸುತ್ತಿರುವುದರ ನಡುವೆ, ಪ್ರಧಾನಿ ನರೇಂದ್ರ ಮೋದಿ ಶನಿವಾರ ದಾವಣಗೆರೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಮಹಾ … Continued

ಚುನಾವಣೆ ನಡೆಸಲೂ ನಮ್ಮ ಬಳಿ ಹಣವಿಲ್ಲ : ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನ ತೀವ್ರತೆ ಬಗ್ಗೆ ಪಾಕ್‌ ರಕ್ಷಣಾ ಸಚಿವ…!

ಇಸ್ಲಾಮಾಬಾದ್: ಚುನಾವಣೆ ನಡೆಸಲೂ ಪಾಕಿಸ್ತಾನದ  ಹಣಕಾಸು ಸಚಿವಾಲಯದ ಬಳಿ ಹಣವಿಲ್ಲ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ ಎಂದು ಎಆರ್‌ವೈ ನ್ಯೂಸ್ ವರದಿ ಮಾಡಿದೆ. ಮಾಹಿತಿ ಸಚಿವರಾದ ಮರಿಯುಮ್ ಔರಂಗಜೇಬ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ ಪಾಕಿಸ್ತಾನದ ರಕ್ಷಣಾ ಸಚಿವರಾದ ಖವಾಜಾ ಆಸಿಫ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಏಪ್ರಿಲ್ … Continued

ದೋಷಿ ಜನ ಪ್ರತಿನಿಧಿಗಳನ್ನು ಅನರ್ಹಗೊಳಿಸುವ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 8(3) ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ

ನವದೆಹಲಿ: ನ್ಯಾಯಾಲಯಗಳಲ್ಲಿ ದೋಷಿಗಳೆಂದು ತೀರ್ಮಾನಿಸಲಾದ ಸಂಸದರು ಅಥವಾ ಶಾಸಕರು ತನ್ನಿಂತಾನೇ ಅನರ್ಹಗೊಳ್ಳಲು ಕಾರಣವಾಗುವ ಜನ ಪ್ರತಿನಿಧಿ ಕಾಯಿದೆಯ ಸೆಕ್ಷನ್‌ 8(3) ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್‌)ಅರ್ಜಿ ಸಲ್ಲಿಸಲಾಗಿದೆ. ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಲಿಲಿ ಥಾಮಸ್‌ ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಕೇರಳ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಸಲ್ಲಿಸಿದ … Continued

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರ ಪ್ರಕಟ

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರಗಳನ್ನು ಮಂಡಳಿಯ ವೆಬ್‌ ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ, ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಅವಕಾಶ ನೀಡಿದೆ. ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. … Continued

ನನ್ನ ಹೆಸರು ಸಾವರ್ಕರ್ ಅಲ್ಲ…ನಾನು ಗಾಂಧಿ, ಕ್ಷಮೆ ಕೇಳೋಲ್ಲ: ಅನರ್ಹತೆ ಕುರಿತು ರಾಹುಲ್ ಗಾಂಧಿ

ನವದೆಹಲಿ: “ನನ್ನ ಹೆಸರು ಸಾವರ್ಕರ್ ಅಲ್ಲ, ನನ್ನ ಹೆಸರು ಗಾಂಧಿ, ಗಾಂಧಿ ಯಾರ ಬಳಿಯೂ ಕ್ಷಮೆ ಯಾಚಿಸುವುದಿಲ್ಲ ಎಂದು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ಒಂದು ದಿನದ ನಂತರ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಇಂದು ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುವಾಗ, ಭಾರತದ ಪ್ರಜಾಪ್ರಭುತ್ವದ ಬಗ್ಗೆ ಬ್ರಿಟನ್‌ನಲ್ಲಿ ನೀಡಿದ ಹೇಳಿಕೆ ಮತ್ತು ಮೋದಿ ಉಪನಾಮದ ಟೀಕೆ ಬಗ್ಗೆ … Continued

15 ವರ್ಷಗಳ ಹಿಂದಿನ ಪ್ರಕರಣ ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ ಹಚ್ಚೆ

ಮುಂಬೈ: 15 ವರ್ಷಗಳಿಂದ ತಪ್ಪಿಸಿಕೊಂಡಿದ್ದ ಹಾಗೂ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯೊಬ್ಬನನ್ನು ಮುಂಬೈ ಪೊಲೀಸರು ಒಂದೇ ಒಂದು ಸುಳುವಿನ ಮೇಲೆ ಪತ್ತೆ ಹಚ್ಚಿದ್ದಾರೆ…! ಆತನನ್ನು ಸೆರೆ ಹಿಡಿಯಲು ಹಚ್ಚೆ ಸಹಾಯ ಮಾಡಿದೆ. 63 ವರ್ಷದ ಆರ್ಮುಗಂ ಪಲ್ಲಸ್ವಾಮಿ ದೇವೇಂದ್ರ ಮುದಲಿಯಾರ 15 ವರ್ಷಗಳಿಂದ ತಲೆಮೆರೆಸಿಕೊಂಡಿದ್ದ. ಈತನನ್ನು ದಕ್ಷಿಣ ಮುಂಬೈನಲ್ಲಿ ಬಂಧಿಸಲಾಗಿದೆ. ಈತ ನಕಲಿ ಗುರುತಿನ ಚೀಟಿ … Continued